ಮತ್ತಷ್ಟು ಅಪ್‌ಡೇಟ್ ಆಯ್ತು ವಾಟ್ಸ್ಆಪ್!!..ಏನೇನು ಗೊತ್ತಾ?!
ನೂತನ ಬೀಟಾ ಆವೃತ್ತಿಯ ಗಾತ್ರ ಮತ್ತಷ್ಟು ಕಡಿಮೆಯಾಗಿದ್ದು, ಹಲವು ಹೊಸ ಹೊಸ ಫೀಚರ್ಸ್‌ಗಳು ಸೇರಿಕೊಂಡಿವೆ.!!
ದಿನದಿಂದ ದಿನಕ್ಕೆ ಅಪ್‌ಡೇಟ್ ಆಗುತ್ತಿರುವ ಜಗತ್ತಿನ ನಂಬರ್ ಒನ್ ಮೆಸೇಂಜಿಂಗ್ ಆಪ್ ವಾಟ್ಸ್ಆಪ್‌ನ ಇದೀಗ ಬಳಕೆದಾರರ ಆಶಯಕ್ಕೆ ತಕ್ಕಂತೆ ಅಪ್‌ಡೇಟ್ ಆಗಿದೆ.! ವಾಟ್ಸ್ಆಪ್‌ನ ನೂತನ ಬೀಟಾ ಆವೃತ್ತಿಯ ಗಾತ್ರ ಮತ್ತಷ್ಟು ಕಡಿಮೆಯಾಗಿದ್ದು, ಹಲವು ಹೊಸ ಹೊಸ ಫೀಚರ್ಸ್‌ಗಳು ಸೇರಿಕೊಂಡಿವೆ.!!
ನಿಮ್ಮ ವಾಟ್ಸ್ ಅಪ್ ಸಂಖ್ಯೆಯನ್ನು ಬದಲಾಯಿಸಿದಾಗ ನಿಮ್ಮ ಸಂಖ್ಯೆಗೆ ಸಂಬಂಧಿಸಿದ ಸಂಪರ್ಕಗಳನ್ನು ತಿಳಿಸುವ ವೈಶಿಷ್ಟ್ಯಗಳನ್ನು ಈ ನೂತನ ಆವೃತ್ತಿ ಒಳಗೊಂಡಿರುತ್ತದೆ ಎಂದು ಮಾದ್ಯಮ ವರದಿಗಳು ತಿಳಿಸಿದ್ದು, ಇನ್ನು ಫೋನ್ ಸಂಖ್ಯೆಯನ್ನು ಬದಲಾಯಿಸಿದಾಗ ನಿಮ್ಮ ಸಂಪರ್ಕಗಳು ಸಹ ಈ ಬದಲಾವಣೆಯೊಂದಿಗೆ ಬರಲಿವೆ.!!

ಇತ್ತೀಚಿನ ವಾಟ್ಸ್ಅಪ್ ಆವೃತ್ತಿ 2.17.375 ನ್ನು ಡೌನ್‌ಲೋಡ್ ಮಾಡುವಾಗ ಇದಕ್ಕೆ ಮೊದಲಿನ ಮಾದರಿಗಿಂತ ಕಡಿಮೆ ಸ್ಪೇಸ್ ಸಾಕಾಗಲಿದೆ. ಈ ಮೊದಲಿನ ವಾಟ್ಸ್ ಅಪ್ ಅಪ್ಲಿಕೇಷನ್ ಗೆ ಹೋಲಿಸಿದರೆ ಸುಮಾರು 6 ಎಂಬಿ ನಷ್ಟು ಕಡಿಮೆ ಗಾತ್ರವನ್ನು ಈ ಬೀಟಾ ಆವೃತ್ತಿ ಹೊಂದಿದೆ ಎನ್ನಲಾಗಿದೆ.!!

ಇನ್ನು ವಾಟ್ಸ್ಅಪ್ ಬಳಕೆದಾರರು ತಮ್ಮ ಲಿಸ್ಟ್ ನಲ್ಲಿರುವ ಯಾವುದೇ ಸಂಪರ್ಕಗಳನ್ನು ಕಸ್ಟಮೈಸ್ ಮಾಡಬಹುದಲ್ಲದೆ, ನಿಮ್ಮೊಂದಿಗೆ ಚಾಟ್ ಮಾಡುವವರು ಸಹ ನೀವು ವಾಟ್ಸ್‌ಅಪ್ ಸಂಖ್ಯೆಯನ್ನು ಬದಲಿಸಿದ್ದೀರಿ ಎನ್ನುವ ಸೂಚನೆ ಪಡೆಯುವ ಅತ್ಯುದ್ದಬುತ ಆಯ್ಕೆಗಳು ಹೊಸವರ್ಷನ್‌ನಲ್ಲಿ ಲಭ್ಯವಿದೆ.!!
ಓದಿರಿ: ಏರ್‌ಟೆಲ್‌ಗೆ ಭಾರಿ ಮೊತ್ತ ಪಾವತಿಸಿದ ಜಿಯೋ!!.__ ಕೋಟಿ ಲಾಸ್!?


Click it and Unblock the Notifications








