ನೌಕರಿ ಹುಡುಕಲು ಈ ಆಪ್ಸ್‌ಗಳು ನಿಮಗೆ ನೆರವಾಗಲಿವೆ!
ಕೊರೊನಾ ವೈರಸ್ ಏಕಾಏಕಿ ವಕ್ಕರಿಸಿ ಪ್ರಪಂಚದಾದ್ಯಂತ ಆರ್ಥಿಕತೆಗೆ ಭಾರಿ ಪೆಟ್ಟು ನೀಡಿದೆ. ಈ ವೇಳೆ ಅನೇಕ ಉದ್ಯಮಗಳ ಸಂಕಷ್ಟಕ್ಕೆ ಸಿಲುಕಿದ್ದು, ಅನೇಕ ಜನರು ನೌಕರಿಗೂ ಕುತ್ತು ತಂದಿದೆ. ಬಹುತೇಕರು ಈ ಉದ್ಯೋಗ ಕಳೆದುಕೊಂಡಿದ್ದು, ಹೊಸ ಉದ್ಯೋಗವನ್ನು ಹುಡುಕುವ ನಿಟ್ಟಿನಲ್ಲಿ ಮುಂದಾಗಿದ್ದಾರೆ. ಇನ್ನು ಆನ್‌ಲೈನ್ ಮೂಲಕ ನೂತನ ಉದ್ಯೋಗ ಹುಡುಕಲು ಹಲವು ಅಪ್ಲಿಕೇಶನ್‌ಗಳು ಉದ್ಯೋಗಾಕಾಂಕ್ಷಿಗಳಿಗೆ ಪೂರಕವಾಗಿವೆ.

ಹೌದು, ಪ್ರಸ್ತುತ ಆನ್‌ಲೈನ್ ಮೂಲಕ ಸೂಕ್ತ ಖಾಸಗಿ ನೌಕರಿ ಹುಡುಕಲು ಜಾಬ್ಸ್ ಅಪ್ಲಿಕೇಶನ್‌ಗಳು ನೆರವಾಗಿವೆ. ಇನ್ನು ಈ ಜಾಬ್ಸ್ ಆಪ್ಸ್‌ಗಳಲ್ಲಿ ಉದ್ಯೋಗಾಕಾಂಕ್ಷಿಗಳು ಪ್ರೊಫೈಲ್ ರಚಿಸಿ, ಅಲ್ಲಿ ಕೇಳಲಾಗುವ ಅಗತ್ಯ ಮಾಹಿತಿ ಭರ್ತಿ ಮಾಡಿ, ಅಪ್‌ಡೇಟ್ ಆಗಿರುವ ರೆಸ್ಯೂಮೆ/Resume ಯನ್ನು ಅಪ್‌ಲೋಡ್ ಮಾಡಬೇಕಿರುತ್ತದೆ. ಜಾಬ್ಸ್ ಆಪ್ಸ್‌ಗಳಲ್ಲಿ ನೂತನ ನೌಕರಿಗಳ ಬಗ್ಗೆ ನೋಟಿಫಿಕೇಶನ್ ಸಹ ಲಭ್ಯವಾಗುತ್ತವೆ. ಅಂತಹ ಕೆಲವು ಪ್ರಮುಖ ಜಾಬ್ ಅಪ್ಲಿಕೇಶನ್‌ಗಳ ಬಗ್ಗೆ ಈ ಲೇಖನದಲ್ಲಿ ಮಾಹಿತಿ ನೀಡಲಾಗಿದೆ. ಮುಂದೆ ಓದಿರಿ.

ZipRecruiter-ಜಿಪ್‌ರಿಕ್ಯೂಟರ್
ಉದ್ಯೋಗ ಹುಡುಕುವ ಅತ್ಯಂತ ಜನಪ್ರಿಯ ಅಪ್ಲಿಕೇಶನ್‌ಗಳಲ್ಲಿ ಜಿಪ್‌ರಿಕ್ಯೂಟರ್ ಆಪ್ ಕೂಡಾ ಒಂದಾಗಿದೆ. ಈ ಆಪ್‌ನಲ್ಲಿ ಕೆಲಸಕ್ಕೆ ಅರ್ಜಿ ಸಲ್ಲಿಸುವ ಹಾಗೂ ಅಪ್ಲಿಕೇಶನ್ ಟ್ರ್ಯಾಕ್ ಮಾಡುವ ಪ್ರಕ್ರಿಯೆ ಸುಲಭವಾಗಿವೆ.

