ಸ್ಮಾರ್ಟ್‌ಫೋನ್‌ಗೆ ಟಾಪ್‌ 5 ಉಚಿತ ಸೆಕ್ಯೂರ್‌ ಮೆಸೇಜಿಂಗ್‌ ಆಪ್ಸ್ ಯಾವುವು ಗೊತ್ತೇ?

ಮೆಸೇಜ್‌ಗಳು ಮತ್ತು ಇಮೇಲ್‌ಗಳನ್ನು ಇಂದು ಯಾವುದೇ ಡಿವೈಸ್‌ನಲ್ಲಿ ಸೆಂಡ್‌ ಮಾಡಿದರೂ ಸಹ ಸರ್ಕಾರಿ ಹ್ಯಾಕರ್‌ಗಳು ಮತ್ತು ಇಕಾಮರ್ಸ್‌ ಸೈಟ್‌ಗಳು ಬೇಹುಗಾರಿಕೆ ನಡೆಸುತ್ತವೆ. ಈ ಚಟುವಟಿಕೆಗಳಿಂದ ಸುರಕ್ಷತೆಗಾಗಿ ಈ ಲೇಖನ ಓದಲೇ ಬೇಕು.

By Suneel
|

ಡಿಜಿಟಲ್ ಯುಗ ಜನರು ಜೀವಿಸುವ ಶೈಲಿಯನ್ನು ಅತ್ಯಧಿಕವಾಗಿ ಬದಲಿಸಿದೆ. ಹಾಗೆ ಇನ್ನೂ ಬದಲಾವಣೆಯು ಆಗುತ್ತಲೇ ಇರುತ್ತದೆ. ಕಂಪ್ಯೂಟರ್‌ಗಳು, ಸ್ಮಾರ್ಟ್‌ಫೋನ್‌, ಆಕ್ಸೆಸೀರೀಸ್‌ಗಳು ಮತ್ತು ಚಾಟ್‌ ಬೋಟ್‌ಗಳು ಇಂದು ಜೀವನದ ಚುಕ್ಕೆಗಳಾಗಿದ್ದು, ಅವುಗಳಿಂದ ಸ್ವತಂತ್ರವಾಗಲು ಯಾವ ದಾರಿಯು ಸಹ ಇಲ್ಲ. ತಿಳಿದೊ, ತಿಳಿಯದೇ ಡಿಜಿಟಲ್‌ ಲೈಫ್‌ಗೆ ಕಾಲಿರಿಸಾಗಿದೆ. ಆದರೆ ಖಾಸಗಿತನ ಅನ್ನುವುದು ಮಾತ್ರ ಮನುಷ್ಯನ ಹಕ್ಕು ಎಂಬುದನ್ನು ಯಾರು ಸಹ ಮರೆಯುವ ಹಾಗಿಲ್ಲ. ಆದರೂ ಸಹ ಇಂದು ಕೆಲವೊಮ್ಮ, ಕೆಲವು ಸಾಮಾಜಿಕ ತಾಣಗಳು, ಆಪ್‌ಗಳ ಬಳಕೆಯಿಂದ ಖಾಸಗಿತನದ ಗೌಪ್ಯತೆ ಎಂಬುದು ಬಹಿರಂಗವಾಗುತ್ತಿದೆ.

ಅದಕ್ಕೆ ಸಾಕ್ಷಿಯಾಗಿ ಸರ್ಕಾರಿ ಹ್ಯಾಕರ್‌ಗಳು, ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳು ಜನರ ಮೆಸೇಜ್‌ಗಳು ಮತ್ತು ಇಮೇಲ್‌ಗಳ ಮೇಲೆ ಬೇಹುಗಾರಿಕೆಯನ್ನು ಸ್ಮಾರ್ಟ್‌ಫೋನ್‌, ಕಂಪ್ಯೂಟರ್‌ ಡಿವೈಸ್‌ಗಳ ಮೂಲಕ ನಡೆಸುತ್ತಲೇ ಇವೆ.

ನೀವು ಕಳುಹಿಸಿದ ಮೆಸೇಜ್‌ ಅಥವಾ ಇಮೇಲ್ ಅನ್ನು ಇತರರು ನೋಡಬಾರದು, ಬೇಹುಗಾರಿಕೆ ನಡೆಸಬಾರದು ಎಂದಲ್ಲಿ, ಎಲ್ಲರೂ ತಮ್ಮ ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಸುರಕ್ಷಿತ ಮೆಸೇಜ್‌ ಆಪ್‌ಗಳನ್ನು ಬಳಸಬೇಕು. ಈ ಕಾರಣದಿಂದಲೇ ಆಂಡ್ರಾಯ್ಡ್ ಮತ್ತು ಐಓಎಸ್‌ಗಳು ಕೆಲವು ಸುರಕ್ಷಿತ ಉಚಿತ ಆಫ್‌ಗಳನ್ನು(Apps) ವಿನ್ಯಾಸಗೊಳಿಸಿವೆ. ಅವುಗಳು ಯಾವುವು ಎಂದು ನಾವು ಇಂದು ನಿಮಗೆ ಪರಿಚಯಿಸುತ್ತಿದ್ದೇವೆ.

ಫೇಸ್‌ಬುಕ್‌ ಮೆಸೇಂಜರ್ ಬಗ್ಗೆ ತಿಳಿಯಲೇಬೇಕಾದ 5 ಟಾಪ್ ಸೀಕ್ರೇಟ್ ಟ್ರಿಕ್ಸ್‌ಗಳು

ಸಿಂಗಲ್‌ ಪ್ರೈವೇಟ್ ಮೆಸೇಂಜರ್

ಸಿಂಗಲ್‌ ಪ್ರೈವೇಟ್ ಮೆಸೇಂಜರ್

ಸಿಂಗಲ್‌ ಪ್ರೈವೇಟ್‌ ಮೆಸೇಂಜರ್‌ ಆಪ್ ಎಂಡ್‌ ಟು ಎಂಡ್‌ ಗೂಢಲಿಪೀಕರಣ ಫೀಚರ್‌ ಹೊಂದಿರುವ ಆಪ್‌ ಆಗಿದ್ದು, ಖಾಸಗಿ ಸಂಭಾಷಣೆಯನ್ನು ಸುರಕ್ಷಿತವಾಗಿಡಲು ಸಹಾಯಕಾರಿಯಾಗಿದೆ. ಸೆಕ್ಯೂರ್‌ ಬ್ಯುಸಿನೆಸ್ ಮೆಸೇಜಿಂಗ್‌ ಆಪ್‌ ಎಂತಲೂ ಸಹ ಪ್ರಖ್ಯಾತವಾಗಿದೆ. ಆಪ್‌ನ ಗ್ರೂಪ್‌ ಟೈಟಲ್‌, ಮೆಂಬರ್‌ಶಿಪ್ ಲೀಸ್ಟ್, ಗ್ರೂಪ್ ಐಕಾನ್‌ಗಳು ಆಪ್‌ನ ಸರ್ವರ್‌ನಿಂದ ಹಿಡೆನ್‌ ಆಗಿರುತ್ತದೆ.

ಈ ಅಪ್‌ ಮೆಸೇಜ್‌ ಡಾಟಾವನ್ನು ಸುರಕ್ಷಿತವಾಗಿಡಲು, ಕ್ರಿಪ್ಟೊಗ್ರಾಫಿಕ್ ಪ್ರೋಟೋಕಾಲ್ ಅನ್ನು ಬಳಸುತ್ತದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 ವಿಕರ್ ಮಿ (Wickr Me)

ವಿಕರ್ ಮಿ (Wickr Me)

'ವಿಕರ್ ಮಿ (Wickr Me)' ಎಂಡ್‌ ಟು ಎಂಡ್ ಗೂಢಲಿಪೀಕರಣ ಟೆಕ್ಸ್ಟ್‌, ವೀಡಿಯೊ, ಚಿತ್ರಗಳು ಮತ್ತು ವಾಯ್ಸ್ ಅನ್ನು ಸೆಂಡ್‌ ಮಾಡಲು ಅವಕಾಶ ನೀಡುತ್ತದೆ. ಆಪ್‌ ಬಳಕೆದಾರರು ಮೆಸೇಜ್‌ನ ಮುಕ್ತಾಯದ ದಿನವನ್ನು ಸಹ ಸೆಟ್‌ ಮಾಡಬಹುದು. ದಿನಾಂಕ ಮತ್ತು ಟೈಮ್‌ ಅನ್ನು ಸೆಲೆಕ್ಟ್ ಮಾಡಬೇಕು ಅಷ್ಟೆ.

