ಸದ್ಯವೇ ವಾಟ್ಸ್‌ಆಪ್‌ ತೆಕ್ಕೆಗೆ ಸೇರಲಿದೆ ಹೊಸದೊಂದು ವೈಶಿಷ್ಟ್ಯ!!

ವಾಟ್ಸ್‌ಆಪ್ ಮುಖಾಂತರ ಒಬ್ಬರಿಂದ ಇನ್ನೊಬ್ಬರಿಗೆ ಹರಿದಾಡುತ್ತಿರುವ ಮೋಸದ ಪೋಸ್ಟ್‌ಗಳು ಮತ್ತು ಲಿಂಕ್‌ಗಳ ಬಗ್ಗೆ ಎಚ್ಚರಿಸಲು ವಾಟ್ಸ್‌ಆಪ್ ಸಂಸ್ಥೆ ಹೊಸ ಆಯ್ಕೆಯನ್ನು ತರಲು ಮುಂದಾಗಿದೆ.

|

ವಾಟ್ಸ್‌ಆಪ್ ಮುಖಾಂತರ ಒಬ್ಬರಿಂದ ಇನ್ನೊಬ್ಬರಿಗೆ ಹರಿದಾಡುತ್ತಿರುವ ಮೋಸದ ಪೋಸ್ಟ್‌ಗಳು ಮತ್ತು ಲಿಂಕ್‌ಗಳ ಬಗ್ಗೆ ಎಚ್ಚರಿಸಲು ವಾಟ್ಸ್‌ಆಪ್ ಸಂಸ್ಥೆ ಹೊಸ ಆಯ್ಕೆಯನ್ನು ತರಲು ಮುಂದಾಗಿದೆ. ಸ್ಪ್ಯಾಮ್ ಅಥವಾ ಸುಳ್ಳು ಸಂದೇಶಗಳನ್ನು ಗ್ರಾಹಕರಿಗೆ ತೋರಿಸಬಹುದಾದ ವೈಶಿಷ್ಟ್ಯವನ್ನು ಈ ಆಯ್ಕೆ ಹೊಂದಿರಲಿದೆ.!!

ಹೆಚ್ಚು ಜನಪ್ರಿಯವಾಗಿರುವ ವಾಟ್ಸ್‌ಆಪ್‌ನಲ್ಲಿ ಗ್ರೂಪಿನಿಂದ ಮತ್ತೊಂದು ಗ್ರೂಪಿಗೆ ಅಥವಾ ವಯಕ್ತಿಕವಾಗಿಯೂ ಹೆಚ್ಚು ಹರಿದಾಡುವ ಸಂದೇಶಗಳಲ್ಲಿ 'ಫಾರ್ವರ್ಡೆಡ್ ಮೆಸೇಜ್' ಎಂದು ಸ್ಪಷ್ಟವಾಗಿ ತೋರಿಸುವ ವೈಶಿಷ್ಟ್ಯವೊಂದನ್ನು ವಾಟ್ಸ್‌ಆಪ್ ಸಂಸ್ಥೆ ಅಭಿವೃದ್ದಿ ಮಾಡುತ್ತಿದೆ ಎಂದು ಪ್ರಮುಖ ಮಾಧ್ಯಮಗಳು ವರದಿ ಮಾಡಿವೆ.!!

ಸದ್ಯವೇ ವಾಟ್ಸ್‌ಆಪ್‌ ತೆಕ್ಕೆಗೆ ಸೇರಲಿದೆ ಹೊಸದೊಂದು ವೈಶಿಷ್ಟ್ಯ!!

ಮೋಸದ ಪೋಸ್ಟ್‌ಗಳು ಅಥವಾ ಲಿಂಕ್‌ಗಳನ್ನು ಗ್ರೂಪುಗಳಿಗೆ ಗುಂಪು ಗುಂಪಾಗಿ ಪೋಸ್ಟ್‌ಗಳನ್ನು ಫಾರ್ವರ್ಡ್ ಮಾಡುವವರನ್ನು ಗುರುತಿಸಿ ಅವುಗಳ ಮೇಲೆ ವಾಟ್ಸ್‌ಆಪ್ ಲೇಬಲ್ ಅಂಟಿಸಲು ಮುಂದಾಗಿದೆ. ಹಾಗಾಗಿ, ಗುಂಪು ಗುಂಪಾಗಿ ಪೋಸ್ಟ್‌ ಆಗುವ ಪೋಸ್ಟ್‌ಗಳ ಮೇಲೆ ಇನ್ಮುಂದೆ ಗುಳ್ಳೆಯ ರೂಪದಲ್ಲಿ 'ಫಾರ್ವರ್ಡೆಡ್ ಮೆಸೇಜ್' ಎಂಬ ಲೇಬಲ್ ಇರುತ್ತದೆ.!!

ಸದ್ಯವೇ ವಾಟ್ಸ್‌ಆಪ್‌ ತೆಕ್ಕೆಗೆ ಸೇರಲಿದೆ ಹೊಸದೊಂದು ವೈಶಿಷ್ಟ್ಯ!!

ಸ್ಪ್ಯಾಮ್ ಸಂದೇಶಗಳಲ್ಲಿ ಅನಗತ್ಯ ಜಾಹೀರಾತುಗಳು ಅಥವಾ ಸುಳ್ಳು ಸುದ್ದಿಗಳೋ ಇಲ್ಲವೇ ಹಾನಿಕಾರಕ ಲಿಂಕ್‌ಗಳು ಇರುತ್ತಿದ್ದವು. ಇವುಗಳನ್ನು ನಂಬುತ್ತಿದ್ದ ಹಲವರು ಮೋಸಹೋಗುವ ಸಂಭವ ಹೆಚ್ಚಿದ್ದರಿಂದ ವಾಟ್ಸ್‌ಆಪ್ ನೂತನ ವೈಶಿಷ್ಟ್ಯವನ್ನು ತರುತ್ತಿದೆ. ಈ ವೈಶಿಷ್ಟ್ಯವು ಸದ್ಯಕ್ಕೆ ಪರೀಕ್ಷಾ ಹಂತದಲ್ಲಿದ್ದು, ಶೀಘ್ರವೇ ಬಿಡುಗಡೆಯಾಗಲಿದೆ ಎನ್ನಲಾಗಿದೆ.!!

How to save WhatsApp Status other than taking screenshots!! Kannada

ಓದಿರಿ: ಮೊಬೈಲ್ ಫೋನ್ ಕಳೆದರೆ ಆನ್‌ಲೈನಿನಲ್ಲಿಯೇ ದೂರು ಸಲ್ಲಿಸುವುದು ಹೇಗೆ?

Best Mobiles in India

English summary
WhatsApp 'Forwarded Message' Feature Spotted Testing, Aims to Reduce Spam. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X