Home
Apps

ವಾಟ್ಸಪ್‌ ಸೇರಿರುವ ಈ ಹೊಸ ಫೀಚರ್ಸ್‌ಗಳನ್ನು ನೀವು ಬಳಕೆ ಮಾಡಿದ್ದೀರಾ?

ಫೇಸ್‌ಬುಕ್ ಮಾಲೀಕತ್ವದ ವಾಟ್ಸಪ್‌ ಮೆಸೆಜಿಂಗ್ ಆಪ್‌ ವಿಶ್ವದಲ್ಲಿಯೇ ಅತೀ ಹೆಚ್ಚು ಸಕ್ರಿಯ ಬಳಕೆದಾರರನ್ನು ಹೊಂದಿದ್ದು, ಅಗತ್ಯ ಅಪ್ಲಿಕೇಶನ್ ಆಗಿ ಗುರುತಿಸಿಕೊಂಡಿದೆ. ಪ್ರಸಕ್ತ ವರ್ಷದಲ್ಲಿ ವಾಟ್ಸಪ್‌ ಹಲವು ಪ್ರಮುಖ ಬದಲಾವಣೆಗಳನ್ನು ಮಾಡಿದ್ದು, ಗ್ರಾಹಕರ ಸುರಕ್ಷತೆಯ ದೃಷ್ಠಿಯಿಂದ ಕೆಲವು ನೂತನ ಫೀಚರ್ಸ್‌ಗಳನ್ನು ಅಳವಡಿಸಿದೆ. ಈಗಾಗಲೇ ಹಲವಾರು ಬಳಕೆದಾರರು ಈ ಫೀಚರ್ಸ್‌ಗಳನ್ನು ಬಳಕೆಮಾಡಿದ್ದಾರೆ. ಆದರೆ ಇನ್ನು ಅನೇಕ ಬಳಕೆದಾರರು ವಾಟ್ಸಪ್‌ನ ಹೊಸ ಫೀಚರ್ಸ್‌ಗಳ ಬಗ್ಗೆ ತಿಳಿಯಬೇಕಿದೆ.

ವಾಟ್ಸಪ್‌ ಸಂಸ್ಥೆ

ಹೌದು, ವಾಟ್ಸಪ್‌ ಸಂಸ್ಥೆಯು 2019ರಲ್ಲಿ ಕೆಲವು ಪ್ರಮುಖ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಅವುಗಳಲ್ಲಿ ಫಿಂಗರ್‌ಪ್ರಿಂಟ್ ಲಾಕ್, ಸ್ಟೇಟಸ್‌ ಶೇರ್‌ ಆಯ್ಕೆ, ಗ್ರೂಪ್‌ ಪ್ರೈವೆಸಿ ಸೆಟ್ಟಿಂಗ್, ರಿಪ್ಲೇ ಪ್ರೈವೇಟ್ಲಿ, ಡಾರ್ಕ್ ಮೋಡ್‌, ಫ್ರೀಕ್ವೆಟ್ಲಿ ಫಾರ್ವಾರ್ಡ ಮೆಸೆಜ್, ಗ್ರೂಪ್‌ ಕಾಲಿಂಗ್ ಫೀಚರ್, ಹೆಚ್ಚು ಗಮನ ಸೆಳೆದಿವೆ. ಬಳಕೆದಾರರಿಗೆ ಈ ಎಲ್ಲ ಫೀಚರ್ಸ್‌ಗಳು ವಾಟ್ಸಪ್‌ ಬಳಕೆಯನ್ನು ಮತ್ತಷ್ಟು ಅನುಕೂಲಕರವಾಗಿಸಿವೆ. ಹಾಗಾದರೇ ಸದ್ಯ ವಾಟ್ಸಪ್‌ ಸೇರಿರುವ ಪ್ರಮುಖ ಫೀಚರ್ಸ್‌ಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಫಿಂಗರ್‌ಪ್ರಿಂಟ್ ಲಾಕ್‌

ಫಿಂಗರ್‌ಪ್ರಿಂಟ್ ಲಾಕ್‌

ಸ್ಕ್ರೀನ್‌ಲಾಕ್‌ ಫೀಚರ್‌ ಬಳಕೆದಾರರ ಖಾತೆಗೆ ಪ್ರೈವೆಸಿ ಒದಗಿಸಲಿದ್ದು, ಬಳಕೆದಾರರು ಸ್ಕ್ರೀನ್‌ಲಾಕ್‌ ಫೀಚರ್‌ ಅನ್ನು ಸಕ್ರಿಯ ಮಾಡಿಕೊಳ್ಳಬೇಕು. ಅದಕ್ಕಾಗಿ ಬಳಕೆದಾರರು ಈ ಕ್ರಮಗಳನ್ನು ಅನುಸರಿಸಿ. ವಾಟ್ಸಪ್‌ > ಸೆಟ್ಟಿಂಗ್ > ಅಕೌಂಟ್‌ > ಪ್ರೈವೆಸಿ > ಸ್ಕ್ರಾಲ್‌ ಡೌನ್‌ ಮಾಡಿ > ಫಿಂಗರ್‌ಪ್ರಿಂಟ್ ಲಾಕ್‌ ಆಯ್ಕೆ ಕಾಣಿಸುತ್ತದೆ. ಈ ಆಯ್ಕೆಯನ್ನು ಸಕ್ರಿಯ ಮಾಡಿಕೊಳ್ಳಬಹುದು. ಇದರಲ್ಲಿ ಸ್ಕ್ರೀನ್‌ಲಾಕ್ ಆಗಲು ಮೂರು ಆಯ್ಕೆಗಳು ಕಾಣಿಸುತ್ತವೆ.(ತಕ್ಷಣ, ಒಂದು ನಿಮಿಷ, ನಿಮಿಷ).

ಸ್ಟೇಟಸ್‌ ಶೇರ್

ಸ್ಟೇಟಸ್‌ ಶೇರ್

ವಾಟ್ಸಪ್‌ ಪರಿಚಯಿಸಿದ್ದ 24 ಗಂಟೆಯ ಅವಧಿಯ ಸ್ಟೇಟಸ್‌ ಇಡುವ ಆಯ್ಕೆಯು ಸಖತ ಜನಪ್ರಿಯವಾಗಿದ್ದು, ಹಾಗೆಯೇ ಸ್ಟೇಟಸ್‌ ಅನ್ನು ಶೇರ್‌ ಮಾಡುವ ಹೊಸ ಆಯ್ಕೆಯನ್ನು ಸೇರಿಕೊಂಡಿದೆ. ಹೀಗಾಗಿ ಈಗ ಬಳಕೆದಾರರು ವಾಟ್ಸಪ್‌ಗೆ ಇಡುವ ಸ್ಟೇಟಸ್‌ ಅನ್ನು ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಂ ಸೇರಿದಂತೆ ಇತರೆ ಫೇಸ್‌ಬುಕ್‌ ಸಂಸ್ಥೆಯ ಇತರೆ ಯಾವುದೇ ಆಪ್ಸ್‌ಗಳಿಗೆ ನೇರವಾಗಿ ಶೇರ್‌ ಮಾಡುವ ಅವಕಾಶವನ್ನು ಈ ಫೀಚರ್‌ ಮಾಡಿಕೊಡಲಿದೆ.

ಗ್ರೂಪ್‌ ಸೇರುವಿಕೆ ಕಂಟ್ರೋಲ್‌

ಗ್ರೂಪ್‌ ಸೇರುವಿಕೆ ಕಂಟ್ರೋಲ್‌

ಬಳಕೆದಾರರು ವಾಟ್ಸಪ್‌ ಗ್ರೂಪ್‌ ಸೇರುವಿಕೆ ನಿಯಂತ್ರಿಸಬಹುದಾದ ಆಯ್ಕೆಗಳಿವೆ. ಈ ಫೀಚರ್‌ನಲ್ಲಿ Everyone, My Contacts, My Contacts Except..ಮತ್ತು Nobody ಆಯ್ಕೆಗಳಿದ್ದು, ಬಳಕೆದಾರರು ಅಗತ್ಯ ಎನಿಸುವುದನ್ನು ಸೆಟ್‌ ಮಾಡಬಹುದಾಗಿದೆ. ಅದಕ್ಕಾಗಿ ಈ ಹಂತಗಳನ್ನು ಅನುಸರಿಸಿರಿ. ವಾಟ್ಸಪ್‌ > ಸೆಟ್ಟಿಂಗ್ > ಅಕೌಂಟ್‌ > ಪ್ರೈವೆಸಿ > ಗ್ರೂಪ್ಸ್‌.

