ಮತ್ತೊಂದು ಓರ್ಜಿನಲ್ ವಾಟ್ಸ್‌ಆಪ್ ಬಂದಿದೆ ನೋಡಿದ್ರಾ..?
ಭಾರತ ಸೇರಿದಂತೆ ವಿಶ್ವದಲ್ಲೇ ಅತೀ ಹೆಚ್ಚು ಬಳಕೆದಾರರನ್ನು ತನ್ನ ಒಡಲಿಗೆ ಸೇರಿಸಿಕೊಳ್ಳುತ್ತಿರುವ ವಾಟ್ಸ್ಆಪ್ ನಿಂದ ಆದಾಯದ ನಿರೀಕ್ಷೆಯಲ್ಲಿದ್ದ ಫೇಸ್‌ಬುಕ್ ಇದಕ್ಕಾಗಿ ಹೊಸದೊಂದು ವಾಟ್ಸ್ಆಪ್ ಅನ್ನು ಬಿಡುಗಡೆ ಮಾಡಲು ಮುಂದಾಗಿದೆ.
ಹಿಂದೆ ವಾಟ್ಸ್‌ಆಪ್ ಗೋಲ್ಡ್, ವಾಟ್ಸ್ಆಪ್ ಡಾರ್ಕ್ ಮತ್ತು ವಾಟ್ಸ್‌ಆಪ್ ಪ್ಲಸ್ ಎನ್ನುವ ಹಲವು ಆವೃತ್ತಿಗಳ ಹೆಸರಿನಲ್ಲಿ ಫೇಕ್ ವಾಟ್ಸ್‌ಆಪ್ ಗಳು ಆಪ್ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿದ್ದವು. ಆದರೆ ಇದ್ಯಾವುದು ಫೇಸ್‌ಬುಕ್ ಒಡೆತನದ ಓರ್ಜಿನಲ್ ವಾಟ್ಸ್ಆಪ್ ಆಗಿರಲಿಲ್ಲ. ಕೇವಲ ಒಂದೇ ಒಂದು ಅದುವೆ ವಾಟ್ಸ್‌ಆಪ್ ಚಾಟಿಂಗ್ ಆಪ್.

ಓದಿರಿ: ಐಡಿಯಾದಿಂದ 4G/3G/2G ಬಳಕೆದಾರರಿಗೆ ಹೊಸ ಆಫರ್
ದಿನೇ ದಿನೇ ಭಾರತ ಸೇರಿದಂತೆ ವಿಶ್ವದಲ್ಲೇ ಅತೀ ಹೆಚ್ಚು ಬಳಕೆದಾರರನ್ನು ತನ್ನ ಒಡಲಿಗೆ ಸೇರಿಸಿಕೊಳ್ಳುತ್ತಿರುವ ವಾಟ್ಸ್ಆಪ್ ನಿಂದ ಆದಾಯದ ನಿರೀಕ್ಷೆಯಲ್ಲಿದ್ದ ಫೇಸ್‌ಬುಕ್ ಇದಕ್ಕಾಗಿ ಹೊಸದೊಂದು ವಾಟ್ಸ್ಆಪ್ ಅನ್ನು ಬಿಡುಗಡೆ ಮಾಡಲು ಮುಂದಾಗಿದೆ. ಅದುವೇ ವಾಟ್ಸ್‌ಆಪ್ ಮಾದರಿಯಲ್ಲಿಯೇ ಓರ್ಜಿನಲ್ ಆಗಿರಲಿದೆ. ಆದರೆ ಅದು ಸಾಮಾನ್ಯ ಬಳಕೆಗೆ ಅಲ್ಲ.

ಪ್ಲೇ ಸ್ಟೊರಿನಲ್ಲಿ ಲಭ್ಯ ಹೊಸ ವಾಟ್ಸ್‌ಆಪ್:
ಈಗಾಗಲೇ ವಾಟ್ಸ್‌ಆಪ್ ಬಿಸ್ನೆಸ್ ಮಾರುಕಟ್ಟೆಯನ್ನು ಪ್ರವೇಶಿಸಿದ್ದು, ವಾಟ್ಸ್‌ಆಪ್ ಬಿಸ್ನೆಸ್ ಮಾಡುವವರಿಗಾಗಿ ವಾಟ್ಸ್‌ಆಪ್ ಬಿಸ್ನೆಸ್ ಆಪ್ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿದ್ದು, ಡೌನ್‌ಲೋಡ್ ಮಾಡಿಕೋಳ್ಳಬೇಕಾಗಿದೆ. ಆದರೆ ಇದು ಬೀಟಾ ಆವೃತ್ತಿಯಲ್ಲಿ ಮಾತ್ರವೇ ಲಭ್ಯವಿದೆ ಎನ್ನಲಾಗಿದೆ.

ಬಿಸ್ನೆಸ್ ಗಾಗಿಯೇ ಪ್ರತ್ಯೇಕ:
ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರು ವಾಟ್ಸ್‌ಆಪ್ ಚಾಟ್ ಆಪ್‌ಗಿಂತಲೂ ಈ ಬಿಸ್ನೆಸ್ ಆಪ್ ಡಿಫ್‌ರೆಂಟ್ ಆಗಿ ಕಾರ್ಯನಿರ್ವಹಿಸಲಿದ್ದು, ಸದ್ಯ ಇರುವ ಆಪ್ ಹಾಗೂ ಹೊಸ ಆಪ್ ನಡುವೆ ಸಾಕಷ್ಟು ಬದಲಾವಣೆಗಳನ್ನು ಕಾಣಬಹುದಾಗಿದೆ. ಈ ಎರಡು ಆಪ್‌ಗಳು ಬೇರೆ ಬೇರೆ ಯಾಗಿಯೇ ಒಂದೇ ಫೋನ್‌ನಲ್ಲಿ ಕಾರ್ಯನಿರ್ವಹಿಸಲು ಶಕ್ತವಾಗಿದೆ.

ಆಪ್ ಸಾಮಾನ್ಯವಾಗಿಲ್ಲ:
ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿರುವ ವಾಟ್ಸ್‌ಆಪ್ ಬಿನ್ಸೆಸ್ ಆಪ್ ಅನ್ನು ಸುಲಭವಾಗಿ ಡೌನ್‌ಲೋಡ್ ಮಾಡಲು ಸಾಧ್ಯವಿಲ್ಲ ಎನ್ನಲಾಗಿದೆ. ಇದಕ್ಕಾಗಿ ಒಂದು ಟೆಸ್ಟ್ ಇದ್ದು ಅದನ್ನು ಪೂರ್ಣ ಮಾಡಿ, ವಿವರಗಳನ್ನು ನೀಡಿದ ನಂತರದಲ್ಲಿ ಮಾತ್ರವೇ ಬಳಕೆಗೆ ಮುಕ್ತವಾಗಲಿದೆ.


Click it and Unblock the Notifications








