Subscribe to Gizbot

ಹೊಸವರ್ಷದ ಆರಂಭದಲ್ಲಿಯೇ ಕೈಕೊಟ್ಟ ವಾಟ್ಸ್ಆಪ್!!

Written By:

ವಿಶ್ವದಲ್ಲಿಯೇ ಅತ್ಯಂತ ಹೆಚ್ಚು ಬಳಕೆಯಲ್ಲಿರುವ ವಾಟ್ಸ್‌ಆಪ್ ಕ್ರಾಶ್ ಹೊಸವರ್ಷದ ಆರಂಭದಲ್ಲಿಯೇ ಆಗಿದೆ.! ಹೊಸ ವರ್ಷಕ್ಕೆ (2018) ಕಾಲಿಡುತ್ತಿದ್ದಂತೆಯೇ ಬಹುನೆಚ್ಚಿನ ಮೆಸೆಂಜರ್ ಆಪ್ ಮಧ್ಯರಾತ್ರಿ 12:10 ರಿಂದ 1:00 ಗಂಟೆಯವರೆಗೆ ಯಾವುದೇ ಕಾರ್ಯನಿರ್ವಹಿಸದೆ ಸ್ತಬ್ದವಾಗಿದೆ.!!

ಕೇವಲ ಭಾರತದಲ್ಲಿ ಮಾತ್ರವಲ್ಲದೆ, ವಿಶ್ವದಾದ್ಯಂತ ಈ ಸಮಸ್ಯೆ ಕಾಣಿಸಿಕೊಂಡಿದ್ದು, ಈ ಕುರಿತು ಹಲವರು ಟ್ವೀಟ್ ಮಾಡಿದ್ದಾರೆ. ಹೊಸ ವರ್ಷದಂದು ಅತಿಯಾಗಿ ಸಂದೇಶಗಳ ವಿನಿಮಯವಾಗುತ್ತಿದ್ದರಿಂದಲೇ ವಾಟ್ಸ್‌ಆಪ್ ಕ್ರಾಶ್ ಆಗಿದೆ ಎಂದು ಹೇಳಲಾಗಿದ್ದು, ವಾಟ್ಸ್‌ಆಪ್ ಜನರನ್ನು ವಿನೂತನವಾಗಿ ಸ್ವಾಗತಿಸಿದೆ.!!

ಹೊಸವರ್ಷದ ಆರಂಭದಲ್ಲಿಯೇ ಕೈಕೊಟ್ಟ ವಾಟ್ಸ್ಆಪ್!!

ಅತ್ಯಂತ ಹೆಚ್ಚು ಬಳಕೆಯಲ್ಲಿರುವ ವಾಟ್ಸ್ಆಪ್ ಹೊಸ ವರ್ಷದಂದೇ ಕೈಕೊಟ್ಟಿದ್ದರಿಂದ ಕೆಲಕಾಲ ಎಲ್ಲರಿಗೂ ಸಮಸ್ಯೆಯಾಗಿತ್ತು. ಇನ್ನು ಸಂದೇಶಗಳನ್ನು ಕಳುಹಿಸಲು ವಾಟ್ಸ್‌ಆಪ್ ಅನ್ನೇ ನೆಚ್ಚಿಕೊಂಡಿದ್ದ ಹಲವರಿಗೆ ತಮ್ಮ ಆಪ್ತರಿಗೆ ಸಂದೇಶ ಕಳಿಸಲಾಗದೆ ಪರದಾಡಬೇಕಾದ ಪರಿಸ್ಥಿತಿ ಎದುರಾಗಿತ್ತು.!!

ಹೊಸವರ್ಷದ ಆರಂಭದಲ್ಲಿಯೇ ಕೈಕೊಟ್ಟ ವಾಟ್ಸ್ಆಪ್!!
Aadhaar Number ವೆರಿಫಿಕೇಷನ್ ಮಾಡುವುದು ಹೇಗೆ..?

ಇನ್ನು ವಾಟ್ಸ್ಆಪ್ ಕ್ರಾಶ್ ಆಗಿರುವ ಬಗ್ಗೆ ವಾಟ್ಸ್‌ಆಪ್ ಸಂಸ್ಥೆ ಯಾವುದೇ ಮಾಹಿತಿಯನ್ನು ನೀಡಿಲ್ಲ. ಆದರೆ, ಈ ಹಿಂದೆಯೂ ಹೆಚ್ಚು ಜನರು ಒಮ್ಮೆಲೇ ವಾಟ್ಸ್ಆಪ್ ಬಳಸಿದರ ಪರಿಣಾಮ ಕ್ರಾಶ್ ಆಗಿರುವ ನಿದರ್ಶನಗಳಿವೆ. ಹಾಗಾಗಿ, ಅತಿಯಾಗಿ ಸಂದೇಶಗಳ ವಿನಿಮಯವಾಗುತ್ತಿದ್ದರಿಂದಲೇ ವಾಟ್ಸ್‌ಆಪ್ ಕ್ರಾಶ್ ಆಗಿದೆ ಎಂದು ಹೇಳಲಾಗಿದೆ.!!

ಓದಿರಿ: 2017ನೇ ವರ್ಷದಲ್ಲಿನ ಟಾಪ್ ಗ್ಯಾಜೆಟ್‌ಗಳ ಲೀಸ್ಟ್!!..ವರ್ಷದ ಬೆಸ್ಟ್ ಮೊಬೈಲ್ ಇದು!!

English summary
The messaging app is reported to have gone down across India and America. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot