ನಿಮ್ಮ ಫೋಟೊ ಅಂದಕ್ಕೆ ಮತ್ತಷ್ಟು ಮೆರಗು ನೀಡಲಿವೆ ಈ ಮೇಕಪ್ ಅಪ್ಸ್!
ಪ್ರಸ್ತುತ ಪ್ರತಿಯೊಂದು ವಿಷಯಕ್ಕೂ ಅಪ್ಲಿಕೇಶನ್‌ಗಳು ಸಿಗುತ್ತವೆ. ಸಾಮಾನ್ಯವಾಗಿ ಆಪ್ಸ್‌ಗಳನ್ನು ಎಲ್ಲರಿಗೂ ಉಪಯುಕ್ತವಾಗುವ ನಿಟ್ಟಿನಲ್ಲಿ ಅಭಿವೃದ್ಧಿಪಡಿಸಲಾಗಿರುತ್ತದೆ. ಆದರೆ ಕೆಲವೊಂದು ಅಪ್ಲಿಕೇಶನ್‌ಗಳು ನಿರ್ದಿಷ್ಟ ಬಳಕೆದಾರರಿಗೆ ಮಾತ್ರ ಸೀಮಿತವಾಗಿರುತ್ತವೆ. ಆ ಪೈಕಿ ಮಹಿಳೆಯರಿಗಾಗಿಯೇ ಕೆಲವೊಂದಿಷ್ಟು ಆಪ್ಸ್‌ಗಳ ಇದ್ದು, ಅವುಗಳಲ್ಲಿ ಮೇಕಪ್‌ಗೆ ಸಂಬಂಧಿಸಿದ ಅಪ್ಲಿಕೇಶನ್‌ಗಳು ಹೆಚ್ಚು ಟ್ರೆಂಡಿಂಗ್‌ನಲ್ಲಿವೆ.

ಹೌದು, ಮೇಕಪ್ ಎಂದರೇ ಮಹಿಳೆಯರಿಗೆ ಖುಷಿ ವಿಷಯ. ಪ್ರತಿ ಹಂತದಲ್ಲಿಯು ಸುಂದರವಾಗಿ ಕಾಣಿಸಬೇಕೆಂದು ಇಷ್ಟ ಪಡುತ್ತಾರೆ. ಅದರಲ್ಲಿಯೂ ಫೋಟೊ ತೆಗೆಸಿಕೊಳ್ಳುವಾಗ ಮೇಕಪ್ ಮಾಡಿಕೊಳ್ಳುವುದನ್ನು ಅವರು ಮರೆಯುವುದಿಲ್ಲ. ಫೋಟೊ ತೆಗೆದ ಮೇಲೆ ಅವರ ಅಂದವನ್ನು ಇನ್ನಷ್ಟು ಹೆಚ್ಚಿಸಲು ಹಲವು ಮೇಕಪ್ ಅಪ್ಲಿಕೇಶನ್‌ಗಳು ಲಭ್ಯ ಇವೆ. ಆ ಆಪ್ಸ್‌ಗಳ ಮೂಲಕ ಮಹಿಳೆಯರು ತಮ್ಮ ಫೋಟೊಗಳಿಗೆ ಮತ್ತಷ್ಟು ಮೆರಗು ತರಬಹುದು. ಹಾಗಾದರೆ ಅಂತಹ 5 ಬೆಸ್ಟ್ ಮೇಕಪ್ ಆಪ್ಸ್ ಯಾವುವು ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಯೂಕ್ಯಾಮ್ ಮೇಕಪ್(YouCam Makeup)
ಯೂಕ್ಯಾಮ್ ಮೇಕಪ್ ಆಪ್ ವಿಶೇಷವಾಗಿ ಮಹಿಳೆ ಮತ್ತು ಯುವತಿಯರಿಗಾಗಿ ಡಿಸೈನ್ ಮಾಡಲಾಗಿದೆ. ಈ ಆಪ್‌ನಲ್ಲಿ ಮಹಿಳೆಯರು ಅವರ ಫೋಟೊದ ಅಂದವನ್ನು ಹೆಚ್ಚಿಸಿಕೊಳ್ಳಬಹುದು. ಅದಕ್ಕೆ ಪೂರಕವಾದ ಮೇಕಪ್ ಆಯ್ಕೆಗಳು ಈ ಆಪ್‌ನಲ್ಲಿ ಲಭ್ಯ ಇವೆ. ಮುಖ್ಯವಾಗಿ ಸ್ಕೀನ್ ಮೇಕಪ್, ಹೇರ್ ಕಲರ್ ಬದಲಾವಣೆ ಜೊತೆಗೆ ಹ್ಯಾಟ್, ಬ್ಯಾಂಡ್ ನಂತಹ 3D ಆಕ್ಸಸರಿಸ್‌ಗಳ ಆಯ್ಕೆ ಸಹ ಇದೆ.

ಗ್ಲ್ಯಾಮರಸ್ ಮೇಕಪ್(Glamorous Make-up)
ಗ್ಲ್ಯಾಮರಸ್ ಮೇಕಪ್ ಅಪ್ಲಿಕೇಶನ್ ಮುಖ್ಯವಾಗಿ ಕಣ್ಣುಗಳ ಅಂದ ಹೆಚ್ಚಿಸುವತ್ತ ಒತ್ತು ನೀಡಿದೆ. ಈ ಆಪ್‌ನಲ್ಲಿ ಮಹಿಳೆಯರು ಅವರ ಫೋಟೊದಲ್ಲಿ ಕಣ್ಣುಗಳ ಸೌಂದರ್ಯವನ್ನು ಅಧಿಕ ಮಾಡುವ ಟೆಕ್ನಿಕ್ ಆಯ್ಕೆಗಳು ಇವೆ. ಆಂಡ್ರಾಯ್ಡ್ ಓಎಸ್ ಬಳಕೆದಾರರಿಗೆ ಈ ಆಪ್ ಲಭ್ಯ ವಿದೆ.

ಮೇಕಪ್ ಪ್ಲಸ್ (MakeupPlus)
ಈ ಮೇಕಪ್ ಪ್ಲಸ್ ಆಪ್‌ನಲ್ಲಿ ನೇರವಾಗಿ ಸೆಲ್ಫಿ ಫೋಟೊ ಸೆರೆಹಿಡಿದು ಆ ಫೋಟೊದ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುವ ಆಯ್ಕೆಗಳನ್ನು ನೀಡಲಾಗಿದೆ. ಹಾಗೆಯೇ ಈ ಆಪ್‌ನಲ್ಲಿ ಲಿಪ್‌ಸ್ಟಿಕ್ ಹಚ್ಚುವ ಆಯ್ಕೆ ಇದೆ. ಉಳಿದಂತೆ ಕಣ್ಣುಗಳ ಅಂದ ದ್ವಿಗುಣ ಮಾಡುವ ಆಯ್ಕೆಗಳು ಹಾಗೂ ಹೇರ ಡ್ರೈ ಮಾಡುವ ಆಯ್ಕೆಗಳು ಸಹ ಇವೆ.

ಬೆಸ್ಟ್ ಬ್ಯುಟಿ ಮೇಕಪ್(Best Beauty MakeUp)
ಬೆಸ್ಟ್ ಬ್ಯುಟಿ ಮೇಕಪ್ ಅಪ್ಲಿಕೇಶನ್ ಸಹ ಅತ್ಯುತ್ತಮ ಮೇಕಪ್ ಆಯ್ಕೆಗಳನ್ನು ಒಳಗೊಂಡಿದೆ. ಮುಖ್ಯವಾಗಿ ಫೋಟೊ ಮೇಕಪ್, ಫೋಟೊ ಕಸ್ಟಮೈಸ್ ಮತ್ತು ಸೆಲ್ಫಿ ಕ್ಯಾಮೆರಾ ಆಯ್ಕೆಗಳಿವೆ. ಜೊತೆಗೆ ಲಿಪ್‌ಸ್ಟಿಕ್, ಹೇರ್ ಚೇಂಜ್, ಸ್ಕೀನ್ ಕಲರ್ ಬದಲಾವಣೆ ಸೇರಿದಂತೆ ಆಕರ್ಷಕ ಆಯ್ಕೆಗಳನ್ನು ಈ ಆಪ್ ಹೊಂದಿದೆ. ಹಾಗೆಯೇ ಸುಮಾರು 200ಕ್ಕೂ ಅಧಿಕ ಸ್ಟಿಕ್ಕರ್ ಆಯ್ಕೆಗಳಿವೆ.

ಯೂ ಫೇಸ್ ಪರ್ಫೆಕ್ಟ್ ಮೇಕಪ್ (you face perfect makeup )
ವಿಶೇಷ ಮತ್ತು ವಿಭಿನ್ನ ಕೊಲಾಜ್ ರಚಿಸಲು ಹಾಗೂ magazine ಕವರ್ ಫೋಟೊ ತರಹ ಸಹ ಮೇಕಪ್ ಮಾಡುವ ಆಯ್ಕೆಗಳನ್ನು ಈ ಅಪ್ಲಿಕೇಶನ್ ಹೊಂದಿದೆ. ಹಾಗೆಯೇ ಫೋಟೊದಲ್ಲಿ ಟೆಕ್ಟ್ಸ್, ಬ್ಯಾಕ್‌ಗ್ರೌಂಡ್ ಬದಲಾವಣೆ ಮಾಡುವ ಆಯ್ಕೆಗಳು ಇವೆ. ಇದರೊಂದಿಗೆ ಮೀರರ್ ಎಫೆಕ್ಟ್, ಬ್ಲರ್ ಆಯ್ಕೆಯ ಸೌಲಭ್ಯಗಳು ಸಹ ಇವೆ. ಸುಮಾರು 20 ಫೋಟೊ ಬಳಸಿ ಸಹ ಕೊಲಾಜ್ ಮಾಡಬಹುದಾಗಿದೆ.


Click it and Unblock the Notifications








