ಒಲಾ ಆಟೋ ಗಿಂತ ಕಡಿಮೆ ಬೆಲೆಗೆ ಆಟೋ..! 4KMಗೆ ರೂ.25 ಮಾತ್ರ..!
ರಾಜಧಾನಿ ಬೆಂಗಳೂರು ಬ್ರಾಂಡ್ ಬೆಂಗಳೂರು ಎಂಬ ಖ್ಯಾತಿಯನ್ನು ಪಡೆದುಕೊಂಡು ಕೆಲವೇ ದಿನಗಳಾಗಿದ್ದು, ಇದರ ಹಿಂದೆಯೇ ಬೆಂಗಳೂರನ್ನು ದೇಶದ ಎರಡನೇ ರಾಜಧಾನಿಯನ್ನಾಗಿ ಘೋಷಣೆ ಮಾಡಬೇಕು, ಬ್ರಾಂಡ್ ಬೆಂಗಳೂರಿಗೆ ಆ ಅರ್ಹತೆ ಇದೆ ಎಂಬ ಕೂಗು ಜೋರಾಗಿದೆ. ಇದೇ ಹಿನ್ನಲೆಯಲ್ಲಿ ಜಾಗತಿಕ ಆಪ್ ಆಧಾರಿತ ಟ್ಯಾಕ್ಸಿ ಸೇವೆಯನ್ನು ನೀಡುತ್ತಿರುವ ಉಬರ್ ಬೆಂಗಳೂರಿಗರಿಗೆ ಮಾತ್ರವೇ ಭರ್ಜರಿ ಆಫರ್ ವೊಂದನ್ನು ನೀಡಲು ಮುಂದಾಗಿದೆ.

ಬೆಂಗಳೂರು ನಗರದಲ್ಲಿ ಅತೀ ಹೆಚ್ಚಿನ ಸಂಖ್ಯೆಯ ಆಟೋಗಳನ್ನು ಕಾಣಬಹುದಾಗಿದ್ದು, ಉಬರ್-ಒಲಾ ಶುರವಾದ ನಂತರದಲ್ಲಷ್ಟೆ ಟಾಪ್ ಆಧಾರಿತ ಟ್ಯಾಕ್ಸಿ ಸೇವೆಯೂ ಹೆಚ್ಚಾಗಿತ್ತು. ಇದಾದ ನಂತರದಲ್ಲಿ ಮತ್ತೆ ಒಲಾ ಆಟೋ ಸೇವೆಯನ್ನು ಶುರು ಮಾಡಿ ಹೆಚ್ಚಿನ ಜನರನ್ನು ತನ್ನತ್ತ ಸೆಳೆಯಲು ಮುಂದಾಗಿತ್ತು. ಇದೇ ಮಾದರಿಯಲ್ಲಿ ಈ ಉಬರ್ ಆಟೋ ಸೇವೆಯನ್ನು ಬೆಂಗಳೂರಿನಲ್ಲಿ ಆರಂಭಿಸುತ್ತಿದ್ದು, ಬೆಲೆಯಲ್ಲಿ ಒಲಾವನ್ನು ಮೀರಿಸುವಂತಿದೆ ಎನ್ನಲಾಗಿದೆ.

ಓದಿರಿ: ವಾಟ್ಸ್‌ಆಪ್ ಬಿಸ್ನೆಸ್ ಆಪ್ ಲಾಂಚ್: ಏನಿದರ ವಿಶೇಷತೆ? ಬಳಕೆ ಹೇಗೆ?

