ಸದ್ಯದಲ್ಲೇ ವಾಟ್ಸಾಪ್‌ ಸೇರಲಿವೆ ಕೆಲವು ಕುತೂಹಲಕಾರಿ ಫೀಚರ್ಸ್‌ಗಳು!

|

ಫೇಸ್‌ಬುಕ್ ಒಡೆತನದ ಜನಪ್ರಿಯ ಮೆಸೆಜಿಂಗ್ ಆಪ್‌ ವಾಟ್ಸಪ್ ಅತೀ ಹೆಚ್ಚಿನ ಸಕ್ರಿಯ ಬಳಕೆದಾರರನ್ನು ಹೊಂದಿದೆ. ವಾಟ್ಸಪ್ ತನ್ನ ಬಳಕೆದಾರರ ಮಾಹಿತಿಗೆ ಸುರಕ್ಷತೆ ಒದಗಿಸಲು ಈಗಾಗಲೇ ಹಲವು ಸುರಕ್ಷತಾ ಫೀಚರ್ಸ್‌ಗಳನ್ನು ಅಳವಡಿಸಿಕೊಂಡಿದೆ. ಅದಾಗ್ಯೂ ಬಳಕೆದಾರರಿಗೆ ಉಪಯುಕ್ತ ಫೀಚರ್ಸ್‌ ನೀಡುವ ಹೆಜ್ಜೆಗಳನ್ನು ಹಾಕುತ್ತಲೇ ಸಾಗಿದೆ. ಅದೇ ರೀತಿ ಸದ್ಯದಲ್ಲಿಯೇ ಮತ್ತೆ ಅಚ್ಚರಿಯ ಫೀಚರ್ಸ್‌ಗಳು ವಾಟ್ಸಪ್ ಸೇರಲು ರೆಡಿಯಾಗಿವೆ.

ವಾಟ್ಸಪ್

ಹೌದು, ವಾಟ್ಸಪ್ ಸಂಸ್ಥೆಯು ಇತ್ತೀಚಿಗೆ ಹಲವು ಅತ್ಯುತ್ತಮ ಫೀಚರ್ಸ್‌ಗಳನ್ನು ಅಳವಡಿಸಿ ಬಳಕೆದಾರರಿಗೆ ಖುಷಿ ನೀಡಿದೆ. ಅವುಗಳಲ್ಲಿ ಅಡ್ವಾನ್ಸ್‌ ಸರ್ಚ್ ಮೋಡ್ ಫೀಚರ್, ಡಾರ್ಕ್‌ ಮೋಡ್, ಸುಳ್ಳು ಸುದ್ದಿ ತಡೆಗೆ ಆಯ್ಕೆ, ವಾಟ್ಸಪ್ ಗ್ರೂಪ್ ವಿಡಿಯೊ ಕರೆ ಮಿತಿಯಲ್ಲಿ ಬದಲಾವಣೆ ಮಾಡಿದೆ ಫೀಚರ್ಸ್‌ಗಳು ಹೆಚ್ಚು ಗಮನ ಸೆಳೆದಿವೆ. ಅದೇ ರೀತಿ ಸದ್ಯದಲ್ಲಿಯೇ ವಾಟ್ಸಪ್ ನಲ್ಲಿ ಕೆಲವು ಅಚ್ಚರಿ ಫೀಚರ್ಸ್‌ಗಳು ಸೇರಲಿವೆ ಎನ್ನಲಾಗಿದೆ. ಹಾಗಾದರೆ ಯಾವೆಲ್ಲಾ ಹೊಸ ಫೀಚರ್ಸ್‌ಗಳು ಸೇರಲಿವೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ವಾಟ್ಸಪ್ QR ಕೋಡ್

ವಾಟ್ಸಪ್ QR ಕೋಡ್

ವಾಟ್ಸಾಪ್ ಬಳಕೆದಾರರು ತಮ್ಮ ಕಾಂಟ್ಯಾಕ್ಟ್ ಲಿಸ್ಟ್ಗೆ ಹೊಸಬರನ್ನು ಸೇರಿಸಲು ಬಯಸಿದರೆ, ಶೀಘ್ರದಲ್ಲೇ ಅವರು ತಮ್ಮ ಕಸ್ಟಮ್ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಅದನ್ನು ಮಾಡಲು ಸಾಧ್ಯವಾಗುತ್ತದೆ.

ವಿಡಿಯೊ ಕರೆ ಫೋಕಸ್‌

ವಿಡಿಯೊ ಕರೆ ಫೋಕಸ್‌

ವಾಟ್ಸಾಪ್ ಇತ್ತೀಚಿಗೆ ವಿಡಿಯೊ ಕರೆ ಮಿತಿಯನ್ನು ಹೆಚ್ಚಿಸಿದ್ದು, 8 ಜನರು ಕನೆಕ್ಟ್‌ ಮಾಡಬಹುದಾಗಿದೆ. ಈ ವಿಡಿಯೊ ಕರೆಯಲ್ಲಿ ಫೋಕಸ್ ಆಯ್ಕೆ ಪರಿಚಯಿಸಲಿದ್ದು, ಆಯ್ದ ಕಾಂಟ್ಯಾಕ್ಟ್‌ ಅನ್ನು ಗುಂಪು ಕರೆಯಲ್ಲಿ ಪೂರ್ಣ ಪರದೆಯವರೆಗೆ ಅನುಮತಿಸುತ್ತದೆ.

ಜಿಯೋ ಫೋನ್‌ಗಳು ಸ್ಟೇಟಸ್‌ ಬೆಂಬಲ

ಜಿಯೋ ಫೋನ್‌ಗಳು ಸ್ಟೇಟಸ್‌ ಬೆಂಬಲ

KaiOS ಓಎಸ್‌ ನಲ್ಲಿ ಕಾರ್ಯನಿರ್ವಹಿಸುವ ಜಿಯೋ ಹ್ಯಾಂಡ್‌ಸೆಟ್‌ಗಳಲ್ಲಿಯು ವಾಟ್ಸಪ್‌ ಸ್ಟೇಟಸ್‌ ಬೆಂಬಲ ಸಿಗಲಿದೆ. ಜಿಯೋ ಹ್ಯಾಂಡ್‌ಸೆಟ್‌ ಬಳಕೆದಾರರಿಗೂ 24 ಗಂಟೆಗಳ ನಂತರ ಆಟೋ ಡಿಲೀಟ್ ಆಗುವ ವಾಟ್ಸಾಪ್ ಸ್ಟೇಟಸ್‌ ಸಫೋರ್ಟ್ ಲಭ್ಯವಾಗಲಿದೆ.

ಒನ್‌ ಟ್ಯಾಪ್‌ ಗ್ರೂಪ್‌ ಕರೆ

ಒನ್‌ ಟ್ಯಾಪ್‌ ಗ್ರೂಪ್‌ ಕರೆ

ವಾಟ್ಸಪ್ ತನ್ನ ಗ್ರೂಪ್‌ ವಿಡಿಯೊ ಕರೆ ಸೌಲಭ್ಯದಲ್ಲಿ ಇತ್ತೀಚಿಗೆ ಬದಲಾವಣೆ ತಂದಿದೆ. ಇದೀಗ ಗ್ರೂಪ್ ಕರೆ ಮಾಡಲು ಸುಲಭವಾಗಲು ಒನ್‌ ಟ್ಯಾಪ್‌ ಆಯ್ಕೆ ನೀಡಲಿದೆ. ಹೀಗಾಗಿ ಗುಂಪು ಭಾಗವಹಿಸುವವರಿಗೆ ಗುಂಪು ವೀಡಿಯೊ ಕರೆಯನ್ನು ತ್ವರಿತವಾಗಿ ಪ್ರಾರಂಭಿಸಲು ವಾಟ್ಸಾಪ್ ಗುಂಪು ಚಾಟ್‌ಗಳಲ್ಲಿ ವೀಡಿಯೊ ಐಕಾನ್ ಅನ್ನು ಸೇರಿಸಲಿದೆ.

ಅನಿಮೇಟೆಡ್ ಸ್ಟಿಕ್ಕರ್ ಪ್ಯಾಕ್

ಅನಿಮೇಟೆಡ್ ಸ್ಟಿಕ್ಕರ್ ಪ್ಯಾಕ್

ಚಾಟಿಂಗ್‌ನಲ್ಲಿ ಸದ್ಯ ಸ್ಟಿಕ್ಕರ್ ಗಳು ಹೆಚ್ಚು ಆಕರ್ಷಕ ಅನಿಸುತ್ತಿವೆ. ಈ ನಿಟ್ಟಿನಲ್ಲಿ ವಾಟ್ಸಪ್ ಅಪ್ಲಿಕೇಶನ್‌ ಸಹ ಆನಿಮೇಟೆಡ್ ಸ್ಟಿಕ್ಕರ್ ಪ್ಯಾಕ್‌ಗಳನ್ನು ಸೇರಿಸುತ್ತಿದೆ. ಈ ಸ್ಟಿಕ್ಕರ್‌ಗಳು ವಾಟ್ಸಪ್‌ ಚಾಟ್‌ ಅನ್ನು ಮತ್ತಷ್ಟು ವರ್ಣರಂಜಿತ ಮಾಡಲಿವೆ. ಚಾಟ್‌ನಲ್ಲಿ ಸ್ಟಿಕ್ಕರ್‌ಗಳ ಬಳಕೆ ಬಳಕೆದಾರರಿಗೆ ಖುಷಿ ನೀಡಲಿವೆ.

Best Mobiles in India

Read more about:
English summary
WhatsApp Announces New Features: All You Need To Know

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X