ಫ್ಲಿಪ್‌ಕಾರ್ಟ್ ಮೊದಲ ಗ್ರಾಹಕ ಬುಕ್ ಮಾಡಿದ್ದು ಏನು? ಒಂದು ಕುತೋಹಲದ ಸ್ಟೋರಿ.!!
ಮೊದಲ ಬುಕಿಂಗ್ ಅನ್ನು ಹೇಗಾದರೂ ನೀಡಲೇಬೇಕೆಂದು ಸಚಿನ್ ಬೆಂಗಳೂರಿನ 50ಕ್ಕೂ ಹೆಚ್ಚು ಸ್ಟಾಲ್ಗಳಲ್ಲಿ ಇದಕ್ಕಾಗಿ ಹುಡುಕಾಡಿದ್ದರು. ಕೊನೆಗೆ ಒಂದು ಅಂಗಡಿಯಲ್ಲಿ ಅದು ಸಿಕ್ಕಿತ್ತು.!!
ಇಂದು ಸಾವಿರಾರು ಕೋಟಿ ವ್ಯವಹಾರ ನಡೆಸುವ ಆನ್‌ಲೈನ್ ಶಾಪಿಂಗ್ ಜಾಲತಾಣ ಫ್ಲಿಪ್‌ಕಾರ್ಟ್ ಹುಟ್ಟು ಮತ್ತು ಬೆಳವಣಿಗೆಯ ಬಗ್ಗೆ ಬಹುತೇಕ ಜನರಿಗೆ ಗೊತ್ತಿಲ್ಲ ಎನ್ನಬಹುದು. ಇಂದು ಇಷ್ಟು ದೊಡ್ಡ ಮಟ್ಟದಲ್ಲಿ ಬೆಳೆದಿರುವ ಫ್ಲಿಪ್‌ಕಾರ್ಟ್ ಮೊದಲು ವ್ಯಾಪಾರ ಶುರುಮಾಡಿದ್ದು ಯಾವಾಗ ಗೊತ್ತಾ? 2007ನೇ ಅ.31ನೇ ತಾರೀಖಿನಂದು!!
ಇನ್ನು ಇದರ ಜೊತೆಗೆ ಪ್ಲಿಪ್‌ಕಾರ್ಟ್ ಮೊದಲ ಗ್ರಾಹಕ ಯಾರು ಮತ್ತು ಅವರು ಬುಕ್ ಮಾಡಿದ ವಸ್ತು ಯಾವುದು ಎಂಬ ಕುತೋಹಲ ಎಲ್ಲರಿಗೂ ಇರುತ್ತದೆ. ಆಗಿನ ಆಂಧ್ರಪ್ರದೇಶದ ಇಂದಿನ ತೆಲಂಗಾಣದ ವಿವಿಕೆ ಚಂದ್ರ ಎಂಬುವವರು ಫ್ಲಿಪ್ಕಾರ್ಟ್ನ ಪ್ರಥಮ ಗ್ರಾಹಕರಾಗಿದ್ದರು.!! ಇವರು ಗ್ರಾಹಕರಾಗಿದ್ದು ಹೇಗೇ ಎಂಬುದೇ ಒಂದು ಕುತೋಹಲದ ಸ್ಟೋರಿ.!!

ಈ ದೇಶದಲ್ಲಿ ಐಫೋನ್ ಖರಿದೀಸಲು 6 ಕೋಟಿ ಖರ್ಚು ಮಾಡಬೇಕು!!?
ವೆಬ್ಕನ್ಸಲ್ಟೆಂಟ್ ಆಗಿದ್ದ ಚಂದ್ರ ಅವರ ಬ್ಲಾಗ್ವೊಂದಕ್ಕೆ ಫ್ಲಿಪ್‌ಕಾರ್ಟ್ ಸಂಸ್ಥಾಪಕ ಸಚಿನ್ ಬನ್ಸಾಲ್ ಭೇಟಿ ನೀಡಿದ್ದರು. ಬ್ಲಾಗ್‌ನಲ್ಲಿ ಒಂದು ಕಮೆಂಟ್‌ಸಹ ಬರೆದಿದ್ದ ಸಚಿನ್ ಬನ್ಸಾಲ್ ಜೊತೆಗೆ ಫ್ಲಿಪ್‌ಕಾರ್ಟ್ ಲಿಂಕ್ ಸಹ ಸೇರಸಿದ್ದರು. ಕಮೆಂಟ್ ಜೊತೆಗಿದ್ದ ಲಿಂಕ್ ಓಪನ್ ಮಾಡಿದ ಚಂದ್ರ ಅವರು ಸೈಟ್‌ನಲ್ಲಿ ಹಲವು ಪುಸ್ತಕಗಳು ಮಾರಾಟಕ್ಕಿರುವುದು ಕಂಡು 'ಲೀವಿಂಗ್ ಮೈಕ್ರೋಸಾಫ್ಟ್ ಟು ಚೇಂಜ್ ದಿ ವರ್ಲ್ಡ್' ಎಂಬ ಬುಕ್ ಅನ್ನು ಆನ್ಲೈನ್ನಲ್ಲೇ 500 ರೂ.ಪಾವತಿ ಮಾಡಿ ಬುಕ್ ಮಾಡಿದ್ದರು.!

ಆದರೆ, ಬುಕ್ ಮಾಡಿರುವ ಪುಸ್ತಕ ಸಚಿನ್ ಬನ್ಸಾಲ್ ಅವರ ಬಳಿ ಇರಲಿಲ್ಲ. ಮೊದಲ ಬುಕಿಂಗ್ ಅನ್ನು ಹೇಗಾದರೂ ನೀಡಲೇಬೇಕೆಂದು ಸಚಿನ್ ಬೆಂಗಳೂರಿನ 50ಕ್ಕೂ ಹೆಚ್ಚು ಬುಕ್ಸ್ಟಾಲ್ಗಳಲ್ಲಿ ಇದಕ್ಕಾಗಿ ಹುಡುಕಾಡಿದ್ದರು. ಕೊನೆಗೆ ಒಂದು ಅಂಗಡಿಯಲ್ಲಿ ಪುಸ್ತಕ ಸಿಕ್ಕಿತ್ತು.
ಆದರೆ, ಈ ಪುಸ್ತಕದ ಪುಟಗಳ ಹಳದಿ ಬಣ್ಣಕ್ಕೆ ತಿರುಗಿದ್ದವು. ಕೂಡಲೇ ಚಂದ್ರಗೆ ಕರೆ ಮಾಡಿದ ಬನ್ಸಾಲ್ ಪುಸ್ತಕದ ಅವಸ್ಥೆ ಬಗ್ಗೆ ಹೇಳಿದ್ದರು.ಇಷ್ಟಾದರೂ ಆ ಬುಕ್ ಅನ್ನು ನಾನು ಖರೀದಿಸುತ್ತೇನೆಂದು ಚಂದ್ರ ಹೇಳಿದ್ದರು. ಕೂಡಲೇ ಬನ್ಸಾಲ್ ಅವರು ಪುಸ್ತಕ ಕಳುಹಿಸಿಕೊಟ್ಟರು. ಅಲ್ಲದೆ ಪುಸ್ತಕದ ಮೇಲೆ ಶೇ.10 ರಿಯಾಯಿತಿ ನೀಡಿದ್ದರು.


Click it and Unblock the Notifications