ರೂ.25ಕ್ಕೆ 4KM ಪ್ರಯಾಣ ಮಾಡಿ:
ಈ ಹಿಂದೆ ಒಲಾ ಬೆಂಗಳೂರು ನಗರದಲ್ಲಿ ತನ್ನ ಸೇವೆಯನ್ನು ಆರಂಭಿಸಿದ ಸಂದರ್ಭದಲ್ಲಿ ಮತ್ತು ಪ್ರಸ್ತುತ 4KM ಪ್ರಯಾಣಕ್ಕೆ ರೂ.29 ದರವನ್ನು ನಿಗಧಿ ಮಾಡಿದ್ದು, ಈ ಮೂಲಕ ಬಳಕೆದಾರರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸಿತ್ತು. ಇದೇ ಮಾದರಿಯಲ್ಲಿ ಉಬರ್ ಸಹ ತನ್ನ ಆಟೋ ಸೇವೆಯನ್ನು ಹೆಚ್ಚಿನ ಪ್ರಮಾಣದಲ್ಲಿ ವಿಸ್ತಾರ ಮಾಡುವ ಸಲುವಾಗಿ ರೂ.25ಕ್ಕೆ ಬೆಂಗಳೂರಿಗರಿಗೆ 4KM ಪ್ರಯಾಣ ಮಾಡುವ ಅವಕಾಶವನ್ನು ಮಾಡಿಕೊಡಲು ಮುಂದಾಗಿದೆ.

ಒಲಾಗೆ ಸೆಡ್ಡು:
ದೇಶಿಯ ಮೂಲದ ಒಲಾ- ಜಾಗತಿಕವಾಗಿ ಆಪ್ ಆಧಾರಿತ ಟ್ಯಾಕ್ಸಿ ಸೇವೆಯನ್ನು ನೀಡುತ್ತಿರುವ ಉಬರ್ ಗೆ ಹೆಚ್ಚಿನ ಸ್ಪರ್ಧೆಯನ್ನು ನೀಡುತ್ತಿದ್ದು, ಈ ಹಿನ್ನಲೆಯಲ್ಲಿ ಒಲಾಗೆ ಎಲ್ಲಾ ಮಾದರಿಯಲ್ಲಿಯೂ ಸೆಡ್ಡು ಹೊಡೆಯುವ ಸಲುವಾಗಿ ಉಬರ್ ಈ ಮಾದರಿಯಲ್ಲಿ ಬೆಂಗಳೂರಿಗೆ ಬೊಂಬಾಟ್ ಆಫರ್ ಅನ್ನು ನೀಡಲು ಮುಂದಾಗಿದೆ.

ಆಟೋ ಬೇಡಿಕೆ ಹೆಚ್ಚು:
ದಿನದಿಂದ ದಿನಕ್ಕೆ ಮತ್ತೆ ಬೆಂಗಳೂರು ನಗರದಲ್ಲಿ ಆಟೋ ಬೇಡಿಕೆಯೂ ಹೆಚ್ಚಾಗುತ್ತಿದೆ. ಇದಲ್ಲದೇ ರಾಜ್ಯ ಸಾರಿಗೆ ಇಲಾಖೆಯೂ ಟ್ಯಾಕ್ಸಿ ಪ್ರಯಾಣದರವನ್ನು ಹೆಚ್ಚು ಮಾಡಿರುವ ಕಾರಣ ಒಲಾ ಮತ್ತು ಉಬರ್ ಗಳು ಆಟೋ ಕಡೆಗೆ ಹೆಚ್ಚಿನ ಒಲವು ತೋರಿಸುತ್ತಿವೆ ಎನ್ನಲಾಗಿದೆ.

ಶೀಘ್ರ ರಸ್ತೆಗೆ:
ಈಗಾಗಲೇ ಉಬರ್ ಆಟೋಗಳು ಒಂದೋ ಎರಡೋ ಕಾಣಿಸುತ್ತಿದ್ದು, ಆಪ್ ನಲ್ಲಿ ಇನ್ನು ಆಟೋ ಆಯ್ಕೆಯನ್ನು ನೀಡಿಲ್ಲ ಎನ್ನಲಾಗಿದೆ. ಶೀಘ್ರವೇ ಈ ಆಯ್ಕೆಯೂ ಸಹ ಬಳಕೆದಾರರಿಗೆ ದೊರೆಯಲಿದೆ. ಇದರಿಂದಾಗಿ ಬೆಂಗಳೂರಿಗರು ಕಡಿಮೆ ಬೆಲೆಗೆ ಆಟೋ ಸವಾರಿ ಮಾಡಬಹುದು.


Click it and Unblock the Notifications








