Subscribe to Gizbot

ಫೇಸ್‌ಬುಕ್‌ ಮೆಸೇಂಜರ್ ಬಗ್ಗೆ ತಿಳಿಯಲೇಬೇಕಾದ 5 ಟಾಪ್ ಸೀಕ್ರೇಟ್ ಟ್ರಿಕ್ಸ್‌ಗಳು

Written By:

ಇತ್ತೀಚಿನ ದಿನಗಳಲ್ಲಿ ಬಹುಸಂಖ್ಯಾತರು ತಮ್ಮ ಲೈಫ್‌ನಲ್ಲಿ ಯಾವುದರಲ್ಲಿ ಬ್ಯುಸಿ ಆಗ್ತಾರೋ ಇಲ್ವೋ ಗೊತ್ತಿಲ್ಲಾ, ಆದ್ರೆ ಫ್ರೀ ಆದಾಗೆಲ್ಲಾ ಮೊಬೈಲ್ ಕೈಯಲ್ಲಿ ಹಿಡಿದು ಸಮಾಜಿಕ ತಾಣಗಳಲ್ಲಿ, ಚಾಟಿಂಗ್ ಆಪ್‌ಗಳಲ್ಲಿ ಬ್ಯುಸಿ ಆಗುತ್ತಾರೆ.

ದಿನಗಳು ಕಳೆದಂತೆಲ್ಲಾ ಫೇಸ್‌ಬುಕ್(Facebook) ಮತ್ತು ಇತರೆ ಹಲವು ಚಾಟಿಂಗ್ ಆಪ್‌ಗಳು ಹೆಚ್ಚು ಆಕರ್ಷಕ ಮತ್ತು ಉತ್ತಮ ಗುಣಮಟ್ಟದ ಫೀಚರ್‌ಗಳನ್ನು ಅಭಿವೃದ್ದಿಪಡಿಸುತ್ತಲೇ ಇವೆ. ಅಂದಹಾಗೆ ಫೇಸ್‌ಬುಕ್‌ ಮೆಸೇಂಜರ್‌ ಒಂದೇ ಈಗ ಹಲವು ಆಕರ್ಷಕ ಫೀಚರ್‌ಗಳನ್ನು ಹೊಂದಿದ್ದು, ಅವುಗಳಲ್ಲಿ ನಿಮಗೆ ತಿಳಿಯದ ಟಾಪ್‌ 5 ಮೆಸೇಂಜರ್‌(Messenger) ಟ್ರಿಕ್ಸ್‌ ಅನ್ನು ನಾವು ನಿಮಗೆ ತಿಳಿಸುತ್ತಿದ್ದೇವೆ. ಅವುಗಳು ಯಾವುವು ಎಂದು ಲೇಖನದ ಸ್ಲೈಡರ್‌ನಲ್ಲಿ ಓದಿರಿ.

ಫೇಸ್‌ಬುಕ್‌ನಿಂದ ಕೈತುಂಬಾ ಹಣಗಳಿಸುವುದು ಹೇಗೆ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವೋಟ್ ಮುಖಾಂತರ ಗುಂಪಿನ ತೀರ್ಮಾನ ಕೈಗೊಳ್ಳಿ

ವೋಟ್ ಮುಖಾಂತರ ಗುಂಪಿನ ತೀರ್ಮಾನ ಕೈಗೊಳ್ಳಿ

ಸ್ನೇಹಿತರೆಲ್ಲರು ಪ್ರವಾಸದ ಸ್ಥಳ ಅಥವಾ ರಾತ್ರಿ ಊಟದ ಸ್ಥಳ ಫಿಕ್ಸ್ ಮಾಡಲು ಒಬ್ಬೊಬ್ಬರಿಗೆ ಒಂದೊಂದು ಬಾರಿ ಮೆಸೇಜ್‌ ಮಾಡಿ ನಿರ್ಧಾರ ಕೇಳುವುದು ಕಷ್ಟಕರ ಕೆಲಸ. ಆದ್ದರಿಂದ ಇಂದು ಫೇಸ್‌ಬುಕ್‌ ಮೆಸೇಂಜರ್ ಪೋಲ್‌ ಅನ್ನು ಕಂಡಕ್ಟ್‌ ಮಾಡಿದೆ. ಮೆಸೇಂಜರ್‌ನಲ್ಲಿ 'Polls' ಆಪ್ಶನ್ ಕ್ಲಿಕ್ ಮಾಡಿ ನಿಮ್ಮ ಪ್ರಶ್ನೆಯನ್ನು ಟೈಪಿಸಿ ಪಾಸಿಬಲ್‌ ಉತ್ತರಗಳನ್ನು ನೀಡಿ ಸಬ್‌ಮಿಟ್ ಬಟನ್ ಕ್ಲಿಕ್ ಮಾಡಿ. ಹೆಚ್ಚು ಬಂದ ಉತ್ತರ ವಿನ್‌ ಆಗುತ್ತದೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸೀಕ್ರೇಟ್ ಮೆಸೇಜ್‌ ಸೆಂಡ್ ಮತ್ತು ರಿಸೀವ್

ಸೀಕ್ರೇಟ್ ಮೆಸೇಜ್‌ ಸೆಂಡ್ ಮತ್ತು ರಿಸೀವ್

ಫೇಸ್‌ಬುಕ್ ತನ್ನ ಮೆಸೇಂಜರ್‌ ಆಪ್‌ನಲ್ಲಿಯೂ ಎಂಡ್‌ ಟು ಎಂಡ್ ಗೂಢಲಿಪೀಕರಣ ಫೀಚರ್ ಜಾರಿಗೊಳಿಸಿದ್ದು, ಮೆಸೇಜ್‌ ಸಂಭಾಷಣೆಯನ್ನು ಯಾರು ಸಹ ಕದಿಯಲು ಸಾಧ್ಯವಾಗದಂತೆ ಸುರಕ್ಷೆಗೊಳಿಸಬಹುದು.

ಮೆಸೇಂಜರ್‌ ಸ್ಕ್ರೀನ್‌ನಲ್ಲಿ ಬಲಭಾಗದಲ್ಲಿ ಮೇಲ್ಭಾಗದ ಕಾರ್ನರ್‌ನಲ್ಲಿ 'i' ಎಂಬುದನ್ನು ಕ್ಲಿಕ್ ಮಾಡಿ. ನಂತರ 'Secret Conversation' ಆಪ್ಶನ್‌ ಅನ್ನು ಸೆಲೆಕ್ಟ್‌ ಮಾಡಿ. ನಂತರ ನಿಮ್ಮ ಚಾಟ್‌ ಸಂಭಾಷಣೆ ಸುರಕ್ಷಿತವಾಗುತ್ತದೆ.

ಸ್ನೇಹಿತರೊಂದಿಗೆ ಸೀಕ್ರೆಟ್ ಗೇಮ್

ಸ್ನೇಹಿತರೊಂದಿಗೆ ಸೀಕ್ರೆಟ್ ಗೇಮ್

ಸೀಕ್ರೆಟ್ ಸಂಭಾಷಣೆ ವರ್ಕ್‌ ಆಗದಿದ್ದಲ್ಲಿ, ಫುಟ್‌ಬಾಲ್, ಬಾಸ್ಕೆಟ್ ಬಾಲ್ ಮತ್ತು ಚೆಸ್‌ ಗೇಮ್‌'ಗಳನ್ನು ಆಡಬಹುದು.

ಇತ್ತೀಚೆಗಷ್ಟೆ ಕಂಪನಿಯು ಕೆಲವು ಸೀಕ್ರೆಟ್ ಗೇಮ್‌ಗಳನ್ನು ಆಡ್‌ ಮಾಡಿದೆ. ಕೆಲವೊಮ್ಮೆ ಟೈಮ್‌ ಅನ್ನು ಕಿಲ್ ಮಾಡಲು ಈ ಗೇಮ್‌ಗಳನ್ನು ಆಟವಾಡಬಹುದು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮೊಬೈಲ್‌ ಡಾಟಾವನ್ನು ಡಾಟಾ ಸೇವರ್‌ನೊಂದಿಗೆ ಸೇವ್‌ ಮಾಡಿ

ಮೊಬೈಲ್‌ ಡಾಟಾವನ್ನು ಡಾಟಾ ಸೇವರ್‌ನೊಂದಿಗೆ ಸೇವ್‌ ಮಾಡಿ

ಫೇಸ್‌ಬುಕ್‌ ಮೆಸೇಂಜರ್ ಡಾಟಾ ಸೇವರ್ ಆಪ್ಶನ್ ಬಳಕೆದಾರರ ಡಾಟಾವನ್ನು ಮಾನಿಟರ್ ಮಾಡಲು ಮತ್ತು ಕಡಿಮೆ ಮಾಡಲು ಸಹಾಯಕವಾಗಿದೆ. ಸ್ವಯಂಚಾಲಿತವಾಗಿ ಫೋಟೋ ಮತ್ತು ವೀಡಿಯೊ ಡೌನ್‌ಲೋಡ್‌ ಅನ್ನು ಡೀಆಕ್ಟಿವೇಟ್‌ ಮಾಡಬಹುದು.

Facebook - ನೀವು ಸತ್ತರೂ ಸಾಯೋಲ್ಲಾ ನಿಮ್ಮ ಫೇಸ್‌ಬುಕ್ ಅಕೌಂಟ್!!
ಫೇಸ್‌ಬುಕ್ ಮೆಸೇಂಜರ್‌ ಮೂಲಕ ಆನ್‌ಲೈನ್ ಪೇಮೆಂಟ್ ಮಾಡಿ

ಫೇಸ್‌ಬುಕ್ ಮೆಸೇಂಜರ್‌ ಮೂಲಕ ಆನ್‌ಲೈನ್ ಪೇಮೆಂಟ್ ಮಾಡಿ

ಡಿಬಿಟ್‌ ಕಾರ್ಡ್ ಮುಖ್ಯವಾಗಿ ಮೆಸೇಂಜರ್‌ನಲ್ಲಿ ಸೇವ್ ಆಗಿರಬೇಕು.
ಉದಾಹರಣೆಗೆ '"You owe me Rs. 250 for the split check," ಎಂದು ಟೈಪಿಸಿ, ನಂತರ ಮೆಸೇಂಜರ್ ಪೇಮೆಂಟ್‌ ಪೇಜ್‌ಗೆ ಕರೆದೊಯ್ಯುತ್ತದೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
5 Facebook Messenger Tricks You Should Know. To know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot