ಆಂಡ್ರಾಯ್ಡ್‌ನಲ್ಲಿ ಇಂಟರ್ನೆಟ್ ವೇಗ ಹೆಚ್ಚಿಸಲು ಟಾಪ್‌ 5 ಆಪ್‌ಗಳು

By Suneel
|

ಜಿಯೋ, ಏರ್‌ಟೆಲ್‌, ವೊಡಾಫೋನ್, ಬಿಎಸ್‌ಎನ್‌ಎಲ್‌, ಐಡಿಯಾ ಟೆಲಿಕಾಂಗಳು ಆಫರ್‌ ಮೇಲೆ ಆಫರ್‌ ಕೊಟ್ಟು ಕೊಟ್ಟು, ಇವತ್ತಿನ ದಿನ ಇಂಟರ್ನೆಟ್‌ ಬಳಕೆದಾರರು ಹೆಚ್ಚಾಗೋದ್ರು. ಯಾಕಂದ್ರೆ ಉಚಿತವಾಗಿ ಇಂಟರ್ನೆಟ್ ಸೌಲಭ್ಯ ಕೊಟ್ರೆ ಯಾರ್‌ತಾನೆ ಸ್ಮಾರ್ಟ್‌ಫೋನ್‌ನಲ್ಲಿ ಇಂಟರ್ನೆಟ್ ಬ್ರೌಸ್‌ ಮಾಡಲ್ಲಾ ನಿವೇ ಹೇಳಿ. ಅಂದಹಾಗೆ ಈ ಚಟುವಟಿಕೆಗಳಿಂದ ಪ್ರಸ್ತುತದಲ್ಲಿ ಎಲ್ಲರಿಗೂ ಸಿಗುತ್ತಿರುವ ರಿಸಲ್ಟ್ ಆಗಾಗ ಕರೆ ಸ್ಥಗಿತ, ಇತರರಿಗೆ ಕರೆ ಮಾಡಿದರೆ ನಾಟ್‌ ರೀಚೇಬಲ್‌, ಸ್ವಲ್ಪ ಸಮಯದ ನಂತರ ಕರೆ ಮಾಡಿ.

ಹೋಗ್ಲಿ ಬಿಡಿ, ಎಲ್ಲಾ ಟೆಲಿಕಾಂಗಳು ಸ್ಪರ್ಧೆಗಿಳಿದಿರುವ ಪರಿಣಾಮ ಈಗೆಲ್ಲಾ ಆಗುತ್ತಿದೆ. ಅಂದಹಾಗೆ ಕರೆ ಸಮಸ್ಯೆ ಮಾತ್ರವಲ್ಲದೇ ಹಲವರು ಇಂಟರ್ನೆಟ್ ವೇಗ 4G ಬದಲು 2G ಮಾತ್ರ ಲಭ್ಯವಾಗುತ್ತಿದೆ. ಇಂಟರ್ನೆಟ್ ವೇಗಗೊಳಿಸಲು ಸಲಹೆ ನೀಡಿ ಎಂದು ಗಿಜ್‌ಬಾಟ್‌ ಓದುಗರು ಕೇಳಿದ್ದರು. ಆದ್ದರಿಂದ ಇಂದಿನ ಲೇಖನದಲ್ಲಿ ಆಂಡ್ರಾಯ್ಡ್ ಬಳಕೆದಾರರು ತಮ್ಮ ಇಂಟರ್ನೆಟ್ ವೇಗ ಹೆಚ್ಚಿಸಿಕೊಳ್ಳಲು ಟಾಪ್‌ 5 ಆಪ್‌ಗಳನ್ನು ಪರಿಚಯಿಸುತ್ತಿದ್ದೇವೆ. ಅವು ಯಾವುವು ಎಂದು ಮುಂದೆ ಓದಿ ತಿಳಿಯಿರಿ.

ಆಂಡ್ರಾಯ್ಡ್ ಫೋನ್‌ ಕ್ಲೀನ್ ಮಾಡಿ ವೇಗಗೊಳಿಸುವುದು ಹೇಗೆ? ಕೇವಲ 5 ಹಂತಗಳು

ಇಂಟರ್ನೆಟ್ ಬೂಸ್ಟರ್ ಮತ್ತು ಆಪ್ಟಿಮೈಜರ್

ಇಂಟರ್ನೆಟ್ ಬೂಸ್ಟರ್ ಮತ್ತು ಆಪ್ಟಿಮೈಜರ್

ಈ ಆಪ್‌ ಇಂಟರ್ನೆಟ್ ಬ್ರೌಸಿಂಗ್ ಅನುಭವವನ್ನು ಹೆಚ್ಚಿಸುತ್ತಿದೆ.
* ಆಪ್‌ ನಿಮ್ಮ ಬ್ರೌಸರ್ ಅನ್ನು ಆಂಡ್ರಾಯ್ಡ್ ಸಿಸ್ಟಮ್‌ನಲ್ಲಿ ಮೇಲ್ಬಾಗಕ್ಕೆ ಆದ್ಯತೆ ನೀಡುತ್ತದೆ.
* ಸೆಕೆಂಡರಿ ಪ್ರೊಸೆಸ್ ವಿರಾಮಗೊಳಿಸಿ, RAM ಮೆಮೊರಿ ಕ್ಲೀನ್‌ ಮಾಡಿ, ಕ್ಯಾಚಿ ಮೆಮೊರಿ ಕ್ಲೀನ್ ಮಾಡಿ ಹಲವ ಫೀಚರ್‌ಗಳ ಮೂಲಕ ಇಂಟರ್ನೆಟ್ ವೇಗಗೊಳ್ಳಲು ಸಹಾಯ ಮಾಡುತ್ತದೆ.
* ಪಿಂಗ್‌ ಸುಧಾರಿಸಿ, ಒಟ್ಟಾರೆ ಇಂಟರ್ನೆಟ್ ವೇಗವನ್ನು ಸುಧಾರಿಸುತ್ತದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಫಾಸ್ಟರ್ ಇಂಟರ್ನೆಟ್ 2ಎಕ್ಸ್

ಫಾಸ್ಟರ್ ಇಂಟರ್ನೆಟ್ 2ಎಕ್ಸ್

* ಈ ಆಪ್‌ ಇಂಟರ್ನೆಟ್ ವೇಗಗೊಳಿಸಲು ವಿಶೇಷ ಸ್ಕ್ರಿಪ್ಟ್‌ ಅನ್ನು ಬಳಸಿಕೊಳ್ಳುತ್ತದೆ. ಅಲ್ಲದೇ ಸಿಗ್ನಲ್ ವೇಗವನ್ನು ಅಭಿವೃದ್ದಿಗೊಳಿಸುತ್ತದೆ.
* ಈ ಆಪ್‌ ರೂಟೆಡ್ ಮತ್ತು ನಾನ್‌-ರೂಟೆಡ್ ಎರಡು ಫೋನ್‌ಗಳಲ್ಲು ವರ್ಕ್‌ ಆಗುತ್ತದೆ.

