ವಾಟ್ಸಪ್‌ ಹೊಸ ಫೀಚರ್; ಆಟೋಮ್ಯಾಟಿಕ್ ಆಗಿ ಪ್ಲೇ ಆಗಲಿದೆ ವಾಯಿಸ್‌ ಮೆಸೆಜ್!

|

ವಾಟ್ಸಪ್‌ ಆಪ್‌ ತನ್ನ ಅತ್ಯುತ್ತಮ ಫೀಚರ್ಸ್‌ಗಳಿಂದ ಜನಪ್ರಿಯವಾಗಿದ್ದು, ಅತೀ ಹೆಚ್ಚು ಬಳಕೆದಾರರನ್ನು ಹೊಂದಿದೆ. ಇತ್ತೀಚಿಗೆ ಡಾರ್ಕ್‌ ಮೋಡ್‌ ಫೀಚರ್‌ ಅನ್ನು ಅಳವಡಿಸುವುದಾಗಿ ಸುದ್ದಿ ಮಾಡಿರುವ ವಾಟ್ಸಪ್‌ ಇದೀಗ ತನ್ನ ಬಳಕೆದಾರರಿಗೆ ಮತ್ತೆ ನೂತನ ಫೀಚರ್ ಒಂದನ್ನು ಪರಿಚಯಿಸಲು ಮುಂದಾಗಿದೆ. ಬಳಕೆದಾರರಿಗೆ ಈ ಫೀಚರ್‌ ಖುಷಿ ಕೊಡಲಿದೆ.

ವಾಟ್ಸಪ್‌ ಹೊಸ ಫೀಚರ್; ಆಟೋಮ್ಯಾಟಿಕ್ ಆಗಿ ಪ್ಲೇ ಆಗಲಿದೆ ವಾಯಿಸ್‌ ಮೆಸೆಜ್!

ಹೌದು, ವಾಟ್ಸಪ್‌ ಚಾಟ್‌ ಮಾಡುತ್ತಿರುವಾಗ ಬರುವ ವಾಯಿಸ್‌ ಮೆಸೆಜ್‌ಗಳು ಆಟೋಮ್ಯಾಟಿಕ್ ಆಗಿ ಪ್ಲೇ ಆಗುವ ಆಯ್ಕೆಯನ್ನು ಬಳಕೆದಾರರಿಗೆ ಪರಿಚಯಿಸಲು ಸಜ್ಜಾಗಿದ್ದು, ಬಳಕೆದಾರರು ಪ್ಲೇ ಬಟನ್‌ ಒತ್ತುವ ಅಗತ್ಯ ಇರುವುದಿಲ್ಲ. ಈ ಹೊಸ ಫೀಚರ್‌ ಶೀಘ್ರದಲ್ಲಿಯೇ ವಾಟ್ಸಪ್ ಅನ್ನು ಸೇರಿಕೊಳ್ಳಲಿದ್ದು, 2.19.86 ಬೀಟಾ ಅಪ್‌ಡೇಟ್‌ ವರ್ಷನ್‌ನಲ್ಲಿ ದೊರೆಯಲಿದೆ ಎನ್ನಲಾಗುತ್ತಿದೆ.

ವಾಟ್ಸಪ್‌ ಹೊಸ ಫೀಚರ್; ಆಟೋಮ್ಯಾಟಿಕ್ ಆಗಿ ಪ್ಲೇ ಆಗಲಿದೆ ವಾಯಿಸ್‌ ಮೆಸೆಜ್!

ಮೆಸೆಜ್‌ ಮಾಡುತ್ತಿರುವಾಗ ಬರುವ ವಾಯಿಸ್‌ ಮೆಸೆಜ್‌ಗಳನ್ನು ಕೇಳಲು ಪ್ಲೇ ಬಟನ್ ಪ್ರೆಸ್‌ ಮಾಡುವ ಅವಶ್ಯಕತೆ ಇರುವುದಿಲ್ಲ, ಬಂದಿರುವ ವಾಯಿಸ್‌ ಮೆಸ್‌ಜಗಳು ಆಟೋಮ್ಯಾಟಿಕ್ ಆಗಿ ಪ್ಲೇ ಆಗುತ್ತದೆ ನೀವು ಕೇಳಿ ರಿಪ್ಲೇ ಮಾಡಬಹುದಾಗಿದೆ. ಒಂದು ವೇಳೆ ಒಂದಕ್ಕಿಂತ ಹೆಚ್ಚು ವಾಯಿಸ್‌ ಮೆಸೆಜ್‌ಗಳು ಬಂದರೇ, ಪ್ರತಿಯೊಂದಕ್ಕೂ ಪ್ಲೇ ಬಟನ್ ಒತ್ತುವ ಅಗತ್ಯ ಇರುವುದಿಲ್ಲ, ಬದಲಾಗಿ ಅವುಗಳು ಕಾಲನುಕ್ರಮದಲ್ಲಿ ಆಟೋಮ್ಯಾಟಿಕ್‌ ಆಗಿ ಪ್ಲೇ ಆಗುತ್ತವೆ.

ವಾಟ್ಸಪ್‌ ಹೊಸ ಫೀಚರ್; ಆಟೋಮ್ಯಾಟಿಕ್ ಆಗಿ ಪ್ಲೇ ಆಗಲಿದೆ ವಾಯಿಸ್‌ ಮೆಸೆಜ್!

ವಾಟ್ಸಪ್‌ ಅಪ್‌ಡೇಟ್‌ ವರ್ಷನ್‌ನಲ್ಲಿ ಪಿಚ್ಚರ್‌ ಟು ಪಿಚ್ಚರ್ (PiP) ಬದಲಾವಣೆಗಳು ಕಂಡುಬರಲಿದ್ದು, ಬಳಕೆದಾರರಿಗೆ ನೂತನ ಫೀಚರ್‌ ಹೆಚ್ಚು ಅನುಕೂಲ ಆಗಲಿದೆ. ಆಂಡ್ರಾಯ್ಡ್‌ 8 ಓರಿಯೊ ಮತ್ತು ಅದಕ್ಕಿಂತ ಹೆಚ್ಚಿನ ಆಪರೇಟಿಂಗ್ ಸಿಸ್ಟಮ್ ಹೊಂದಿರುವ ಸ್ಮಾರ್ಟ್‌ಫೋನ್‌ಗಳಲ್ಲಿ ಮಾತ್ರ ನೂತನ ಫೀಚರ್ ಲಭ್ಯವಾಗಲಿದೆ ಎಂದು ಲೀಕ್ ಮಾಹಿತಿಗಳಿಂದ ತಿಳಿದು ಬಂದಿದೆ.

ಇದರೊಂದಿಗೆ ವಾಟ್ಸಪ್ ಡಾರ್ಕ್‌ ಮೋಡ್‌ ಫೀಚರ್‌ ಆಯ್ಕೆಯನ್ನು ಸಹ ಪರಿಚಯಿಸಲು ಸಿದ್ಧವಾಗಿದ್ದು, ಈ ಆಯ್ಕೆಯು ಸಹ ವಾಟ್ಸಪ್ ಅಪ್‌ಡೇಟ್‌ ವರ್ಷನ್‌ನಲ್ಲಿ ಶೀಘ್ರದಲ್ಲೇ ದೊರೆಯಲಿದೆ. ಇನ್ನೂ ಆಂಡ್ರಾಯ್ಡ್‌ ಬಳಕೆದಾರರಿಗೆ ವಾಟ್ಸಪ್‌ ಬಯೋಮೇಟ್ರಿಕ್ ದೃಢಿಕರಣ ಭದ್ರತೆಯ ಫೀಚರ್‌ ಅನ್ನು ಒದಗಿಸುವ ತಯಾರಿಯಲ್ಲಿದ್ದು, ಈ ಆಯ್ಕೆಯು ಸಹ ಲಭ್ಯವಾಗಲಿದೆ.

Best Mobiles in India

English summary
WhatsApp is working towards a new feature that will automatically enable the playing of voice notes in consecutive order.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X