Home
Apps

ಕಣ್ಣಿಗೆ ಹಿತವೆನಿಸಲಿದೆ ವಾಟ್ಸಪ್‌ನ ಹೊಸ 'ಡಾರ್ಕ್‌ ಮೋಡ್' ಫೀಚರ್‌.!

ಮನುಷ್ಯ ಸ್ಮಾರ್ಟ್‌ಫೋನ್‌ ಬಳಕೆಯನ್ನು ಬಿಟ್ಟಿರಲಾರದಷ್ಟು ನಂಟನ್ನು ಬೆಳೆಸಿಕೊಂಡಿದ್ದು, ಆದರೆ ರಾತ್ರಿ ಸಮಯದಲ್ಲಿ ಸ್ಮಾರ್ಟ್‌ಫೋನಿನ ಡಿಸ್‌ಪ್ಲೇಯ ಬೆಳಕಿನ ಪ್ರಖರತೆಯಿಂದ ಕಣ್ಣಿಗೆ ಹಾನಿ ಆಗುವ ಸಾಧ್ಯತೆಗಳಿವೆ. ಈಗಾಗಲೇ 'ಫೇಸ್‌ಬುಕ್‌ ಮೆಸೆಂಜರ್' ಸೇರಿದಂತೆ ಪ್ರಮುಖ ಆಪ್‌ಗಳು ಡಾರ್ಕ್ ಮೋಡ್‌ ಫೀಚರ್‌ ಅನ್ನು ಪರಿಚಯಿಸಿದ್ದು, ಇದೀಗ ವಾಟ್ಸಪ್‌ ಡಾರ್ಕ್‌ ಮೋಡ್ ಫೀಚರ್ ಒದಗಿಸಲು ರೆಡಿಯಾಗಿದೆ.

ಕಣ್ಣಿಗೆ ಹಿತವೆನಿಸಲಿದೆ ವಾಟ್ಸಪ್‌ನ ಹೊಸ 'ಡಾರ್ಕ್‌ ಮೋಡ್' ಫೀಚರ್‌.!

ಹೌದು, ಫೇಸ್‌ಬುಕ್‌ ಒಡೆತನದಲ್ಲಿರುವ ಜನಪ್ರಿಯ ಮೆಸೆಜಿಂಗ್ ಆಪ್‌ 'ವಾಟ್ಸಪ್‌' ಡಾರ್ಕ್‌ ಮೋಡ್ ಆಯ್ಕೆಯನ್ನು ತನ್ನ ಬಳಕೆದಾರರಿಗೆ ಪರಿಚಯಿಸಲು ಮುಂದಾಗಿದೆ. ಬಳಕೆದಾರರಿಗೆ ಶೀಘ್ರದಲ್ಲಿಯೇ ವಾಟ್ಸಪ್‌ನ ಬೀಟಾ 2.19.82 ಅಪ್‌ಡೇಟ್‌ ವರ್ಷನ್‌ನಲ್ಲಿ ಡಾರ್ಕ್‌ಮೋಡ್‌ ಫೀಚರ್‌ ಆಯ್ಕೆ ಲಭ್ಯವಾಗಲಿದ್ದು, ಆಂಡ್ರಾಯ್ಡ್‌ ಮತ್ತು ಐಓಎಸ್‌ ಬಳಕೆದಾರರಿಗೆ ಈ ಫೀಚರ್ ದೊರೆಯಲಿದೆ

ಕಣ್ಣಿಗೆ ಹಿತವೆನಿಸಲಿದೆ ವಾಟ್ಸಪ್‌ನ ಹೊಸ 'ಡಾರ್ಕ್‌ ಮೋಡ್' ಫೀಚರ್‌.!