ಫ್ರೀ ಇಂಟರ್ನೆಟ್ ಸ್ಪೀಡ್ ಬೂಸ್ಟರ್

ಫ್ರೀ ಇಂಟರ್ನೆಟ್ ಸ್ಪೀಡ್ ಬೂಸ್ಟರ್

* ಅನಗತ್ಯ ಬ್ಯಾಗ್ರೌಂಡ್ ಟಾಸ್ಕ್‌ ಅನ್ನು ನಿಲ್ಲಿಸಿ, ಲಭ್ಯವಿರುವ ಬ್ಯಾಂಡ್‌ವಿಡ್ತ್‌ ಅನ್ನು ಹೆಚ್ಚಿಸುತ್ತದೆ.
* ಡಿಎನ್‌ಎಸ್ ಕ್ಯಾಚಿ ಕ್ಲೀನ್ ಮಾಡಿ ಗುಪ್ತ ಬ್ರೌಸರ್ ಸ್ಕ್ರಿಪ್ಟ್‌ ಅನ್ನು ಅಭಿವೃದ್ದಿಗೊಳಿಸುತ್ತದೆ.
* ವೇಗ ಅತ್ಯುತ್ತಮಗೊಳಿಸಲು ಸರಾಸರಿ ಸಮಾನಾಂತರ ಸಂಪರ್ಕಗಳನ್ನು ಸರಿಹೊಂದಿಸುತ್ತದೆ.

ಇಂಟರ್ನೆಟ್ ಸ್ಪೀಡ್ ಮೀಟರ್ ಲೈಟ್

ಇಂಟರ್ನೆಟ್ ಸ್ಪೀಡ್ ಮೀಟರ್ ಲೈಟ್

* ಈ ಆಪ್‌ ರಿಯಲ್‌ ಟೈಮ್ ಸ್ಪೀಡ್ ಅಪ್‌ಡೇಟ್ ಅನ್ನು ಸ್ಟೇಟಸ್ ಬಾರ್‌ನಲ್ಲಿ ಮತ್ತು ನೋಟಿಫಿಕೇಶನ್‌ನಲ್ಲಿ ನೀಡುತ್ತದೆ.
* ಡೈಲಿ ಟ್ರಾಫಿಕ್‌ ಬಳಕೆಯನ್ನು ನೋಟಿಫೀಕೇಶನ್‌ನಲ್ಲಿ ನೀಡುತ್ತದೆ.
* ಮೊಬೈಲ್‌ ನೆಟ್‌ವರ್ಕ್‌ ಮತ್ತು ವೈಫೈ ನೆಟ್‌ವರ್ಕ್‌ ಅಂಕಿ ಅಂಶಗಳನ್ನು ಪ್ರತ್ಯೇಕವಾಗಿ ತೋರಿಸುತ್ತದೆ ಮತ್ತು ತಿಂಗಳ ಡೇಟಾ ಟ್ರ್ಯಾಫಿಕ್ ಬಗ್ಗೆ ಮಾಹಿತಿ ನೀಡುತ್ತದೆ.

ಇಂಟರ್ನೆಟ್ ಸ್ಪೀಡ್ ಬೂಸ್ಟರ್

ಇಂಟರ್ನೆಟ್ ಸ್ಪೀಡ್ ಬೂಸ್ಟರ್

ಇಂಟರ್ನೆಟ್ ಅಕ್ಸೆಲೆರೇಟರ್ ಇಂಟರ್ನೆಟ್ ಸಂಪರ್ಕ ಉತ್ತಮ ಗೊಳಿಸಲು ಅತ್ಯುತ್ತಮವಾದ ಉಚಿತ ಅಪ್ಲಿಕೇಶನ್. ವೈಫೈ ನೆಟ್‌ವರ್ಕ್‌ನಲ್ಲಿ ಕಡಿಮೆ ವೇಗದ ಇಂಟರ್ನೆಟ್ ಅನುಭವ ಪಡೆಯುತ್ತಿದ್ದಲ್ಲಿ ಈ ಆಪ್ ಸಹಾಯಕವಾಗುತ್ತದೆ. ಬ್ಯಾಗ್ರೌಂಡ್‌ನಲ್ಲಿ ಚಾಲಿತವಾಗಿರುವ ಅಪ್ಲಿಕೇಶನ್‌ಗಳನ್ನು ಸ್ಥಗಿತಗೊಳಿಸಿ, ವೇಗದ ಇಂಟರ್ನೆಟ್ ಸಂಪರ್ಕಕ್ಕೆ ಸಹಾಯ ಮಾಡುತ್ತದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

Read more about:
English summary
Top 5 Best Apps to Increase Internet Speed In Android. To know these apps and feature visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X