ಪ್ರೋಟಾನ್ ಮೇಲ್-ಎನ್‌ಕ್ರಿಪ್ಟೆಡ್ ಇಮೇಲ್‌

ಪ್ರೋಟಾನ್ ಮೇಲ್-ಎನ್‌ಕ್ರಿಪ್ಟೆಡ್ ಇಮೇಲ್‌

ಹಲವರು ಸ್ಮಾರ್ಟ್‌ಫೋನ್‌ನಲ್ಲಿಯೂ ಮೇಲ್‌ಗಳನ್ನು ಸೆಂಡ್‌ ಮಾಡುತ್ತಾರೆ. ಪ್ರೋಟಾನ್‌ಮೇಲ್‌ ಉಚಿತ ಆಪ್‌ ಅಗಿದ್ದು, ಫೋನ್‌ನಿಂದ ಸೆಂಡ್‌ ಆದ ಮೇಲ್‌ಗಳನ್ನು ತಡೆಹಿಡಿಯಲು ಮತ್ತು ಬಹಿರಂಗ ಪಡಿಸಲು ಯಾವುದೇ ಹ್ಯಾಕರ್‌ಗಳಿಗೂ ಅವಕಾಶ ನೀಡದೆ ಸುರಕ್ಷೆಗೊಳಿಸುತ್ತದೆ. ಈ ಆಪ್‌ ಸೆಂಡರ್ ಮತ್ತು ರೀಸೀವರ್ ಹೊರತು ಪಡಿಸಿ ಇತರೆ ಯಾರು ಸಹ ಮೆಸೇಜ್‌ ಓದಲು ಅವಕಾಶ ನೀಡುವುದಿಲ್ಲ. ವಿಶೇಷ ಅಂದ್ರೆ ಪ್ರೋಟಾನ್‌ಮೇಲ್‌ ಸಹ ಮೆಸೇಜ್‌ಗಳನ್ನು ಓದುವುದಿಲ್ಲ.

ಪ್ರೋಟಾನ್‌ ಮೇಲ್ ಆಧುನಿಕ ಫೀಚರ್‌ಗಳನ್ನು ಹೊಂದಿದ್ದು, ಎಲ್ಲಾ ಎಂಡ್‌ ಟು ಎಂಡ್ ಗೂಢಲಿಪೀಕರಣ ಮೇಲ್‌ಗಳನ್ನು ಸ್ಟೋರ್‌ ಮಾಡಿ ಇಡುತ್ತದೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಚಾಟ್ ಸೆಕ್ಯೂರ್‌

ಚಾಟ್ ಸೆಕ್ಯೂರ್‌

ಆಪ್‌ ಮಾರುಕಟ್ಟೆಯಲ್ಲಿ ಹೆಸರೇ ಹೇಳುವಂತೆ ಮೆಸೇಜ್‌ ಚಾಟಿಂಗ್‌ ಅನ್ನು ಹೆಚ್ಚು ಸೆಕ್ಯೂರ್‌ ಆಗಿ ಇಡುತ್ತದೆ. ಚಾಟ್‌ ಸೆಕ್ಯೂರ್‌ ಆಪ್‌ನಿಂದ ಕಳೆದುಹೋದ ನಿಮ್ಮ ಖಾತೆಯನ್ನು ಪುನಃ ಕನೆಕ್ಟ್ ಮಾಡಿಕೊಳ್ಳಬಹುದು. ಅಂದಹಾಗೆ ಚಾಟ್‌ ಸೆಕ್ಯೂರ್‌ ಆಪ್‌ ಬಳಸಲು ಫೋನ್‌ ನಂಬರ್ ಅಗತ್ಯವಿಲ್ಲ.

ಪಿಕ್ಸೆಲ್‌ನಾಟ್ (PixelKnot: Hidden Messages)

ಪಿಕ್ಸೆಲ್‌ನಾಟ್ (PixelKnot: Hidden Messages)

ಪಿಕ್ಸೆಲ್‌ನಾಟ್ ಅನನ್ಯವಾದ ಉಚಿತ ಮೆಸೇಜ್‌ ಅಪ್ಲಿಕೇಶನ್‌ ಆಗಿದ್ದು, ಬಳಕೆದಾರರು ಶೇರ್‌ ಮಾಡಿದ ಮೆಸೇಜ್‌ ಅನ್ನು ಚಿತ್ರದ ವಿನ್ಯಾಸದಲ್ಲಿ ಗೌಪ್ಯವಾಗಿ ಇಡುತ್ತದೆ. ಪಿಕ್ಸೆಲ್‌ನಿಂದ ಕಳುಹಿಸಿದ ಮೆಸೇಜ್‌ ಅನ್ನು ನಿಮ್ಮ ಸ್ನೇಹಿತರು ಮಾತ್ರ ಪಾಸ್‌ವರ್ಡ್‌ನಿಂದ ಓಪನ್‌ ಮಾಡಲು ಸಾಧ್ಯ. ಇತರರು ಕೇಲವ ಚಿತ್ರ ನೋಡಬಹುದು ಅಷ್ಟೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Top 5 Free Secure Messaging Apps for smartphones. To know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X