Home
Apps

ಆಪ್‌ ಸ್ಟೋರ್‌ನಲ್ಲಿ ಟಾಪ್‌ 10 ನರೇಂದ್ರ ಮೋದಿ ಆಪ್‌ಗಳು: ಮಿಸ್‌ ಮಾಡಲೇಬಾರದು..!

ಫನ್‌, ಮಾಹಿತಿ, ಇತ್ತೀಚಿನ ಯೋಜನೆಗಳು, ಭಾರತ ಸರ್ಕಾರದ ಮುಂದಿನ ದಿಟ್ಟ ಹೆಜ್ಜೆ ಏನು ಎಂಬ ಹಲವು ಅಪ್‌ಡೇಟ್‌ಗಳಿಗಾಗಿ ಟಾಪ್ 10 ನರೇಂದ್ರ ಮೋದಿ ಆಪ್‌ಗಳು.

By Suneel

ಭ್ರಷ್ಟಾಚಾರ ಹಾಗೂ ಕಪ್ಪುಹಣದ ವಿರುದ್ಧ ದಿಟ್ಟ ಹೆಜ್ಜೆಯಿಂದ ಹಲವು ಹೊಸ ಹೊಸ ಯೋಜನೆಗಳನ್ನು ಕೈಗೊಳ್ಳುತ್ತಾ ಪ್ರಧಾನ ಮಂತ್ರಿ ನರೇಂದ್ರ ಮೋದಿ'ರವರು ಅಧಿಕಾರಕ್ಕೆ ಬಂದಾಗಿನಿಂದಲೂ ಭ್ರಷ್ಟರಿಗೆ ಮುಳುವಾಗಿದ್ದಾರೆ. ನವೆಂಬರ್ 8 ರಂದು ಪ್ರಕಟಿಸಿದ 500, 1000 ರೂ ನೋಟುಗಳ ಚಲಾವಣೆ ರದ್ದು ಮಾಡಿರುವುದು ಇವರ ಬಹುದೊಡ್ಡ ಅತ್ಯುತ್ತಮ ಉಪಕ್ರಮವಾಗಿದೆ.

ಮೋದಿ'ರವರ ಈ ತೀರ್ಮಾನದ ಒಡೆತ ಟೆಕ್‌ ಕ್ಷೇತ್ರವನ್ನು ಹಿಂದೆಸರಿಸಿಲ್ಲ. ಕಾರಣ ಮೋದಿ'ರವರ ಪ್ರತಿ ಕ್ರಮಗಳ ಅಪ್‌ಡೇಟ್‌ ನೀಡಲು ಹಲವು ಆಪ್‌ಗಳು ಈಗ ಆಪ್‌ ಸ್ಟೋರ್‌ನಲ್ಲಿ ಲಭ್ಯ. ಹಲವು ಆಪ್‌ಗಳಲ್ಲಿ ಮೋದಿರವರ ಯೋಜನೆಗಳು, ಶೀಘ್ರವಾಗಿ ಯಾವುದಾದರೂ ಕ್ರಮಗಳನ್ನು ಕೈಗೊಂಡಲ್ಲಿ ಅದರ ಅಪ್‌ಡೇಟ್ ನೀಡುವ ಹಲವು ಉಪಯುಕ್ತ ಆಪ್‌ಗಳಿವೆ. ಅಂತಹ ಟಾಪ್ 10 ನರೇಂದ್ರ ಮೋದಿ ಆಪ್‌ಗಳನ್ನು ಇಂದಿನ ಲೇಖನದಲ್ಲಿ ಪರಿಚಯಿಸುತ್ತಿದ್ದೇವೆ. ಅವುಗಳು ಯಾವುವು ಎಂದು ಮುಂದೆ ಓದಿ ತಿಳಿಯಿರಿ.(Modi Apps)

ಈ ಆಪ್‌ನಿಂದ 2000 ನೋಟು ಸ್ಕ್ಯಾನ್‌ ಮಾಡಿ ಮೋದಿ ಭಾಷಣ ಕೇಳಿ, ಇಂಟರ್ನೆಟ್ ಬೇಕಿಲ್ಲ!

ನರೇಂದ್ರ ಮೋದಿ

ನರೇಂದ್ರ ಮೋದಿ

'ನರೇಂದ್ರ ಮೋದಿ' ಆಪ್‌ ಇತ್ತೀಚಿನ ಮಾಹಿತಿಗಳು ಮತ್ತು ದೇಶದಾದ್ಯಂತ ಜರುಗುತ್ತಿರುವ ಪ್ರಮುಖ ಘಟನೆಗಳ ಬಗ್ಗೆ, ಹಾಗೂ ಪ್ರಧಾನ ಮಂತ್ರಿ'ರವರ ಕಛೇರಿಯಲ್ಲಿ ಕೈಗೊಂಡ ಕ್ರಮಗಳ ಬಗ್ಗೆ ಅಪ್‌ಡೇಟ್ ನೀಡುತ್ತದೆ.

ಮೋದಿ ಕೀನೋಟ್

ಮೋದಿ ಕೀನೋಟ್

'ಮೋದಿ ಕೀನೋಟ್' ಮನರಂಜನಾತ್ಮಕ ಆಪ್ ಆಗಿದೆ. 2,000 ಮತ್ತು 500 ರೂ ನೋಟುಗಳನ್ನು ಸ್ಕ್ಯಾನ್ ಮಾಡಿದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ'ರವರು ಕಪ್ಪು ಹಣದ ಕುರಿತು ಮಾತನಾಡಿರುವ ಭಾಷಣ ಕೇಳಬಹುದು.
ಈ ಆಪ್‌ನಿಂದ 2000 ನೋಟು ಸ್ಕ್ಯಾನ್‌ ಮಾಡಿ ಮೋದಿ ಭಾಷಣ ಕೇಳಿ, ಇಂಟರ್ನೆಟ್ ಬೇಕಿಲ್ಲ!

ಮೋದಿ ಗವರ್ನಮೆಂಟ್ ಯೋಜನಾ

ಮೋದಿ ಗವರ್ನಮೆಂಟ್ ಯೋಜನಾ

'ಮೋದಿ ಗವರ್ನಮೆಂಟ್ ಯೋಜನಾ' ಆಪ್ ಭಾರತ ಸರ್ಕಾರ ಕೈಗೊಂಡ ಹೊಸ ಯೋಜನೆಗಳ ಬಗ್ಗೆ ಮಾಹಿತಿ ನೀಡುತ್ತದೆ. ಹಾಗು ಇತರೆ ಪ್ರಸ್ತುತ ಸರ್ಕಾರಿ ಯೋಜನೆಗಳ ಮಾಹಿತಿ ಪರಿಚಯಿಸುತ್ತದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 ನರೇಂದ್ರ ಮೋದಿ

ನರೇಂದ್ರ ಮೋದಿ

ಈ 'ನರೇಂದ್ರ ಮೋದಿ' ಆಪ್‌ ಡೌನ್‌ಲೋಡ್ ಮಾಡಿ ಮೋದಿ'ರವರ ಲೇಟೆಸ್ಟ್ ಪ್ಲಾನ್‌ಗಳು ಯಾವುವು ಎಂಬ ಬಗ್ಗೆ ಮಾಹಿತಿ ಪಡೆಯಬಹುದು. ಈ ಆಪ್‌ ಬಳಸಿ ನಿಮ್ಮ ಕೊಡುಗೆಗಳನ್ನು ನೀಡಿ, ಬ್ಯಾಡ್ಜ್‌ಗಳನ್ನು ಪಡೆಯಬಹುದು.

ಮೋದಿ ರೂಪೀಸ್  ಸರ್ಜಿಕಲ್‌ಸ್ಟ್ರೈಕ್‌

ಮೋದಿ ರೂಪೀಸ್ ಸರ್ಜಿಕಲ್‌ಸ್ಟ್ರೈಕ್‌

'ಮೋದಿ ರೂಪೀಸ್ ಸರ್ಜಿಕಲ್‌ಸ್ಟ್ರೈಕ್', ಆಪ್‌ ಮೂಲಕ ಕಪ್ಪು ಹಣ ಸರ್ಜಿಕಲ್ ಸ್ಟ್ರೈಕ್' ಕ್ರಮದ ಚಾಲನೆಯಲ್ಲಿ ನೀವು ಭಾಗಿಯಾಗಬಹುದು. ಆದರೆ ಇದೊಂದು ಕುತೂಹಲಕಾರಿ ಗೇಮ್‌ ಆಪ್‌ ಆಗಿದ್ದು, ಕಪ್ಪು ಹಣ ನಾಶದ ಬಗ್ಗೆ ಗೇಮ್‌ ಆಡಬಹುದು.

ಸೆಲ್ಫಿ ವಿತ್‌ ನರೇಂದ್ರ ಮೋದಿ ಜಿ

ಸೆಲ್ಫಿ ವಿತ್‌ ನರೇಂದ್ರ ಮೋದಿ ಜಿ

ಈ ಆಪ್‌ ಡೌನ್‌ಲೋಡ್ ಮಾಡಿಕೊಳ್ಳುವ ಮೂಲಕ ಮೋದಿ ಜಿ ಜೊತೆ ಸೆಲ್ಫಿ ಕ್ಲಿಕ್ಕಿಸಬಹುದು. ಫೋಟೋ ಈಗಾಗಲೇ ಸಾಮಾಜಿಕ ತಾಣದಲ್ಲಿ ಶೇರ್ ಆಗಿರುತ್ತದೆ. ನಿಮ್ಮ ಫೋನ್‌ ಕ್ಯಾಮೆರಾದಿಂದ ಸೆಲ್ಫಿಯನ್ನು ಪೊರ್ಟ್ರೇಟ್ ಮೋಡ್‌ನಲ್ಲಿ ಕ್ಲಿಕ್ಕಿಸಿ.

ಪಿಎಂಓ ಇಂಡಿಯಾ

ಪಿಎಂಓ ಇಂಡಿಯಾ

ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ'ರವರ ಅಧಿಕೃತ ಆಪ್‌ ಇದು. ಈ ಆಪ್‌ ಮಾಹಿತಿ, ಅಪ್‌ಡೇಟ್‌ಗಳು ಇಮೇಲ್‌ ಮತ್ತು ನೋಟಿಫಿಕೇಶನ್‌ ಮೂಲಕ ಸೆಂಡ್ ಮಾಡುತ್ತದೆ. ಈ ಆಪ್‌ ಡೌನ್‌ಲೋಡ್ ಮಾಡಿಕೊಂಡಲ್ಲಿ ಇತ್ತೀಚಿನ ಮಾಹಿತಿಗಳು ಮತ್ತು ಸುದ್ದಿಗಳನ್ನು ಪಡೆಯಬಹುದು.

ನರೇಂದ್ರ ಮೋದಿ ವಾಲ್‌ಪೇಪರ್ ಫ್ರೀ

ನರೇಂದ್ರ ಮೋದಿ ವಾಲ್‌ಪೇಪರ್ ಫ್ರೀ

ಹೆಸರೇ ಹೇಳುವಂತೆ ಈ ಆಪ್‌ ಮೋದಿ'ರವರ ಫೋಟೋಗಳನ್ನು ಫೋನ್‌ನ ವಾಲ್‌ಪೇಪರ್‌ ಆಗಿ ಸೆಟ್ ಮಾಡಲು ಅವಕಾಶ ನೀಡುತ್ತದೆ. ಈ ಆಪ್‌ನಲ್ಲಿ ಮೋದಿ'ರವರ ವಿವಿಧ ಫೋಟೋಗಳು ಇವೆ. ಡೌನ್‌ಲೋಡ್‌ಗೆ ಕ್ಲಿಕ್ ಮಾಡಿ.

ನಮೋ ಮೋದಿ ಕೋಟ್ಸ್

ನಮೋ ಮೋದಿ ಕೋಟ್ಸ್

'ನಮೋ ಮೋದಿ ಕೋಟ್ಸ್' ಆಪ್‌ ಡೌನ್‌ಲೋಡ್ ಮಾಡಿಕೊಳ್ಳುವುದರಿಂದ ಮೋದಿ'ರವರ ಉಲ್ಲೇಖಗಳನ್ನು ಸ್ವೀಕರಿಸಬಹುದು. ಜೊತೆಗೆ ವಾಲ್‌ಪೇಪರ್‌ಗಳು ಸಹ ಲಭ್ಯ. ಉಲ್ಲೇಖಗಳನ್ನು ಸ್ನೇಹಿತರೊಂದಿಗೆ ಶೇರ್‌ ಸಹ ಮಾಡಬಹುದು.

ನರೇಂದ್ರ ಮೋದಿ

ನರೇಂದ್ರ ಮೋದಿ

ನರೇಂದ್ರ ಮೋದಿ ಆಪ್‌ ಮೂಲಕ ವಿವಿಧ ಸರ್ಕಾರಿ ಆನ್‌ಲೈನ್ ಪೋರ್ಟ್‌ಗಳ ಆಕ್ಸೆಸ್ ಮಾಡಬಹುದು. ಅಲ್ಲದೇ ನೇರವಾಗಿ ಪಿಎಂಓ'ಗೆ ಸಂಪರ್ಕ ಪಡೆದು ಪ್ರಧಾನ ಮಂತ್ರಿ'ರವರ ಬಗ್ಗೆ ಸುಲಭವಾಗಿ ಮಾಹಿತಿ ಪಡೆಯಬಹುದು.

ಹೊಸ ಟ್ಯಾಬ್ಲೆಟ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Top 10 Narendra Modi Apps Available in App Stores. Do miss. And know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+