ಹವಾ ಎಬ್ಬಿಸಲಿವೆ ಕೃತಕ ಬುದ್ದಿಮತ್ತೆಯ ''ವಾಷಿಂಗ್ ಮೆಶಿನ್''!!

ಮೊದಲೆಲ್ಲ ಸಂಪೂರ್ಣ ಸ್ವಯಂಚಾಲಿತ ಮತ್ತು ಅರೆ-ಸ್ವಯಂಚಾಲಿತ ಎಂಬ ಎರಡು ನಮೂನೆಯ ವಾಷಿಂಗ್ ಮೆಶಿನ್‌ಗಳು ಮಾತ್ರ ಇದ್ದವು. ಇವುಗಳ ಕಾರ್ಯನಿರ್ವಹಣೆ ಕೂಡ ಅಷ್ಟಕಷ್ಟೆ ಇತ್ತು.!

|

ಮನೆಯಲ್ಲಿ ಟಿವಿ, ರೆಫ್ರಿಜರೇಟರ್‌ಗಳಂತೆ ಇರಲೇಬೇಕಾದ ಮತ್ತೊಂದು ಗ್ಯಾಜೆಟ್ ಎಂದರೆ ವಾಷಿಂಗ್ ಮೆಶಿನ್.! ಇಂದು ನಗರಗಳ ಪ್ರತಿ ಮನೆಯಲ್ಲಿಯೂ ಬೀಡುಬಿಟ್ಟಿರುವ ವಾಷಿಂಗ್ ಮೆಶಿನ್ ಇದ್ದರೆ ಬಟ್ಟೆ ತೊಳೆಯುವುದು ಸಲೀಸು. ಇನ್ನು ಇತ್ತೀಚಿಗೆ ಬಿಡುಗಡೆಯಾಗುತ್ತಿರುವ ಸ್ಮಾರ್ಟ್‌ ವಾಷಿಂಗ್ ಮೆಶಿನ್‌ಗಳಿದ್ದರೆ ಇದ್ದರೆ ಬಟ್ಟೆ ತೊಳೆಯುವ ಯೋಚನೆಯೇ ಇರುವುದಿಲ್ಲ.!!

ಹೌದು, ಮೊದಲೆಲ್ಲ ಸಂಪೂರ್ಣ ಸ್ವಯಂಚಾಲಿತ ಮತ್ತು ಅರೆ-ಸ್ವಯಂಚಾಲಿತ ಎಂಬ ಎರಡು ನಮೂನೆಯ ವಾಷಿಂಗ್ ಮೆಶಿನ್‌ಗಳು ಮಾತ್ರ ಇದ್ದವು. ಇವುಗಳ ಕಾರ್ಯನಿರ್ವಹಣೆ ಕೂಡ ಅಷ್ಟಕಷ್ಟೆ ಇತ್ತು.! ಆದರೆ, ಇಂದು ಕೃತಕ ಬುದ್ದಿಮತ್ತೆ (ಇಂಟರ್‌ನೆಟ್ ಆಫ್ ಥಿಂಗ್ಸ್) ಬಳಕೆ ಮಾಡಿಕೊಂಡು ಬಟ್ಟೆ ತೊಳೆಯವ ವಾಷಿಂಗ್ ಮೆಶಿನ್‌ಗಳು ಮಾರುಕಟ್ಟೆಗೆ ಕಾಲಿಡುತ್ತಿವೆ.

ಹವಾ ಎಬ್ಬಿಸಲಿವೆ ಕೃತಕ ಬುದ್ದಿಮತ್ತೆಯ ''ವಾಷಿಂಗ್ ಮೆಶಿನ್''!!

ಕೃತಕ ಬುದ್ದಿಮತ್ತೆಯಿಂದ ಕೆಲಸ ನಿರ್ವಹಿಸುವ ಈ ವಾಷಿಂಗ್ ಮೆಶಿನ್‌ಗಳು ನೀವು ನೀಡುವ ಬಟ್ಟೆಗಳಿಗೆ ಎಷ್ಟು ನೀರು ಬೇಕಾಗುತ್ತದೆ, ಎಷ್ಟು ಸಾಬೂನಿದ್ದರೆ ಬಟ್ಟೆಯ ಕೊಳೆ ತೆಗೆಯುತ್ತದೆ, ಬಟ್ಟೆಗಳು ಎಷ್ಟು ಗಲೀಜಾಗಿವೆ? ಬಟ್ಟೆಯನ್ನು ಎಷ್ಟು ಹೊತ್ತು ಒಣಗಿಸಬೇಕು ಎಂಬುದೆಲ್ಲವನ್ನು ಸ್ವಯಂಚಾಲಿತವಾಗಿ ತಿಳಿದು ಬಟ್ಟೆ ತೊಳೆದು ನಂತರ ಒಣಗಿಸಿ ನಮಗೆ ನೀಡುತ್ತವೆ.

ಈ ಡಿಜಿಟಲ್ ವಾಷಿಂಗ್ ಮೆಶಿನ್‌ಗಳು ಕೃತಕ ಬುದ್ದಿಮತ್ತೆಯಿಂದ ಬಟ್ಟೆ ತೊಳೆಯುವಾಗ ಯಾವುದೇ ರೀತಿಯಲ್ಲಯೂ ಬಟ್ಟೆಗಳಿಗೆ ಹಾನಿಯಾಗದಂತೆ ನೋಡಿಕೊಳ್ಳುತ್ತವೆ. ಇವೆಲ್ಲವಕ್ಕಿಂತ ಹೆಚ್ಚಾಗಿ ಬಟ್ಟೆ ತೊಳೆಯುವಾಗ ಈ ಮೊದಲಿನ ವಾಷಿಂಗ್ ಮೆಶಿನ್‌ಗಳು ಬಳಸಿಕೊಳ್ಳುತ್ತಿದ್ದ ವಿದ್ಯತ್‌ಗಿಂತಲೂ ಅತ್ಯಂತ ಕಡಿಮೆ ವಿದ್ಯುತ್ ಬಳಕೆ ಮಾಡಿಕೊಳ್ಳುತ್ತವೆ.

ಹವಾ ಎಬ್ಬಿಸಲಿವೆ ಕೃತಕ ಬುದ್ದಿಮತ್ತೆಯ ''ವಾಷಿಂಗ್ ಮೆಶಿನ್''!!

ಈಗಾಗಲೇ ಜಾಗತಿಕ ಪ್ರಮುಖ ಎಲೆಕ್ಟ್ರಾನಿಕ್ ಸಂಸ್ಥೆಗಳಾದ ಎಲ್‌ಜಿ ಮತ್ತು ಸ್ಯಾಮ್‌ಸಂಗ್ ಕಂಪೆನಿಗಳು ಇಂಟರ್‌ನೆಟ್ ಆಫ್ ಥಿಂಗ್ಸ್ ವಾಷಿಂಗ್ ಮೆಶಿನ್‌ಗಳನ್ನು ಬಿಡುಗಡೆ ಮಾಡಲು ತಯಾರಾಗಿವೆ. ಸ್ಯಾಮ್‌ಸಂಗ್ ಕಂಪೆನಿ ಸ್ಯಾಮ್ಸಂಗ್ WW8800M ಡಿಜಿಟಲ್ ವಾಷಿಂಗ್ ಮೆಶಿನ್ ತಯಾರಿಸಿದ್ದರೆ, ಈ ವರ್ಷದಲ್ಲಿ ಎಲ್‌ಜಿ ಕೂಡ ಐಓಟಿ ವಾಷಿಂಗ್ ಮೆಶಿನ್ ಬಿಡುಗಡೆ ಮಾಡುವುದಾಗಿ ಹೇಳಿದೆ.

ಓದಿರಿ: ಫೇಸ್‌ಬುಕ್‌ನಲ್ಲಿ ವಯಕ್ತಿಕ ಡೇಟಾ ದುರುಪಯೋಗವಾಗಿದ್ದು ಎಷ್ಟು ಬಳಕೆದಾರರದ್ದು ಗೊತ್ತಾ?!

Best Mobiles in India

English summary
Samsung introduced its newest Samsung WW8800M washing machinethat has been equipped with IoT technology and Artificial Intelligence (AI).to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X