Subscribe to Gizbot

ಹೊಸ ವರ್ಷದಂದು ವಾಟ್ಸ್‌ಆಪ್ ಸ್ಥಗಿತ: ಕಾರಣ ಯಾರು? ವಾಟ್ಸ್‌ಆಪ್ ಹೇಳಿದ್ದೇನು.?

Written By:

ಹೊಸ ವರ್ಷದಂದು ಜಗತ್ತಿನ ಅತ್ಯಂತ ಜನಪ್ರಿಯ ಸೋಶಿಯಲ್ ಮೆಸೆಂಜಿಗ್ ತಾಣ ವಾಟ್ಸ್‌ಆಪ್‌ ಸ್ಥಗಿತಗೊಂಡಿದ್ದಕ್ಕೆ ಕಾರಣವೇನು ಎಂಬುದು ಬಹಿರಂಗಗೊಂಡಿದ್ದು, ವಾಟ್ಸ್‌ಆಪ್ ಇದಕ್ಕಿದ್ದ ಹಾಗೇ ಜಾಮ್‌ಗಳು ಭಾರತೀಯರೇ ನೇರಾ ಕಾರಣ ಎನ್ನಲಾಗಿದೆ. ಕಾರಣ ಅಂದು ಒಂದೇ ಸಮಯದಲ್ಲಿ ಸುಮಾರು 200 ಕೋಟಿ ಮೆಸೇಜ್‌ಗಳು ಭಾರತದಲ್ಲೇ ವಿನಿಮಯಗೊಂಡಿದೆ ಎನ್ನಲಾಗಿದೆ.

ಹೊಸ ವರ್ಷದಂದು ವಾಟ್ಸ್‌ಆಪ್ ಸ್ಥಗಿತ: ಕಾರಣ ಯಾರು? ವಾಟ್ಸ್‌ಆಪ್ ಹೇಳಿದ್ದೇನು.?

ಓದಿರಿ: 232 ಬ್ಯಾಂಕ್‌ಗಳ OTP ಕದಿಯುವ ಮಾಲ್ವೇರ್ ಬಂದಿದೆ ! ಈ ಆಪ್‌ಗಳನ್ನು ಡಿಲೀಟ್ ಮಾಡಿ..!

ಈಗಾಗಲೇ ಭಾರತದಲ್ಲಿ ವಾಟ್ಸ್‌ಆಪ್ ಬಳಕೆದಾರರ ಸಂಖ್ಯೆಯೂ ಹೆಚ್ಚಾಗುತ್ತಿದ್ದು, ಡಿಸೆಂಬರ್‌ 31ರ ಮಧ್ಯರಾತ್ರಿ ಭಾರತೀಯರು ಸೇರಿದಂತೆ ಎಲ್ಲಾ ವಾಟ್ಸ್‌ಆಪ್ ಬಳಕೆದಾರರು ಒಂದೇ ಸಮಯದಲ್ಲಿ ತಮ್ಮ ಪ್ರೀತಿ ಪಾತ್ರರಿಗೆ ಶುಭ ಕೋರಲು ಸಂದೇಶವನ್ನು ಹೆಚ್ಚಿನ ಸಂಖ್ಯೆಯಲ್ಲಿ ಕಳುಹಿಸಿದ್ದೇ ವಾಟ್ಸ್‌ಆಪ್ ಸ್ಥಗಿತವಾಗಲು ಕಾರಣ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಭಾರತವೇ ಅತೀ ದೊಡ್ಡ ಮಾರುಕಟ್ಟೆ:

ಭಾರತವೇ ಅತೀ ದೊಡ್ಡ ಮಾರುಕಟ್ಟೆ:

ಫೇಸ್‌ಬುಕ್‌ ಮಾಲೀಕತ್ವದ ವಾಟ್ಸ್‌ಆಪ್‌ ಬಳಕೆದಾರಲ್ಲಿ ಅತೀ ಹೆಚ್ಚಿನ ಮಂದಿ ಭಾರತೀಯರೇ ಆಗಿದ್ದಾರೆ. ದೇಶದಲ್ಲಿ 20 ಕೋಟಿಗೂ ಅಧಿಕ ಮಂದಿ ಸಕ್ರಿಯ ವಾಟ್ಸ್‌ಆಪ್‌ ಬಳಕೆದಾರರಿದ್ದಾರೆ ಎಂದು ಅಂದಾಜಿಸಲಕಾಗಿದೆ. ಹೊಸ ವರ್ಷದ ಸಂಭ್ರಮದಲ್ಲಿ ಭಾರತೀಯರು 130 ಕೋಟಿ ಇಮೇಜ್‌ಗಳನ್ನು ಮತ್ತು 50 ಲಕ್ಷ ಕ್ಕೂ ಹೆಚ್ಚು ವೀಡಿಯೋಗಳು ಕಳುಹಿಸಿದ್ದಾರೆ ಎನ್ನಲಾಗಿದೆ.

ದಾಖಲೆ ನಿರ್ಮಾಣ:

ದಾಖಲೆ ನಿರ್ಮಾಣ:

ವಾಟ್ಸ್‌ಆಪ್ ಒಂದೇ ದಿನದಲ್ಲಿ ಅತೀ ಸಂದೇಶಗಳನ್ನು ರವಾನೆ ಮಾಡಿದ ದಾಖಲೆ ಸೃಷ್ಟಿಸಿದೆ. ಹೊಸ ವರ್ಷದಂದು ಒಟ್ಟು ಸಂದೇಶಗಳು 750 ಕೋಟಿ ಮೇಸೆಜ್‌ಗಳು ಸೆಂಡ್ ಆಗಿದ್ದು, ಅವುಗಳ ಪೈಕಿ 200 ಕೋಟಿ ಸಂದೇಶಗಳು ಭಾರತದಿಂದಲೇ ರವಾನೆಯಾಗಿದೆ ಎನ್ನಲಾಗಿದೆ.

ಭಾರತವೇ ಕಾರಣ ಎಂದ ವಾಟ್ಸ್‌ಆಪ್ :

ಭಾರತವೇ ಕಾರಣ ಎಂದ ವಾಟ್ಸ್‌ಆಪ್ :

ಡಿಸೆಂಬರ್‌ 31ರ ಮಧ್ಯರಾತ್ರಿಯ ಬಳಿಕ ಕೆಲವು ನಿಮಿಷಗಳ ಕಾಲ ಭಾರತ ಸೇರಿದಂತೆ ಹಲವು ಕಡೆಗಳಲ್ಲಿ ವಾಟ್ಸ್‌ಆಪ್‌ ಸ್ಥಗಿತಗೊಂಡಿತ್ತು. ಅಂದು ರವಾನೆಯಾದ ಒಟ್ಟು ಸಂದೇಶಗಳ ಪೈಕಿ ಶೇ 25ರಷ್ಟು ಭಾರತದಿಂದಲೇ ರವಾನೆಯಾಗಿವೆ. ಇದರಿಂದಾಗಿ ಸರ್ವರ್‌ಗಳಲ್ಲಿ ಉಂಟಾದ ಸಂಚಾರ ದಟ್ಟಣೆಯೇ ಕೆಲವು ನಿಮಿಷಗಳ ಸೇವೆ ಸ್ಥಗಿತಕ್ಕೆ ಕಾರಣ ಎಂದು ಫೇಸ್‌ಬುಕ್ ಒಡೆತನ ವಾಟ್ಸ್‌ಆಪ್ ಅಧಿಕೃತವಾಗಿ ಪ್ರಕಟಿಸಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
WhatsApp saw 75 billion messages shared on New Year's Eve. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot