ಬೆಂಗಳೂರಿಗರೇ ಈ ಆಪ್ ಹಾಕಿಕೊಳ್ಳಿ: ಮಳೆ ಬಗ್ಗೆ ಮೊದಲೇ ತಿಳಿದುಕೊಳ್ಳಿ..!
ನಿಮ್ಮ ಕೈನಲ್ಲಿರುವ ಸ್ಮಾರ್ಟ್‌ಫೋನ್ ನಲ್ಲಿ ವೆದರ್ ಲೈವ್ ಫ್ರೀ ಆಪ್ ಇನ್ಸ್ಟಾಲ್ ಮಾಡಿಕೊಳ್ಳಿ.
ಇಂದಿನ ದಿನದಲ್ಲಿ ಬೆಂಗಳೂರಿನಲ್ಲಿ ವಾತಾವರಣ ಹೇಗಿರುತ್ತದೆ ಎಂದು ಊಹಿಸಲು ಸಾಧ್ಯವಿಲ್ಲ. ಬೆಳಿಗ್ಗೆ ಮಳೆ ಬಂದರೆ ಮಧ್ಯಾಹ್ನ ಬಿಸಿಲು ಸಂಜೆ ಮತ್ತೆ ಮಳೆ. ಈ ಹಿನ್ನಲೆಯಲ್ಲಿ ವಾತಾವರಣದ ಬದಲಾವಣೆಯನ್ನು ತಿಳಿದುಕೊಳ್ಳುವುದು ಅಗತ್ಯವಾಗಿದೆ.

ಓದಿರಿ: ಯೂಟ್ಯೂಬಿಗೆ ಸೆಡ್ಡು: ಫೇಸ್‌ಬುಕ್ ವಾಚ್ ವಿಡಿಯೋ ಸೇವೆ ಲಾಂಚ್: ಏನೀದರ ವಿಶೇಷತೆ..?
ಮನೆಯಿಂದ ಹೊರಗೆ ಹೋದ ಮೇಲೆ ಧಾರಾಕಾರವಾಗಿ ಮಳೆ ಬಂದರೆ ಕಷ್ಟ ಈ ಹಿನ್ನಲೆಯಲ್ಲಿ ನಿಮ್ಮ ಕೈನಲ್ಲಿರುವ ಸ್ಮಾರ್ಟ್‌ಫೋನ್ ನಲ್ಲಿ ವೆದರ್ ಲೈವ್ ಫ್ರೀ ಆಪ್ ಇನ್ಸ್ಟಾಲ್ ಮಾಡಿಕೊಳ್ಳಿ. ಇದರಿಂದ ನೀವು ಮನೆಯಿಂದ ಹೊರಗೆ ಹೋಗುವ ಮೊದಲೇ ಮಳೆ ಬರುವುದೇ ಇಲ್ಲವೇ ಎಂಬುದನ್ನು ತಿಳಿಯಬಹುದು.

ಸೂರ್ಯೋದಯ-ಸೂರ್ಯಾಸ್ತದ ಸಮಯ:
ಈ ಆಪ್ ನಲ್ಲಿ ನೀವು ಸೂರ್ಯೋದಯ-ಸೂರ್ಯಾಸ್ತದ ಸಮಯವನ್ನು ತಿಳಿದುಕೊಳ್ಳಬಹುದಾಗಿದೆ. ಇದು ನಿಮ್ಮ ದಿನ ನಿತ್ಯದ ಕಾರ್ಯಗಳ ಮೇಲೆ ಪ್ರಭಾವ ಬೀರಲಿದೆ.

ಮಳೆ ಬರುವಿಕೆಯ ಮಾಹಿತಿ:
ಇದಲ್ಲದೇ ನಿಮ್ಮ ಏರಿಯಾದಲ್ಲಿ ಮಳೆ ಬರುವ ಬಗ್ಗೆ ಮಾಹಿತಿಯನ್ನು ನಿಖರವಾಗಿ ತಿಳಿಸಲಿದೆ. ಇದರಿಂದ ನಿಮ್ಮ ಕಾರ್ಯಕ್ರಮಗಳನ್ನು ರೂಪಿಸಿಕೊಳ್ಳಲು ಸಹಾಯಕಾರಿಯಾಗಲಿದೆ.

ಅನಿಮೇಷನ್-ಗ್ರಾಫಿಕ್ಸ್:
ವಾತಾವರಣ ಮಾಹಿತಿಯನ್ನು ಅನಿಮೇಷನ್ ಮತ್ತು ಗ್ರಾಫಿಕ್ಸ್ ನಿಂದ ತೋರಿಸಲಿದ್ದು, ಬಹುಬೇಗನೆ ನಿಮಗೆ ಅರ್ಥವಾಗಲಿದೆ. ಇದನ್ನು ಬಳಕೆ ಮಾಡಿಕೊಳ್ಳುವುದು ಸುಲಭವಾಗಿದೆ.


Click it and Unblock the Notifications