LinkedIn-ಲಿಂಕ್ಡ್ ಇನ್
ಲಿಂಕ್ಡ್‌ಇನ್ ಆಪ್ ಬಗ್ಗೆ ಈಗಾಗಲೇ ಬಹುತೇಕರಿಗೆ ಗೊತ್ತೆ ಇದೆ. ವರದಿಯೊಂದರ ಪ್ರಕಾರ ಶೇ.77 ಪ್ರತಿಶತದಷ್ಟು ಉದ್ಯೋಗಾಕಾಂಕ್ಷಿಗಳು ಉದ್ಯೋಗ ಹುಡುಕಲು ಈ ಆಪ್ ಬಳಕೆ ಮಾಡುತ್ತಾರೆ ಎನ್ನಲಾಗಿದೆ. ಈ ಆಪ್ ಹೆಚ್‌ಆರ್ ವೃತ್ತಿಪರರೊಂದಿಗೆ ಕನೆಕ್ಟ್ ಮಾಡುವ ಆಯ್ಕೆಗಳು ಇವೆ. ನೋಟಿಫೀಕೇಶನ್ ಮಾಹಿತಿಯೂ ಲಭ್ಯ.

Glassdoor-ಗ್ಲಾಸ್‌ಡೋರ್
ಗ್ಲಾಸ್‌ಡೋರ್ ಆಪ್ ಸಹ ಉದ್ಯೋಗ ಹುಡುಕುವ ಇರುವ ಅತ್ಯುತ್ತಮ ಆಪ್‌ಗಳಲ್ಲಿ ಒಂದಾಗಿದೆ. ಇಲ್ಲಿಯೂ ಸಹ ಅರ್ಜಿ ಸಲ್ಲಿಕೆ ವಿಧಾನಗಳು ಸುಲಭವಾಗಿದ್ದು, ನೋಟಿಫಿಕೇಶನ್ ಆಯ್ಕೆಗಳು ಇವೆ.

Snagajob-ಸ್ನಾಗಜೋಬ್
ನೀವು ನೌಕರಿ ಹುಡುಕುತ್ತಿದ್ದರೇ ಹಾಗೂ ಅರೆಕಾಲಿಕ ಉದ್ಯೋಗವನ್ನು ಹುಡುಕುತ್ತಿದ್ದರೆ ಈ ಸ್ನಾಗಜೋಬ್ ಆಪ್ ಸೂಕ್ತ ಎನ್ನಬಹುದಾಗಿದೆ. ನಿಮ್ಮ ಬಗ್ಗೆ ವಿಡಿಯೊ ಫಾರ್ಮೇಟ್ ಮಾದರಿಯಲ್ಲಿ ಮಾಹಿತಿ ಅಪ್‌ಲೋಡ್ ಮಾಡುವ ಆಯ್ಕೆ ಸಹ ಇದೆ.

JobStreet-ಜಾಬ್‌ಸ್ಟ್ರೀಟ್
ಅರೆಕಾಲಿಕ ಉದ್ಯೋಗ ಅಥವಾ ಉನ್ನತ ಮಟ್ಟದ ನಿರ್ವಹಣಾ ಉದ್ಯೋಗ ಅವಕಾಶಗಳನ್ನು ಈ ಆಪ್ಸ್‌ನಲ್ಲಿ ಹುಡುಕಬಹುದಾಗಿದೆ. ಹಾಗೆಯೇ ಹೊಸ ಪದವೀಧರರಿಗೂ ಹಾಗೂ ಅನುಭವಿ ವೃತ್ತಿಪರರಿಗೂ ಸೂಕ್ತ ಉದ್ಯೋಗ ಅವಕಾಶಗಳು ಎಲ್ಲರಿಗೂ ಸಹಾಯ ಮಾಡುತ್ತದೆ ಎಂದು ಅದು ಹೇಳುತ್ತದೆ.


Click it and Unblock the Notifications