Subscribe to Gizbot

ವಾಟ್ಸ್‌ಆಪ್ ಬಿಸ್ನೆಸ್ ಆಪ್ ಲಾಂಚ್: ಏನಿದರ ವಿಶೇಷತೆ? ಬಳಕೆ ಹೇಗೆ?

Written By:

ಫೇಸ್ ಬುಕ್ ಒಡೆತನದ ವಾಟ್ಸ್‌ಆಪ್ ಹೊಸ ಆಪ್ ವೊಂದನ್ನು ಲಾಂಚ್ ಮಾಡಿದ್ದು, 'ವಾಟ್ಸ್‌ಆಪ್ ಬಿಸ್ನೆಸ್ ಆಪ್' ಈಗಾಗಲೇ ಮಾರುಕಟ್ಟೆಯನ್ನು ಪ್ರವೇಶಿಸಿದೆ ಸಣ್ಣ-ಪುಟ್ಟ ವ್ಯಾಪಾರಗಾರರಿಗೆ ಇದು ಸಹಾಯಕವಾಗಲಿದೆ ಎನ್ನಲಾಗಿದ್ದು, ತಮ್ಮ ವ್ಯಾಪಾರ ವಹಿವಾಟನ್ನು ಉತ್ತಮ ಪಡಿಸಿಕೊಳ್ಳಲು ವಾಟ್ಸ್‌ಆಪ್ ಬಿಸ್ನೆಸ್ ಆಪ್ ನೆರವಾಗಲಿದೆ. ಈಗಾಗಲೇ ಹಲವು ಮಂದಿ ವ್ಯಾಪಾರಗಾರರು ಸಾಮಾನ್ಯ ವಾಟ್ಸ್ ಆಪ್ ಅನ್ನು ಬಳಕೆ ಮಾಡಿಕೊಳ್ಳುತ್ತಿದ್ದು, ಇದಕ್ಕಿಂತ ಸುಲಭವಾಗಿದೆ ಮತ್ತು ಸರಳವಾಗಿ ಬಳಕೆ ಮಾಡಿಕೊಳ್ಳುವಂತೆ ವಾಟ್ಸ್ಆಪ್ ಬಿಸ್ನೆಸ್ ಆಪ್ ಅನ್ನ ಅಭಿವೃದ್ಧಿಪಡಿಸಲಾಗಿದೆ.

ವಾಟ್ಸ್‌ಆಪ್ ಬಿಸ್ನೆಸ್ ಆಪ್ ಲಾಂಚ್: ಏನಿದರ ವಿಶೇಷತೆ? ಬಳಕೆ ಹೇಗೆ?

ವಾಟ್ಸ್‌ಆಪ್ ಬಿಸ್ನೆಸ್ ಆಪ್ ತನ್ನ ಬಳಕೆದಾರರಿಗೆ ಹೆಚ್ಚಿನ ಅವಕಾಶವನ್ನು ಮಾಡಿಕೊಡಲಿದ್ದು, ತಮ್ಮ ವ್ಯಾಪಾರದ ಅಭಿವೃದ್ಧಿಗೆ ಬೇಕಾದಂತಹ ಅಂಶಗಳನ್ನು ಸೇರಿಸಲು ಇದು ಸಹಾಯಕಾರಿಯಾಗಿದೆ, ಇದು ವ್ಯಾಪಾರಗಾರರು ಮತ್ತು ಖರೀದಿದಾರರ ನಡುವೆ ಸೇತುವೆಯನ್ನು ನಿರ್ಮಿಸಿಲಿದ್ದು, ವ್ಯಾಪಾರಗಾರರಿಗೆ ಹೆಚ್ಚಿನ ಮಂದಿಯನ್ನು ತಲುಪಲು ಸಹಾಯವನ್ನು ಮಾಡಲಿದೆ. ಈ ವಾಟ್ಸ್‌ಆಪ್ ಬಿಸ್ನೆಸ್ ಆಪ್ ಕುರಿತ ಮಾಹಿತಿಯೂ ಈ ಮುಂದಿನಂತೆ ಇದೆ.

ಓದರಿ: ರೂ.10,999ಕ್ಕೆ ನಾಲ್ಕು ಕ್ಯಾಮೆರಾದ ಹಾನರ್ 9 ಲೈಟ್ ಲಾಂಚ್: ಬುಕ್ಕಿಂಗ್ ಮಾಡಿದವರಿಗೆ ಮಾತ್ರ..!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಫೇಸ್‌ಬುಕ್ ಪ್ರೋಫೈಲ್ ಶೇರ್ ಮಾಡಬಹುದು:

ಫೇಸ್‌ಬುಕ್ ಪ್ರೋಫೈಲ್ ಶೇರ್ ಮಾಡಬಹುದು:

ವಾಟ್ಸ್‌ಆಪ್ ಬಿಸ್ನೆಸ್ ಆಪ್ ನಲ್ಲಿ ಬಳಕೆದಾರರು ತಮ್ಮ ಫೇಸ್‌ಬುಕ್ ಪೇಜ್‌ ಲಿಂಕ್ ಅನ್ನು ಶೇರ್ ಮಾಡಬಹುದಾಗಿದೆ. ಈ ಮೂಲಕ ಹೆಚ್ಚಿನ ಜನರನ್ನು ತಲುಪುವ ಮತ್ತು ಸೆಳೆಯುವ ಸಾಧ್ಯತೆಯೂ ಹೆಚ್ಚಾಗಿದೆ. ಸಾಮಾನ್ಯ ವಾಟ್ಸ್‌ಆಪ್ ಗಳಿಗಿಂತಲೂ ಇದು ಭಿನ್ನವಾಗಿದೆ ಎನ್ನಲಾಗಿದೆ.

ಆಂಡ್ರಾಯ್ಡ್‌ನಲ್ಲಿ ಮಾತ್ರವೇ:

ಆಂಡ್ರಾಯ್ಡ್‌ನಲ್ಲಿ ಮಾತ್ರವೇ:

ವಾಟ್ಸ್‌ಆಪ್ ಬಿಸ್ನೆಸ್ ಆಪ್ ಸದ್ಯ ವಾಟ್ಸ್‌ಆಪ್ ನಲ್ಲಿ ಮಾತ್ರವೇ ದೊರೆಯುತ್ತಿದೆ ಎನ್ನಲಾಗಿದೆ. ಈಗಾಗಲೇ ಹಲವು ದೇಶಗಳಲ್ಲಿ ಈ ಆಪ್ ಬಿಡುಗಡೆಯಾಗಿದ್ದು, ಈ ಮೂಲಕ ಇನ್ನು ಹೆಚ್ಚಿನ ಜನರನ್ನು ತಲುಪುವ ಪ್ರಯತ್ನವನ್ನು ವಾಟ್ಸ್‌ಆಪ್ ಮಾಡುತ್ತಿದೆ. ವಾಟ್ಸ್‌ಆಪ್ ಮಾದರಿಯಲ್ಲಿ ವಾಟ್ಸ್‌ಆಪ್ ಬಿಸ್ನೆಸ್ ಆಪ್ ಕೂಡ ಖ್ಯಾತಿಯನ್ನು ಪಡೆಯುವ ಸಾಧ್ಯತೆ ಇದೆ.

2 ನಿಮಿಷದಲ್ಲಿ Aadhaar-ಮೊಬೈಲ್ ಲಿಂಕ್ ಮಾಡುವುದು ಹೇಗೆ..? ಸಿಂಪಲ್ ಟಿಪ್ಸ್..!
ವ್ಯಾಪಾರದ ಬಗ್ಗೆ ಮಾಹಿತಿ:

ವ್ಯಾಪಾರದ ಬಗ್ಗೆ ಮಾಹಿತಿ:

ನಿಮ್ಮ ವ್ಯಾಪಾರದ ಕುರಿತು ಎಲ್ಲಾ ಮಾಹಿತಿಯನ್ನು ವಾಟ್ಸ್‌ಆಪ್ ಬಿಸ್ನೆಸ್ ಆಪ್ ನಲ್ಲಿ ಹಂಚಿಕೊಳ್ಳಬಹುದಾಗಿದೆ. ಅಂಗಡಿ ಕಾರ್ಯನಿರ್ವಹಿಸುವ ಸಮಯ, ಯಾವ ಮಾದರಿಯ ಸೇವೆ ದೊರೆಯಲಿದೆ, ಅಲ್ಲದೇ ಯಾವ ಯಾವ ವಸ್ತುಗಳು ಗ್ರಾಹಕರಿಗೆ ಲಭ್ಯವಿರಲಿದೆ ಎಂಬುದರ ಸಂಪೂರ್ಣ ವಿವರವನ್ನು ನೀಡಬಹುದಾಗಿದೆ.

ವಿಳಾಸ:

ವಿಳಾಸ:

ಇದಲ್ಲದೇ ವಾಟ್ಸ್‌ಆಪ್ ಬಿಸ್ನೆಸ್ ಆಪ್ ನಲ್ಲಿ ನಿಮ್ಮ ವ್ಯಾಪಾರ ಇರುವ ಸ್ಥಳದ ಬಗ್ಗೆಯೂ ಮಾಹಿತಿಯನ್ನು ನೀಡಬಹುದಾಗಿದೆ. ಅಲ್ಲದೇ ಅದನ್ನು ಮ್ಯಾಪ್ ಮೂಲಕ ಲೋಕೆಷನ್ ಮಾದರಿಯಲ್ಲಿ ಸಹ ತೋರಿಸಬಹುದಾಗಿದ್ದು, ಗ್ರಾಹಕರು ಅಂಗಡಿಯನ್ನು ಹುಡುಕಿಕೊಂಡು ಬರಲು ಇದು ಸಹಾಯಕಾರಿಯಾಗಿದೆ.

ಉಚಿತ ಸೇವೆ:

ಉಚಿತ ಸೇವೆ:

ವಾಟ್ಸ್‌ಆಪ್ ಬಿಸ್ನೆಸ್ ಆಪ್ ಪ್ಲೇ ಸ್ಟೋರಿನಲ್ಲಿ ಸದ್ಯ ಉಚಿತವಾಗಿ ದೊರೆಯಲಿದೆ ಎನ್ನಲಾಗಿದೆ. ಇದರಿಂದಾಗಿ ಸಣ್ಣ ವ್ಯಾಪಾರಗಾರರು ತಮ್ಮ ಸೇವೆಯನ್ನು ಹೆಚ್ಚಿನ ಜನರಿಗೆ ತಲುಪಿಸಲು ಸಹಾಯಕಾರಿಯಾಗಲಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
WhatsApp officially launches its Business app. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot