ಯೂಟ್ಯೂಬಿಗೆ ಸೆಡ್ಡು: ಫೇಸ್‌ಬುಕ್ ವಾಚ್ ವಿಡಿಯೋ ಸೇವೆ ಲಾಂಚ್: ಏನೀದರ ವಿಶೇಷತೆ..?
ಫೇಸ್‌ಬುಕ್‌ನಲ್ಲಿ ನೂತನವಾಗಿ ಶುರುವಾಗಿದ್ದ ವಿಡಿಯೋ ಸೇವೆಯೂ ಹೆಚ್ಚಿನ ಖ್ಯಾತಿಯನ್ನು ಪಡೆದಿದ್ದು, ಈ ಹಿನ್ನಲೆಯಲ್ಲಿ ಹೊಸದಾಗಿ ವಾಚ್ ವಿಡಿಯೋ ಸೇವೆಯನ್ನು ಬಿಡುಗಡೆ ಮಾಡಲು ಮುಂದಾಗಿದೆ.
ಫೇಸ್‌ಬುಕ್ ದಿನೇ ದಿನೇ ತನ್ನ ಬಳಕೆದಾರರ ಸಂಖ್ಯೆಯನ್ನು ಹೆಚ್ಚಿಕೊಳ್ಳುತ್ತಿದ್ದು, ಇದೇ ಮಾದರಿಯಲ್ಲಿ ಫೇಸ್‌ಬುಕ್‌ನಲ್ಲಿ ನೂತನವಾಗಿ ಶುರುವಾಗಿದ್ದ ವಿಡಿಯೋ ಸೇವೆಯೂ ಹೆಚ್ಚಿನ ಖ್ಯಾತಿಯನ್ನು ಪಡೆದಿದ್ದು, ಈ ಹಿನ್ನಲೆಯಲ್ಲಿ ಹೊಸದಾಗಿ ವಾಚ್ ವಿಡಿಯೋ ಸೇವೆಯನ್ನು ಬಿಡುಗಡೆ ಮಾಡಲು ಮುಂದಾಗಿದೆ.

ಓದಿರಿ: ಭಾರತೀಯರ ದೇಶಪ್ರೇಮಕ್ಕೆ ಬೆಲೆ ತೆತ್ತ ವೀವೊ & ಒಪ್ಪೋ: ಭಾರೀ ನಷ್ಟಕ್ಕೆ ಗುರಿಯಾದ ಚೀನಾ ಕಂಪನಿಗಳು ಮಾಡಿದ್ದೇನು?
ಈಗಾಗಲೇ ಈ ಸೇವೆಯನ್ನು ಅಮೆರಿಕಾರದಲ್ಲಿ ಜಾರಿಗೆ ತಂದಿದ್ದು, ಯೂಟ್ಯೂಬಿಗೆ ಸೆಡ್ಡು ಹೊಡೆಯುವ ಸಲುವಾಗಿಯೇ ಈ ಸೇವೆಯನ್ನು ಫೇಸ್‌ಬುಕ್ ಆರಂಭಿಸುತ್ತಿದೆ ಎನ್ನಲಾಗಿದೆ. ಅಲ್ಲದೇ ಹೆಚ್ಚಿನ ಆದಾಯವನ್ನು ನಿರೀಕ್ಷಿಸಲು ಮುಂದಾಗಿದೆ.

ಯೂಟ್ಯೂಬ್ ಮಾದರಿಯಲ್ಲಿ ಕಾರ್ಯಚರಣೆ:
ಯೂಟ್ಯೂಬಿಗೆ ಹೆಚ್ಚಿನ ಮಂದಿ ತಮ್ಮ ವಿಡಿಯೋಗಳನ್ನು ಆಪ್‌ಲೋಡ್ ಮಾಡುತ್ತಾರೆ ಎಂದರೆ ಅಲ್ಲಿಂದ ಹೆಚ್ಚಿನ ಆದಾಯದ ನಿರೀಕ್ಷೆ ಇದೆ. ಈ ಸಲುವಾಗಿ ಫೇಸ್‌ಬುಕ್ ಸಹ ತನ್ನ ವಿಡಿಯೋಗಳಿಗೆ ಹಣವನ್ನು ನೀಡಲು ಮುಂದಾಗಿದೆ.