ವಾಟ್ಸಪ್‌ ಅಪ್‌ಡೇಟ್‌ ವರ್ಷನ್‌ನಲ್ಲಿ 'ಡಾರ್ಕ್‌ ಮೋಡ್' ಆಯ್ಕೆ ಸೇರಿಕೊಳ್ಳಲಿದ್ದು, ಸೆಟ್ಟಿಂಗ್ಸ್‌ನಲ್ಲಿ ಬಳಕೆದಾರರು ಈ ಆಯ್ಕೆಯನ್ನು ಆನ್‌ ಮಾಡಿಕೊಂಡಾಗ, ವಾಟ್ಸಪ್‌ ಬ್ಯಾಕ್‌ಗ್ರೌಂಡ್‌ ಕಪ್ಪು ಬಣ್ಣದಲ್ಲಿ ಕಾಣಿಸಿಕೊಳ್ಳಲಿದೆ. ಈ ಮೂಲಕ ಸ್ಮಾರ್ಟ್‌ಪೋನಿನ ಡಿಸ್‌ಪ್ಲೇಯ ಪ್ರಖರತೆಯ ಪ್ರಮಾಣವನ್ನು ತಗ್ಗಿಸಲಿದ್ದು, ರಾತ್ರಿ ವಾಟ್ಸಪ್‌ನಲ್ಲಿ ಡಾರ್ಕ್‌ಮೋಡ್‌ ಆಯ್ಕೆಯ ಬಳಕೆ ಹಿತಕರ ಎನಿಸಲಿದೆ.

ಕಣ್ಣಿಗೆ ಹಿತವೆನಿಸಲಿದೆ ವಾಟ್ಸಪ್‌ನ ಹೊಸ 'ಡಾರ್ಕ್‌ ಮೋಡ್' ಫೀಚರ್‌.!

ಡಾರ್ಕ್‌ಮೋಡ್‌ ಡಿಸ್‌ಪ್ಲೇ ಕೇವಲ ಕಣ್ಣಿಗೆ ಹಿತಕರ ಎನಿಸುವುದಷ್ಟೆ ಅಲ್ಲದೇ, ಸ್ಮಾರ್ಟ್‌ಫೋನ್‌ ಬ್ಯಾಟರಿ ಉಳಿಕೆಗೂ ಉಪಯುಕ್ತವಾಗಿದೆ. ಬ್ರೈಟ್‌ನೆಸ್‌ ಡಿಸ್‌ಪ್ಲೇ ಬಳಸಿಕೊಳ್ಳುವುದಕ್ಕಿಂತ ಕಡಿಮೆ ಬ್ಯಾಟರಿಯನ್ನು ಡಾರ್ಕ್‌ ಮೋಡ್ ಡಿಸ್‌ಪ್ಲೇ ಬಳಸಿಕೊಳ್ಳಲಿದೆ. ಈಗಾಗಲೇ ಫೇಸ್‌ಬುಕ್‌, ಫೇಸ್‌ಬುಕ್‌ ಮೆಸೆಂಜರ್, ಯೂಟ್ಯೂಬ್ ಮತ್ತು ಟ್ವಿಟ್ಟರ್ ತಾಣಗಳು ಡಾರ್ಕ್‌ಮೋಡ್‌ ಆಯ್ಕೆಯನ್ನು ಅಳವಡಿಸಿಕೊಂಡಿದೆ.

ವಾಟ್ಸಪ್‌ ಆಪ್‌ನಲ್ಲಿ ಡಾರ್ಕ್‌ ಮೋಡ್ ಫೀಚರ್‌ ನಿರೀಕ್ಷೆಯಲ್ಲಿದ್ದ ಬಳಕೆದಾರರು ಇದೀಗ ಖುಷಿ ಆಗಿದ್ದು, ವಾಟ್ಸಪ್‌ನಲ್ಲಿ ಡಾರ್ಕ್‌ಮೋಡ್‌ ಸಂಪೂರ್ಣ ಕಡು ಕಪ್ಪು ಬಣ್ಣವನ್ನು ಹೊಂದಿರುವುದಿಲ್ಲ, ಬದಲಾಗಿ ಗ್ರೇ ಬಣ್ಣದ ಶೇಡ್‌ನಲ್ಲಿ ಇರಲಿದೆ ಎನ್ನಲಾಗುತ್ತಿದೆ. ಆದರೆ OLED ಡಿಸ್‌ಪ್ಲೇಯನ್ನು ಹೊಂದಿರುವ ಸ್ಮಾರ್ಟ್‌ಫೋನ್‌ಗಳಲ್ಲಿ ಈ ಆಯ್ಕೆ ಪರಿಣಾಮಕಾರಿಯಾಗಿ ಗೋಚರಿಸುವುದಿಲ್ಲ ಎಂದು ಹೇಳಲಾಗುತ್ತಿದೆ.

Best Mobiles in India

English summary
WhatsApp Beta version 2.19.82 comes with Dark Mode feature, which you can’t use: Report.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+