ಆಫ್‌ಲೈನ್‌ನಲ್ಲಿ ಕಾರ್ಯನಿರ್ವಹಿಸುವ ನ್ಯಾವಿಗೇಶನ್ ಆಪ್‌ಗಳು ಇಲ್ಲಿವೆ ನೋಡಿ!
ಇಂದು ಯಾವುದೇ ಸ್ಥಳಕ್ಕೆ ಪ್ರಯಾಣಿಸಬೇಕಿದ್ದರೂ ಹೋಗುವ ದಾರಿಯ ಬಗ್ಗೆ ತಲೆ ಕೆಡಿಸಿಕೊಳ್ಳುವ ಅವಶ್ಯವೇ ಇಲ್ಲ. ಏಕೆಂದರೇ ಜಿಪಿಎಸ್-ನ್ಯಾವಿಗೇಶನ್ ಅಪ್ಲಿಕೇಶನ್‌ಗಳು ಹಾದಿಯನ್ನು ಸುಗಮಗೊಳಿಸಿವೆ. ಆಂಡ್ರಾಯ್ಡ್ ಬಳಕೆದಾರರು ನ್ಯಾವಿಗೇಶನ್‌ಗಾಗಿ ಗೂಗಲ್ ಮ್ಯಾಪ್ ಆಪ್ ಅನ್ನು ಹೆಚ್ಚಾಗಿ ಬಳಸುತ್ತಾರೆ. ಇಂಟರ್ನೆಟ್ ಇಲ್ಲದಿದ್ದಾಗ ನ್ಯಾವಿಗೇಶನ್ ಆಪ್‌ಗಳ ಬಳಕೆ ಹೇಗೆ ಎನ್ನುವ ಪ್ರಶ್ನೇ ನಿಮ್ಮಲ್ಲಿ ಮೂಡಿದ್ದರೇ ಅದಕ್ಕೆ ಉತ್ತರ ಇಲ್ಲಿದೆ.

ಹೌದು, ಸ್ಮಾರ್ಟ್‌ಫೋನ್ ಬಳಕೆದಾರರು ಯಾವುದಾದರೊಂದು ಸಂದರ್ಭದಲ್ಲಿ ನ್ಯಾವಿಗೇಶನ್ ಆಪ್ ಅನ್ನು ಬಳಕೆ ಮಾಡಿಯೇ ಇರುತ್ತಾರೆ. ಹೀಗಾಗಿ ನ್ಯಾವಿಗೇಶನ್ ಆಪ್ ಅಗತ್ಯ ಇಲ್ಲ ಎನ್ನುವಂತಿಲ್ಲ. ಹೀಗಾಗಿ ಅಗತ್ಯ ಸಂದರ್ಭಗಳಲ್ಲಿ ಇಂಟರ್ನೆಟ್ ಸೌಲಭ್ಯದ ಆಧಾರಿತ ನ್ಯಾವಿಗೇಶನ್ ಆಪ್ ಬಳಸುವುದು ಸುಲಭ. ಆದರೆ ಇಂಟರ್ನೆಟ್ ಇಲ್ಲದ ಸಂದರ್ಭಗಳಲ್ಲಿ ಹೇಗೆ?..ಆಗ ಆಫ್‌ಲೈನ್ ನ್ಯಾವಿಗೇಶನ್ ಆಯ್ಕೆ ಬಳಸಬಹುದಾಗಿದೆ. ಅದಕ್ಕೆ ಕೆಲವು ಮ್ಯಾಪ್ ಆಪ್ಸ್‌ಗಳು ಸಪೋರ್ಟ್ ಮಾಡುತ್ತವೆ. ಹಾಗಾದರೇ ಆಂಡ್ರಾಯ್ಡ್ ಡಿವೈಸ್‌ನಲ್ಲಿ ಆಫ್‌ಲೈನ್ ನ್ಯಾವಿಗೇಶನ ಆಪ್ ಬಳಸಬಹುದು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

MAPS.ME ಆಪ್
MAPS.ME ಮ್ಯಾಪ್ ಇದೊಂದು ಸಂಪೂರ್ಣ ಉಚಿತ ಜಿಪಿಎಸ್ ಆಪ್ ಆಗಿದ್ದು, ಆಫ್‌ಲೈನ್ ಮೋಡ್‌ನಲ್ಲಿ ನಾವಿಗೇಶನ್ ಮಾಹಿತಿ ನೀಡುವ ಸೌಲಭ್ಯವನ್ನು ಒಳಗೊಂಡಿದೆ. ಬಳಕೆದಾರರಿಗೆ ಆಫ್‌ಲೈನ್ ಮೋಡ್‌ನಲ್ಲಿಯೂ ಸರ್ಚ್ ಆಯ್ಕೆಗಳು, ವಾಯಿಸ್ ನ್ಯಾವಿಗೇಶನ್, ರೀ-ರೋಟಿಂಗ್ ಕ್ಯಾಲ್ಕುಲೇಶನ್ ಮತ್ತು ಪಬ್ಲಿಕ್ ಟ್ರಾನ್ಸ್‌ಫೋಟೆಶನ್ ಮಾಹಿತಿಗಳು ದೊರೆಯಲಿದೆ. ಹಾಗೆಯೇ ಎಟಿಎಮ್, ಶಾಪ್, ಅಗತ್ಯ ಸೇವೆಗಳ ಸೂಚನೆ ಸಿಗಲಿದೆ. ನೆಟ್ ಸೌಲಭ್ಯ ಇದ್ದರೇ ಲೊಕೇಶನ್ ಶೇರ್ ಮಾಡಬಹುದಾಗಿದೆ.

HERE WeGo ಆಪ್
ನಾವಿಗೇಶನ್ ಮ್ಯಾಪ್ ಆಫ್‌ಲೈನ್ ನಾವಿಗೇಶನ್‌ಗೆ ಬೆಸ್ಟ್ ಎನಿಸಿದ್ದು, ಸುಮಾರು 100 ದೇಶಗಳಲ್ಲಿ ಲಭ್ಯವಿದೆ. ಆಫ್‌ಲೈನ್ ಮೋಡ್‌ನಲ್ಲಿಯೂ ಪಬ್ಲಿಕ್ ಟ್ರಾನ್ಸ್‌ಪೋಟೆಶನ್, ಟಿಕೆಟ್ ಬಿಲ್ಲಿಂಗ್, ಕಾರ್ ಶೇರಿಂಗ್ ಪ್ರೈಸ್, ಟ್ರಾನ್ಸ್‌ಪೋಟೆಶನ್ ರೋಟ್ಸ್, ಸೇರಿದಂತೆ ವೇಗದ ಮಾರ್ಗ ಮತ್ತು ಕಾಸ್ಟ್ ಎಫೆಕ್ಟಿವ್ ಮಾರ್ಗಗಳ ಬಗ್ಗೆ ಮಾಹಿತಿ ನೀಡಲಿದೆ. ಹಾಗೆಯೇ ಅಪ್‌ಹಿಲ್ ಮತ್ತು ಡೌನ್‌ಹಿಲ್ ರಸ್ತೆಗಳ ಸೂಚನೆ ನೀಡಲಿದೆ. ಅಮೆರಿಕಾ ಮತ್ತು ಯುರೋಪ್ ಸೇರಿದಂತೆ 1,300ರಾಷ್ಟ್ರಗಳಲ್ಲಿ ಬಳಕೆಗೆ ಲಭ್ಯ.

Sygic GPS ನ್ಯಾವಿಗೇಶನ್
Sygic GPS ನ್ಯಾವಿಗೇಶನ್ ಆಫ್‌ಲೈನ್ ಆಪ್‌ನ ಸೇವೆಯು ಎಲ್ಲ ರಾಷ್ಟ್ರಗಳಲ್ಲಿಯೂ ಲಭ್ಯವಿದೆ. ಈಗಾಗಲೇ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಹೆಚ್ಚಾಗಿ ಡೌನ್‌ಲೋಡ್ ಆಗಿರುವ ಆಪ್ ಆಗಿದೆ. ಆಫ್‌ಲೈನ್ ಸೇವೆಯನ್ನು ನೀಡುವ ಈ ಆಪ್ ವಾಯಿಸ್ ಗೈಡ್ ಆಯ್ಕೆಯನ್ನು ಮತ್ತು ಪಾದಚಾರಿ(pedestrian GPS) ಜಿಪಿಎಸ್ ಮಾರ್ಗದ ಆಯ್ಕೆಯನ್ನು ಸಹ ಒಳಗೊಂಡಿದೆ. ಇಂಟರ್ನೆಟ್ ಕನೆಕ್ಷನ್ ಇದ್ದರೇ ಹಲವು ಮಾಹಿತಿಗಳ ಬಗ್ಗೆ ವಾಯಿಸ್ ಇನ್ಫೋ ನೀಡುತ್ತದೆ.

ಓಸ್ಮಾಂಡ್ (OsmAnd)
ಪ್ರಮುಖ ಆಫ್‌ಲೈನ್ ಮಾದರಿಯ ನ್ಯಾವಿಗೇಶನ್ ಆಪ್‌ಗಳಿಲ್ಲಿ 'ಓಸ್ಮಾಂಡ್ ನಾವಿಗೇಶನ್ ಆಪ್' ಸಹ ಒಂದಾಗಿದೆ. ಈ ಆಪ್ ವಾಯಿಸ್ ಗೈಡ್, ಲೈನ್ ಗೈಡ್, ಲೈವ್ ಎಸ್ಟಿಮೆಟೆಡ್ ಟೈಮ್, ಡೇ/ನೈಟ್ ಮೋಡ್ ಆಯ್ಕೆಗಳೊಂದಿಗೆ ಜಿಪಿಎಸ್‌ನ ಹಲವು ಸೌಲಭ್ಯಗಳನ್ನು ಒಳಗೊಂಡಿದೆ. ಸೈಕ್ಲಿಂಗ್ ರೋಟ್‌ಗೆ ಬೆಸ್ಟ್ ಎನಿಸಿಕೊಂಡಿದ್ದು, ಕೆಲವು ದೇಶಗಳಲ್ಲಿ ಈ ಆಪ್ ಆಫ್‌ಲೈನ್ ಸೇವೆ ಹೆಚ್ಚು ಪರಿಣಾಮಕಾರಿಯಾಗಿದೆ.

ಗೂಗಲ್ ಮ್ಯಾಪ್ ಆಫ್‌ಲೈನ್
ಬಹುತೇಕ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಬಳಕೆದಾರರು ಗೂಗಲ್ ಮ್ಯಾಪ್ ಆಪ್ ಅನ್ನೇ ಹೆಚ್ಚಾಗಿ ಬಳಸುತ್ತಿದ್ದು, ಆಂಡ್ರಾಯ್ಡ್ ಸಹ ಅತ್ಯುತ್ತಮ ನಾವಿಗೇಶನ್ ಪ್ಲಾಟ್‌ಫಾರ್ಮ್ ಸೇವೆ ನೀಡುತ್ತಿದೆ. ಇಂಟರ್ನೆಟ್ ಇಲ್ಲದೇ ಇದ್ದಾಗಲೂ ಗೂಗಲ್ ಮ್ಯಾಪ್ ನಾವಿಗೇಶನ್ ಬಳಸಬಹುದಾಗಿದೆ. ಅದಕ್ಕಾಗಿ ಗೂಗಲ್ ಮ್ಯಾಪ್‌ನಲ್ಲಿ ಆಫ್‌ಲೈನ್ ಆಯ್ಕೆ ನೀಡಲಾಗಿದೆ. ಬಳಕೆದಾರರು ಮೆನು ಆಯ್ಕೆ ಸೆಲೆಕ್ಟ್ ಮಾಡಿ, ನಂತರ ಆಫ್‌ಲೈನ್ ಆಯ್ಕೆ ಕ್ಲಿಕ್ಕ್ ಮಾಡಿ, ಸೆಲೆಕ್ಟ್ ಯೂವರ್ ಓನ್ ಮ್ಯಾಪ್ ಆಯ್ಕೆ ಬಳಸಬಹುದು.


Click it and Unblock the Notifications








