ಕ್ರಿಕೆಟ್ ಕ್ರೇಜ್ ಹೆಚ್ಚಿಸುವ ಟಾಪ್ 5 ಫ್ಯಾಂಟಸಿ ಕ್ರಿಕೆಟ್ ಆಪ್ಸ್!
ಕ್ರಿಕೆಟ್ ಆಟವನ್ನು ಕೆಲವರು ಒಂದು ಜನಪ್ರಿಯ ಗೇಮ್ ಆಗಿ ನೋಡಿದರೇ, ಅದೆಷ್ಟೋ ಜನರು ಕ್ರಿಕೆಟ್ ಅನ್ನು ಆರಾಧಿಸುತ್ತಾರೆ. ಕ್ರಿಕೆಟ್ ಅಂದರೇ ಸಂಭ್ರಮಿಸುತ್ತಾರೆ. ಈ ನಿಟ್ಟಿನಲ್ಲಿ ಕ್ರಿಕೆಟ್ ಪ್ರೇಮಿಗಳಿಗಾಗಿಯೇ ಫ್ಯಾಂಟಸಿ ಕ್ರಿಕೆಟ್ ಅಪ್ಲಿಕೇಶನ್‌ಗಳು ಲಗ್ಗೆ ಇಟ್ಟಿವೆ. IPL ಸರಣಿ ಪ್ರಾರಂಭವಾದಾಗಿನಿಂದ ಈ ಫ್ಯಾಂಟಸಿ ಕ್ರಿಕೆಟ್ ಆಪ್‌ಗಳ ಕ್ರೇಜ್ ಹಾಗೂ ಟ್ರೆಂಡ್ ಹೆಚ್ಚಾಗಿದೆ. ಇದರಲ್ಲಿ ಮ್ಯಾಚ್ ನೋಡುತ್ತಾ ಹಣ ಗಳಿಸಬಹುದು ಎನ್ನುವ ಕಾರಣಕ್ಕೆ ಆಪ್‌ಗಳು ಹೆಚ್ಚು ಪಾಪ್ಯುಲರ್ ಆಗುತ್ತಿವೆ.

ಹೌದು, ಫ್ಯಾಂಟಸಿ ಕ್ರಿಕೆಟ್ ಆಪ್‌ಗಳ ಈಗ ಹೆಚ್ಚು ಟ್ರೆಂಡ್ ಆಗುತ್ತಿದ್ದು, ಈ ಪೈಕಿ ಬಹುತೇಕರಿಗೆ ಡ್ರೀಮ್ 11 ಆಪ್ ತಿಳಿದೆ ಇದೆ. ಈ ಆಪ್‌ನಂತೆ ಇನ್ನೂ ಹಲವು ಅಪ್ಲಿಕೇಶನ್‌ಗಳು ಈ ಲಿಸ್ಟ್‌ಗೆ ಸೇರ್ಪಡೆ ಆಗಿವೆ. ಈ ಫ್ಯಾಂಟಸಿ ಆಪ್‌ಗಳಲ್ಲಿ IPL ಫ್ಯಾಂಟಸಿ ಲೀಗ್ ಸೇರಿದಂತೆ ವಿಶ್ವಕಪ್ ಕ್ರಿಕೆಟ್, T20 ಪಂದ್ಯ, ಬಿಗ್ ಬ್ಯಾಷ್, ಸಿಪಿಎಲ್ 2020 ನಂತಹ ಮ್ಯಾಚ್‌ಗಳು ಸೇರಿವೆ. ಈ ನಿಟ್ಟಿನಲ್ಲಿ ನೀವೆನಾದರೂ ಟಾಪ್ 10 ಫ್ಯಾಂಟಸಿ ಕ್ರಿಕೆಟ್ ಅಪ್ಲಿಕೇಶನ್‌ಗಳ ಪಟ್ಟಿಯನ್ನು ಹುಡುಕುತ್ತಿದ್ದೀರಾ? ಹಾಗಾದರೇ ಇಲ್ಲಿವೆ ನೋಡಿ ಟಾಪ್ 5 ಫ್ಯಾಂಟಸಿ ಕ್ರಿಕೆಟ್ ಆಪ್ಸ್.

ಡ್ರೀಮ್ 11
ಡ್ರೀಮ್ 11 ಆಪ್ ಫ್ಯಾಂಟಸಿ ಕ್ರಿಕೆಟ್ ಆಪ್‌ಗಳಲ್ಲಿಯೇ ಅತೀ ಹೆಚ್ಚು ಜನಪ್ರಿಯವಾಗಿದೆ. ಕ್ರಿಕೆಟ್ ಪ್ರಿಯರು ತಮ್ಮ ತಮ್ಮದೇ ತಂಡ ನಿರ್ಮಿಸಿ ಆಟವಾಡಬಹುದಾಗಿದೆ.

ಮೈ11 ಸರ್ಕಲ್
ಟ್ರೆಂಡಿಂಗ್‌ನಲ್ಲಿರುವ ಫ್ಯಾಂಟಸಿ ಕ್ರಿಕೆಟ್ ಆಪ್‌ಗಳ ಪೈಕಿ ಮೈ11 ಸರ್ಕಲ್ ಆಪ್ ಸಹ ಒಂದಾಗಿದೆ. ಸೌರವ್ ಗಂಗೂಲಿ ಈ ಆಪ್‌ನ ಬ್ರ್ಯಾಂಡ್ ಅಂಬಾಸಡರ್ ಆಗಿದ್ದಾರೆ.

ಮೈ ಟೀಮ್ 11
ಇತ್ತೀಚಿನ ದಿನಗಳಲ್ಲಿ ಮೈ ಟೀಮ್ 11 ಫ್ಯಾಂಟಸಿ ಕ್ರಿಕೆಟ್ ಆಪ್ ಸಹ ಭಾರಿ ಟ್ರೆಂಡ್‌ನಲ್ಲಿ ಕಾಣಿಸಿಕೊಂಡಿದೆ. 15 ಮಿಲಿಯನ್‌ಗಿಂತಲೂ ಅಧಿಕ ಬಳಕೆದಾರರನ್ನು ಈ ಆಪ್ ಹೊಂದಿದೆ. 9 ಭಾಷೆಗಳ ಆಯ್ಕೆಗಳನ್ನು ಇದು ಹೊಂದಿದೆ.

11 ವಿಕೆಟ್
ಕ್ರಿಕೆಟ್‌ಗೆ ಸಂಬಂಧಿಸಿದ ಆಪ್‌ಗಳಲ್ಲಿ 11 ವಿಕೆಟ್ ಅಪ್ಲಿಕೇಶನ್ ಸಹ ಮುಂಚೂಣಿಯಲ್ಲಿ ಕಾಣಿಸಿಕೊಂಡಿದೆ. ಪ್ರೋಮೊ ಕೋಡ್, ರೇಫರಲ್ ಕೋಡ್ ಆಯ್ಕೆಗಳು ಇದರಲ್ಲಿ ಲಭ್ಯವಾಗಲಿವೆ.

ಬ್ಯಾಟ್ ಬಾಲ್ 11
ಫ್ಯಾಂಟಸಿ ಕ್ರಿಕೆಟ್ ಅಪ್ಲಿಕೇಶನ್‌ಗಳ ಲಿಸ್ಟ್‌ನಲ್ಲಿ ಬ್ಯಾಟ್ ಬಾಲ್ 11 ಆಪ್ ಸಹ ಗುರುತಿಸಿಕೊಂಡಿದೆ. ಈ ಆಪ್‌ನಲ್ಲಿಯೂ ಬಳಕೆದಾರರಿಗೆ ಡ್ರೀಮ್ 11 ನಂತೆ ಹಲವು ಆಯ್ಕೆಗಳು ಲಭ್ಯವಾಗಲಿವೆ.


Click it and Unblock the Notifications