Home
Apps

WhatsApp ಬಳಕೆದಾರರಿಗೆ ಹೊಸ ಅನುಭವ: ಈ ಫೀಚರ್ಸ್‌ನಿಂದ ಇವರಿಗೆ ಅನುಕೂಲ!

ವಾಟ್ಸಾಪ್‌ ಪ್ರಮುಖ ಮೆಸೇಜಿಂಗ್‌ ಪ್ಲಾಟ್‌ಫಾರ್ಮ್‌ ಆಗಿದ್ದು, ಇದರಲ್ಲಿ ಬಳಕೆದಾರರು ಉತ್ತಮ ಅನುಭವ ಪಡೆದುಕೊಳ್ಳುತ್ತಿದ್ದಾರೆ. ಜೊತೆಗೆ ವಾಟ್ಸಾಪ್‌ನಲ್ಲಿ ಸಾಕಷ್ಟು ಸುಧಾರಿತ ಹೊಸ ಹೊಸ ಫೀಚರ್ಸ್‌ಗಳನ್ನು ಪರಿಚಯಿಸುತ್ತಿದ್ದು, ಈ ನಡುವೆ ಮತ್ತೊಂದು ದೊಡ್ಡ ನವೀಕರಣ ವಾಟ್ಸಾಪ್‌ನಲ್ಲಿ ಲಭ್ಯ ಆಗುತ್ತಿದೆ.

ಹೌದು, ವಾಟ್ಸಾಪ್ (WhatsApp) ಪ್ರಮುಖ ನವೀಕರಣವನ್ನು ಪಡೆದುಕೊಳ್ಳಲಿದ್ದು, ಬಳಕೆದಾರರು ಈಗ ಬೀಟಾ ಆವೃತ್ತಿಯಲ್ಲಿ ವಿಡಿಯೋ ಮೆಸೆಜ್‌ಗಳನ್ನು ಕಳುಹಿಸಬಹುದಾಗಿದೆ. ಈ ಹೊಸ ವಿಡಿಯೋ ಮೆಸೆಜ್‌ ಫೀಚರ್ಸ್‌(video message feature) ಐಓಎಸ್‌ಗಾಗಿ ಬೀಟಾದ 23.12.0.71 ಆವೃತ್ತಿ ಹಾಗೂ ಆಂಡ್ರಾಯ್ಡ್‌ಗಾಗಿ ಆವೃತ್ತಿ 2.23.13.4 ನಲ್ಲಿ ಕಾಣಿಸಿಕೊಳ್ಳುತ್ತಿದೆ. ಹಾಗಿದ್ರೆ, ತಡ ಯಾಕೆ ಬನ್ನಿ ಏನಿದು ವಿಡಿಯೋ ಮಸೆಜ್‌?, ಇದರಿಂದ ಆಗುವ ಅನುಕೂಲ ಏನು? ಎಂದು ತಿಳಿಯೋಣ.

WhatsApp ಬಳಕೆದಾರರಿಗೆ ಹೊಸ ಅನುಭವ: ಈ ಫೀಚರ್ಸ್‌ನಿಂದ ಇವರಿಗೆ ಅನುಕೂಲ!

ವಾಟ್ಸಾಪ್‌ನಲ್ಲಿ ವಿಡಿಯೋ ಮಸೆಜ್‌: ನೀವು ಅಂದುಕೊಳ್ಳಬಹುದು ಈಗಾಗಲೇ ವಾಟ್ಸಾಪ್‌ನಲ್ಲಿ ವಿಡಿಯೋ ಅಷ್ಟೇ ಅಲ್ಲ ಫೋಟೋ ಹಾಗೂ ಇನ್ನಿತರೆ ದಾಖಲೆಗಳನ್ನು ಕಳುಹಿಸಬಹುದಲ್ಲ. ಇದರಲ್ಲೇನಿದೆ ಹೊಸತನ ಎಂದು. ಆದರೆ, ಇದು ಖಂಡಿತಾ ಹೊಸತನದಿಂದ ಕೂಡಿದೆ. ಯಾಕೆಂದರೆ ಈ ವಿಡಿಯೋ ಮೆಸೆಜ್‌ ಫೀಚರ್ಸ್‌ ಸಂದೇಶವನ್ನು ಟೈಪ್ ಮಾಡಲು ಬಯಸದಿದ್ದರೆ ಆಡಿಯೊ ಮೆಸೆಜ್‌ ಅನ್ನು ಹೇಗೆ ತ್ವರಿತವಾಗಿ ಕಳುಹಿಸಲು ಸಾಧ್ಯವಾಗುತ್ತಿದೆಯೋ ಅದೇ ರೀತಿ ಇದು ಕೆಲಸ ಮಾಡಲಿದೆ.

ಇನ್ನು ಈ ವಿಡಿಯೋ ಮೆಸೆಜ್‌ ಫೀಚರ್ಸ್‌ ಐಓಎಸ್‌ಗಾಗಿ ಬೀಟಾದ 23.12.0.71 ಆವೃತ್ತಿ ಹಾಗೂ ಆಂಡ್ರಾಯ್ಡ್‌ ಗಾಗಿ ಆವೃತ್ತಿ 2.23.13.4 ಯಲ್ಲಿ ಕಾಣಿಸಿಕೊಳ್ಳುತ್ತಿದೆ. ವಿಡಿಯೋ ಮೆಸೆಜ್‌ ಅನ್ನು ಕಳುಹಿಸುವುದು ಹೇಗೆಂದು ತಿಳಿಯೋಣ ಬನ್ನಿ. ಈ ಪ್ರಕ್ರಿಯೆ ಬಹಳ ಸರಳವಾಗಿದ್ದು, ಈಗಾಗಲೇ ನೀವು ಆಡಿಯೊ ಮೆಸೆಜ್‌ಗಳನ್ನು ಹೇಗೆ ಸೆಂಡ್‌ ಮಾಡುತ್ತಿದ್ದೀರೋ ಅದೇ ರೀತಿ ಈ ಫೀಚರ್ಸ್ ಕೆಲಸ ಮಾಡುತ್ತದೆ. ಅಂದರೆ ಪ್ರತಿ ಚಾಟ್‌ನಲ್ಲಿ ಮೈಕ್ರೊಫೋನ್ ಐಕಾನ್ ಜೊತೆ ವಿಡಿಯೋ ಐಕಾನ್ ಅನ್ನು ಸಹ ನೀಡಲಾಗುತ್ತದೆ.

ಇನ್ನೂ ಸುಲಭ ಮಾರ್ಗ ಎಂದರೆ ಮೊದಲು ನಿಮ್ಮ ವಾಟ್ಸಾಪ್‌ ಓಪನ್‌ ಮಾಡಿ. ಅಲ್ಲಿ ಚಾಟ್‌ಗೆ ವಿಭಾಗಕ್ಕೆ ತಲುಪಿ. ಬಳಿಕ ಟೈಪಿಂಗ್ ಬಾರ್‌ನ ಬಲಭಾಗದಲ್ಲಿರುವ ಮೈಕ್ರೊಫೋನ್ ಅಥವಾ ವಿಡಿಯೋ ಕ್ಯಾಮರಾ ಐಕಾನ್ ಮೇಲೆ ಟ್ಯಾಪ್ ಮಾಡಿ. ಬಳಿಕ ನಿಮಗೆ ಅನಿಸಿದ್ದನ್ನು ಅಲ್ಲಿ ರೆಕಾರ್ಡ್ ಮಾಡಿ ಬೇಕಾದವರಿಗೆ ಸೆಂಡ್‌ ಮಾಡಿ. ಈ ಫೀಚರ್ಸ್‌ ಕುಟುಂಬದವರೊಂದಿಗೆ , ಪ್ರೇಮಿಗಳೊಂದಿಗೆ ಹಾಗೂ ಸ್ನೇಹಿತರೊಂದಿಗಿನ ಬಾಂಧವ್ಯವನ್ನು ಹೆಚ್ಚಿಗೆ ಮಾಡುವುದರಲ್ಲಿ ಎರಡು ಮಾತಿಲ್ಲ.

WhatsApp ಬಳಕೆದಾರರಿಗೆ ಹೊಸ ಅನುಭವ: ಈ ಫೀಚರ್ಸ್‌ನಿಂದ ಇವರಿಗೆ ಅನುಕೂಲ!

ಇದು ಯಾವಾಗ ಲಭ್ಯ?: ಈ ಫೀಚರ್ಸ್‌ ಇನ್ನೇನು ಕೆಲವೇ ದಿನಗಳಲ್ಲಿ ಬಳಕೆದಾರರಿಗೆ ಲಭ್ಯ ಆಗಲಿದೆ ಎಂದು ತಿಳಿದುಬಂದಿದೆ. ಯಾಕೆಂದರೆ ವಾಟ್ಸಾಪ್‌ನಲ್ಲಿ ಈಗಾಗಲೇ ಎಡಿಟ್ ಬಟನ್, ಆನ್‌ಲೈನ್ ಸ್ಟೇಟಸ್‌ ಮರೆಮಾಡುವುದು, ನಿರ್ದಿಷ್ಟ ವ್ಯಕ್ತಿಗಳಿಂದ ಪ್ರೊಫೈಲ್ ಚಿತ್ರಗಳನ್ನು ಮರೆಮಾಡುವುದು, ಚಾಟ್ ಲಾಕ್, ಬಹು-ಫೋನ್ ಬೆಂಬಲ ಸೇರಿದಂತೆ ಅನೇಕ ಹೊಸ ಫೀಚರ್ಸ್‌ಗಳನ್ನು ಕೆಲವೇ ದಿನಗಳ ಅಂತರದಲ್ಲಿ ನೀಡಿದ್ದು, ಅದರಂತೆ ಈ ಫೀಚರ್ಸ್‌ ಅನ್ನು ಸಹ ನೀಡಲಾಗುತ್ತದೆ ಎಂದು ಹೇಳಲಾಗುತ್ತಿದೆ.

ಈ ಸಂಬಂಧ ವಾಟ್ಸಾಪ್‌ನ ಹಾಗು-ಹೋಗುಗಳ ಮೇಲೆ ಕಣ್ಣಿಟ್ಟಿರುವ WaBetaInfo ಈ ಬಗ್ಗೆ ಮಾಹಿತಿ ನೀಡಿದ್ದು, ಈ ವಿಡಿಯೋ ಮೆಸೆಜ್‌ಗಳು ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಆಗಿರಲಿದ್ದು, ಈ ವಿಡಿಯೋ ಮೆಸೆಜ್‌ಅನ್ನು ಯಾರೂ ಪರಿಶೀಲಿಸಲು ಸಾಧ್ಯವಾಗುವುದಿಲ್ಲ. ಅಷ್ಟು ಮಾತ್ರವಲ್ಲ ಆ ವಿಡಿಯೋ ಮೆಸೆಜ್‌ ಅನ್ನು ಯಾವುದೇ ಕಾರಣಕ್ಕೂ ಫಾರ್ವರ್ಡ್ ಮಾಡುವ ಹಾಗೆ ಅನುಮತಿಸುವುದಿಲ್ಲ ಎಂದು ಉಲ್ಲೇಖಿಸಿದೆ.

WhatsApp ಬಳಕೆದಾರರಿಗೆ ಹೊಸ ಅನುಭವ: ಈ ಫೀಚರ್ಸ್‌ನಿಂದ ಇವರಿಗೆ ಅನುಕೂಲ!

ಈ ವಿಡಿಯೋ ಮೆಸೆಜ್‌ ಫೀಚರ್ಸ್‌ ಫೋನ್‌ನ ಗ್ಯಾಲರಿಯನ್ನು ಬಳಸಿಕೊಂಡು ವಿಡಿಯೋ ಶೇರ್‌ ಮಾಡುವುದಕ್ಕಿಂತ ಬಹಳ ಭಿನ್ನವಾಗಿದೆ. ಯಾಕೆಂದರೆ ನೀವು ತಕ್ಷಣ ಅದನ್ನು ರೆಕಾರ್ಡ್ ಮಾಡಿ ಕಳುಹಿಸಬಹುದು. ಆದರೆ, ಎಷ್ಟು ಸಮಯದವರೆಗೆ ವಿಡಿಯೋ ರೆಕಾರ್ಡ್‌ ಮಾಡಬಹುದು, ಎಷ್ಟು ಜನರಿಗೆ ಶೇರ್‌ ಮಾಡಬಹುದು ಎಂಬ ಬಗ್ಗೆ ಯಾವುದೇ ಮಾಹಿತಿ ತಿಳಿದಿಲ್ಲ. ಆದರೆ ಈ ವಿಡಿಯೋವನ್ನು ಎಡಿಟ್‌ ಮಾಡಲು ಅನುವು ಮಾಡಿಕೊಡುತ್ತದೆ ಎಂದು ತಿಳಿದುಬಂದಿದೆ.

Best Mobiles in India

English summary
WhatsApp Video message features will be available to users in a few days, through which video messages can be sent quickly to the desired people.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+