Just In
Don't Miss
- Movies
ನಿತ್ಯ ರಾಮ್ 'ನಟಿ' ಅನ್ನೋದೇ ಭಾವಿ ಪತಿ ಗೌತಮ್ ಗೆ ಗೊತ್ತಿರಲಿಲ್ಲ.! ಅಸಲಿಗೆ ಯಾರೀತ.?
- News
ಪಶುವೈದ್ಯೆ ಕೊಂದವರನ್ನು ಎನ್ ಕೌಂಟರ್ ಮಾಡಿದ್ದು ಕನ್ನಡಿಗ
- Sports
ಪುರುಷರ ಏಕದಿನಕ್ಕೆ ಮೊದಲ ಮಹಿಳಾ ರೆಫರಿಯಾಗಿ ಇತಿಹಾಸ ಬರೆದ ಲಕ್ಷ್ಮೀ!
- Travel
ಲಕ್ಷದ್ವೀಪಕ್ಕೆ ಪ್ರವಾಸ ಹೋಗುವವರಿದ್ದೀರಾ? ಈ ಸಂಗತಿಗಳ ಬಗ್ಗೆ ಎಚ್ಚರಿಕೆ ಇರಲಿ
- Automobiles
ಕಿಯಾ ಕಾರ್ನಿವಾಲ್ ಎಂಪಿವಿ ಖರೀದಿಗಾಗಿ ಬುಕ್ಕಿಂಗ್ ಶುರು?
- Lifestyle
ಶುಕ್ರವಾರವಾದ ದಿನ ಭವಿಷ್ಯ 6-12-2019
- Finance
ವಿಶ್ವದ ಬೃಹತ್ ಕಂಪನಿಗಳನ್ನು ಮುನ್ನಡೆಸುತ್ತಿರುವ ಟಾಪ್ 10 ಭಾರತೀಯರು
- Education
ಅರಣ್ಯ ಇಲಾಖೆಯಲ್ಲಿ ಕಾನೂನು ಸಲಹೆಗಾರ ಹುದ್ದೆಗೆ ಅರ್ಜಿ ಆಹ್ವಾನ...ತಿಂಗಳಿಗೆ 60,000/-ರೂ ವೇತನ
ಭೀಮ್ ಆಪ್ ಬಳಸುವುದು ಹೇಗೆ..? ಯಾವ ಬ್ಯಾಂಕುಗಳು ಸಪೋರ್ಟ್ ಮಾಡುತ್ತವೆ..?
ದೇಶದಲ್ಲಿ ನೋಟು ನಿಷೇಧದ ಬಿಸಿಯು ಜನರನ್ನು ಡಿಹಿಟಲ್ ವ್ಯವಹಾರದ ಕಡೆಗೆ ಒಲವು ಮೂಡಿಸುವಂತೆ ಮಾಡಿದ್ದು, ಕೇಂದ್ರ ಸರಕಾರವು ಸಹ ಈ ನಿಟ್ಟಿನಲ್ಲಿ ಜನಮಾನ್ಯರಿಗೆ ಡಿಜಿಟಲ್ ಬ್ಯಾಂಕಿಂಗ್ ಅನ್ನು ಸರಳಿಕೃತಗೊಳಿಸಲು ಸಾಕಷ್ಟು ಯತ್ನ ನಡೆಸುತ್ತಿದೆ. ಈ ಹಿನ್ನಲೆಯಲ್ಲಿ ಮೊಬೈಲ್ ಬ್ಯಾಂಕಿಂಗ್ ಹೆಚ್ಚಿಸುವ ಸಲುವಾಗಿ ಭೀಮ್ ಆಪ್ ಬಿಡುಗಡೆಗೊಂಡಿದೆ.
ಡಿಜಿಟಲ್ ಬ್ಯಾಂಕಿಗ್ ಪ್ರೋತ್ಸಾಹಕ್ಕೆ ಬಿಡುಗಡೆ ಆಯ್ತು 'ಭೀಮ್' ಆಪ್
ಮೊಬೈಲ್ ಮೂಲಕ ಹಣ ಪಾವತಿ ಮತ್ತು ಸ್ವೀಕೃತಿ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಮಾರುಕಟ್ಟೆಯಲ್ಲಿ ಮೊಬೈಲ್ ವಾಲೆಟ್ ಗಳ ಬೇಡಿಕೆ ಹೆಚ್ಚಾಗಿದ್ದು, ಪ್ರತಿಯೊಂದು ಬ್ಯಾಂಕುಗಳು ತಮ್ಮದೇ ಆದ ಆಪ್ ಗಳನ್ನು ಬಿಡುಗಡೆ ಮಾಡುತ್ತಿದ್ದು, ಬೇರೆ ಬೇರೆ ಕಂಪನಿಗಳೂ ವಾಲೆಟ್ ಆಪ್ ಗಳನ್ನು ಪರಿಚಯಿಸುತ್ತಿದ್ದಾರೆ. ಇವೆಲ್ಲವೂಗಳಿಗಿಂತ ಭಿನ್ನವಾಗಿ ಹೊಸ ಮಾದರಿಯಲ್ಲಿ ಭೀಮ್ ಆಪ್ ಬಿಡುಗಡೆಯಾಗಿದೆ.

ಏನೀದು ಭೀಮ್ ಆಪ್ ?
ಮುಂದಿನ ದಿನಗಳಲ್ಲಿ ಭೀಮ್ ಆಪ್ ಡಿಜಿಟಲ್ ಪೇಮೆಂಟ್ ವಿಚಾರದಲ್ಲಿ ಬಹು ಮುಖ್ಯ ಪಾತ್ರವನ್ನು ವಹಿಸುವುದರಲ್ಲಿ ಯಾವುದೇ ಸಂಶಯವಿಲ್ಲ. ಈ ಭೀಮ್ ಆಪ್ ನಲ್ಲಿ ಹಣವನ್ನು ಕಳುಹಿಸಬಹುದು ಮತ್ತು ಹಣವನ್ನು ಪಡೆಯಲುಬಹುದಾಗಿದೆ. ಇದು ನಿಮ್ಮ ಬ್ಯಾಂಕಿನ ಆಪ್ ರೀತಿಯಲ್ಲೇ ಕಾರ್ಯ ನಿರ್ವಹಿಸಲಿದ್ದು, ಮೊಬೈಲ್ ವಾಲೆಟ್ ಗಳ ಮಾದರಿಯಲ್ಲಿ ಮೊದಲೇ ಹಣ ತುಂಬಿ ನಂತರ ಬಳಸುವ ಅವಶ್ಯಕತೆ ಇಲ್ಲ. ಅಲ್ಲದೇ ವಾಲೆಟ್ ನಿಂದ ಮತ್ತೆ ನಿಮ್ಮ ಖಾತೆಗೆ ಹಣವನ್ನು ವರ್ಗಹಿಸುವ ತಲೆ ನೋವು ಇದರಲ್ಲಿಲ್ಲ. ಪಡೆದ ಮತ್ತು ನೀಡಿದ ಎರಡು ವ್ಯವಹಾರ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಯಿಂದಲೇ ನಡೆಯಲಿದೆ.

ಭೀಮ್ ಆಪ್ ಡೌನ್‌ಲೋಡ್ ಮಾಡಿಕೊಳ್ಳುವುದು ಹೇಗೆ..?
ಆಂಡ್ರಾಯ್ಡ್ ಬಳಕೆದಾರರು ಈ ಆಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಲು ಗೂಗಲ್ ಪ್ಲೇ ಸ್ಟೋರಿನಲ್ಲಿರುವ ನ್ಯಾಷಿನಲ್ ಪೇಮೆಂಟ್ ಕಾರ್ಪೋರೇಷನ್ ಆಫ್ ಇಂಡಿಯಾ ಗೆ ಭೇಟಿ ನೀಡಬೇಕು. ಅಲ್ಲಿ ಈ ಆಪ್ ಲಭ್ಯವಿದ್ದು, ಅಲ್ಲಿಂದ ನೇರವಾಗಿ ನಿಮ್ಮ ಪೋನ್‌ಗೆ ಆಪ್ ಡೌನ್‌ಲೋಡ್ ಮಾಡಿಕೊಳ್ಳಬಹುದು.

ಸದ್ಯ ಐಪೋನ್ ಬಳಕೆದಾರರಿಗೆ ಈ ಆಪ್ ಲಭ್ಯವಿಲ್ಲ
ಇನ್ನು ಅಭಿವೃದ್ಧಿ ಹಂತದಲ್ಲಿರುವ ಭೀಮ್ ಆಪ್ ಕೇವಲ ಆಂಡ್ರಾಯ್ಡ್ ಬಳಕೆದಾರರಿಗೆ ಮಾತ್ರವೇ ಮುಕ್ತವಾಗಿದ್ದು, ಐಪೋನ್ ಬಳಕೆದಾರರು ಶೀಘ್ರವೇ ಈ ಆಪ್ ಬಳಸುವ ಅವಕಾಶ ಪಡೆಯಲಿದ್ದಾರೆ ಎನ್ನಲಾಗಿದೆ.

ಭೀಮ್ ಆಪ್ ಬಳಸುವುದು ಹೇಗೆ?
ಗೂಗಲ್ ಪ್ಲೇ ಸ್ಟೋರಿನಿಂದ ಭೀಮ್ ಆಪ್ ಡೌನ್‌ಲೋಡ್ ಮಾಡಿದ ನಂತರ ಆಪ್ ನಲ್ಲಿ ನಿಮ್ಮ ಬ್ಯಾಂಕ್ ಆಕೌಂಟ್ ಅನ್ನು ರಿಜಿಸ್ಟರ್ ಮಾಡಬೇಕಿದೆ. ನಂತರ ಯುಪಿಐ ಪಿನ್ ನೀಡಬೇಕಿದೆ. ನಂತರ ಮೊಬೈಲ್ ನಂಬರ್ ಅನ್ನು ನಿಮ್ಮ ಪೇಮೆಂಟ್ ವಿಳಸವಾಗಿ ನೀಡಬೇಕಿದ್ದು, ನಂತರ ಹಣ ಪಾವತಿ ಮತ್ತು ಸ್ವೀಕರಿಸಬಹುದಾಗಿದೆ, ಪೋನ್ ನಂಬರ್ ಶೇರ್ ಮಾಡಲು ಕ್ಯೂಆರ್ ಕೋಡ್ ಸಹ ದೊರೆಯಲಿದೆ.

ಫೀಚರ್ ಪೋನಿನಲ್ಲಿ ಭೀಮ್ ಆಪ್ ಬಳಸುವುದು ಹೇಗೆ..?
ಸ್ಮಾರ್ಟ್ ಪೋನ್‌ನಲ್ಲದೇ ಭೀಮ್ ಆಪ್ ಅನ್ನು ಯುಎಸ್‌ಎಸ್‌ಡಿ ಮೂಲಕ ಫೀಚರ್ ಪೋನಿನಲ್ಲಿಯೂ ಈ ಆಪ್ ಬಳಸಬಹುದಾಗಿದೆ. *99# ಡಯಲ್ ಮಾಡುವ ಮೂಲಕ ಈ ಸೇವೆಯನ್ನು ಪಡೆಯಬಹುದಾಗಿದೆ.

ಯಾವ ಯಾವ ಬ್ಯಾಂಕುಗಳು ಭೀಮ್ ಆಪ್'ಗೆ ಸಪೋರ್ಟ್ ಮಾಡುತ್ತೇವೆ..?
ದೇಶದಲ್ಲಿರುವ ಬಹುತೇಕ ಎಲ್ಲ ಪ್ರಮುಖ ಬ್ಯಾಂಕುಗಳು ಈ ಭೀಮ್ ಆಪ್್ಗೆ ಸಫೋರ್ಟ್ ಮಾಡಲಿವೆ. ಯಾವ ಯಾವ ಬ್ಯಾಂಕುಗಳು ಈ ಪಟ್ಟಿಯಲ್ಲಿವೆ ಎಂಬುದನ್ನು ನೋಡುವುದಾದರೆ.
ಅಲಹಾಬಾದ್ ಬ್ಯಾಂಕ್, ಆಂಧ್ರ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಮಹಾರಾಷ್ಟ್ರ, ಕೆನರಾ ಬ್ಯಾಂಕ್, ಕ್ಯಾಥೊಲಿಕ್ ಸಿರಿಯನ್ ಬ್ಯಾಂಕ್, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, DCB ಬ್ಯಾಂಕ್, ದೇನಾ ಬ್ಯಾಂಕ್, ಫೆಡರಲ್ ಬ್ಯಾಂಕ್, ಎಚ್ಡಿಎಫ್ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಐಡಿಬಿಐ ಬ್ಯಾಂಕ್, ಐಡಿಎಫ್ಸಿ ಬ್ಯಾಂಕ್, ಇಂಡಿಯನ್ ಬ್ಯಾಂಕ್, ಇಂಡಿಯನ್ ಓವರ್ಸೀಸ್, IndusInd ಬ್ಯಾಂಕ್, ಕರ್ನಾಟಕ ಬ್ಯಾಂಕ್, ಕರೂರ್ ವೈಶ್ಯ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್, ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್, ಪಂಜಾಬ್ ನ್ಯಾಶನಲ್ ಬ್ಯಾಂಕ್, RBL ಬ್ಯಾಂಕ್, ಸೌತ್ ಇಂಡಿಯನ್ ಬ್ಯಾಂಕ್, ಸ್ಟಾಂಡರ್ಡ್ ಚಾರ್ಟರ್ಡ್ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಸಿಂಡಿಕೇಟ್ ಬ್ಯಾಂಕ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ, ವಿಜಯಾ ಬ್ಯಾಂಕ್.

ಹಣ ವರ್ಗಹಿಸುವ ಮಿತಿ ಎಷ್ಟು..?
ಭೀಮ್ ಆಪ್ ಬಳಸಿ ಹಣ ಪಾವತಿ ಮಾಡಲು ಮಿತಿಯನ್ನು ಹೇರಲಾಗಿದ್ದು, ಒಮ್ಮೆಗೆ 10 ಸಾವಿರ ರೂಗಳನ್ನು ವರ್ಗಹಿಸಬಹುದಾಗಿದ್ದು, ಒಂದು ದಿನದಲ್ಲಿ 20 ಸಾವಿರ ರೂ ವ್ಯವಹಾರ ನಡೆಸಬಹುದಾಗಿದೆ.
-
29,999
-
14,999
-
28,999
-
37,430
-
1,09,894
-
15,999
-
36,990
-
79,999
-
71,990
-
49,999
-
14,999
-
9,999
-
64,900
-
37,430
-
15,999
-
25,999
-
46,354
-
19,999
-
17,999
-
9,999
-
18,270
-
22,300
-
33,530
-
14,030
-
6,990
-
20,340
-
12,790
-
7,090
-
17,090
-
15,500