ಡಿಜಿಟಲ್ ಬ್ಯಾಂಕಿಗ್ ಪ್ರೋತ್ಸಾಹಕ್ಕೆ ಬಿಡುಗಡೆ ಆಯ್ತು 'ಭೀಮ್' ಆಪ್
ಕೇಂದ್ರ ಸರಕಾರವು ಡಿಜಿಟಲ್ ಬ್ಯಾಕಿಂಗ್ ವ್ಯವಸ್ಥೆಗೆ ಹೆಚ್ಚಿನ ಒಲವು ನೀಡುತ್ತಿರುವ ಹಿನ್ನಲೆಯಲ್ಲಿ ಈ ಆಪ್ ಬಿಡುಗಡೆಯಾಗಿದೆ. ಈಗಾಗಲೇ ಆಂಡ್ರಾಯ್ಡ್ ಮೊಬೈಲ್ ಗಳಲ್ಲಿ ಆಪ್ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದ್ದು, ಈ ಮೂಲಕವೇ ಹಣ ಪಾವತಿಸಬಹುದು.
ಪ್ರಧಾನಿ ನರೇಂದ್ರ ಮೋದಿ ಡಿಜಿಟಲ್ ಬ್ಯಾಕಿಂಗ್ ಪ್ರೋತ್ಸಾಹಕ್ಕಾಗಿ ಶುಕ್ರವಾರ ಭೀಮ್ (BHIM) ಹೆಸರಿನ (UPI) ಯುನಿಟೆಡ್ ಪೇಮೆಂಟ್ ಇನ್‌ಟರ್ಫೇಸ್' ಆಪ್ ವೊಂದನ್ನು ಬಿಡುಗಡೆ ಮಾಡಿದ್ದಾರೆ. 'ಭಾರತ್ ಇನ್‌ಟರ್ಫೇಸ್ ಫಾರ್ ಮನಿ- ಭೀಮ್' ಎನ್ನುವ ಈ ಆಪ್ಅನ್ನು ಡಿಜಿಟಲ್ ಹಣ ಪಾವತಿಯನ್ನು ಅತ್ಯಂತ ಸರಳ ಮತ್ತು ಸುಲಭದ ವಾಗಿಸುವ ಸಲುವಾಗಿಯೇ ರೂಪಿಸಲಾಗಿದೆ.

ಅಮೆಜಾನ್ ನಲ್ಲಿ ಕೊಳ್ಳುವುದು ಮಾತ್ರವಲ್ಲ ನಿಮ್ಮ ಹಳೇ ವಸ್ತುಗಳನ್ನು ಸಹ ಮಾರಾಟ ಮಾಡಬಹುದು...!
ಕೇಂದ್ರ ಸರಕಾರವು ಡಿಜಿಟಲ್ ಬ್ಯಾಕಿಂಗ್ ವ್ಯವಸ್ಥೆಗೆ ಹೆಚ್ಚಿನ ಒಲವು ನೀಡುತ್ತಿರುವ ಹಿನ್ನಲೆಯಲ್ಲಿ ಈ ಆಪ್ ಬಿಡುಗಡೆಯಾಗಿದೆ. ಈಗಾಗಲೇ ಆಂಡ್ರಾಯ್ಡ್ ಮೊಬೈಲ್ ಗಳಲ್ಲಿ ಆಪ್ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದ್ದು, ಈ ಮೂಲಕವೇ ಹಣ ಪಾವತಿಸಬಹುದು ಮತ್ತು ಹಣವನ್ನು ಸ್ವೀಕರಿಸಬಹುದಾಗಿದೆ.

ಮೊಬೈಲ್ ವಾಲೆಟ್‌ಗಿಂತ ಭಿನ್ನ:
ಕೇಂದ್ರ ಸರಕಾರ ಹೊಸದಾಗಿ ಬಿಡುಗಡೆ ಮಾಡಿರುವ ಭೀಮ್ ಆಪ್ ಇತರೆ ಮೊಬೈಲ್ ವಾಲೆಟ್ ಗಳಿಗಿಂತ ಭಿನ್ನವಾಗಿದ್ದು, ಇದಕ್ಕಾಗಿ ಮೊದಲೇ ಹಣ ಪಾವತಿ ಮಾಡಿ ನಂತರ ಬಳಸುವ ಮೊಬೈಲ್ ವಾಲೆಟ್ ನಂತಲ್ಲದೇ, ಬ್ಯಾಂಕಿನಿಂದ ನೇರವಾಗಿ ಹಣ ಪಾವತಿ ಮಾಡುವುದಲ್ಲದೇ, ಸ್ವೀಕರಿಸಲೂಬಹುದಾಗಿದೆ.

ಫೀಚರ್‌ಪೋನಲ್ಲೂ ಬಳಸಬಹುದು:
UPA (ಯುನಿಟೆಡ್ ಪೇಮೆಂಟ್ ಇನ್‌ಟರ್ಫೇಸ್) ಆಪ್ ಆಗಿರುವ ಭೀಮ್ ಅನ್ನು ಸ್ಮಾರ್ಟ್‌ಪೋನಲ್ಲದೇ ಫೀಚರ್ ಪೋನಿನಲ್ಲಿಯೂ ಬಳಸಬಹುದು ಎಂದು ಪ್ರಧಾನಿ ಮೋದಿ ಬಿಡುಗಡೆ ಸಮಯದಲ್ಲಿ ತಿಳಿಸಿದ್ದು, 1,000 -1,200 ರೂ ಬೆಲೆಯ ಪೋನುಗಳಲ್ಲಿಯೂ ಬಳಸಬಹುದಾಗಿದೆ.

ಇಂಟರ್ನೆಟ್ ಸೌಲಭ್ಯವು ಬೇಕಿಲ್ಲವಂತೆ:
ಭೀಮ್ ಆಪ್ ಬಳಸಲು ಮೊಬೈಲ್ ನಲ್ಲಿ ಇಂಟರ್ ನೆಟ್ ಸಂಪರ್ಕ ಇರಲೇಬೇಕು ಎನ್ನುವ ನಿಯಮವೇನು ಇಲ್ಲ, ಅಂತರ್‌ಜಾಲದ ಸಂಪರ್ಕವಿಲ್ಲದೆಯೂ ಈ ಆಪ್ ಅನ್ನು ಬಳಸ ಬಹುದು ಎಂದು ಪ್ರಧಾನಿ ತಮ್ಮ ಭಾಷಣದಲ್ಲಿ ಹೇಳಿದ್ದಾರೆ.

ಉಚಿತ ಬಳಕೆ:
ಬೇರೆ ಬೇರೆ ಮೊಬೈಲ್ ವಾಲೆಟ್ ಆಪ್ ಗಳಿಗೆ ಹೊಲಿಸಿದರೆ ಭೀಮ್ ಸಂಪೂರ್ಣ ಭಿನ್ನವಾಗಿದ್ದು, ಸರಳ ಮತ್ತು ಖರ್ಚಿಲ್ಲದೇ ವ್ಯವಹಾರಕ್ಕಾಗಿ ಹೇಳಿ ಮಾಡಿಸಿದಂತಿದೆ. ಇದರ ಮೂಲಕ ನಡೆಯುವ ಯಾವುದೇ ವ್ಯವಹಾರಕ್ಕೂ ಶುಲ್ಕವಿಲ್ಲ, ಬ್ಯಾಂಕಿನ ಶುಲ್ಕವನ್ನು ಹೊರತು ಪಡಿಸಿದರೆ ಇನ್ಯಾವುದೇ ರೀತಿಯಲ್ಲೂ ಈ ಆಪ್ ಬಳಕೆಗೆ ಹಣ ನೀಡುವ ಅವಶ್ಯಕತೆ ಇಲ್ಲ.

ಹೆಬ್ಬೆರಳಿನಲ್ಲೇ ಬ್ಯಾಂಕ್:
ಇತರೆ ವಾಲೆಟ್ ಗಳು ಮೊದಲು ನಿಮ್ಮ ಖಾತೆಯಿಂದ ಹಣವನ್ನು ತುಂಬಿಸಿಕೊಂಡು ನಂತರ ಕಾರ್ಯ ನಿರ್ವಹಿಸುತ್ತವೆ, ಆದರೆ ಈ ಭೀಮ್ ಆಪ್ ನಿಮ್ಮ ಖಾತೆಯಿಂದಲೇ ನಿರ್ವಹಿಸಬಹುದಾಗಿರುವುದರಿಂದ ನಿಮ್ಮ ಹೆಬ್ಬರಳಿನಲ್ಲೇಯೇ ಬ್ಯಾಂಕ್ ವ್ಯವಹಾರಗಳನ್ನು ನಡೆಸಬಹುದಾಗಿದೆ.


Click it and Unblock the Notifications








