ಪೇಟಿಎಂ ಒಡೆಯನಿಗೆ ಉಚಿತ ಫೋನ್ ಆಫರ್!..'ಐಫೋನ್' ಅನ್ನು ಶಿಯೋಮಿ ಟ್ರೋಲ್ ಮಾಡಿದ್ದು ಹೀಗೆ!!
ಐಪೋನ್ ಖರೀದಿಸಲು ಏನೆಲ್ಲಾ ಮಾಡುವವರ ಸುದ್ದಿಗಳ ಜೊತೆಗೆ ಐಫೋನ್ ಬಗ್ಗೆ ಟ್ರೋಲ್ ಆಗುವ ಸುದ್ದಿಗಳು ಸಹ ನಿಮ್ಮ ಕಿವಿಗೆ ಬಿದ್ದಿರುತ್ತವೆ. ಆದರೆ, ಇವು ಸುದ್ದಿಯಾಗುವುದು ಕಡಿಮೆ. ಆದರೆ, ಮಿಲಿಯನ್ ಡಾಲರ್ ಒಡೆಯನಿಗೆ 'ಶಿಯೋಮಿ' ಕಂಪೆನಿ ಉಚಿತ ಮೊಬೈಲ್ ಆಫರ್ ನೀಡಿ ಐಫೋನ್ ಆಪಲ್ ಅನ್ನು ಟ್ರೋಲ್ ಮಾಡಿರುವ ಘಟನೆ ಟ್ವಿಟ್ಟರ್‌ನಲ್ಲಿ ವೈರಲ್ ಆಗಿದೆ.
ಹೌದು, ಭಾರತದ ನಂಬರ್ ಒನ್ ಪೇಮೆಂಟ್ ಆಪ್ ಎಂಬ ಹೆಗ್ಗಳಿಕೆಯನ್ನು ಪಡೆದಿರುವ ಪೇಟಿಎಂ ಸ್ಥಾಪಕ ವಿಜಯ್ ಶೇಖರ್ ಶರ್ಮಾ ಅವರಿಗೆ ಶಿಯೋಮಿ ಮುಖ್ಯಸ್ಥ ಮನುಕುಮಾರ್ ಜೈನ್ ಉಚಿತವಾಗಿ ಸ್ಮಾರ್ಟ್‌ಫೋನ್ ನಿಡುವುದಾಗಿ ಟ್ವಿಟ್ಟರ್‌ನಲ್ಲಿ ಹೇಳಿದ್ದಾರೆ. ಐಫೋನ್ ಬಳಸುತ್ತಿದ್ದ ಶರ್ಮಾ ಅವರಿಗೆ ಇದು ಶಿಯೋಮಿ ಸ್ಮಾರ್ಟ್‌ಫೋನ್ ಬಳಸುವ ಸೂಚನೆ ಎಂದು ಟ್ವಿಟ್ಟಿಸಿದ್ದಾರೆ.

ಈ ಸ್ವಾರಸ್ಯಕರ ಸಂಗಂತಿ ನಡೆದು ಎರಡು ದಿನಗಳಾಗಿದ್ದು, ಮಿಲಿಯನ್ ಡಾಲರ್ ಒಡೆಯ ಪೇಟಿಎಂ ಸ್ಥಾಪಕ ವಿಜಯ್ ಶೇಖರ್ ಶರ್ಮಾ ಅವರು ಬಳಸುತ್ತಿರುವ ಆಪಲ್ 'ಐಫೋನ್ ಎಕ್ಸ್' ಬಗ್ಗೆ ಟ್ವಿಟ್ಟರ್‌ನಲ್ಲಿ ದೂರ ಹೇಳಿಕೊಂಡಿದ್ದಾರೆ. 'ನನ್ನ ಐಫೋನ್ ಎಕ್ಸ್ ನೆನ್ನೆ ಸಂಜೆಯಿಂದ ಈ ಸ್ಥಿತಿಯಲ್ಲಿದೆ. ರೀಸ್ಟಾರ್ಟ್ ಮಾಡಲು ಸಹ ಸಾಧ್ಯವಾಗುತ್ತಿಲ್ಲ ಎಂದು ಟ್ವಿಟ್ಟರ್‌ನಲ್ಲಿ ಹಾಕಿಕೊಂಡಿದ್ದಾರೆ.
ಇನ್ನು ಇದನ್ನೇ ಎನ್‌ಕ್ಯಾಶ್ ಮಾಡಿಕೊಂಡಿರುವ ಶಿಯೋಮಿ ಕಂಪೆನಿ ಮುಖ್ಯಸ್ಥ ಮನುಕುಮಾರ್ ಜೈನ್ ಅವರು, ಭಾರತದ ನಂ ಒನ್ ಮೊಬೈಲ್ ಬ್ರ್ಯಾಂಡ್ ಆಗಿರುವ ಶಿಯೋಮಿ ಸ್ಮಾರ್ಟ್‌ಫೋನ್ ಬಳಸಲು ಇದು ಸೂಚನೆ. ನಿಮಗೆ ವೈಯಕ್ತಿಕವಾಗಿ ಒಂದು ಶಿಯೋಮಿ ಸ್ಮಾರ್ಟ್‌ಫೋನ್ ಕಳುಹಿಸಲು ಸಂತೋಷವಾಗುತ್ತಿದೆ ಎಂದು ಶರ್ಮಾ ಅವರಿಗೆ ರೀಟ್ವಿಟ್ ಮಾಡಿದ್ದಾರೆ.
ಇದರ ಜೊತೆಗೆ ಒನ್‌ಪ್ಲಸ್ ಕಂಪೆನಿ ಕೂಡ ಟ್ವಿಟ್ ಮೂಲಕ ವಿಜಯ್ ಶೇಖರ್ ಶರ್ಮಾ ಅವರಿಗೆ ಒನ್‌ಪ್ಲಸ್ ಸ್ಮಾರ್ಟ್‌ಫೋನ್ ಆಫರ್ ನೀಡಿದೆ. ಶಿಯೋಮಿ ಮತ್ತು ಒನ್‌ಪ್ಲಸ್ ಈ ಎರಡೂ ಮೊಬೈಲ್ ಕಂಪೆನಿಗಳು ಸ್ಮಾರ್ಟ್ ತಂತ್ರದ ಮೂಲಕ ತಮ್ಮ ಬ್ರ್ಯಾಂಡ್ ವ್ಯಾಲ್ಯೂವನ್ನು ಹೆಚ್ಚಿಸಿಕೊಳ್ಳುವುದರ ಜೊತೆಗೆ ಪ್ರಖ್ಯಾತ ಆಪಲ್ ಐಪೋನ್‌ಗಳನ್ನು ಟ್ರೋಲ್ ಮಾಡಿವೆ ಎನ್ನಬಹುದು.
ಓದಿರಿ: ಜಿಯೋ ಹೊಸ ಆಫರ್‌ಗೆ ಟೆಲಿಕಾಂ ಅಲ್ಲೋಲ ಕಲ್ಲೋಲ!..ಇತರೆ ಟೆಲಿಕಾಂ ಕಂಪೆನಿಗಳ ಶವಪೆಟ್ಟಿಗೆ ಇದು ಕೊನೆ ಮೊಳೆ!!


Click it and Unblock the Notifications








