Subscribe to Gizbot

ಬೇರೆಯವರ ವಾಟ್ಸ್‌ಆಪ್ ಗ್ರೂಪ್ ಚಾಟ್ ಹ್ಯಾಕ್ ಮಾಡಬಹುದು..! ಹೌದು..!

Written By:

ದೇಶದಲ್ಲಿ ಅತೀ ಹೆಚ್ಚು ಮಂದಿ ಬಳಕೆ ಮಾಡಿಕೊಳ್ಳುವ ಸೋಶಿಯಲ್ ಮೆಸೆಂಜಿಗ್ ಆಪ್ ವಾಟ್ಸ್‌ಆಪ್ ತನ್ನ ಬಳಕೆದಾರರ ಸುಕ್ಷತೆಗಾಗಿ ಎಂಡ್ ಟು ಎಂಡ್ ಎನ್ಕ್ರಿಪ್ಷನ್ ಸೇವೆಯನ್ನು ನೀಡುತ್ತಿದೆ. ಇದರಿಂದಾಗಿ ವಾಟ್ಸ್‌ಆಪ್ ಸಂದೇಶಗಳನ್ನು ಮತ್ತೊಬ್ಬರು ಕದ್ದು ನೋಡಲು ಸಾಧ್ಯವಿಲ್ಲ ಮತ್ತು ಹ್ಯಾಕ್ ಮಾಡಲು ಸಾಧ್ಯವಿಲ್ಲ ಎನ್ನಲಾಗಿದೆ. ಆದರೆ ವಾಟ್ಸ್‌ಆಪ್ ಗ್ರೂಪ್ ಚಾಟ್ ಅನ್ನು ಸುಲಭವಾಗಿ ಹ್ಯಾಕ್ ಮಾಡಬಹುದು ಎಂಬ ಆಘಾತಕಾರಿ ಮಾಹಿತಿಯೊಂದು ಲಭ್ಯವಾಗಿದೆ.

ಬೇರೆಯವರ ವಾಟ್ಸ್‌ಆಪ್ ಗ್ರೂಪ್ ಚಾಟ್ ಹ್ಯಾಕ್ ಮಾಡಬಹುದು..! ಹೌದು..!

ವಾಟ್ಸ್‌ಆಪ್ ದಿನದಿಂದ ದಿನಕ್ಕೆ ತನ್ನ ಬಳಕೆದಾರರ ಸಂಖ್ಯೆಯನ್ನು ಏರಿಕೆ ಮಾಡಿಕೊಳ್ಳುತ್ತಿದ್ದು, ಇದೇ ಸಂದರ್ಭದಲ್ಲಿ ವಾಟ್ಸ್‌ಆಪ್ ಎಂಡ್ ಟು ಎಂಡ್ ಎನ್ಕ್ರಿಪ್ಷನ್ ಕುರಿತು ಸಂಶೋಧನೆಯನ್ನು ನಡೆಸುತ್ತಿರುವ ಜರ್ಮನ್ ಸೈಬರ್ ತಜ್ಞರು ವಾಟ್ಸ್‌ಆಪ್ ಗ್ರೂಪ್ ಚಾಟ್ ಮೆಸೇಜ್ ಅನ್ನು ಹ್ಯಾಕ್ ಮಾಡುವುದಲ್ಲದೇ ಚಾಟಿಂಗ್ ಮೇಸೆಜ್‌ಗಳನ್ನು ಸುಲಭವಾಗಿ ಓದಬಹುದು ಎಂದು ತಿಳಿಸಿದ್ದಾರೆ ಎನ್ನಲಾಗಿದೆ.

ಓದಿರಿ: ಹೊಸ ವರ್ಷದಂದು ವಾಟ್ಸ್‌ಆಪ್ ಸ್ಥಗಿತ: ಕಾರಣ ಯಾರು? ವಾಟ್ಸ್‌ಆಪ್ ಹೇಳಿದ್ದೇನು.?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹ್ಯಾಕ್ ಮಾಡಬಹುದು:

ಹ್ಯಾಕ್ ಮಾಡಬಹುದು:

ಗ್ರೂಪ್‌ ಒಂದರಲ್ಲಿ ನಡೆಯುವ ಚಾಟಿಂಗ್ ಅನ್ನು ಹ್ಯಾಕ್ ಮಾಡಲು ಈಗಾಗಲೇ ಹಲವಾರು ರೀತಿಯ ಪ್ರಯತ್ನಗಳು ನಡೆಯುತ್ತಿದೆ ಎಂಡ್ ಟು ಎಂಡ್ ಎನ್ಕ್ರಿಪ್ಷನ್ ಅನ್ನು ಡುಪ್ಲೇಕೆಟ್ ಮಾಡಬಹುದು ಎಂದು ಜರ್ಮನ್ ಸೈಬರ್ ತಜ್ಞರು ತಿಳಿಸಿದ್ದಾರೆ. ಇದಲ್ಲದೇ ವಾಟ್ಸ್‌ಆಪ್ ಸರ್ವರ್ ಹಾಂಡಲ್ ಮಾಡುವವರು ಸಹ ಈ ಮಾದರಿಯಲ್ಲಿ ಹ್ಯಾಕ್ ಮಾಡಬಹುದಾಗಿದೆ.

ವಾಟ್ಸ್‌ಆಪ್ ಬಗ್ ಇದಕ್ಕೆ ಕಾರಣ:

ವಾಟ್ಸ್‌ಆಪ್ ಬಗ್ ಇದಕ್ಕೆ ಕಾರಣ:

ವಾಟ್ಸ್‌ಆಪ್ ಎಂಡ್ ಟು ಎಂಡ್ ಎನ್ಕ್ರಿಪ್ಷನ್ ಕುರಿತು ಸಂಶೋಧನೆ ನಡೆಸುತ್ತಿರುವ ಜರ್ಮನ್ ಸೈಬರ್ ತಜ್ಞರು ವಾಟ್ಸ್‌ಆಪ್‌ನಲ್ಲಿರುವ ಬಗ್‌ ಕಂಡುಹಿಡಿದಿದ್ದು, ಇದರ ಮೂಲಕ ವಾಟ್ಸ್‌ಆಪ್ ಎಂಡ್ ಟು ಎಂಡ್ ಎನ್ಕ್ರಿಪ್ಷನ್ ಡುಪ್ಲಿಕೇಟ್ ಮಾಡಬಹುದು ಎಂದಿದ್ದಾರೆ.

How to save WhatsApp Status other than taking screenshots!! Kannada
ಗ್ರೂಪ್ ಆಡ್‌ಮಿನ್‌ಗಳು:

ಗ್ರೂಪ್ ಆಡ್‌ಮಿನ್‌ಗಳು:

ಇದಲ್ಲದೇ ಗ್ರೂಪ್ ಆಡ್ಮಿನ್‌ಗಳ ಕಣ್ಣು ತಪ್ಪಿಸಿ ಒಮ್ಮೆ ಹ್ಯಾಕರ್ಗಳು ವಾಟ್ಸ್‌ಆಪ್ ಗ್ರೂಪ್ ಪ್ರವೇಶಿಸಬಹುದಾಗಿದೆ. ಇದಲ್ಲದೇ ಗ್ರೂಪ್ ಆಡ್ಮಿನ್‌ಗಳು ರಹಸ್ಯವಾಗಿಯೂ ಗ್ರೂಪ್‌ಗೆ ಹೊಸ ಮೆಂಬರ್ ಅನ್ನು ಸೇರಿಸಬಹುದಾಗಿದೆ. ಇದರಿಂದಾಗಿ ಎಲ್ಲಾ ಮಾಹಿತಿಗಳು ಹ್ಯಾಕರ್ ಗಳ ಪಾಲಾಗುವ ಸಾಧ್ಯತೆಯೂ ಹೆಚ್ಚಾಗಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
WhatsApp Group Chats Can Be Easily Hacked, Even With End-to-End Encryption. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot