Home
Apps

ಹಳೆ ಮತ್ತು ಸ್ಲೋ ಸ್ಮಾರ್ಟ್ ಫೋನ್ ಗಳಿಗಾಗಿಯೇ ಊಬರ್ ಹೊಸ ಆಪ್ ಲಾಂಚ್..!

By Gizbot Bureau

ಊಬರ್ ಸಂಸ್ಥೆ ಕಡಿಮೆ ಇಂಟರ್ ನೆಟ್ ಸ್ಪೀಡ್ ಮತ್ತು ಎಂಟ್ರಿ ಲೆವೆಲ್ ವಿಶೇಷಣಗಳನ್ನು ಹೊಂದಿರುವ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಗಳಿಗಾಗಿ ಇದರ ಒಂದು ಹೊಸ ವರ್ಷನ್ ನ್ನು ಬಿಡುಗಡೆಗೊಳಿಸಿದೆ. ಅದರ ಹೆಸರು ಊಬರ್ ಲೈಟ್. ಸದ್ಯ ಈ ಆಪ್ ದೆಹಲಿ, ಜೈಪುರ, ಮತ್ತು ಹೈದ್ರಾಬಾದ್ ನಲ್ಲಿ ಲಭ್ಯವಿದ್ದು, ಇನ್ನು ಕೆಲವೇ ದಿನದಲ್ಲಿ ಎಲ್ಲಾ ಕಡೆಗಳಲ್ಲೂ ಲಭ್ಯತೆ ಇರಲಿದೆ.

ಪೇಟಿಎಂ ಒಡೆಯನಿಗೆ ಉಚಿತ ಫೋನ್ ಆಫರ್!..'ಐಫೋನ್' ಅನ್ನು ಶಿಯೋಮಿ ಟ್ರೋಲ್ ಮಾಡಿದ್ದು ಹೀಗೆ!!

ಲಿಂಕ್ ನ್ನು ಕ್ಲಿಕ್ ಮಾಡಿ ಮತ್ತು ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ಊಬರ್ ಲೈಟ್ ಆಪ್ ಗೆ ಪ್ರೀ ರಿಜಿಸ್ಟರ್ ಆಗಬಹುದು. (ಸದ್ಯ ಊಬರ್ ಲೈಟ್ ಆಪ್ ಇನ್ವೈಟ್ ಓನ್ಲಿ ಆಪ್ ಆಗಿರುತ್ತದೆ)

ಹಳೆ ಮತ್ತು ಸ್ಲೋ ಸ್ಮಾರ್ಟ್ ಫೋನ್ ಗಳಿಗಾಗಿಯೇ ಊಬರ್ ಹೊಸ ಆಪ್ ಲಾಂಚ್..!

ಸಾಮಾನ್ಯವಾಗಿ, ಸಾಧಾರಣ ಊಬರ್ ಆಪ್ 180 MB+ ಸ್ಟೋರೇಜ್ ಮತ್ತು ಬ್ಯಾಕ್ ಗ್ರೌಂಡ್ ನಲ್ಲಿ ಇದನ್ನು ಇಡಲು ಹೆಚ್ಚಿನ RAM ನ್ನು ಬೇಡುತ್ತದೆ. ಆದರೆ, ಈ ಆಪ್,ಎಂಟ್ರಿ ಲೆವೆಲ್ ಸ್ಮಾರ್ಟ್ ಫೋನ್ ಗಳಲ್ಲೂ ಕೂಡ ರನ್ ಆಗುತ್ತದೆ.( ಉದಾಹರಣೆಗೆ ಆಂಡ್ರಾಯ್ಡ್ ಓರಿಯೋ ಗೋ ಸ್ಮಾರ್ಟ್ ಫೋನ್ ಜೊತೆಗೆ 1 ಜಿಬಿ RAM ಅಥವಾ ಅದಕ್ಕಿಂತ ಕಡಿಮೆ RAM ಮತ್ತು ಎಂಟ್ರಿ ಲೆವೆಲ್ ಪ್ರೊಸೆಸರ್)

ಹಳೆ ಮತ್ತು ಸ್ಲೋ ಸ್ಮಾರ್ಟ್ ಫೋನ್ ಗಳಿಗಾಗಿಯೇ ಊಬರ್ ಹೊಸ ಆಪ್ ಲಾಂಚ್..!

ಇಲ್ಲಿದೆ ಆಂಡ್ರಾಯ್ಡ್ ಗೆ ಹೊಂದುವ ಊಬರ್ ಲೈಟ್ ಆಪ್ ನ ಕುತೂಹಲಕಾರಿ ಸಂಗತಿಗಳು
  • ಈ ಆಪ್ ಕೇವಲ 5ಎಂಬಿ ಯಲ್ಲಿ ಮೇಕಿಂಗ್ ಆಗುತ್ತೆ. ಇಷ್ಟು ಲೈಟ್ ಆಗಿರುವ ಇದು ಹೆಚ್ಚಿನ ಎಲ್ಲಾ ಬೇರ್ಬೋನ್ ಸ್ಮಾರ್ಟ್ ಫೋನ್ ಗಳಲ್ಲೂ ಕೂಡ ಕಾರ್ಯನಿರ್ವಹಿಸುತ್ತದೆ.
  • ಭಾರತವು ಈ ಆಪನ್ನು ಪಡೆದ ಮೊದಲ ದೇಶವಾಗಿದೆ ಮತ್ತು ಇದಕ್ಕಿಂತ ಲೈಟ್ ಆಗಿರುವ IOS ಅಥವಾ ವಿಂಡೋಸ್ ಫೋನ್ OS ಮತ್ತೊಂದಿಲ್ಲ..
  • ಈಗಿರುವ ಊಬರ್ ಆಪ್ ನಲ್ಲಿರುವ ಎಲ್ಲಾ ವೈಶಿಷ್ಟ್ಯೆತೆಗಳು ಈ ಊಬರ್ ಲೈಟ್ ನಲ್ಲೂ ಇದೆ. ಆದರೆ ಪರಿಷ್ಕರಿಸಿದ UI ಜೊತೆಗಿನ ದೊಡ್ಡ ಅಕ್ಷರಗಳಲ್ಲಿ ಕಾಣಿಸುತ್ತೆ ಅಷ್ಟೇ..
  • ನಗರಗಳ ಪ್ರಮುಖ ಸ್ಥಳಗಳನ್ನು ಸೇವ್ ಮಾಡಿಕೊಳ್ಳಲು ಕಸ್ಟಮ್ ಅಲ್ಗೋರಿತ್ತಮ್ ನ್ನು ಈ ಆಪ್ ಬಳಸುತ್ತೆ ಆ ಮೂಲಕ ಡಾಟಾ ಬಳಕೆ ಕಡಿಮೆಯಾಗುತ್ತೆ.
  • ಭವಿಷ್ಯದಲ್ಲಿ ಸಾಫ್ಟವೇರ್ ಅಪ್ ಡೇಟ್ ಆಗಲಿದ್ದು, ಊಬರ್ ಲೈಟ್ ಆಪ್ ನಲ್ಲಿ ಭಾಷೆಯ ಬದಲಾವಣೆಗೆ ಇಂಟರ್ ನೆಟ್ ಕನೆಕ್ಷನ್ ಬೇಕಾಗುವುದಿಲ್ಲವಂತೆ.
  • ಈ ಆಪ್ ನ್ನು ಡೌನ್ ಲೋಡ್ ಮಾಡಲು ವೈಟಿಂಗ್ ಲಿಸ್ಟ್ ಅರ್ಜಿಯನ್ನು ಭರ್ತಿ ಮಾಡಬೇಕಾಗುತ್ತದೆ, ಇನ್ನು ಕೆಲವೇ ವಾರಗಳಲ್ಲಿ ಪ್ರತಿಯೊಬ್ಬರಿಗೂ ಇದು ಲಭ್ಯವಾಗಲಿದೆ.
  • ಈ ಆಪ್ ಭಾರತದಲ್ಲೇ , ಭಾರತಕ್ಕಾಗಿ ತಯಾರಿಸಿರುವುದಾಗಿದೆ.
  • ಅತೀ ವೇಗದ ಕ್ಯಾಬ್ ಬುಕ್ಕಿಂಗ್ ಸ್ಪೀಡ್ ಇದರಲ್ಲಿ ಇರಲಿದ್ದು, ಕಡಿಮೆ ಇಂಟರ್ ನೆಟ್ ಸ್ಪೀಡ್ ನಲ್ಲೂ ಕೂಡ 300 ಮಿಲಿಸೆಕೆಂಡ್ ರೆಸ್ಪಾನ್ಸ್ ಸ್ಪೀಡ್ ಇರಲಿದೆ.
ಹಳೆ ಮತ್ತು ಸ್ಲೋ ಸ್ಮಾರ್ಟ್ ಫೋನ್ ಗಳಿಗಾಗಿಯೇ ಊಬರ್ ಹೊಸ ಆಪ್ ಲಾಂಚ್..!

ಇದು ಈಗಲೂ 2ಜಿಬಿ ಮತ್ತು ಅದಕ್ಕಿಂತ ಕಡಿಮೆ ಸ್ಪೀಡಿನ ಕನೆಕ್ಷನ್ ಇರುವ ಬಳಕೆದಾರರಿಗೆ ಹೇಳಿ ಮಾಡಿಸಿದ ಆಪ್ ಆಗಿದೆ. ನಿಜ ಹೇಳಬೇಕು ಅಂದರೆ ಓಲಾ ಕೂಡ ಇದೇ ರೀತಿ ಲೈಟ ಆಪ್ ಗಳನ್ನು ಹೊಂದಿದ್ದು ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ, ಅದು ಕೂಡ ಎಂಟ್ರಿ ಲೆವೆಲ್ ಸ್ಮಾರ್ಟ್ ಫೋನ್ ಹೊಂದಿರುವವರಿಗಾಗಿ ಮಾಡಿರುವುದೇ ಆಗಿದೆ. ಊಬರ್ ಲೈಟ್ ಬಗ್ಗೆ ನೀವೇನು ಯೋಚಿಸುತ್ತಿದ್ದೀರಿ.. ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್ ಬಾಕ್ಸ್ ನಲ್ಲಿ ಹಾಕುವುದನ್ನು ಮರೆಯಬೇಡಿ..

Best Mobiles in India

English summary
Uber Lite: Cab booking app made for older and slower smartphones. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+