ಹೋಟೆಲ್‌ ಬಿಲ್‌ನಲ್ಲಿ GST ಸೇರಿಸಿ ಪಾವತಿಸುವ ಮುನ್ನ ತಪ್ಪದೇ ಈ ಸ್ಟೋರಿ ಓದಿ.!

GST ಬಗ್ಗೆ ಜನ ಸಾಮಾನ್ಯರಿಗೆ ಹೆಚ್ಚಿನ ಮಾಹಿತಿಯೂ ಇಲ್ಲವಾದ ಕಾರಣದಿಂದಾಗಿ ಜನರನ್ನು ಮರಳು ಮಾಡುವ ಪ್ರಕರಣಗಳು ಹೆಚ್ಚಾಗಿದೆ.

|

GST ಜಾರಿಯಾದ ಬಳಿಕ ದೇಶದಲ್ಲಿ ಹಗಲು ದರೋಡೆ ಹೆಚ್ಚಾಗಿದೆ. ಅದರಲ್ಲೂ ಕಣ್ಣಿಗೆ ಕಾಣುವಂತೆ ಜನರ ಜೇಬಿಗೆ ಹತ್ತರಿ ಹಾಕುವ ಕೆಲಸವನ್ನು ಹೋಟೆಲ್ ಉದ್ಯಮವು ಹೆಚ್ಚಿನ ಮಟ್ಟದಲ್ಲಿ ಮಾಡುತ್ತಿದೆ ಎನ್ನಲಾಗಿದೆ. GST ಬಗ್ಗೆ ಜನ ಸಾಮಾನ್ಯರಿಗೆ ಹೆಚ್ಚಿನ ಮಾಹಿತಿಯೂ ಇಲ್ಲವಾದ ಕಾರಣದಿಂದಾಗಿ ಜನರನ್ನು ಮರಳು ಮಾಡುವ ಪ್ರಕರಣಗಳು ಹೆಚ್ಚಾಗಿದೆ.

ಹೋಟೆಲ್‌ ಬಿಲ್‌ನಲ್ಲಿ GST ಸೇರಿಸಿ ಪಾವತಿಸುವ ಮುನ್ನ ತಪ್ಪದೇ ಈ ಸ್ಟೋರಿ ಓದಿ.!

ಓದಿರಿ: ಗೂಗಲ್ -ಶಿಯೋಮಿ ಜುಗಲ್ ಬಂದಿ: ರೂ. 2000ಕ್ಕೆ ಬೊಂಬಾಟ್ ಸ್ಮಾರ್ಟ್‌ಫೋನ್..!

GST ವ್ಯಾಪ್ತಿಗೆ ಬಾರದೆ ಇದ್ದರೂ ಸಹ ಹೋಟೆಲ್‌ಗಳು ಜನ ಸಾಮಾನ್ಯರಿಂದ ಹೆಚ್ಚಿನ ಹಣವನ್ನು ವಸೂಲಿ ಮಾಡುತ್ತಿವೆ. ಇದನ್ನು ಹೇಗೆ ಕಂಡುಹಿಡಿಯುವುದು ಮತ್ತು ಅಗತ್ಯವಿಲ್ಲದೇ ವಿಧಿಸುವ GSTಯನ್ನು ವಿರೋಧಿಸುವುದು ಹೇಗೆ, ಈ ಕುರಿತು ದೂರು ಸಲ್ಲಿಸುವುದು ಹೇಗೆ ಮುಂತಾದ ವಿಚಾರಗಳ ಬಗ್ಗೆ ಮಾಹಿತಿ ಇಲ್ಲಿದೆ.

GST- ನೋಂದಣಿಯಾಗಿದೆಯೇ ಪ್ರಶ್ನಿಸಿ-ತಿಳಿದುಕೊಳ್ಳಿ:

GST- ನೋಂದಣಿಯಾಗಿದೆಯೇ ಪ್ರಶ್ನಿಸಿ-ತಿಳಿದುಕೊಳ್ಳಿ:

ಇನ್ನು ಮುಂದೆ ಯಾವುದೇ ಹೋಟೆಲ್‌ಗೆ ಹೋದ ಸಂದರ್ಭದಲ್ಲಿ ನೀವು ಸುಮ್ಮನೆ GST ಕಟ್ಟಬೇಕಾದ ಅವಶ್ಯಕತೆ ಇಲ್ಲ. ಮೊದಲು ಆ ಹೋಟೆಲ್ GST ವ್ಯಾಪ್ತಿಗೆ ಒಳಪಟ್ಟಿದೆಯೇ ಎಂಬುದನ್ನು ನೋಡಿ. ನಿಮಗೆ ನೀಡಿರುವ ಬಿಲ್‌ನಲ್ಲಿ GST ನಂಬರ್ ಹಾಕಿರುತ್ತಾರೆ. ಅದು ಇಲ್ಲವಾದರೆ ನೀವು GST ದರವನ್ನು ಪಾವತಿಸುವ ಅವಶ್ಯಕತೆ ಇಲ್ಲ.

GST- ನೋಂದಣಿ ಸಂಖ್ಯೆ ಸರಿಯಾಗಿದೆಯೇ ಇಲ್ಲವೇ ಆನ್‌ಲೈನಿನಲ್ಲಿ ಪರೀಕ್ಷಿಸಿ;

GST- ನೋಂದಣಿ ಸಂಖ್ಯೆ ಸರಿಯಾಗಿದೆಯೇ ಇಲ್ಲವೇ ಆನ್‌ಲೈನಿನಲ್ಲಿ ಪರೀಕ್ಷಿಸಿ;

ಅಲ್ಲದೇ ಕೆಲವು ಹೋಟೆಲ್‌ಗಳಲ್ಲಿ ನೀಡುವ ಬಿಲ್‌ನಲ್ಲಿ ನಕಲಿ GST ನಂಬರ್ ಅನ್ನು ಹಾಕಿರುವ ಸಾಧ್ಯತೆ ಇದೆ ಹಾಗಾಗಿ ನೀವು ಅದನ್ನು ಸಹ ಪರೀಕ್ಷಿಸಬಹುದಾಗಿದೆ. ಅದಕ್ಕಾಗಿಯೇ ಕೇಂದ್ರ ಸರಕಾರವು ವೆಬ್‌ಸೈಟ್ ವೊಂದನ್ನು ತೆರೆದಿದೆ. https://services.gst.gov.in/services/searchtp ಈ ತಾಣಕ್ಕೆ ಭೇಟಿ ನೀಡಿ GST ನಂಬರ್ ದಾಖಲಿಸಿದರೆ ಅಲ್ಲಿ ಆ ಹೋಟೆಲಿನ ಸಂಪೂರ್ಣ ಮಾಹಿತಿಯೂ ದೊರೆಯಲಿದೆ.

ದೂರು ಸಲ್ಲಿಸಬಹುದು- ಹಣವನ್ನು ಪಾವತಿಸದೆ ಇರಬಹುದು:

ದೂರು ಸಲ್ಲಿಸಬಹುದು- ಹಣವನ್ನು ಪಾವತಿಸದೆ ಇರಬಹುದು:

ಒಂದು ವೇಳೆ ಅಲ್ಲಿ ಯಾವುದೇ ಮಾಹಿತಿ ಇಲ್ಲವಾದರೆ ನೀವು ದೂರು ಸಲ್ಲಿಸಬಹುದು ಮತ್ತು ಹೆಚ್ಚಿನ ಹಣವನ್ನು ಪಾವತಿಸದೆ ಇರಬಹುದು. ನೀವು ದೂರು ಸಲ್ಲಿಸುವ ಸಲುವಾಗಿ [email protected] ಈ ವಿಳಾಸಕ್ಕೆ ಇಮೇಲ್ ಮಾಡಬಹುದು. ಅಲ್ಲದೇ 0120-4888999 , 011-23370115 ಈ ಸಂಖ್ಯೆಗೆ ಕರೆ ಮಾಡಿ ಸಹ ದೂರು ನೀಡಬಹುದು.

ಹೋಟೆಲ್‌ಗಳಲ್ಲಿ ವಿಧಿಸುವ GST ದರಗಳೇಷ್ಟು?

ಹೋಟೆಲ್‌ಗಳಲ್ಲಿ ವಿಧಿಸುವ GST ದರಗಳೇಷ್ಟು?

ಕೇಂದ್ರ ಸರಕಾರವೂ ಜಾರಿಗೆ ತಂದಿರುವ GST ಪ್ರಕಾರ

  • ಎಸಿ ಇಲ್ಲದ, ಆಲ್ಕೋಹಾಲ್ ಮಾರಾಟ ಮಾಡದ ಹೋಟೆಲ್‌ಗಳಿಗೆ 12%
  • ಎಸಿ ಜೊತೆಗೆ ಆಲ್ಕೋಹಾಲ್ ಮಾರಾಟ ಮಾಡುವ ಹೋಟೆಲ್ ಗಳಿಗೆ 18%
  • ಪಂಚತಾರ ಹೋಟೆಲ್‌ಗಳಿಗೆ 28% GSTಯನ್ನು ವಿಧಿಸುತ್ತಿದೆ.

Best Mobiles in India

Read more about:
English summary
To check whether a business is GST-registered use the Register of GST-registered Businesses . You may search by name or tax reference number of the business. to know more visit kannnada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X