Subscribe to Gizbot

ಆಂಡ್ರಾಯ್ಡ್ ಫೋನ್‌ ಕ್ಲೀನ್ ಮಾಡಿ ವೇಗಗೊಳಿಸುವುದು ಹೇಗೆ? ಕೇವಲ 5 ಹಂತಗಳು

Written By:

ಕನಿಷ್ಟ ಅಂದ್ರೂ ಒಂದು ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ ಅನ್ನು 2 ವರ್ಷಕ್ಕಿಂತ ಹೆಚ್ಚು ದಿನ ಬಳಸಬಹುದು. ಆದ್ರೆ ಕೆಲವರಿಗೆ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಒಂದು ವರ್ಷವು ಸಹ ಸರಿಯಾಗಿ ಬಳಕೆಗೆ ಬರುವುದಿಲ್ಲ. ಹಲವು ಆಫ್‌ಗಳನ್ನು ಇನ್‌ಸ್ಟಾಲ್ ಮಾಡುತ್ತಾರೆ. ಹಾಗೆ ಅನ್‌ಇನ್‌ಸ್ಟಾಲ್ ಸಹ ಮಾಡುತ್ತಾರೆ. ಫೋನ್‌ ಹ್ಯಾಂಗ್‌ ಆಗುತ್ತದೆ.

ಎಷ್ಟೇ ಬಾರಿ ಬಟನ್ ಪ್ರೆಸ್ ಮಾಡಿದರೂ, ಟಚ್‌ ಸ್ಕ್ರೀನ್‌ನಲ್ಲಿ ಟ್ಯಾಪ್‌ ಮಾಡಿದರೂ ಫೋನ್‌ ವರ್ಕ್‌ ಆಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಆದಾಗಿ ಅದೇ ಸ್ವಿಚ್‌ ಆಫ್‌ ಆಗಿ ಆನ್‌ ಆಗುತ್ತದೆ. ಹೊಸ ಫೋನ್‌ ಖರೀದಿಗೆ ಕಾಸಿಲ್ಲ. ಹಳೇ ಫೋನ್‌ ರೆಡಿ ಮಾಡಿಸಲು ಮನಸಿಲ್ಲ. ಆದ್ರೇ ಅದೇ ಹಳೇ ಫೋನ್‌ ವೇಗವಾಗಿ ವರ್ಕ್‌ ಆಗಬೇಕು, ಈ ರೀತಿಯ ಸಮಸ್ಯೆ ಎಲ್ಲರಿಗೂ ಇವೆ. ಈ ರೀತಿಯ ಪರಿಹಾರವನ್ನು ಎಲ್ಲರೂ ಬಯಸುತ್ತಾರೆ. ಅಂತಹವರಿಗೆ ಇಂದಿನ ಲೇಖನದಲ್ಲಿ ತಮ್ಮ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಅನ್ನು ಕ್ಲೀನಪ್‌ ಮಾಡಿ, ವೇಗಗೊಳಿಸುವುದು ಹೇಗೆ ಎಂದು ಮಾಹಿತಿ ತಿಳಿಸುತ್ತಿದ್ದೇವೆ. ಮುಂದೆ ಓದಿರಿ.

ಆಧಾರ್ ಕಾರ್ಡ್ ಆಧಾರಿತ ಹಣ ಪಾವತಿ ಸಿಸ್ಟಮ್ ಶೀಘ್ರದಲ್ಲಿ: UIDAI

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸಿಕ್ಲೀನರ್(CCleaner)

ಸಿಕ್ಲೀನರ್(CCleaner)

ಆಂಡ್ರಾಯ್ಡ್ ಬಳಕೆದಾರರು ಸಿಕ್ಲೀನರ್ ಆಫ್‌ ಬಳಸಿ, ಡಿವೈಸ್‌ನಲ್ಲಿನ ಎಲ್ಲಾ ಆಪ್‌ಗಳ ಕ್ಯಾಚಿ ಮತ್ತು ಜಂಕ್‌ ಫೈಲ್‌ಗಳನ್ನು ಕ್ಲಿಯರ್ ಮಾಡುತ್ತದೆ. ಒಂದು ಕ್ಲಿಕ್‌ನಿಂದ ಡಿವೈಸ್‌ನಲ್ಲಿ 1GB ವರೆಗೆ ಮೆಮೊರಿ ಹೆಚ್ಚಿಸಿಕೊಳ್ಳಬಹುದು.

ಆಪ್ ಇನ್‌ಸ್ಟಾಲ್‌ ಮಾಡಿ ಓಪನ್‌ ಮಾಡಿ. ಆಪ್ ಲಾಂಚ್‌ ಮಾಡಿ Analyze button ಕ್ಲಿಕ್ ಮಾಡಿ ಸ್ಕ್ಯಾನಿಂಗ್ ಆದ ನಂತರ Clean ಎಂಬಲ್ಲಿ ಕ್ಲಿಕ್ ಮಾಡಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 ಕ್ಲೀನ್‌ ಮಾಸ್ಟರ್ ಆಪ್‌

ಕ್ಲೀನ್‌ ಮಾಸ್ಟರ್ ಆಪ್‌

ಕ್ಲೀನ್ ಮಾಸ್ಟರ್ ಆಪ್‌ ಆಂಡ್ರಾಯ್ಡ್‌ನಲ್ಲಿ ಜಂಕ್‌ ಫೈಲ್ ತೆಗೆಯಲು ಇರುವ ಇನ್ನೋಂದು ಕೂಲ್ ಆಪ್‌. ಈ ಆಪ್‌ ಅನ್ನು ಸಹ ಸಿಕ್ಲೀನರ್ ಆಪ್‌ನಂತೆಯೇ ಬಳಸಬಹುದು. ಆದರೆ ಈ ಆಪ್‌ನಲ್ಲಿ ಅತ್ಯಾಧುನಿಕ ಫೀಚರ್‌ಗಳಿದ್ದು ಉಪಯೋಗ ಪಡೆದುಕೊಳ್ಳಬಹುದು.

ಬೇಡದ ಆಪಪ್‌ಗಳನ್ನು ಅನ್‌ಇನ್‌ಸ್ಟಾಲ್‌ ಮಾಡಿ ಡಿಸೇಬಲ್ ಮಾಡಿ

ಬೇಡದ ಆಪಪ್‌ಗಳನ್ನು ಅನ್‌ಇನ್‌ಸ್ಟಾಲ್‌ ಮಾಡಿ ಡಿಸೇಬಲ್ ಮಾಡಿ

ಸ್ವಲ್ಪ ಬೋರಿಂಗ್ ಮಾದರಿ ಎನ್ನಬಹುದು. ಆದರೆ ಈ ರೀತಿ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಬೇಡದ ಆಪ್‌ಗಳನ್ನು ಅನ್‌ಇನ್‌ಸ್ಟಾಲ್ ಡಿಸೇಬಲ್ ಮಾಡುವುದರಿಂದ ಡಿವೈಸ್‌ ಮೆಮೊರಿ ಹೆಚ್ಚು ಉಚಿತವಾಗುತ್ತದೆ. ಸ್ಮಾರ್ಟ್‌ಫೋನ್‌ ವೇಗವಾಗಿ ವರ್ಕ್‌ ಸಹ ಆಗುತ್ತದೆ. ಆಪ್‌ ಅನ್‌ಇನ್‌ಸ್ಟಾಲ್ ಮಾಡಲು Settings>Apps>Uninstall.

ನಕಲಿ ಕಾಂಟ್ಯಾಕ್ಟ್‌ಗಳನ್ನು ಕ್ಲೀನಿಂಗ್ ಮಾಡುವುದು

ನಕಲಿ ಕಾಂಟ್ಯಾಕ್ಟ್‌ಗಳನ್ನು ಕ್ಲೀನಿಂಗ್ ಮಾಡುವುದು

ಹಲವು ನಕಲಿ ಕಾಂಟ್ಯಾಕ್ಟ್‌ಗಳು(Duplicate) ಮತ್ತು ನಿರುಪಯುಕ್ತತೆಗಳು ಆಂಡ್ರಾಯ್ಡ್‌ನಲ್ಲಿ ಸ್ಟೋರ್ ಆಗಿರುತ್ತವೆ. ಅವುಗಳನ್ನು ಕ್ಲೀನ್‌ ಮಾಡಲು ಎಚ್ಚರವಹಿಸಿ. Duplicate Contacts & Utilities ಎಂಬ ಆಪ್ಲಿಕೇಶನ್‌, ಆಪ್‌ ಸ್ಟೋರ್‌ನಲ್ಲಿದ್ದು, ಡೌನ್‌ಲೋಡ್ ಮಾಡಿ ಬಳಸಿ. ಇದು ಎಲ್ಲಾ ರೀತಿಯ ಡುಪ್ಲಿಕೇಟ್ ಕಾಂಟ್ಯಾಕ್ಟ್‌ಗಳನ್ನು, ಜಂಕ್‌ ಫೈಲ್‌ಗಳನ್ನು ಡಿಲೀಟ್ ಮಾಡುತ್ತದೆ. ಫೋನ್‌ ಬುಕ್‌ ಅನ್ನು ಇನ್ನಷ್ಟು ಫೀ ಮಾಡುತ್ತದೆ.

ಆಟೋ ಸಿಂಕ್ ಟರ್ನ್‌ ಆಫ್‌

ಆಟೋ ಸಿಂಕ್ ಟರ್ನ್‌ ಆಫ್‌

ಆಂಡ್ರಾಯ್ಡ್‌ನಲ್ಲಿ ಹಲವು ರೀತಿಯ ಖಾತೆಗಳನ್ನು ಹೊಂದಿರುತ್ತೀವಿ. ಎಲ್ಲಾ ಡೇಟಾ ಸ್ವಯಂಚಾಲಿತವಾಗಿ ಸಿಂಕ್‌ ಆಗಲು ಅವಕಾಶ ನೀಡಿರುತ್ತೇವೆ. ಸಿಂಕ್ ಪ್ರೋಸೆಸ್ ಬ್ಯಾಟರಿ ಲೈಪ್ ಕಡಿಮೆ ಮಾಡುವುದಲ್ಲದೇ ಇಂಟರ್‌ನಲ್‌ ಸ್ಟೋರೇಜ್‌ ಅನ್ನು ಕಡಿಮೆಗೊಳಿಸುತ್ತದೆ. ಆದ್ದರಿಂದ ಆಟೋ-ಸಿಂಕ್‌ ಆಪ್ಶನ್‌ ಅನ್ನು ಅನ್‌ಚೆಕ್‌ ಮಾಡಿ.

ಫ್ಯಾಕ್ಟರಿ ರೀಸೆಟ್

ಫ್ಯಾಕ್ಟರಿ ರೀಸೆಟ್

ಮೇಲಿನ ಎಲ್ಲಾ ಸಲಹೆಗಳು ನಿಮ್ಮ ಡಿವೈಸ್‌ ವೇಗಗೊಳಿಸಲು ಸಹಕಾರಿ ಆಗದಿದ್ದರೇ, ಕೊನೆಗೆ ಸ್ಮಾರ್ಟ್‌ಫೋನ್‌ ಫ್ಯಾಕ್ಟರಿ ರೀಸೆಟ್ ಮಾಡಿ. ಅತ್ಯುತ್ತಮವಾದ ಮಾದರಿ ಸಲಹೆ ಅಗಿದ್ದು, ಸಂಪೂರ್ಣವಾಗಿ ನಿಮ್ಮ ಡಿವೈಸ್‌ ಅನ್ನು ಮೊದಲಿನಂತೆ ವೇಗಗೊಳಿಸುತ್ತದೆ ಮತ್ತು RAM ಅನ್ನು ಪೂರ್ಣವಾಗಿ ಫ್ರೀ ಮಾಡುತ್ತದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

 

Read more about:
English summary
How To Clean Up Android Device To Make It Faster. To know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot