water crisis: ನಿಮ್ಮ ಏರಿಯಾದ ನೀರಿನ ಸಮಸ್ಯೆ ಬಗೆಹರಿಸಲಿವೆ ಈ ಆಪ್‌ಗಳು! BWSSB ಯ ಹೊಸ ಕ್ರಮ
ಬೆಂಗಳೂರಲ್ಲಿ (Bangalore) ಹಿಂದೆಂದೂ ಕಂಡು ಕೇಳರಿಯದ ನೀರಿನ ಸಮಸ್ಯೆ (water crisis) ತಲೆ ದೂರಿದೆ. ಈ ಸಂಬಂಧ ಸಂಬಂಧ ಪಟ್ಟ ಆಡಳಿತ ಸಂಸ್ಥೆಗಳು ವಿವಿಧ ರೀತಿಯಲ್ಲಿ ಈ ಸಮಸ್ಯೆಗಳಿಗೆ ಪರಿಹಾರ ನೀಡುವ ಕೆಲಸ ಮಾಡುತ್ತಿದ್ದು, ಇದರ ಭಾಗವಾಗಿ ಈಗ ಕೆಲವು ಆಪ್‌ಗಳನ್ನು ಲಾಂಚ್ ಮಾಡಲಾಗಿದೆ.
ಹೌದು, ನೀರಿನ ಸಮಸ್ಯೆಗೆ ಆಪ್‌ಗಳೇ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಿರಬಹುದು. ಅಲ್ಲದೆ ನೀರು ಇಲ್ಲ ಎಂದರೆ ಈ ಆಪ್‌ಗಳು ಏನಾದರೂ ಮಳೆ ಸುರಿಸುತ್ತವೆಯೇ ಎಂದೂ ಸಹ ನೀವು ಭಾವಿಸಬಹುದು. ಆದರೆ ಇದು ನಿಜ. ಈ ನಾಲ್ಕು ಆಪ್‌ಗಳು ನಿಮ್ಮ ನೀರಿನ ವಿವಿಧ ರೀತಿಯ ಸಮಸ್ಯೆಗಳನ್ನು ಈಡೇರಿಸಲಿವೆ. ಇದರ ಜೊತೆಗೆ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ನೀರನ್ನು ವಿವೇಚನಯುಕ್ತವಾಗಿ ಬಳಸುವಂತೆ ಬಳಕೆ ಮಾಡಬೇಕು ಎಂತಲೂ ಕೋರಿಕೊಂಡಿದ್ದಾರೆ. ಹಾಗಿದ್ರೆ, ಈ ಆಪ್‌ಗಳ ಮೂಲಕ ನೀರಿನ ಸಮಸ್ಯೆ ಬಗೆಹರಿಸಿಕೊಳ್ಳುವುದು ಹೇಗೆ ಅನ್ನೋ ಮಾಹಿತಿ ಇಲ್ಲಿದೆ ನೋಡಿ.

ನೀರಿನ ಸಮಸ್ಯೆ ಬಗೆಹರಿಸಲಿವೆ ಆಪ್: ಈಗಾಗಲೇ ರಾಜ್ಯ ಸರ್ಕಾರ ಸಾಕಷ್ಟು ಆಪ್‌ಗಳ ಮೂಲ ಜನರಿಗೆ ವಿವಿಧ ರೀತಿಯಲ್ಲಿ ಸಹಾಯ ಮಾಡುವ ಕೆಲಸ ಮಾಡುತ್ತಿದೆ. ಈ ನಡುವೆ ಈಗ ತಲೆದೂರಿರುವ ನೀರಿನ ಸಮಸ್ಯೆ ಪರಿಹಾರಕ್ಕೂ ಆಪ್ ಮೊರೆಹೋಗಲಾಗಿದ್ದು, ಬೆಂಗಳೂರಿನ ನೀರಿನ ಬಿಕ್ಕಟ್ಟನ್ನು ಪರಿಹರಿಸಲು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ನಾಲ್ಕು ಆಪ್‌ಗಳನ್ನು ಪ್ರಾರಂಭಿಸಿದೆ
ಪರಿಸರ ಜಲಸ್ನೇಹಿ, ಜಲ ಸಂರಕ್ಷಕ, ಅಂತರ್ಜಲ ಹಾಗೂ ಜಲಮಿತ್ರ ಆಪ್‌ಗಳನ್ನು (parisara Jalasnehi, Jala Samrakshak, Antharjala, and Jalamithra) ಲಾಂಚ್ ಮಾಡಲಾಗಿದ್ದು, ಈ ಸಂಬಂಧ BWSSB ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ಅವರು ಮಾಹಿತಿ ನೀಡಿದ್ದಾರೆ. ಅದರ ಪ್ರಕಾರ 'ಪರಿಸರ ಜಲಸ್ನೇಹಿ' ಆಪ್ ಒಳಚರಂಡಿ ಸಂಸ್ಕರಣಾ ಘಟಕಗಳಿಂದ (STPs) ಸಂಸ್ಕರಿಸಿದ ಒಳಚರಂಡಿಯನ್ನು ಮೇಲ್ವಿಚಾರಣೆ ಮಾಡುತ್ತದೆ, ಇದನ್ನು ಸಾರ್ವಜನಿಕರು ಕುಡಿಯುವುದನ್ನು ಹೊರತುಪಡಿಸಿ ಇತರ ಉದ್ದೇಶಗಳಿಗಾಗಿ ಬಳಸಬಹುದು. ಜೊತೆಗೆ ಈ ಆಪ್ ಅನ್ನು STP ಗಳನ್ನು ಸ್ಟ್ರೀಮ್ಲೈನ್ ಮಾಡಲು ಯೋಜಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಇದರೊಂದಿಗೆ ಅಗತ್ಯವಲ್ಲದ ಉದ್ದೇಶಗಳಿಗೆ ಕುಡಿಯುವ ನೀರನ್ನು ಬಳಕೆ ಮಾಡುವ ಜನರಿಗೆ ದಂಡ ವಿಧಿಸಲು 'ಜಲ ಸಂರಕ್ಷಕ' ಆಪ್ ಅನ್ನು ಬಳಕೆ ಮಾಡಲಾಗುತ್ತದೆ. ಇದರೊಂದಿಗೆ ಸಾರ್ವಜನಿಕರು ಬೋರ್‌ವೆಲ್‌ಗಳನ್ನು ಕೊರೆಯಲು ಅರ್ಜಿ ಸಲ್ಲಿಸಬಹುದು. ಇದರೊಂದಿಗೆ 'ಅಂತರ್ಜಲ' ಆಪ್ ಮೂಲಕ ನಿವಾಸಗಳು ನಿರಾಕ್ಷೇಪಣಾ ಪ್ರಮಾಣಪತ್ರವನ್ನು (ಎನ್‌ಒಸಿ) ಇಟ್ಟುಕೊಳ್ಳಬಹುದು. ಉಳಿದಂತೆ ನೀರಿನ ಸೋರಿಕೆ, ಚರಂಡಿ ಸಮಸ್ಯೆಗಳು ಮತ್ತು BWSSB ಯ ಇತರ ಕೆಲಸಗನ್ನು ಮೇಲ್ವಿಚಾರಣೆ ಮಾಡಲು 'ಜಲಮಿತ್ರ' ಆಪ್ ಅನ್ನು ಬಳಕೆ ಮಾಡಿಕೊಳ್ಳಬಹುದು ಎಂದು ಮಾಹಿತಿ ನೀಡಿದ್ದಾರೆ.
ಬೆಂಗಳೂರು ಭೀಕರ ಬರಗಾಲಕ್ಕೆ ಸಾಕ್ಷಿಯಾಗಿದೆ. ಆದರೂ ಸಹ ನಮ್ಮ ಸರ್ಕಾರವು ಎಲ್ಲಾ ನಾಗರೀಕರಿಗೆ ನೀರಿನ ಪೂರೈಕೆ ಬಗ್ಗೆ ಖಚಿತತೆ ನೀಡಲಿದೆ. ಈ ವೇಳೆ ನಾವು ನೀರನ್ನು ಎಚ್ಚರಿಕೆಯಿಂದ ಬಳಸುವುದು ಸಹ ಮುಖ್ಯವಾಗಿದೆ. ಈ ನಾಲ್ಕು ಹೊಸ ಆಪ್‌ಗಳು ಮಂಡಳಿಯು ನೀರನ್ನು ಹೆಚ್ಚು ಪರಿಣಾಮಕಾರಿಯಾಗಿ ನಿರ್ವಹಿಸಲು ಸಹಾಯ ಮಾಡುತ್ತದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

ಟ್ಯಾಪ್ ಏರೇಟರ್ ಕಡ್ಡಾಯ: ಈ ನಡುವೆ ಮಾರ್ಚ್ 31 ರೊಳಗೆ ಬೃಹತ್ ಬಳಕೆದಾರರಿಗೆ ನಲ್ಲಿಗಳಲ್ಲಿ ಏರೇಟರ್‌ಗಳನ್ನು ಅಳವಡಿಕೆ ಮಾಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ. ವಾಣಿಜ್ಯ ಸಂಸ್ಥೆಗಳು, ಅಪಾರ್ಟ್‌ಮೆಂಟ್‌ಗಳು, ರೆಸ್ಟೋರೆಂಟ್‌ಗಳು, ಐಷಾರಾಮಿ ಹೋಟೆಲ್‌ಗಳು, ಕೈಗಾರಿಕೆಗಳು ಮತ್ತು ಸಾರ್ವಜನಿಕ ಪ್ರದೇಶಗಳಲ್ಲಿ ಇದು ಕಡ್ಡಾಯವಾಗಿದೆ. ಇದರ ಜೊತಗೆ ಬೆಂಗೂರಿನ ನಿವಾಸಿಗಳಿಗೆ ಸಹ ಸ್ವಯಂಪ್ರೇರಿತವಾಗಿ ಏರೇಟರ್‌ಗಳನ್ನು ಅಳವಡಿಸಿಕೊಳ್ಳುವಂತೆ ಮನವಿ ಮಾಡಲಾಗಿದೆ. ಇದರಿಂದ ನೀರನ್ನು ಉಳಿತಾಯ ಮಾಡಬಹುದಾಗಿದೆ.
ಎಸಿ ನೀರು ಮರುಬಳಕೆಗೆ ಮನವಿ: ಈ ನಡುವೆ ಮಹೀಂದ್ರಾ ಗ್ರೂಪ್‌ನ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು ಎಸಿ ನೀರನ್ನು ಮರುಬಳಕೆ ಮಾಡುವ ವಿಧಾನವನ್ನು ಪ್ರದರ್ಶಿಸುವ ವಿಡಿಯೋವೊಂದನ್ನು ಶೇರ್ ಮಾಡುವ ಮೂಲಕ ಜನರಿಗೆ ಜಾಗೃತಿ ಮೂಡಿಸಿದ್ದಾರೆ. ಈ ವಿಡಿಯೋದನ್ನು ವ್ಯಕ್ತಿಯು ತಮ್ಮ ಎಸಿ ಘಟಕದಿಂದ ನೀರನ್ನು ಸಂರಕ್ಷಿಸಲು ಮತ್ತು ಮರುಬಳಕೆ ಮಾಡಲು ನವೀನ ವಿಧಾನವನ್ನು ಪ್ರದರ್ಶಿಸುತ್ತಿರುವುದನ್ನು ಕಾಣಬಹುದಾಗಿದೆ.
ಎಸಿಗೆ ಪೈಪ್ ಅನ್ನು ಜೋಡಿಸುವ ಮೂಲಕ ಮತ್ತು ಕೊನೆಯಲ್ಲಿ ಟ್ಯಾಪ್ ಅನ್ನು ಇನ್‌ಸ್ಟಾಲ್ ಮೂಲಕ ಸ್ವಚ್ಛಗೊಳಿಸುವ, ತೋಟಗಾರಿಕೆ ಮತ್ತು ಇತರ ಮನೆಯ ಅಗತ್ಯಗಳಿಗಾಗಿ ವಿವಿಧ ಉದ್ದೇಶಗಳಿಗಾಗಿ ಈ ನೀರನ್ನು ಬಳಕೆ ಮಾಡಿಕೊಳ್ಳಹುದು ಎಂದು ತಿಳಿಸಲಾಗಿದೆ. ಈ ವಿಧಾನ ಖಂಡಿತಾ ಬೆಂಗಳೂರಿಗರಿಗೆ ಅಗತ್ಯವಾಗಿದೆ.


Click it and Unblock the Notifications








