ಇನ್ಮುಂದೆ ಮೊಬೈಲ್ ಆಪ್ ಮೂಲಕವೇ ರೈಲು ಎಲ್ಲಿದೆ ಎಂಬುದನ್ನು ನಿಖರವಾಗಿ ನೋಡಿ!!

ಮೊಬೈಲ್‌ನ ಆಪ್ ಮೂಲಕವೇ ರೈಲು ಎಲ್ಲಿದೆ ಎಂಬುದನ್ನು ನಿಖರವಾಗಿ ನೋಡಬಹುದಾದ ಸೇವೆಯನ್ನು ರೈಲ್‍ಯಾತ್ರಿ ನೀಡಿದೆ.!

|

ರೈಲ್ವೆ ಪ್ರಯಾಣ ಮಾಡುವಾಗ ಯಾವ ರೈಲು ಯಾವ ಸಮಯಕ್ಕೆ ಬರುತ್ತದೆ ಎಂಬ ಮಾಹಿತಿ ನಮ್ಮಲ್ಲಿ ಇರುತ್ತದೆ. ಆದರೆ, ಆ ರೈಲು ಆ ಸಮಯಕ್ಕೆ ನಿಖರವಾಗಿ ಬರುತ್ತದೆಯೇ ಅಥವಾ ಇಲ್ಲವೇ ಎಂಬುದು ಮಾತ್ರ ತಿಳಿಯುವುದಿಲ್ಲ. ಇದರಿಂದ ರೈಲು ಬರುವ ಸಮಯಕ್ಕೆ ಸರಿಯಾಗಿ ತೆರಳಿದರೂ ಸಹ ಗಂಟೆಗಟ್ಟಲೆ ರೈಲಿಗಾಗಿ ಕಾಯಬೇಕಾಗುತ್ತದೆ.!

ಆದರೆ, ಇನ್ಮುಂದೆ ಇಂತಹ ತೊಂದರೆ ನಿಮಗೆ ಎದುರಾಗುವುದಿಲ್ಲ. ಯಾವುದೇ ಒಂದು ರೈಲು, ನಿಲ್ದಾಣಕ್ಕೆ ಯಾವಾಗ ಬರುತ್ತದೆ ಎಂಬುದನ್ನು ನಿಖರವಾಗಿ ಹೇಳುವ ಸಮಸ್ಯೆಗೆ ಒಂದು ಪರಿಹಾರವನ್ನು ರೈಲ್‍ಯಾತ್ರಿ ಆಪ್ ಕಂಡುಕೊಂಡಿದೆ. ಮೊಬೈಲ್‌ನ ಆಪ್ ಮೂಲಕವೇ ರೈಲು ಎಲ್ಲಿದೆ ಎಂಬುದನ್ನು ನಿಖರವಾಗಿ ನೋಡಬಹುದಾದ ಸೇವೆಯನ್ನು ರೈಲ್‍ಯಾತ್ರಿ ನೀಡಿದೆ.!

ಇನ್ಮುಂದೆ ಮೊಬೈಲ್ ಆಪ್ ಮೂಲಕವೇ ರೈಲು ಎಲ್ಲಿದೆ ಎಂಬುದನ್ನು ನಿಖರವಾಗಿ ನೋಡಿ!!

ರೈಲ್‍ಯಾತ್ರಿ (RailYatri.in) ಆಪ್ ಮೂಲಕ ಗ್ರಾಹಕರು ಈ ಸೇವೆಯನ್ನು ಪಡೆಯಬಹುದಾಗಿದ್ದು, ಯಂತ್ರಗಳ ಕಲಿಕೆ ಮತ್ತು ಅಂಕಿ ಸಂಖ್ಯೆ ಆಧರಿಸಿದ ತಂತ್ರಜ್ಞಾನ ಬಳಸಿರುವ ಈ ಆಪ್ ಮೂಲಕ ರೈಲುಗಳ ಸಂಚಾರದ ಹಳೆಯ ಮಾಹಿತಿಯನ್ನೆಲ್ಲ ವಿಶ್ಲೇಷಿಸಿ ನಿರ್ದಿಷ್ಟ ರೈಲು, ನಿರ್ದಿಷ್ಟ ನಿಲ್ದಾಣಕ್ಕೆ ಯಾವ ಸಮಯಕ್ಕೆ ತಲುಪಲಿದೆ ಎನ್ನುವುದನ್ನು ಸೂಚಿಸಲಿದೆ.

ಈ ತಂತ್ರಜ್ಞಾನವು ರೈಲು ನಿಖರವಾಗಿ ಯಾವ ಸಮಯಕ್ಕೆ ನಿಲ್ದಾಣಕ್ಕೆ ಬರುತ್ತದೆ ಎನ್ನುವ ಮಾಹಿತಿ ಇಲ್ಲದೆ ಪ್ರಯಾಣಿಕರು ಅನಿರ್ದಿಷ್ಟ ಸಮಯದವರೆಗೆ ಕಾಯುತ್ತಲೇ ಇರುವ ಸಮಸ್ಯೆಗೆ ಇದರಿಂದ ಪರಿಹಾರ ಸಿಗಲಿದೆ. ಹಾಗಾಗಿ, ಇನ್ಮುಂದೆ ಭಾರತೀಯ ರೈಲ್ವೆ ಪ್ರಯಾಣಿಕರಿಗೆ ರೈಲ್ವೆ ನಿಲ್ದಾಣದಲ್ಲಿ ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ತಪ್ಪಲಿದೆ ಎನ್ನಲಾಗಿದೆ.

ಇನ್ಮುಂದೆ ಮೊಬೈಲ್ ಆಪ್ ಮೂಲಕವೇ ರೈಲು ಎಲ್ಲಿದೆ ಎಂಬುದನ್ನು ನಿಖರವಾಗಿ ನೋಡಿ!!

ಇಷ್ಟೇ ಅಲ್ಲದೇ, ರೈಲ್ವೆ ನಿಲ್ದಾಣದಲ್ಲಿ ನಿರ್ದಿಷ್ಟ ರೈಲು ನಿಲ್ದಾಣಕ್ಕೆ ಯಾವ ಸಮಯಕ್ಕೆ ಬರುತ್ತದೆ ಎನ್ನುವುದು ಈ ಸೌಲಭ್ಯದ ನೆರವಿನಿಂದ ಪ್ರಯಾಣಿಕರಿಗೆ ನಿಖರವಾಗಿ ತಿಳಿಯುವುದರಿಂದ ರೈಲುನಿಲ್ದಾಣಗಳಲ್ಲಿನ ಪ್ರಯಾಣಿಕರ ದಟ್ಟಣೆಯನ್ನು ಸಮರ್ಥವಾಗಿ ನಿಭಾಯಿಸಲು ಅನುಕೂಲವಾಗಲಿದೆ ಎಂದು ರೈಲ್‍ಯಾತ್ರಿ ಆಪ್ ವ್ಯವಸ್ಥಾಪಕರು ಹೇಳಿದ್ದಾರೆ.

What is Jio Cricket Gold Pass? How to Buy it

ಓದಿರಿ: ಮೊಬೈಲ್ ಮೂಲಕವೇ ವಿಡಿಯೊ ವ್ಲೋಗಿಂಗ್ ಮಾಡಿ ಹಣಗಳಿಸಿ!!

Best Mobiles in India

English summary
Annoyed of train delays and inaccurate predicted time of arrival?. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X