ಹೈಡ್‌ ಮ್ಯೂಟೆಡ್‌ ಸ್ಟೇಟಸ್‌

ಹೈಡ್‌ ಮ್ಯೂಟೆಡ್‌ ಸ್ಟೇಟಸ್‌

ವಾಟ್ಸಪ್‌ನಲ್ಲಿ ಹೊಸ 'ಹೈಡ್‌ ಮ್ಯೂಟೆಡ್‌ ಸ್ಟೇಟಸ್‌' ಆಯ್ಕೆಯು ಆಂಡ್ರಾಯ್ಡ್‌ ಬೇಟಾ ವರ್ಷನ್‌ನಲ್ಲಿ ಕಾಣಿಸಿಕೊಂಡಿದೆ. ಈ ಫೀಚರ್ ಆಯ್ದ ಕಾಂಟ್ಯಾಕ್ಟ್ ನಂಬರ್‌ಗೆ ವಾಟ್ಸಪ್‌ ಸ್ಟೇಟಸ್‌ ಕಾಣದಂತೆ ಮಾಡಲು ನೆರವಾಗಲಿದೆ. ಹೊಸದಾಗಿ ಹೈಡ್‌ ಬಟನ ಸೇರಲಿದ್ದು, ಅದನ್ನು ಒತ್ತಿದಾಗ ಮ್ಯೂಟ್‌ ಮಾಡಿದ ಸ್ಟೇಟಸ್‌ಗಳೆಲ್ಲವು ಅಳಸಿ ಹೋಗುತ್ತವೆ. ಹಾಗೆಯೇ ಶೋ ಬಟನ್ ಆಯ್ಕೆಯು ಮತ್ತೆ ಎಲ್ಲವು ಕಾಣಿಸಿಕೊಳ್ಳಲಿವೆ.

ಫ್ರೀಕ್ವೆಟ್ಲಿ ಫಾರ್ವಾರ್ಡ ಮೆಸೆಜ್

ಫ್ರೀಕ್ವೆಟ್ಲಿ ಫಾರ್ವಾರ್ಡ ಮೆಸೆಜ್

ವದಂತಿ ಸುದ್ದಿಗಳನ್ನು ತಡೆಯಲು ವಾಟ್ಸಪ್‌ ಈ ಫೀಚರ್ ಅನ್ನು ಪರಿಚಯಿಸಿದ್ದು, ಹೆಚ್ಚು ಬಾರಿ ಫಾರ್ವರ್ಡ್‌ ಆಗುವ ಮೆಸೆಜ್‌ ಫ್ರೀಕ್ವೆಟ್ಲಿ ಫಾರ್ವಾರ್ಡ ಮೆಸೆಜ್ ಲೆಬಲ್ ಬೀಳುತ್ತದೆ. ಈ ರೀತಿ ಲೆಬಲ್ ಇದ್ದರೇ ಅದು ಅಧಿಕ ಬಾರಿ ಫಾರ್ವರ್ಡ್‌ ಆಗಿರುವ ಮೆಸೆಜ್‌ ಎಂದು ಬಳಕೆದಾರರು ತಿಳಿಯಬೇಕು. ಒಂದು ಮೆಸೆಜ್‌ ಅನ್ನು ಒಂದೇ ಬಾರಿ ಕೇವಲ ಐದು ಚಾಟ್ಸ್‌ಗಳಿಗೆ ಮಾತ್ರ ಫಾರ್ವರ್ಡ್ ಮಾಡಬಹುದಾಗಿದೆ.

