Home
Apps

ಟ್ರೂಕಾಲರ್, ಶೇರ್‌ಇಟ್ ಆಪ್‌ಗಳನ್ನು ಈಗಲೇ ಡಿಲೀಟ್ ಮಾಡಿ!!

ಟ್ರೂಕಾಲರ್, ಶೇರ್‌ ಇಟ್ ಸೇರಿದಂತೆ ಚೀನಾ ರೂಪಿಸಿರುವ 41 ಆಪ್‌ಗಳನ್ನು ಬಳಕೆ ಮಾಡಬಾರದು ಎಂದು ಕೇಂದ್ರ ಸರ್ಕಾರ ಸೇನೆ ಮತ್ತು ಅರೆಸೇನಾ ‍ಪಡೆಗಳಿಗೆ ತಿಳಿಸಿರುವ ವಿಷಯ ನಿಮಗೆ ಈಗಾಗಲೇ ತಿಳಿದಿರಬಹುದು.

By Bhaskar N J

ಚೀನಾ ಆಪ್‌ಗಳು ದೇಶದ ಭದ್ರತೆಗೆ ಅಪಾಯಕಾರಿಯಾಗಿರುವುದನ್ನು ರಾ(RAW)ಪತ್ತೆ ಹಚ್ಚಿದ ನಂತರ, ಟ್ರೂಕಾಲರ್, ಶೇರ್‌ ಇಟ್ ಸೇರಿದಂತೆ ಚೀನಾ ರೂಪಿಸಿರುವ 41 ಆಪ್‌ಗಳನ್ನು ಬಳಕೆ ಮಾಡಬಾರದು ಎಂದು ಕೇಂದ್ರ ಸರ್ಕಾರ ಸೇನೆ ಮತ್ತು ಅರೆಸೇನಾ ‍ಪಡೆಗಳಿಗೆ ತಿಳಿಸಿರುವ ವಿಷಯ ನಿಮಗೆ ಈಗಾಗಲೇ ತಿಳಿದಿರಬಹುದು.

ಸೇನೆಗೆ ನೀಡಿದ ಈ ಸೂಚನೆ ಜನಸಾಮಾನ್ಯರಿಗೂ ಹೊರತಲ್ಲವಾಗಿರುವುದರಿಂದ ಯಾರೂ ಕೂಡ ಇಂತಹ ಆಪ್‌ಗಳನ್ನು ಡೌನ್‌ಲೋಡ್ ಮಾಡುವ ಸಾಹಸ ತೋರುತ್ತಿಲ್ಲ. ಆದರೆ, ರಿಪೋರ್ಟ್ ಒಂದರ ಪ್ರಕಾರ, ಭಾರತದಲ್ಲಿ ಈಗಲೂ ಬಹುತೇಕ ಸ್ಮಾರ್ಟ್‌ಫೋನ್ ಬಳಕೆದಾರರು ಚೀನಾ ರೂಪಿಸಿರುವ ಆಪ್‌ಗಳನ್ನೇ ಬಳಕೆ ಮಾಡುತ್ತಿದ್ದಾರೆ ಎಂದು ಹೇಳಿದೆ.

ಟ್ರೂಕಾಲರ್, ಶೇರ್‌ಇಟ್ ಆಪ್‌ಗಳನ್ನು ಈಗಲೇ ಡಿಲೀಟ್ ಮಾಡಿ!!

ಹೌದು, ಅಗತ್ಯವಿರುವ ಆಪ್‌ ಯಾವುದು ಎಂದು ಮಾತ್ರ ನೋಡುತ್ತಿರುವ ಭಾರತೀಯ ಸ್ಮಾರ್ಟ್‌ಫೋನ್ ಬಳಕೆದಾರರು ಭದ್ರತೆ ಬಗ್ಗೆ ತಲೆಕೆಡಿಕೊಂಡಿಲ್ಲ.ಯಾವುದೇ ಆಪ್‌ ಅನ್ನು ಡೌನ್‌ಲೋಡ್ ಮಾಡುವ ಮುನ್ನ ಶೇ 98ರಷ್ಟು ಮಂದಿ ಡೌನ್‌ಲೋಡ್ ಮಾಡುತ್ತಿರುವ ಆಪ್‌ ಯಾವ ದೇಶದ್ದು ಎಂಬುದನ್ನು ನೋಡುವುದಿಲ್ಲ ಎಂಬ ಶಾಕಿಂಗ್ ವರದಿ ಹೊರಬಿದ್ದಿದೆ.

ಮೊಬೈಲ್‌ನಲ್ಲಿಯೇ 'PF' ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ?

ಸೈಬರ್ ಭದ್ರತೆಗೆ ಅಪಾಯ ಒಡ್ಡುವ ಈ ರೀತಿಯ ಆಪ್‌ಗಳು ಬಳಕೆದಾರನನ್ನು ಮೋಸಗೊಳಿಸುವುದು ಗೊತ್ತೇ ಆಗುವುದಿಲ್ಲ. ಆಪ್ ಉಪಯುಕ್ತತೆ ಬಗ್ಗೆಯೇ ನಾವು ತಲೆಕೆಡಿಸಿಕೊಳ್ಳುವುದರಿಂದ ಅದು ಯಾವ ರೀತಿಯದ್ದು ಮತ್ತು ಯಾವ ದೇಶದ್ದು ಎಂಬುದರ ಬಗ್ಗೆ ತಿಳಿಯಲು ಹೋಗುವುದೇ ಇಲ್ಲ ಎಂದು ಇತ್ತೀಚಿಗೆ ಹೊರಬಿದ್ದಿರುವ ಒಂದು ವರದಿಯಲ್ಲಿ ಹೇಳಲಾಗಿದೆ.

ಟ್ರೂಕಾಲರ್, ಶೇರ್‌ಇಟ್ ಆಪ್‌ಗಳನ್ನು ಈಗಲೇ ಡಿಲೀಟ್ ಮಾಡಿ!!

ವಿ ಚಾಟ್‌, ಶೇರ್ ಇಟ್‌, ಯುಸಿ ನ್ಯೂಸ್‌, ಯುಸಿ ಬ್ರೌಸರ್‌, ನ್ಯೂಸ್ ಡಾಗ್‌, ವಿವಾ ವಿಡಿಯೊ, ಎಂಐ ಕಮ್ಯೂನಿಟಿ, ಡಿಯು ಕ್ಲೀನರ್‌, 360 ಸೆಕ್ಯೂರಿಟಿ, ವಂಡರ್ ಕ್ಯಾಮೆರಾ ಹೀಗೆ ಹಲವು ಆಪ್‌ಗಳು ಈಗಲೂ ಹೆಚ್ಚು ಭಾರತೀಯರ ಫೋನಿನಲ್ಲಿವೆ. ಹಾಗಾಗಿ, ಈ ಎಲ್ಲಾ ಚೀನಾ ನಿರ್ಮಿತ ಆಪ್‌ಗಳು ನಿಮ್ಮ ಫೋನಿನಲ್ಲಿದ್ದರೆ ಈಗಲೇ ಡಿಲೀಟ್ ಮಾಡಿಬಿಡಿ.

ಓದಿರಿ: ಹವಾ ಎಬ್ಬಿಸಲಿವೆ ಕೃತಕ ಬುದ್ದಿಮತ್ತೆಯ ''ವಾಷಿಂಗ್ ಮೆಶಿನ್''!!

Best Mobiles in India

English summary
Ministry of Defence in India has issued a new order to the Indian armed forces asking officers and all security personnel to remove. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+