ವಿಡಿಯೋ ನೋಡುತ್ತಲೇ ಸ್ನೇಹಿತರೊಂದಿಗೆ ಚಾಟಿಂಗ್:
ಫೇಸ್‌ಬುಕ್ ಈಗಾಗಲೆ ಟಿವಿ ಶೋಗಳನ್ನು ತನ್ನ ವಾಚ್ ವಿಡಿಯೋ ಸೇವೆಯಲ್ಲಿ ನೀಡಲಿದೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ನೀವು ವಿಡಿಯೋ ನೋಡುತ್ತಲೆ ಆ ವಿಡಿಯೋ ಕುರಿತು ನಿಮ್ಮ ಸ್ನೇಹಿತರೊಂದಿಗೆ ಅನಿಸಿಕೆಯನ್ನು ಹಂಚಿಕೊಳ್ಳಬಹುದು. ದೂರದಲ್ಲಿ ಇದ್ದರು ಇಬ್ಬರು ಒಟ್ಟಾಗಿ ವಿಡಿಯೋ ನೋಡಿದ ಅನುಭವ ಪಡೆಯಬಹುದು.

ವಿಡಿಯೋ ಜೊತೆಗೆ ಜಾಹಿರಾತು:
ಫೇಸ್‌ಬುಕ್ ಆದಾಯಗಳಿಕೆಗೆ ತನ್ನ ವಿಡಿಯೋ ಮಧ್ಯದಲ್ಲಿ ಜಾಹಿರಾತುಗಳನ್ನು ಸೇರಿಸಲು ಮುಂದಾಗಿದೆ. ಇದರಿಂದ ಬರುವ ಆದಾಯದಲ್ಲಿ ವಿಡಿಯೋ ಆಪ್‌ಲೋಡ್ ಮಾಡಿದವರಿಗೆ ಹಣವನ್ನು ಸಂದಾಯ ಮಾಡಲಿದೆ.

ಈಗಾಗಲೇ ಅನೇಕ ಟಿವಿ ನೆಟ್‌ವರ್ಕ್ ನೊಂದಿಗೆ ಮಾತುಕತೆ:
ಫೇಸ್‌ಬುಕ್ ತನ್ನ ವಾಚ್ ವಿಡಿಯೋದಲ್ಲಿ ಟಿವಿ ಶೋಗಳನ್ನು ಪ್ರಸಾರ ಮಾಡಲು ಈಗಾಗಲೇ ವಿಶ್ವದ ಪ್ರಮುಖ ನೆಟ್‌ವರ್ಕ್ ಗಳೊಂದಿಗೆ ಮಾತುಕತೆಯನ್ನು ನಡೆಸಿದೆ ಎನ್ನಲಾಗಿದೆ.


ಶೀಘ್ರವೇ ಭಾರತದಲ್ಲಿಯೂ ಲಾಂಚ್:
ಭಾರತದಲ್ಲಿ ಜಿಯೋ ಸೇವೆಯೂ ಆರಂಭವಾದ ನಂತರದಲ್ಲಿ 4G ಡೇಟಾ ವಿಶ್ವದಲ್ಲೇ ಅತೀ ಕಡಿಮೆ ಬೆಲೆಗೆ ದೊರೆಯುತ್ತಿದ್ದು, ಈ ಹಿನ್ನಲೆಯಲ್ಲಿ ವಿಡಿಯೋ ನೋಡುವವರ ಸಂಖ್ಯೆಯೂ ಅಧಿಕವಾಗುತ್ತಿದೆ. ಈ ಹಿನ್ನಲೆಯಲ್ಲಿ ಫೇಸ್‌ಬುಕ್ ಯನ್ನ ಹೊಸ ಸೇವೆಯನ್ನು ಲಾಂಚ್ ಮಾಡಲು ಇದೇ ಸರಿಯಾದ ಸಮಯ ಎಂದು ತೀರ್ಮಾನಿಸಿದ್ದು, ಶೀಘ್ರವೇ ಸೇವೆಯನ್ನು ಲಾಂಚ್ ಮಾಡಲಿದೆ.


Click it and Unblock the Notifications








