Subscribe to Gizbot

ಸುಳ್ಳು ಸುದ್ದಿಯನ್ನು ಹರಡದಂತೆ ತಡೆಯಲಿದೆ ವಾಟ್ಸ್‌ಆಪ್.!

Written By:

ಸುಳ್ಳು ಸುದ್ಧಿ ಹರಡುವುದನ್ನು ತಡೆಯಲು ವಾಟ್ಸ್‌ಆಪ್ ನೂತನ ಮಾರ್ಗಗಳನ್ನು ಕಂಡುಹಿಡಿಯಲು ಮುಂದಾಗಿದೆ ಎನ್ನಲಾಗಿದೆ. ಈಗಾಗಲೇ ಈ ಕಾರ್ಯವೂ ಶುರುವಾಗಿದೆ ಎಂಬ ಮಾಹಿತಿಯೂ ಲಭ್ಯವಾಗಿದೆ. ದೇಶದಲ್ಲಿ ಸೇರಿದಂತೆ ವಿಶ್ವದಲ್ಲಿ ವಾಟ್ಸ್‌ಆಪ್ ಬಳಕೆದಾರರ ಸಂಖ್ಯೆಯೂ ಏರುಗತಿಯಲ್ಲಿ ಸಾಗುತ್ತಿದ್ದು, ಇದೇ ಮಾದರಿಯಲ್ಲಿ ಸುಳ್ಳು ಸುದ್ಧಿಯನ್ನು ಹರಡುವವರ ಸಂಖ್ಯೆಯೂ ಹೆಚ್ಚಾಗಿದೆ.

ಸುಳ್ಳು ಸುದ್ದಿಯನ್ನು ಹರಡದಂತೆ ತಡೆಯಲಿದೆ ವಾಟ್ಸ್‌ಆಪ್.!

ಓದಿರಿ: ಹೋಟೆಲ್‌ ಬಿಲ್‌ನಲ್ಲಿ GST ಸೇರಿಸಿ ಪಾವತಿಸುವ ಮುನ್ನ ತಪ್ಪದೇ ಈ ಸ್ಟೋರಿ ಓದಿ.!

ಈಗಾಗಲೇ ಈ ಸೋಶಿಯಲ್ ಮೇಸೆಂಜಿಗ್ ಆಪ್‌ ಪ್ರಭಾವ ಮತ್ತು ವ್ಯಾಪ್ತಿಯೂ ತೀರಾ ವಿಸ್ತಾರವಾಗಿದ್ದು, ಇದರಿಂದಾಗಿ ಸಮಾಜದಲ್ಲಿ ಅಶಾಂತಿ ವಾತವರಣವೂ ನಿರ್ಮಾಣವಾಗುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ಇದರಿಂದಾಗಿ ಫೇಸ್‌ಬುಕ್ ಓಡೆತನದ ವಾಟ್ಸ್‌ಆಪ್ ಹೊಸ ಮಾದರಿಯಲ್ಲಿ ಚಿಂತನೆಯನ್ನು ನಡೆಸಲು ಮುಂದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಎನ್ಸ್ಕ್ರಿಪಟ್ ಮೇಸೆಜ್:

ಎನ್ಸ್ಕ್ರಿಪಟ್ ಮೇಸೆಜ್:

ವಾಟ್ಸ್‌ಆಪ್ ನಲ್ಲಿ ಮೇಸೆಜ್‌ಗಳು ಎನ್ಸ್ಕ್ರಿಪಟ್ ಆಗಿದ್ದು, ಈ ಕಾರಣಕ್ಕಾಗಿ ಕಳುಹಿಸಿದವರು ಮತ್ತು ಸ್ವೀಕರಿಸಿದವರನ್ನು ಬಿಟ್ಟು ಮೂರನೇ ವ್ಯಕ್ತಿ ಆ ಮೇಸೆಜ್ ಅನ್ನು ಓದಲು ಸಾಧ್ಯವಿಲ್ಲ ಈ ಹಿನ್ನಲೆಯಲ್ಲಿ ಸುಳ್ಳು ಸುದ್ದಿಯನ್ನು ತಡೆಯಲು ಹೆಚ್ಚಿನ ತ್ರಾಸವಾಗುತ್ತಿದೆ ಎನ್ನಲಾಗಿದೆ.

ಅರಿವು ಹೆಚ್ಚಿಸಲು ಚಿಂತನೆ:

ಅರಿವು ಹೆಚ್ಚಿಸಲು ಚಿಂತನೆ:

ಜನರಿಗೆ ವಾಟ್ಸ್‌ಆಪ್ ಪ್ರಭಾವನ್ನು ತಿಳಿಸುವ ಸಲುವಾಗಿ ಅದರ ಪರಿಣಾಮದ ಅರಿವೂ ಹೆಚ್ಚಿಸಲು ಚಿಂತನೆ ನಡೆಸಲಾಗಿದೆ. ಸುಳ್ಳು ಸುದ್ದಿಯನ್ನು ಹರಡದಂತೆ ಅರಿವೂ ಮೂಡಿಸಲು ಕ್ರಮ ಕೈಗೊಳ್ಳಲು ಮುಂದಾಗಲಿದೆ ಎನ್ನಲಾಗಿದೆ.

ಈಗಾಗಲೇ ಕಾನೂನು ಜಾರಿಯಲ್ಲಿದೆ:

ಈಗಾಗಲೇ ಕಾನೂನು ಜಾರಿಯಲ್ಲಿದೆ:

ಸದ್ಯ ನಮ್ಮ ದೇಶದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಸುಳ್ಳು ಸುದ್ದಿಯನ್ನು ಹರಡುವರಿಗೆ ಶಿಕ್ಷೆಯನ್ನು ನೀಡುವ ಕಾನೂನು ಜಾರಿಯಲ್ಲಿದೆ. ಈ ಮೂಲಕ ಸುಳ್ಳು ಸುದ್ದಿಯನ್ನು ತಡೆಯುವ ಕಾರ್ಯವೂ ನಡೆಯುತ್ತಿದೆ. ಇದರೊಂದಿಗೆ ವಾಟ್ಸ್‌ಆಪ್ ಸಹ ಅನೇಕ ಕ್ರಮಗಳನ್ನು ಕೈಗೊಳ್ಳಲಿದೆ.

ಕೃತಕ ಬುದ್ಧಿಮತ್ತೆ:

ಕೃತಕ ಬುದ್ಧಿಮತ್ತೆ:

ಕೃತಕ ಬುದ್ಧಿಮತ್ತೆಯ ಸಹಾಯದಿಂದ ವಾಟ್ಸ್‌ಆಪ್ ಸುಳ್ಳು ಸುದ್ದಿಯನ್ನು ತಡೆಯುವ ಕಾರ್ಯಕ್ಕೆ ಮುಂದಾಗಲಿದೆ ಎನ್ನುವ ಮಾಹಿತಿಯೂ ದೊರೆಯತಿದೆ. ಶೀಘ್ರವೇ ಈ ಕಾರ್ಯದಲ್ಲಿ ಯಶಸ್ಸು ಸಾಧಿಸಲಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
WhatsApp is working to seek ways to curb fake news dispersion in India. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot