Subscribe to Gizbot

2018ರಲ್ಲಿ ವಾಟ್ಸ್ಆಪ್ ಮೊದಲ ಅಪ್‌ಡೇಟ್!!..ಹೊಸ ಆಯ್ಕೆ ಏನು ಗೊತ್ತಾ?

Written By:

ಜನಪ್ರಿಯ ಇನ್‌ಸ್ಟೆಂಟ್ ಮೆಸೇಜಿಂಗ್ ಫ್ಲಾರ್ಟ್‌ಫಾರ್ಮ್ ವಾಟ್ಸ್ಆಪ್ 2018ರಲ್ಲಿ ತನ್ನ ಮೊದಲ ಅಪ್‌ಡೇಟ್ ಪರಿಚಯಿಸಿದೆ.! ವಾಟ್ಸ್ಆಪ್‌ನ ಬೀಟಾ ಅಪ್ಲಿಕೇಶನ್‌ನಲ್ಲಿ ಹೊಸದೊಂದು ಫೀಚರ್ ಕಾಣಿಸಿಕೊಂಡಿದ್ದು, ವಿಡಿಯೋ ಚಾಟಿಂಗ್‌ಗಾಗಿ ವಾಟ್ಸ್ಆಪ್ ಹೊಸ ಆಯ್ಕೆಯಯೊಂದನ್ನು ನೀಡಿದೆ.!!

ಧ್ವನಿ ಮತ್ತು ವೀಡಿಯೋ ಕರೆಗಳ ನಡುವೆ ತ್ವರಿತ ಸ್ವಿಚ್ ಅನ್ನು ವಾಟ್ಸ್ಆಪ್ ನೀಡಲಿದ್ದು, ಧ್ವನಿಕರೆ ಮಾಡುವಾಗ ನೇರವಾಗಿ ವಿಡಿಯೋಕರೆಗೆ ಕನೆಕ್ಟ್ ಆಗುವಂತಹ ಫೀಚರ್ ಅನ್ನು ವಾಟ್ಸ್ಆಪ್ ಪರಿಚಯಿಸಿದೆ. ಹಾಗಾಗಿ, ನೆಟ್‌ವರ್ಕ್ ನೋಡಿಕೊಂಡು ವಾಟ್ಸ್ಆಪ್ ಧ್ವನಿಕರೆಯಲ್ಲಿರುವಾಗಲೇ ನೇರವಾಗಿ ವಿಡಿಯೋಕರೆಗೆ ಕನೆಕ್ಟ್ ಆಗಬಹುದು.!!

2018ರಲ್ಲಿ ವಾಟ್ಸ್ಆಪ್ ಮೊದಲ ಅಪ್‌ಡೇಟ್!!..ಹೊಸ ಆಯ್ಕೆ ಏನು ಗೊತ್ತಾ?

ಇನ್ನು ದ್ವನಿಕರೆಯ ಮಧ್ಯೆ ನೀವು ವೀಡಿಯೊ ಕರೆಯನ್ನು ಮಾಡಬೇಕಿದ್ದರೆ ಆ ವ್ಯಕ್ತಿಗೆ ವಿಡಿಯೋ ಐಕಾನ್ ಕ್ಲಿಕ್ ಮಾಡಿ ಪಾಪ್ ಅಪ್ ಕಳುಹಿಸಬೇಕು. ಆ ವ್ಯಕ್ತಿಯು ನಿಮ್ಮ ವಿನಂತಿಯನ್ನು ಸ್ವೀಕರಿಸಿದರೆ, ಆ ಕರೆ ಸ್ವಯಂಚಾಲಿತವಾಗಿ ವೀಡಿಯೊ ಕರೆಗೆ ಬದಲಾಗುತ್ತದೆ ಎಂದು ವಾಟ್ಸ್‌ಆಪ್ ಬೀಟಾಇನ್ಫೊ ತಿಳಿಸಿದೆ. !!

2018ರಲ್ಲಿ ವಾಟ್ಸ್ಆಪ್ ಮೊದಲ ಅಪ್‌ಡೇಟ್!!..ಹೊಸ ಆಯ್ಕೆ ಏನು ಗೊತ್ತಾ?

ವಾಟ್ಸ್ಆಪ್‌ನ ಈ ಹೊಸ ವೈಶಿಷ್ಟ್ಯವು ವಾಟ್ಸ್ಆಪ್ ಬೀಟಾ 2.18.4 ಆವೃತ್ತಿಯಲ್ಲಿ ಲಭ್ಯವಿದ್ದು, ಈ ಆಯ್ಕೆಯನ್ನು ಪಡೆಯಲು ಬಳಕೆದಾರರೀರ್ವರು ಈ ಆವೃತ್ತಿಯನ್ನು ಡೌನ್‌ಲೋಡ್ ಮಾಡಿರಬೇಕು.!! ಪ್ರಸ್ತುತ ವಾಟ್ಸ್ಆಪ್ ಬೀಟಾ ಪ್ರೋಗ್ರಾಂಗೆ ಸೇರಿಕೊಂಡ ಬಳಕೆದಾರರಿಗೆ ಈ ಆಯ್ಕೆ ಲಭ್ಯವಿದೆ.!!

How to save WhatsApp Status other than taking screenshots!! Kannada

Source: whatsapp beta info

ಓದಿರಿ: ಕೆಂಪು ಬಣ್ಣದಿಂದ ಕಣ್ಣುಕುಕ್ಕುತ್ತಿದೆ 'ಒನ್‌ಪ್ಲಸ್ 5ಟಿ' ಸ್ಪೆಷಲ್ ಎಡಿಷನ್!!..ಮಾರಾಟ ಯಾವಾಗ?

English summary
The popular instant messaging platform, WhatsApp has silently introduced its first major feature of 2018.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot