Home
Apps

ಟ್ವಿಟರ್ ಮಾರಾಟವಾಗಲಿದೆ: ನಿಮಗೆ ಗೊತ್ತಿರಬೇಕಾದ ಐದು ಸಂಗತಿಗಳು.

By Ashok

ಆನ್ ಲೈನ್ ಪ್ರಪಂಚದ ದೊಡ್ಡ ಸುದ್ದಿಯೊಂದರಲ್ಲಿ, ಮೈಕ್ರೋ ಬ್ಲಾಗಿಂಗ್ ವೆಬ್ ಪುಟ ಟ್ವಿಟರ್ ಹಲವಾರು ತಂತ್ರಜ್ಞಾನ ಕಂಪನಿಗಳೊಂದಿಗೆ ಟ್ವಿಟರ್ ನ ಮಾರಾಟದ ಬಗ್ಗೆ ಚರ್ಚೆ ನಡೆಸಿದೆ.

ಟ್ವಿಟರ್ ಮಾರಾಟವಾಗಲಿದೆ: ನಿಮಗೆ ಗೊತ್ತಿರಬೇಕಾದ ಐದು ಸಂಗತಿಗಳು.

ಸದ್ಯಕ್ಕೆ 16 ಬಿಲಿಯನ್ ಡಾಲರ್ರುಗಳಷ್ಟು ಮಾರುಕಟ್ಟೆ ಹೊಂದಿರುವ ಟ್ವಿಟರ್, ಇನ್ನೂ ದೊಡ್ಡ ಕಂಪನಿಗಳಿಗೆ ಇಡೀ ಉದ್ದಿಮೆಯನ್ನು ಮಾರಾಟ ಮಾಡಲು ನಿರ್ಧರಿಸಿದೆ. ಆನ್ ಲೈನ್ ನಿಂದ ಟ್ವಿಟರ್ ಸಂಪೂರ್ಣವಾಗಿ ಮರೆಯಾಗಿ ಹೋಗುವುದನ್ನು ತಡೆಯಲು ಈ ನಿರ್ಧಾರ ತೆಗೆದುಕೊಂಡಿದೆ.

ಓದಿರಿ: ವೇಗದ ಬ್ರೌಸಿಂಗಿಗೆ ಟಾಪ್ 15 4ಜಿ ಸ್ಮಾರ್ಟ್ ಫೋನುಗಳು.

ಪ್ರಮುಖವಾದ ಆದರೆ ಹಣ ಕಳೆದುಕೊಳ್ಳುವ ಸಾಮಾಜಿಕ ಜಾಲತಾಣ ಕಂಪನಿಯ ಬಗ್ಗೆ ಒಂದಷ್ಟು ನೋಡೋಣ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವರದಿಗಳು ಏನು ಹೇಳುತ್ತವೆ?

ವರದಿಗಳು ಏನು ಹೇಳುತ್ತವೆ?

ಹಲವು ತಿಂಗಳುಗಳಿಂದ ಮೈಕ್ರೋ ಬ್ಲಾಗಿಂಗ್ ಸೈಟ್ ಟ್ವಿಟರ್ ನ ಮಾರಾಟದ ಬಗ್ಗೆ ಚರ್ಚೆಗಳಾಗುತ್ತಿದ್ದವು. ಕಂಪನಿಯು ಬಳಕೆದಾರರ ಏರಿಕೆಯು ಸ್ಥಗಿತವಾಗಿರುವುದರ ಬಗ್ಗೆ, ಜಾಹೀರಾತಿನ ಆದಾಯ ಹೆಚ್ಚಾಗದಿರುವ ಬಗ್ಗೆ ಮತ್ತು ಪ್ರತೀ ವರುಷ ಮಿಲಿಯನ್ನುಗಟ್ಟಲೇ ಡಾಲರಿನಷ್ಟು ನಷ್ಟವಾಗುತ್ತಿರುವುದರ ಬಗ್ಗೆ ವರದಿಗಳು ಬಂದಿದ್ದವು.

ಟ್ವಿಟರ್ರಿನಲ್ಲಿ ಈಗ 302 ಮಿಲಿಯನ್ ಬಳಕೆದಾರರಿದ್ದಾರೆ, ಆದಾಯ 436 ಮಿಲಿಯನ್ ಡಾಲರುಗಳಷ್ಟಿದೆ, ಆದರೆ ಅಂದುಕೊಂಡಿದ್ದ 440 ಮಿಲಿಯನ್ ಡಾಲರುಗಳಿಗಿಂತ ಇದು ಕಡಿಮೆಯಿದೆ. ಹಾಗಾಗಿ ನಷ್ಟವಾಗಿದೆ.

ಹೊಸ ಲ್ಯಾಪ್‌ಟಾಪ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸಂಭಾವ್ಯ ಖರೀದಿದಾರರು.

ಸಂಭಾವ್ಯ ಖರೀದಿದಾರರು.

ವರದಿಗಳ ಪ್ರಕಾರ, ಟ್ವಿಟರ್ ಗೂಗಲ್ ಸೇರಿದಂತೆ ಅನೇಕ ಕಂಪನಿಗಳ ಜೊತೆಗೆ ಮಾರಾಟದ ಬಗ್ಗೆ ಮಾತುಕತೆ ನಡೆಸಿದೆ, ಸದ್ಯದಲ್ಲೇ ಹರಾಜು ಪ್ರಕ್ರಿಯೆ ಶುರುವಾಗಲೂಬಹುದು. ವೆರಿಝಾನ್ ಮತ್ತು ಸೇಲ್ಸ್ ಫೋರ್ಸ್.ಕಾಮ್ ಕೂಡ ಟ್ವಿಟರ್ ಅನ್ನು ಖರೀದಿಸಲು ಆಸಕ್ತಿ ಹೊಂದಿದೆ. ಈ ಕಂಪನಿಗಳು 300 ಮಿಲಿಯನ್ನಿಗಂತಲೂ ಅಧಿಕವಿರುವ ಬಳಕೆದಾರರ ಡೇಟಾ ಬಳಸಿಕೊಳ್ಳಬಹುದು.

ಎಲ್ಲಿ ತಪ್ಪಾಯಿತು?

ಎಲ್ಲಿ ತಪ್ಪಾಯಿತು?

ಟ್ವಿಟರ್ ಅನ್ವೇಷಣೆ ಮಾಡುತ್ತಲಿಲ್ಲ ಎನ್ನುವಂತಿಲ್ಲ, ಮೈಕ್ರೋ ಬ್ಲಾಗಿಂಗ್ ಸೈಟಿಗೆ ಯಾಕೋ ಯಾವುದೂ ಸರಿಯಾಗುತ್ತಿಲ್ಲ. ಟ್ವಿಟರ್ ಹೈಲೈಟ್ಸ್, ಹೊಸ ಹೋಮ್ ಪೇಜ್, ವೈನ್ ಹಾಗೂ ಪೆರಿಸ್ಕೋಪ್ ಬಳಸಿ ವೀಡಿಯೋ ಹಂಚುವಿಕೆಗಳನ್ನೆಲ್ಲವನ್ನೂ ಟ್ವಿಟರ್ ಮಾಡುತ್ತಿದ್ದರೂ ಈ ಸಾಮಾಜಿಕ ಜಾಲತಾಣವು ಫೇಸ್ ಬುಕ್, ಇನ್ಸ್ಟಾಗ್ರಾಮ್ ಮತ್ತು ಸ್ನಾಪ್ ಚಾಟ್ ನಂತೆ ಬಳಕೆದಾರರನ್ನು ಹೆಚ್ಚಿಸಿಕೊಳ್ಳಲು ಆಗುತ್ತಿಲ್ಲ.

ಜೊತೆಗೆ, ಈ ಸಾಮಾಜಿಕ ಜಾಲತಾಣವನ್ನು ಕೆಟ್ಟ ಕೆಲಸಗಳಿಗೆ ಬಳಸಿಕೊಳ್ಳುತ್ತಿರುವುದು ಕಂಪನಿಯ ವಿಶ್ವಾಸಾರ್ಹತೆಗೆ ಧಕ್ಕೆ ತಂದಿದೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇಳಿತ.

ಇಳಿತ.

ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೆ ಟ್ವಿಟರ್ 2.3 ಬಿಲಿಯನ್ ಡಾಲರಿನಷ್ಟು ನಷ್ಟವನ್ನನುಭವಿಸಿದೆ. ಜೊತೆಗೆ ಮೈಕ್ರೋ ಬ್ಲಾಗಿಂಗ್ ಸೈಟ್ ಟ್ವಿಟರ್ ತನ್ನ ಸ್ಫರ್ಧಿಗಳಾದ ಫೇಸ್ ಬುಕ್, ಇನ್ಸ್ಟಾಗ್ರಾಮ್ ಮತ್ತು ಸ್ನಾಪ್ ಚಾಟ್ ಗಳ ಎದುರು ಸೋತು ಹೋಯಿತು. ಜೊತೆಗೆ, ಜಾಹೀರಾತು ಕೊಡುವವರು ತಮ್ಮ ನಿಷ್ಠೆಯನ್ನು ಬೇರೆ ತಾಣಗಳೆಡೆಗೆ ತಿರುಗಿಸಿದರು, ಅವರಿಗೂ ಇದು ವ್ಯವಹಾರವೇ ಅಲ್ಲವೇ?

ಮಾರುಕಟ್ಟೆ ಮೌಲ್ಯ ಎಷ್ಟಿರಬಹುದು?

ಮಾರುಕಟ್ಟೆ ಮೌಲ್ಯ ಎಷ್ಟಿರಬಹುದು?

ಮೂಲಗಳ ಪ್ರಕಾರ, ಟ್ವಿಟರ್ ಅನ್ನು ಒಂದು ಶೇರಿಗೆ 22 ಡಾಲರ್ ಕೊಟ್ಟು ಖರೀದಿಸಬಹುದು. ಮೈಕ್ರೋ ಬ್ಲಾಗಿಂಗ್ ವೆಬ್ ಸೈಟ್ ಹೂಡಿಕೆದಾರ ಬ್ಯಾಂಕುಗಳಾದ ಗೋಲ್ಡ್ ಮನ್ ಸ್ಯಾಕ್ಸ್ ಮತ್ತು ಆ್ಯಲೆನ್ & ಕೊ ಜೊತೆ ಚರ್ಚೆ ನಡೆಸುತ್ತ ಮೊತ್ತವನ್ನು ನಿರ್ಧರಿಸಲು ಪ್ರಯತ್ನಿಸುತ್ತಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Micro-blogging website Twitter is in talks to sell itself to bigger rivals like Google, Verizon possibly Salesforce.com. The company currently has a market value of around $16 billion and is holding internal discussions to make a final decision.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+