Home
Apps

ಫುಲ್ ಸೇಫ್..! ನಿಮ್ಮ ಚಾಟ್​ ಲೀಕ್ ಆಗಲ್ಲ.. ಕಿರಿಕಿರಿ ಮೆಸೇಜ್‌ ಬರಲ್ಲ.. ಬಂತು ಹೊಸ ಫೀಚರ್ಸ್! ಬಳಸುವುದು ಹೇಗೆ?

ಇನ್ಮುಂದೆ ನಿಮ್ಮ ವಾಟ್ಸಾಪ್ ಚಾಟ್​ ಲೀಕ್ ಆಗಲ್ಲ..! ಕಿರಿಕಿರಿ ಮೆಸೇಜ್‌ಗಳು ಬರಲ್ಲ..! ಇನ್ಮುಂದೆ ವಾಟ್ಸಾಪ್ ಪ್ರೈವಸಿಯಲ್ಲಿ ಯಾರೂ ಏನೂ ಮಾಡಲು ಸಾಧ್ಯವಿಲ್ಲ. ಹೌದು, ವಾಟ್ಸಾಪ್ (WhatsApp) ತನ್ನ ಬಳಕೆದಾರರ ಸುರಕ್ಷತೆಗಾಗಿ ಹೊಸ ಫೀಚರ್ ಅನ್ನು ಪರಿಚಯಿಸಿದೆ. ಇದು ಹೊಸ ಗೌಪ್ಯತೆ ವೈಶಿಷ್ಟ್ಯವಾಗಿದೆ. ಅದುವೇ, 'ಅಡ್ವಾನ್ಸ್ಡ್ ಚಾಟ್ ಪ್ರೈವೆಸಿ' ವೈಶಿಷ್ಟ್ಯ (WhatsApp advanced chat privacy feature) ಫೀಚರ್. ನೀವು, ಅಪರಿಚಿತ ವ್ಯಕ್ತಿಗಳ ನಂಬರ್ ಸುಲಭವಾಗಿ ಬ್ಲಾಕ್ ಮಾಡಬಹುದು ಮತ್ತು ನಿಮ್ಮ ಚಾಟ್​ ಶೇರ್ ಆಗದಂತೆ ತಡೆಯಬಹುದು. ವಾಟ್ಸಾಪ್‌ನಲ್ಲಿ ಹೊಸ ಫೀಚರ್ ಬಳಸುವುದು ಹೇಗೆ? ಇದರಿಂದ ಏನೆಲ್ಲಾ ಲಾಭಗಳಿವೆ? ಎಂಬ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

ವಾಟ್ಸಾಪ್ ತನ್ನ ಪ್ಲಾಟ್‌ಫಾರ್ಮ್‌ಗಾಗಿ 'ಅಡ್ವಾನ್ಸ್ಡ್ ಚಾಟ್ ಪ್ರೈವೆಸಿ' ವೈಶಿಷ್ಟ್ಯವನ್ನು (WhatsApp New Privacy Features) ತಂದಿದೆ. ಈ ಹೊಸ ವೈಶಿಷ್ಟ್ಯದ ಉದ್ದೇಶವೆಂದರೆ, ಬಳಕೆದಾರರು ಖಾಸಗಿ ಅಥವಾ ಗುಂಪು ಚಾಟ್‌ಗಳ ಹೊರಗೆ ಸೂಕ್ಷ್ಮ ಮಾಹಿತಿಯನ್ನು ತರುವುದನ್ನು ತಡೆಯುವುದು. ನೀವು ವಾಟ್ಸಾಪ್‌ನಲ್ಲಿ ಅಪರಿಚಿತ ಮೊಬೈಲ್ ಸಂಖ್ಯೆಗಳಿಂದ ಕಿರುಕುಳ ನೀಡುವ ಮೆಸೇಜ್ ಬರುವುದಕ್ಕೆ ಅಥವಾ ನಿಮ್ಮ ವೈಯಕ್ತಿಕ ಚಾಟ್​ಗಳು ಹೊರಗಡೆ ಶೇರ್ ಆಗುವುದಕ್ಕೆ ವಾಟ್ಸಾಪ್ ಕಡಿವಾಣ ಹಾಕಿದೆ. ಇದಕ್ಕಾಗಿಯೇ ​ಕೆಲವು ಫೀಚರ್​ಗಳನ್ನು ತಂದಿದೆ. ಈ ವೈಶಿಷ್ಟ್ಯಗಳನ್ನು​ ಆ್ಯಕ್ಟಿವೇಟ್‌ ಮಾಡುವ ಮೂಲಕ ನೀವು, ಅಪರಿಚಿತ ವ್ಯಕ್ತಿಗಳ ನಂಬರ್ ಅನ್ನು ಸುಲಭವಾಗಿ ಬ್ಲಾಕ್​ ಮಾಡಬಹುದು.

WhatsApp: ಚಾಟ್​ ಲೀಕ್ ಆಗಲ್ಲ.. ಕಿರಿಕಿರಿ ಮೆಸೇಜ್‌ ಬರಲ್ಲ.. ಬಂತು ಹೊಸ ಫೀಚರ್ಸ್

'ಅಡ್ವಾನ್ಸ್ಡ್ ಚಾಟ್ ಪ್ರೈವೆಸಿ' ಎಂದರೇನು?

ಈ 'ಅಡ್ವಾನ್ಸ್ಡ್ ಚಾಟ್ ಪ್ರೈವೆಸಿ' (ಸುಧಾರಿತ ಚಾಟ್ ಗೌಪ್ಯತೆ) ಸೆಟ್ಟಿಂಗ್ ಮೂಲಕ, ಬಳಕೆದಾರರು ತಾವು ಇಷ್ಟಪಡುವ ಯಾವುದೇ ಚಾಟ್‌ನ (ವೈಯಕ್ತಿಕ ಅಥವಾ ಗುಂಪು) ಗೌಪ್ಯತೆಯನ್ನು ಮತ್ತಷ್ಟು ಹೆಚ್ಚಿಸಬಹುದು. ಇದನ್ನು ಆನ್ ಮಾಡಿದರೆ, ಇತರರು ಆ ಚಾಟ್‌ನ ವಿಷಯವನ್ನು ಶೇರ್ ಮಾಡಲು ಸಾಧ್ಯವಿಲ್ಲ. ಅಂದರೆ ಫೋಟೋಗಳು, ವಿಡಿಯೋಗಳನ್ನು ಸ್ವಯಂಚಾಲಿತವಾಗಿ ಡೌನ್‌ಲೋಡ್ ಮಾಡಲು ಸಾಧ್ಯವಿಲ್ಲ. ಮೆಟಾ ಎಐ (AI) ನಂತಹ ಕೃತಕ ಬುದ್ಧಿಮತ್ತೆ ವೈಶಿಷ್ಟ್ಯಗಳಲ್ಲಿ ಇದನ್ನು ಬಳಸಲಾಗುವುದಿಲ್ಲ.

ಇನ್ಮುಂದೆ, ನಿಮ್ಮ ಚಾಟ್‌ಗಳು ಹೆಚ್ಚು ಸುರಕ್ಷಿತ

ವಾಟ್ಸಾಪ್ ಚಾಟ್‌ನಲ್ಲಿರುವ ಸೂಕ್ಷ್ಮ ಮಾಹಿತಿಯನ್ನು ಇತರರು ಸುಲಭವಾಗಿ ನಕಲಿಸಲು, ಫಾರ್ವರ್ಡ್ ಮಾಡಲು ಅಥವಾ ಉಳಿಸಲು ಸಾಧ್ಯವಿಲ್ಲ. ಅಂತಹ ವೈಶಿಷ್ಟ್ಯವು ಚಾಟ್‌ಗಳನ್ನು ಹೆಚ್ಚು ಸುರಕ್ಷಿತವಾಗಿಸುತ್ತದೆ ಎಂದು ವಾಟ್ಸಾಪ್ ಹೇಳಿದೆ. ವಿಶೇಷವಾಗಿ, ನಿಮಗೆ ಎಲ್ಲರ ಪರಿಚಯ ಇರುವುದಿಲ್ಲ. ಆದರೆ, ನೀವು ಕೆಲವು ಸೂಕ್ಷ್ಮವಾಗಿರುವ ವಿಷಯಗಳನ್ನು ಚರ್ಚಿಸಲು ಬಯಸುವ ಗ್ರೂಪ್​ನಲ್ಲಿ ಈ ಫೀಚರ್​ ಹೆಚ್ಚು ಸಹಾಯಕವಾಗಿರುತ್ತದೆ. ಉದಾಹರಣೆಗೆ, ಸಪೋರ್ಟ್​ ಗ್ರೂಪ್​ನಲ್ಲಿ ಆರೋಗ್ಯ ಸವಾಲುಗಳ ಬಗ್ಗೆ ಮಾತನಾಡುವುದು ಅಥವಾ ಮುಖ್ಯವಾದ ವಿಷಯದ ಬಗ್ಗೆ ಸಮುದಾಯವನ್ನು ಸಂಘಟಿಸುವುದು.

'ಅಡ್ವಾನ್ಸ್ಡ್ ಚಾಟ್ ಪ್ರೈವೆಸಿ' ಅನ್ನು ಪರಿಚಯಿಸುವುದ ಜೊತೆಗೆ ವಾಟ್ಸಾಪ್ ತನ್ನ ಪ್ರೈವೆಸಿ ಸೆಂಟರ್ಡ್ ಫೀಚರ್ ವಿಸ್ತರಣೆ ಮಾಡಿದೆ. ಒನ್ ಆನ್ ಒನ್ ಮತ್ತು ಗ್ರೂಪ್ ಚಾಟ್‌ ಎರಡರಲ್ಲೂ ಈ ವೈಶಿಷ್ಟ್ಯ ಲಭ್ಯ. ಈ ಹೊಸ ಪ್ರೈವೆಸಿ ಫೀಚರ್​ ಇತರರು ವಾಟ್ಸಾಪ್‌ನ ಹೊರಗೆ ವಿಷಯವನ್ನು ತೆಗೆದುಕೊಳ್ಳುವುದನ್ನು ತಡೆಯುತ್ತದೆ. ಇದು ಚಾಟ್‌ಗಳನ್ನು ಶೇರ್​ ಮಾಡುವುದನ್ನು ನಿರ್ಬಂಧಿಸುತ್ತದೆ. ನೀವು ಬೇರೆಯವರ ಫೋನ್‌ಗಳಿಗೆ ಕಳುಹಿಸುವ ಫೋಟೋಗಳು ಅಥವಾ ವಿಡಿಯೋ ಫೈಲ್‌ಗಳ ಡೌನ್‌ಲೋಡ್ ಸಹ ನಿರ್ಬಂಧಿಸುತ್ತದೆ. ಈ ವೈಶಿಷ್ಟ್ಯವು ಇತ್ತೀಚಿನ ಆವೃತ್ತಿಯಲ್ಲಿ ಎಲ್ಲರಿಗೂ ಲಭ್ಯವಾಗಲಿದೆ. ನೀವು ಚಾಟ್ ನೇಮ್​ ಟ್ಯಾಪ್ ಮಾಡುವ ಮೂಲಕ ಮತ್ತು ಸುಧಾರಿತ ಚಾಟ್ ಪ್ರೈವೆಸಿಯನ್ನು ಟ್ಯಾಪ್ ಮಾಡುವ ಮೂಲಕ ಇದನ್ನು ಬಳಸಬಹುದು.

ಅಪರಿಚಿತ ಸಂಖ್ಯೆಗಳಿಂದ ಮೆಸೇಜ್ ಬರಲ್ಲ!

ಪ್ರಸ್ತುತ ವಾಟ್ಸಾಪ್‌ನಲ್ಲಿ ಅಪರಿಚಿತ ಮೊಬೈಲ್ ಸಂಖ್ಯೆಗಳಿಂದ ಮೆಸೇಜ್ ಬರುವುದು ಸಾಮಾನ್ಯವಾಗಿದೆ. ಕೆಲವೊಮ್ಮೆ ಈ ಮೆಸೇಜ್‌ಗಳು ತುಂಬಾ ಹೆಚ್ಚಾಗಿರುವುದರಿಂದ, ನಿಮಗೆ ತಲೆನೋವು ಉಂಟುಮಾಡುತ್ತವೆ. ಆದರೆ, ವಾಟ್ಸಾಪ್‌ನಲ್ಲಿ ಅಪರಿಚಿತ ಸಂಖ್ಯೆಗಳಿಂದ ಬರುವ ಈ ಕಿರಿಕಿರಿ ಮೆಸೇಜ್‌ಗಳನ್ನು ಆಟೋಮೆಟಿಕ್​ ಆಗಿ ಬ್ಲಾಕ್​ ಮಾಡುವ ವಿಶಿಷ್ಟ ವೈಶಿಷ್ಟ್ಯವೂ ಲಭ್ಯವಿದೆ. ಇತ್ತೀಚೆಗೆ ಬ್ಲ್ಯಾಕ್ ಅನೌನ್ ಅಕೌಂಟ್ ಮೆಸೇಜಸ್ (Block Unknown Account Messages) ಎಂಬ ವೈಶಿಷ್ಟ್ಯವನ್ನು ಪರಿಚಯಿಸಿದೆ. ಈ ವೈಶಿಷ್ಟ್ಯದ ಮೂಲಕ ನೀವು ಕಿರಿಕಿರಿ ಮೆಸೇಜ್‌ಗಳನ್ನು ಸುಲಭವಾಗಿ ತಡೆಯಬಹುದು.

ಈ ಫೀಚರ್ ಬಳಸುವುದು ​ಹೇಗೆ?

  • ನಿಮ್ಮ ವಾಟ್ಸಾಪ್‌ ಓಪನ್​ ಮಾಡಿ.
  • ಬಳಿಕ ಬಲಭಾಗದಲ್ಲಿರುವ ಮೂರು ಡಾಟ್​ಗಳ ಮೇಲೆ ಕ್ಲಿಕ್ ಮಾಡಿ
  • ಇದಾದ ನಂತರ ಸೆಟ್ಟಿಂಗ್‌ಗಳ ಆಯ್ಕೆಗೆ ಹೋಗಿ.
  • ಅಲ್ಲಿ ಪ್ರೈವೆಸಿ ಆಪ್ಷನ್ ​ ಮೇಲೆ ಕ್ಲಿಕ್ಕಿಸಿ.
  • ಕೆಳಗೆ ಸ್ಕ್ರಾಲ್ ಮಾಡಿದಾಗ ಅಡ್ವಾನ್ಸ್ಡ್​ ಆಪ್ಷನ್ ಗೋಚರಿಸುತ್ತದೆ.​
  • ಅಲ್ಲಿ ಕ್ಲಿಕ್ ಮಾಡಿದ ತಕ್ಷಣ Block Unknown Account Messages ಫೀಚರ್ ಕಾಣುತ್ತದೆ.
  • ಬಳಿಕ, ಅದನ್ನು ಆ್ಯಕ್ಟಿವೇಟ್​ ಮಾಡಿ.
Best Mobiles in India

English summary
WhatsApp announces advanced chat privacy feature to secure users: check details here
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+