Just In
- 12 hrs ago
ಒಪ್ಪೋ ಕಂಪೆನಿಯ ಈ ಸ್ಮಾರ್ಟ್‌ಫೋನ್ ಮೇಲೆ ಭಾರಿ ನಿರೀಕ್ಷೆ? ಲಾಂಚ್ ಯಾವಾಗ?
- 13 hrs ago
ಫ್ಲಿಪ್ಕಾರ್ಟ್ನಲ್ಲಿ ಐಫೋನ್ 14 ಪ್ಲಸ್ ಬೆಲೆಯಲ್ಲಿ ಭಾರಿ ಕಡಿತ! ಇದಕ್ಕಿಂತ ಒಳ್ಳೆ ಟೈಂ ಸಿಗೋದಿಲ್ಲ!
- 14 hrs ago
ರಾಷ್ಟ್ರಮಟ್ಟದಲ್ಲಿ ಮೆಚ್ಚುಗೆ ಗಳಿಸಿದ ಬೆಂಗಳೂರಿನ 8 ವರ್ಷದ ಆಂಡ್ರಾಯ್ಡ್ ಆಪ್ ಡೆವಲಪರ್!
- 16 hrs ago
ಭಾರತದಲ್ಲಿ ಹೊಸ ಸಂಚಲನ ಸೃಷ್ಟಿಸಿದ ಫೈರ್ಬೋಲ್ಟ್ ಕಂಪೆನಿ!..ಪ್ರತಿಸ್ಫರ್ಧಿಗಳು ಕಂಗಾಲು!
Don't Miss
- Movies
Chaitra Rai: 'ರಾಧಾ ಕಲ್ಯಾಣ'ದ ಚೈತ್ರಾ ರೈ ಧಾರಾವಾಹಿಯಿಂದ ಬ್ರೇಕ್ ಪಡೆದಿದ್ದೇಕೆ?
- Sports
ದಕ್ಷಿಣ ಆಫ್ರಿಕಾ ವಿರುದ್ಧ ಇಂಗ್ಲೆಂಡ್ಗೆ ಸೋಲು: ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ವಿರುದ್ಧ ಬೆನ್ ಸ್ಟೋಕ್ಸ್ ಟೀಕೆ
- Lifestyle
Horoscope Today 29 Jan 2023: ಭಾನುವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಅಭ್ಯರ್ಥಿಯ ಸಂದರ್ಶನ ಮಾಡುತ್ತಿದ್ದಾಗಲೇ ಗೂಗಲ್ ಎಚ್ಆರ್ ವಜಾ!
- Automobiles
ಭಾರತದಲ್ಲಿ ಶೀಘ್ರ ಬಿಡುಗಡೆಯಾಗಲಿದೆ ಬಹುನಿರೀಕ್ಷಿತ ಹೀರೋ ಮೆಸ್ಟ್ರೋ Xoom: ಹೇಗಿದೆ ಗೋತ್ತಾ?
- News
ಪುಲ್ವಾಮಾಕ್ಕೆ ಭೇಟಿ ನೀಡಿದ ರಾಹುಲ್ ಗಾಂಧಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಟ್ರೂಕಾಲರ್ ಆಪ್‌ನ ಟಾಪ್ 7 ಫೀಚರ್‌ಗಳು
ಸ್ಮಾರ್ಟ್‌ಫೋನ್ ಬಳಕೆದಾರರು ತಮ್ಮ ಮೊಬೈಲ್‌ಗೆ ಅಪರಿಚಿತ ನಂಬರ್‌ಗಳಿಂದ ಕರೆ ಬಂದರೆ ಹೆಚ್ಚು ಕುತೂಹಲಗೊಳ್ಳುವುದು ಸಾಮಾನ್ಯ. ಅಲ್ಲದೇ ಅವರು ಯಾರು, ಏಕೆ ಕರೆ ಮಾಡಿದ್ದರು, ಇನ್ನು ಹಲವು ರೀತಿಯ ಪ್ರಶ್ನೆಗಳು ಕಾಡದಿರವು. ಆಂಡ್ರಾಯ್ಡ್ ಫೋನ್ ಬಳಸುವ ಬಹುಸಂಖ್ಯಾತರು ಈಗಾಗಲೇ "ಟ್ರೂಕಾಲರ್ " ಅಪ್ಲಿಕೇಶನ್ ಬಳಸುತ್ತಿದ್ದಾರೆ.
"ಟ್ರೂಕಾಲರ್" ಆಪ್ ಕೇವಲ ಒಂದು ಕ್ಲಿಕ್‌ನಲ್ಲಿ ಕರೆ ಮಾಡಿದ್ದ ಅಪರಿಚಿತರು ಯಾರು ಎಂದು ತಿಳುಸುತ್ತದೆ ಎಂಬುದು ತಿಳಿದಿದೆ. ಆದರೆ ಟ್ರೂಕಾಲರ್ ಆಪ್‌ನಲ್ಲಿರುವ 7 ರಹಸ್ಯ ಫೀಚರ್‌ಗಳು ಮಾತ್ರ ಬಹುಸಂಖ್ಯಾತರಿಗೆ ತಿಳಿದಿಲ್ಲ. ಆದ್ದರಿಂದ ಇಂದಿನ ಲೇಖನದಲ್ಲಿ ಟ್ರೂಕಾಲರ್ ಆಪ್‌ನಲ್ಲಿನ 7 ರಹಸ್ಯ ಫೀಚರ್‌ಗಳನ್ನು ಇಂದಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿದ್ದೇವೆ.
ಮಾರ್ಕ್ ಜುಕರ್‌ಬರ್ಗ್' ಫೇಸ್‌ಬುಕ್ ಬಾಸ್ ಅಲ್ಲವಂತೆ!

ಕರೆ ಮಾಡಿದ ಅಪರಿಚಿತರು ಯಾರು ತಿಳಿದುಕೊಳ್ಳಿ
ಟ್ರೂಕಾಲರ್ ಆಪ್‌ನಲ್ಲಿ ನೀವು ಇಂಟರ್ನೆಟ್ ಸಂಪರ್ಕ ಇಲ್ಲದಿದ್ದರೂ ಸಹ ಒಮ್ಮೆ ಆಪ್ ನಂಬರ್ ಅನ್ನು ಗುರುತಿಸಿದರೆ ಸಾಕು ಕರೆ ಮಾಡಿದ ಅಪರಿಚಿತರು ಯಾರು ಎಂದು ಗುರುತಿಸುತ್ತದೆ.

ಕರೆಗಳ ಬ್ಲಾಕ್
ನಿಮಗೆ ಅಪರಿಚಿತ ವ್ಯಕ್ತಿಗಳ ಕರೆ ಅನಾವಶ್ಯಕವಾದಲ್ಲಿ ಆ ಕರೆಗಳು ಬರದಂತೆ ಬ್ಲಾಕ್ ಮಾಡಬಹುದಾಗಿದೆ. ಉದಾಹರಣೆಗೆ 8051 ನಂಬರ್‌ಗಳಿಂದ ಪ್ರಾರಂಭವಾಗುವ ಅಪರಿಚಿತ ನಂಬರ್‌ಗಳೆಲ್ಲವನ್ನು ಒಮ್ಮೆಯೇ ಬ್ಲಾಕ್ ಮಾಡಬಹುದಾಗಿದೆ.

ಮೋಸಗಾರರಿಂದ ನಿಮ್ಮನ್ನು ರಕ್ಷಿಸಿಕೊಳ್ಳಿ
ಟ್ರೂಕಾಲರ್ ಆಪ್ ಸ್ವಯಂ ರಕ್ಷಿಸುವ ಫೀಚರ್ ಹೊಂದಿದೆ. ಒಮ್ಮೆ ನಿಮ್ಮ ಡಿವೈಸ್‌ಗೆ ಆಪ್ ಡೌನ್‌ಲೋಡ್ ಮಾಡಿದ ನಂತರ "ಯಾರು ತಮ್ಮ ಗುರುತಿನ ಬಗ್ಗೆ ವಿವರ ನೀಡಿರುವುದಿಲ್ಲವೋ ಅವರ ಕರೆಗಳನ್ನು ರಿಜೆಕ್ಟ್ ಮಾಡಬಹುದು. ಆದರೆ ಈ ಬಗ್ಗೆ ತಿಳಿಯಲು ಒಮ್ಮೆ ನೀವು ಟ್ರೂಕಾಲರ್‌ನಿಂದ ಕರೆ ಮಾಡಿ ತಿಳಿದುಕೊಳ್ಳಬೇಕಾಗಿದೆ.

ಟ್ರೂ ಡಯಲರ್ ಬಳಕೆ
ಟ್ರೂಕಾಲರ್ ಆಪ್‌ನಲ್ಲಿ ಟ್ರೂಡಯಲರ್ ಅನ್ನು ಡಿಫಾಲ್ಟ್ ಡಯಲರ್ ಆಗಿ ಆಯ್ಕೆ ಮಾಡಬಹುದಾಗಿದೆ. ಇದರಿಂದ ನಿಮ್ಮ ವಿವರ ಇತರೆ ನಿಮ್ಮ ಗೆಳೆಯರಿಗೆ ಫೇಸ್‌ಬುಕ್, ಹಾಗೂ ಟ್ವಿಟರ್‌ನಲ್ಲಿ ರೆಫರ್ ಆಗಲು ಸಹಾಯವಾಗುತ್ತದೆ. ಇದರಿಂದ ಇತರರನ್ನು ಸಹ ಟ್ರೂಕಾಲರ್‌ನಲ್ಲೇ ಸೋಶಿಯಲ್ ಸೈಟ್‌ಗಳಿಂದ ಪತ್ತೆ ಹಚ್ಚಬಹುದಾಗಿದೆ.

ಸರ್ಚ್ ಬಾರ್‌ನಲ್ಲಿ ನಂಬರ್ ಪತ್ತೆ
ಟ್ರೂಕಾಲರ್ ಆಪ್ ಅನ್ನು ಡಿವೈಸ್‌ನಲ್ಲಿ ಇನ್ಸ್ಟಾಲ್ ಮಾಡಿದ ನಂತರ ಅಪರಿಚಿತ ನಂಬರ್ ಯಾರದು ಎಂದು ತಿಲಿಯಲು ನಂಬರ್ ಅನ್ನು ಸರ್ಚ್ ಬಾರ್‌ನಲ್ಲಿ ಟೈಪ್ ಮಾಡಿ. ಹಾಗೂ ಅವರ ವಿಳಾಸ ಹೆಸರು ಏನು ಎಂದು ಸಹ ತಿಳಿಯಿರಿ.

ನಿಮ್ಮ ಫ್ರೊಫೈಲ್ ವ್ಯವಸ್ಥೆಗೊಳಿಸಿ
ನೀವು ಇತರರಿಗೆ ಕರೆ ಮಾಡಿದರೆ ನಿಮ್ಮ ಬಗ್ಗೆ ಅವರಿಗೆ ತಿಳಿಯಲು ನಿಮ್ಮ ಸವಿವರಗಳನ್ನು ಟ್ರೂಕಾಲರ್ ಆಪ್‌ನಲ್ಲಿ ವ್ಯವಸ್ಥೆ ಮಾಡಿ. ನಿಮ್ಮ ಭಾವಚಿತ್ರ ಸಹಿತ ಎಲ್ಲಾ ಮಾಹಿತಿಯನ್ನು ವೆಬ್‌ಸೈಟ್‌ನಲ್ಲಿ ನೀಡುವಂತೆ ನೀಡಿ.

ನಿಮ್ಮ ನಂಬರ್ ಅನ್ನು ಡೇಟಾ ಬೇಸ್‌ನಿಂದ ತೆಗೆಯಿರಿ
ನಿಮ್ಮ ನಂಬರ್ ಅನ್ನು ಟ್ರೂಕಾಲರ್ ಆಪ್‌ನಲ್ಲಿ ಡಾಟಾ ಬೇಸ್‌ನಿಂದ ತೆಗೆಯಲು http:/www.truecaller.com/unlist ಲಿಂಕ್‌ಗೆ ಭೇಟಿ ನೀಡಿ. ನಂತರ ನಿಮ್ಮ ನಂಬರ್ ಅನ್ನು ದೇಶದ ಕೋಡ್‌ನೊಂದಿಗೆ ಟೈಪ್ ಮಾಡಿ. ನಂಬರ್ ತೆಗೆಯಲು ಕಾರಣವನ್ನು ಆಯ್ಕೆ ಮಾಡಿ ನಂತರ unlist ಬಟನ್ ಪ್ರೆಸ್ ಮಾಡಿ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470