ಮೊಬೈಲ್ ಮೂಲಕವೇ ವಿಡಿಯೊ ವ್ಲೋಗಿಂಗ್ ಮಾಡಿ ಹಣಗಳಿಸಿ!!

ಯೂಟ್ಯೂಬ್ ಮೂಲಕ ಹಣಗಳಿಸುವುದು ಮೊದಲೆಲ್ಲಾ ಕಷ್ಟದ ಕೆಲಸ ಎನಿಸುತ್ತಿತ್ತು. ಆದರೆ. ಇಂದಿನ ಸ್ಮಾರ್ಟ್‌ಪೋನ್ ಕಾಲದಲ್ಲಿ ಮೊಬೈಲ್ ಮೂಲಕವೇ ವಿಡಿಯೊ ಚಿತ್ರೀಕರಣ ಮಾಡಿ ಯೂಟ್ಯೂಬ್ ಮೂಲಕ ಹಣಗಳಿಸುವುದು ಮತ್ತಷ್ಟು ಸುಲಭವಾಗಿದೆ.

|

ಯೂಟ್ಯೂಬ್ ಮೂಲಕ ಹಣಗಳಿಸುವುದು ಮೊದಲೆಲ್ಲಾ ಕಷ್ಟದ ಕೆಲಸ ಎನಿಸುತ್ತಿತ್ತು. ಆದರೆ. ಇಂದಿನ ಸ್ಮಾರ್ಟ್‌ಪೋನ್ ಕಾಲದಲ್ಲಿ ಮೊಬೈಲ್ ಮೂಲಕವೇ ವಿಡಿಯೊ ಚಿತ್ರೀಕರಣ ಮಾಡಿ ಯೂಟ್ಯೂಬ್ ಮೂಲಕ ಹಣಗಳಿಸುವುದು ಮತ್ತಷ್ಟು ಸುಲಭವಾಗಿದೆ. ಕಲಾತ್ಮಕತೆ ಮತ್ತು ವಿಷಯಗಳನ್ನು ಪ್ರಸ್ತುತಪಡಿಸಿ ಯೂಟ್ಯುಬ್‌ನಲ್ಲಿ ಸುಲಭವಾಗಿ ಹಣಗಳಿಸಬಹುದು.

ದಿನ ನಿತ್ಯದ ಜೀವನದಲ್ಲಿ ನಡೆಯುವ ಆಸಕ್ತಿಕರ ವಿಷಯಗಳ ಬಗ್ಗೆ, ಅಂದರೆ ಪ್ರವಾಸ, ತಂತ್ರಜ್ಞಾನ ಮೊದಲಾದವುಗಳ ಬಗ್ಗೆ ಮಾಹಿತಿ ನೀಡುವ ವಿಡಿಯೊಗಳನ್ನು ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಿ ಹಣವನ್ನು ಗಳಿಸಬಹುದಾಗಿದೆ. ನಿಮ್ಮ ಯೂಟ್ಯೂಬ್ ಚಾನೆಲ್‌ಗೆ ಚಂದಾದಾರರ ಸಂಖ್ಯೆ ಜಾಸ್ತಿಯಾಗುತ್ತಿದ್ದಂತೆ ಹಣ ಸಂಪಾದನೆ ಮಾಡಬಹುದಾಗಿದೆ.!

ಮೊಬೈಲ್ ಮೂಲಕವೇ ವಿಡಿಯೊ ವ್ಲೋಗಿಂಗ್ ಮಾಡಿ ಹಣಗಳಿಸಿ!!

ಹಾಗಂತ ಸುಮ್ ಸುಮ್ನೆ ವಿಡಿಯೊ ಚಿತ್ರೀಕರಿಸಿ ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಿದರೆ ಇಲ್ಲಿ ಯಾವ ಪ್ರಯೋಜನವೂ ಇಲ್ಲ. ಹಾಗಾಗಿ, ವಿಡಿಯೊ ಬ್ಲಾಗಿಂಗ್‌ನ ಹೃಸ್ವ ರೂಪ ವ್ಲೋಗಿಂಗ್ ಮೂಲಕ ಮೊಬೈಲ್ ಕ್ಯಾಮೆರಾದಲ್ಲಿ ಚಿತ್ರೀಕರಿಸಿದ ವಿಡಿಯೊಗಳನ್ನು ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಿ ಹಣ ಸಂಪಾದನೆ ಮಾಡುವುದು ಹೇಗೆ ಎಂಬುದನ್ನು ತಿಳಿಯೋಣ.!

ಏನಿದು ವ್ಲೋಗಿಂಗ್?

ಏನಿದು ವ್ಲೋಗಿಂಗ್?

ನಮಗೆ ತಿಳಿದಿರುವ ವಿಷಯ, ಅನುಭವವಿರುವ ವಲಯ ಅಥವಾ ಆಸಕ್ತಿಯಿರುವ ವಿಷಯದ ಬಗ್ಗೆಯೇ ವಿಡಿಯೊ ಮಾಡಿ ಹರಿಬಿಡುವುದನ್ನು ವ್ಲೋಗರ್ ಎಂದು ಕರೆಯುತ್ತಾರೆ. ವಿಡಿಯೊ ಬ್ಲಾಗಿಂಗ್‌ನ ಹೃಸ್ವ ರೂಪವೇ ವ್ಲೋಗಿಂಗಾ ಆಗಿದ್ದು, ವಿಡಿಯೊಗಳನ್ನು ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಿಷ ಹಣಗಳಿಸುತ್ತಾರೆ.

ಸ್ಮಾರ್ಟ್‌ಫೋನ್ ಇದ್ದರೆ ಸಾಕು!

ಸ್ಮಾರ್ಟ್‌ಫೋನ್ ಇದ್ದರೆ ಸಾಕು!

ಪ್ರವಾಸ, ತಂತ್ರಜ್ಞಾನ ಹೀಗೆ ದಿನ ನಿತ್ಯದ ಜೀವನದಲ್ಲಿ ನಡೆಯುವ ಆಸಕ್ತಿಕರ ವಿಷಯಗಳ ಬಗ್ಗೆ ಸ್ಮಾರ್ಟ್‌ಫೋನ್ ಮೂಲಕವೇ ವಿಡಿಯೋ ಮಾಡಬಹುದಾಗಿದೆ. ಸ್ಮಾರ್ಟ್‌ಫೋನ್‌ನಲ್ಲಿಯೇ ವಿಡಿಯೊ ಎಡಿಟಿಂಗ್ APP ಮೂಲಕ ವಿಡಿಯೋಗಳನ್ನು ಎಡಿಟ್ ಮಾಡಬಹುದು ಮತ್ತು ಡೆಸ್ಕ್‌ಟಾಪ್‌ನಲ್ಲಾದರೆ ಮೂವಿ ಮೇಕರ್‌ನಲ್ಲಿ ವಿಡಿಯೊ ಎಡಿಟ್ ಮಾಡಬಹುದು.

ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಹೇಗೆ? :

ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಹೇಗೆ? :

ಒಮ್ಮೆ ಯೂಟ್ಯೂಬ್‌ನಲ್ಲಿ ನಿಮ್ಮ ಚಾನೆಲ್ ಆರಂಭಿಸಿ, ಅದಕ್ಕೆ ಸೂಕ್ತವಾದ ಉತ್ತಮ ಹೆಸರನ್ನು ನೀಡಿ. ನಂತರ ನೀವು ಚಿತ್ರೀಕರಿಸಿದ ವಿಡಿಯೊಗಳನ್ನು ವಿವರಣೆ ನೀಡಿ ಅಪ್‌ಲೋಡ್ ಮಾಡಿ. ಯೂಟ್ಯೂಬ್‌ನಲ್ಲಿ ಯಾವುದೇ ವಿಷಯಗಳನ್ನು ಶೇರ್ ಮಾಡುವಾಗ ಆ ಬಗ್ಗೆ ಎಚ್ಚರಿಕೆಯಿಂದ ಇರುವುದು ಒಳ್ಳೆಯದು.

What is Jio Cricket Gold Pass? How to Buy it
ಹಣ ಸಂಪಾದನೆ ಹೇಗೆ?

ಹಣ ಸಂಪಾದನೆ ಹೇಗೆ?

ಯೂಟ್ಯೂಬ್ ಚಾನಲ್ ಆರಂಭಿಸಿದ ನಂತರ, ನಿಮ್ಮ ಯೂಟ್ಯೂಬ್ ವಿಡಿಯೊಗಳಿಗೆ 4000 ವೀಕ್ಷಣೆ ಮತ್ತು 1000 ಚಂದಾದಾರರು ಇದ್ದರೆ ಗೂಗಲ್‌ನಿಮದ ಜಾಹಿರಾತು ಪಡೆದುಕೊಳ್ಳಲು ಬೇಡಿಕೆ ಸಲ್ಲಿಸಬಹುದು. ಒಮ್ಮೆ ಗೂಗಲ್ ADSENSE ಸಿಕ್ಕ ನಂತರ, ನಿಮ್ಮ ವಿಡಿಯೊವನ್ನು ಎಷ್ಟು ಜನರು ವೀಕ್ಷಿಸುತ್ತಾರೆ ಎಂಬುದರ ಮೇಲೆ ನಿಮಗೆ ಹಣ ಸಂದಾಯವಾಗುತ್ತದೆ.

Best Mobiles in India

English summary
How many views do you need to make money on YouTube?.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X