ಗ್ರೂಪ್‌ ಕಾಲಿಂಗ್‌

ಗ್ರೂಪ್‌ ಕಾಲಿಂಗ್‌

ವಾಟ್ಸಪ್‌ ವಿಡಿಯೊ ಮತ್ತು ವಾಯಿಸ್‌ ಕಾಲಿಂಗ್ ಸೌಲಭ್ಯವನ್ನು ಬಳಕೆದಾರರಿಗೆ ಪರಿಚಯಿಸಿದೆ. ಹಾಗೆಯೇ ವಾಟ್ಸಪ್‌ ಗ್ರೂಪ್ ಚಾಟ್‌ನಲ್ಲಿ ಗ್ರೂಪ್‌ ಕಾಲಿಂಗ್ ಫೀಚರ್‌ ಅನ್ನು ನೀಡಿದ್ದು, ಗ್ರೂಪ್‌ ಸದಸ್ಯರೊಂದಿಗೆ ಕರೆ ಕನೆಕ್ಟ್ ಮಾಡಬಹುದಾಗಿದೆ. ವಾಟ್ಸಪ್‌ ಗ್ರೂಪ್‌ನಲ್ಲಿ ಕರೆಯ ಬಟನ್ ಒತ್ತಿ, ನಂತರ ಸದಸ್ಯರನ್ನು ಆಡ್‌ ಮಾಡುವ ಮೂಲಕ ಗ್ರೂಪ್‌ ಕಾಲಿಂಗ್ ಸೌಲಭ್ಯವನ್ನು ಪಡೆಯಬಹುದಾಗಿದೆ.

ಪ್ರತ್ಯೇಕ ರಿಪ್ಲೇ ಆಯ್ಕೆ

ಪ್ರತ್ಯೇಕ ರಿಪ್ಲೇ ಆಯ್ಕೆ

ವಾಟ್ಸಪ್‌ನಲ್ಲಿ ಗ್ರೂಪ್‌ಗಳ ಚಾಟಿಂಗ್‌ಗೆ ಅವಕಾಶ ಇದ್ದು, ಗ್ರೂಪ್‌ಗಳಲ್ಲಿರುವ ಸದಸ್ಯರುಗಳಿಗೆ ಪ್ರತ್ಯೇಕವಾಗಿ ಮೆಸೆಜ್ ಮಾಡುವ ಸೌಲಭ್ಯವನ್ನು ವಾಟ್ಸಪ್‌ ಪರಿಚಯಿಸಿದೆ. ಅದಕ್ಕಾಗಿ ರಿಪ್ಲೇ ಪ್ರೈವೆಟ್ಲಿ ಆಯ್ಕೆಯನ್ನು ನೀಡಿದೆ. ಗ್ರೂಪ್‌ ಚಾಟ್‌ ಸೆಟ್ಟಿಂಗ್‌ನಲ್ಲಿ ಈ ಆಯ್ಕೆ ಲಭ್ಯವಾಗಲಿದೆ. ಕಳೆದ ವರ್ಷ ಅಂತ್ಯದ ಮೇಳೆ ಈ ಫೀಚರ್ಸ್‌ ಆಂಡ್ರಾಯ್ಡ್‌ ವರ್ಷನ್ ಸೇರಿದೆ.

ಡಾರ್ಕ್‌ ಮೋಡ್‌

ಡಾರ್ಕ್‌ ಮೋಡ್‌

ವಾಟ್ಸಪ್‌ ಬಳಕೆದಾರರು ಬಹುನಿರೀಕ್ಷೆಯಿಂದ ಕಾಯುತ್ತಿರುವ 'ಡಾರ್ಕ್‌ ಮೋಡ್‌' ಫೀಚರ್ ಆಯ್ಕೆ ವಾಟ್ಸಪ್‌ ಬೀಟಾ ಆವೃತ್ತಿಯನ್ನು ಸೇರಿಕೊಂಡಿದೆ. ರಾತ್ರಿ ಸಮಯದಲ್ಲಿ ಫೋನ್‌ ಡಿಸ್‌ಪ್ಲೇಯ ಬೆಳಕಿನ ಪ್ರಖರತೆಯನ್ನು ತಗ್ಗಿಸಲು ಈ ಫೀಚರ್ ಹೆಚ್ಚು ಪರಿಣಾಮಕಾರಿ ಎನ್ನುವುದು ನಿಮಗೆಲ್ಲಾ ತಿಳಿದೆ ಇದೆ. ಬಹುತೇಕ ಆಪ್‌ಗಳಲ್ಲಿ ಈಗಾಗಲೇ ಈ ಫೀಚರ್‌ ಚಾಲ್ತಿಯಲ್ಲಿದ್ದು, ವಾಟ್ಸಪ್‌ ಸಹ ಸ್ವಲ್ಪ ಬದಲಾವಣೆಗಳೊಂದಿಗೆ ಡಾರ್ಕ್‌ ಮೋಡ್‌ ಆಯ್ಕೆ ಬೀಟಾ ವರ್ಷನ್‌ನಲ್ಲಿ ನೀಡಿದೆ.

ಪಿಕ್ಚರ್-ಇನ್-ಪಿಕ್ಚರ್ ಫೀಚರ್

ಪಿಕ್ಚರ್-ಇನ್-ಪಿಕ್ಚರ್ ಫೀಚರ್

ಪ್ರಸ್ತುತ ಈ ಫೀಚರ್ ಆಂಡ್ರಾಯ್ಡ್ ಆವೃತ್ತಿ 2.19.177 ವಾಟ್ಸಾಪ್ ಬೀಟಾದಲ್ಲಿ ಪ್ರಾಯೋಗಿಕ ಹಂತದಲ್ಲಿದೆ. ಸಂಸ್ಥೆಯು ಆಂಡ್ರಾಯ್ಡ್‌ಗಾಗಿ ಪಿಕ್ಚರ್-ಇನ್-ಪಿಕ್ಚರ್ (ಪಿಐಪಿ) ಮೋಡ್‌ನ ನವೀಕರಿಸಿದ ಆವೃತ್ತಿಯು ಚಾಟ್‌ಗಳನ್ನು ಬದಲಾಯಿಸಿದ ನಂತರವೂ ಹಿನ್ನೆಲೆಯಲ್ಲಿ ವೀಡಿಯೊಗಳನ್ನು ಪ್ಲೇ ಮಾಡಲು ನಿಮಗೆ ಅನುಮತಿಸುತ್ತದೆ. ಇದು ಯೂಟ್ಯೂಬ್, ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಸ್ಟ್ರೀಮ್‌ ಮಾಡಬಹುದಾದ ವೀಡಿಯೊಗಳೊಂದಿಗೆ ಹೋಸ್ಟ್ ಮಾಡುತ್ತದೆ.

ವಾಯಿಸ್‌ ಮೆಸೆಜ್ ಆಟೋ ಪ್ಲೇ

ವಾಯಿಸ್‌ ಮೆಸೆಜ್ ಆಟೋ ಪ್ಲೇ

ಬಳಕೆದಾರರು ಮೆಸೆಜ್‌ ಮಾಡುತ್ತಿರುವಾಗ ಬರುವ ವಾಯಿಸ್‌ ಮೆಸೆಜ್‌ಗಳನ್ನು ಕೇಳಲು ಪ್ಲೇ ಬಟನ್ ಪ್ರೆಸ್‌ ಮಾಡುವ ಅವಶ್ಯಕತೆ ಇರುವುದಿಲ್ಲ, ಬಂದಿರುವ ವಾಯಿಸ್‌ ಮೆಸ್‌ಜಗಳು ಆಟೋಮ್ಯಾಟಿಕ್ ಆಗಿ ಪ್ಲೇ ಆಗುತ್ತದೆ ನೀವು ಕೇಳಿ ರಿಪ್ಲೇ ಮಾಡಬಹುದಾಗಿದೆ. ಒಂದು ವೇಳೆ ಒಂದಕ್ಕಿಂತ ಹೆಚ್ಚು ವಾಯಿಸ್‌ ಮೆಸೆಜ್‌ಗಳು ಬಂದರೇ, ಪ್ರತಿಯೊಂದಕ್ಕೂ ಪ್ಲೇ ಬಟನ್ ಒತ್ತುವ ಅಗತ್ಯ ಇರುವುದಿಲ್ಲ, ಬದಲಾಗಿ ಅವುಗಳು ಕಾಲನುಕ್ರಮದಲ್ಲಿ ಆಟೋಮ್ಯಾಟಿಕ್‌ ಆಗಿ ಪ್ಲೇ ಆಗುತ್ತವೆ. ಸದ್ಯ ವಾಟ್ಸಪ್‌ ಬೀಟಾ ಆವೃತ್ತಿಯಲ್ಲಿ ಲಭ್ಯವಾಗಿದೆ.

Best Mobiles in India

English summary
best WhatsApp features that came out in 2019. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+