Home
ಸುದ್ದಿಜಾಲ

WhatsApp ಗೆ ಬರಲಿದೆ ಹೊಸ ಫೀಚರ್ಸ್‌; ಇತರೆ ಆಪ್‌ಗಳಿಗೆ ನಡುಕ ಶುರು!

ವಾಟ್ಸಾಪ್‌(WhatsApp) ಕಾಲಕಾಲಕ್ಕೆ ಹೊಸ ಹೊಸ ಫೀಚರ್ಸ್‌ಗಳನ್ನು ಬಳಕೆದಾರರಿಗೆ ಪರಿಚಯಿಸುತ್ತಿದ್ದು, ಈ ನಡುವೆ ಮತ್ತೊಂದು ಹೊಸ ಸೌಲಭ್ಯವನ್ನು ಪರಿಚಯಿಸಲು ಮುಂದಾಗಿದ್ದು, ಇದು ಟೆಕ್‌ ವಲಯದಲ್ಲಿ ಭಾರೀ ಸದ್ದು ಮಾಡುತ್ತಿದೆ. ಇದರಿಂದಾಗಿ ಜೂಮ್‌ ಹಾಗೂ ಇನ್ನಿತರೆ ಮೀಟಿಂಗ್ ಆಪ್‌ಗಳಿಗೆ ತೀವ್ರ ಪೈಪೋಟಿ ಎದುರಾಗಲಿದೆ.

ಹೌದು, ವಾಟ್ಸಾಪ್ ಶೀಘ್ರದಲ್ಲೇ ವಿಂಡೋಸ್ ಬಳಕೆದಾರರಿಗೆ ಹೊಸ ಸೌಲಭ್ಯ ಕಲ್ಪಿಸಿಕೊಡಲಿದ್ದು, ಈ ಮೂಲಕ ಒಟ್ಟಿಗೆ 32 ಜನರು ವಿಡಿಯೋ ಕರೆಯಲ್ಲಿ ಭಾಗಿಯಾಗಬಹುದಾಗಿದೆ. ಸದ್ಯಕ್ಕೆ ವಿಂಡೋಸ್ ಡೆಸ್ಕ್‌ಟಾಪ್ ಆಪ್‌ನಲ್ಲಿ ಗರಿಷ್ಠ ಎಂಟು ಸದಸ್ಯರು ಭಾಗವಹಿಸಲು ಅನುಕೂಲ ಮಾಡಿಕೊಟ್ಟಿತ್ತು. ಹಾಗಿದ್ರೆ, ವಾಟ್ಸಾಪ್‌ನ ಈ ಹೊಸ ಫೀಚರ್ಸ್‌ ಹೇಗೆ ಬಳಕೆ ಆಗಲಿದೆ?, ಇದರಿಂದ ಪ್ರಯೋಜನ ಏನು ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

WhatsApp ಗೆ ಬರಲಿದೆ ಹೊಸ ಫೀಚರ್ಸ್‌; ಇತರೆ ಆಪ್‌ಗಳಿಗೆ ನಡುಕ ಶುರು!

32 ವ್ಯಕ್ತಿಗಳೊಂದಿಗೆ ವಿಡಿಯೋ ಕರೆ ಸೌಲಭ್ಯ: ವಾಟ್ಸಾಪ್‌ನಲ್ಲಿ ಬಳಕೆದಾರರ ಅನುಭವವನ್ನು ಮತ್ತಷ್ಟು ಹೆಚ್ಚಿಗೆ ಮಾಡಲು ವಾಟ್ಸಾಪ್‌ ಸದಾ ಹೊಸ ಫೀಚರ್ಸ್‌ಗಳ ಮೇಲೆ ಕಾರ್ಯನಿರ್ವಹಿಸುತ್ತಿರುತ್ತದೆ. ಅದರಲ್ಲೂ ಇತ್ತೀಚೆಗೆ ತನ್ನ ಮೊಬೈಲ್ ಆಪ್‌ಗಾಗಿ ಚಾಟ್ ಲಾಕ್ ಮತ್ತು ಅಜ್ಞಾತ ಕರೆ ಮಾಡುವವರನ್ನು ಮೌನಗೊಳಿಸುವಂತಹ ಫೀಚರ್ಸ್‌ ಅನ್ನು ಲಾಂಚ್‌ ಮಾಡ ಭಾರೀ ಸಂಚಲನ ಉಂಟು ಮಾಡಿತ್ತು. ಆದರೀಗ ಡೆಸ್ಕ್‌ಟಾಪ್ ಬಳಕೆದಾರರು 32 ಜನರೊಂದಿಗೆ ವಿಡಿಯೋ ಕರೆ ಸೌಲಭ್ಯ ಪಡೆಯಲಿದ್ದಾರೆ.

ಈ ಸಂಬಂಧ ವಾಟ್ಸಾಪ್‌ನ ವಿಚಾರಗಳನ್ನು ವರದಿ ಮಾಡುವ WABetaInfo ಮಾಹಿತಿ ನೀಡಿದ್ದು, ವಿಂಡೋಸ್ ಡೆಸ್ಕ್‌ಟಾಪ್ ಅಪ್ಲಿಕೇಶನ್‌ಗಾಗಿ ನವೀಕರಣವನ್ನು ಬಿಡುಗಡೆ ಮಾಡಲಾಗುತ್ತಿದೆ. ಇದು ಬಳಕೆದಾರರಿಗೆ 32 ವ್ಯಕ್ತಿಗಳೊಂದಿಗೆ ವಿಡಿಯೋ ಮತ್ತು ಆಡಿಯೊ ಕರೆಗಳಲ್ಲಿ ತೊಡಗಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ವಾಟ್ಸಾಪ್ ಬೀಟಾ ಅಪ್‌ಡೇಟ್ 2.23.24.1.0 ಹೊಂದಿರುವ ಬೀಟಾ ಪರೀಕ್ಷಕರು ಮತ್ತು ಬಳಕೆದಾರರಿಗೆ ಈ ಸೌಲಭ್ಯ ಪ್ರಸ್ತುತ ಲಭ್ಯವಿದೆ ಎಂದು ಉಲ್ಲೇಖ ಮಾಡಿದೆ.

ಹಾಗೆಯೇ ಈ ಫೀಚರ್ಸ್‌ ಸಂಬಂಧ WABetaInfo ಸ್ಕ್ರೀನ್‌ಶಾಟ್ ಹಂಚಿಕೊಂಡಿದ್ದು, ಕೆಲವು ಬೀಟಾ ಪರೀಕ್ಷಕರು ಗ್ರೂಪ್‌ ಕರೆ ಮಾಡಲು ಆಹ್ವಾನಿಸುವ ಮೆಸೆಜ್‌ಗಳನ್ನು ಇಲ್ಲಿ ನೋಡಬಹುದು. ಅಂದರೆ 32 ಜನರಿಗೆ ವಿಂಡೋಸ್ ಅಪ್ಲಿಕೇಶನ್‌ನಿಂದ ನೇರವಾಗಿ ಸಂಪರ್ಕಗಳು ಮತ್ತು ಗುಂಪುಗಳಿಗೆ ವಿಡಿಯೋ ಕರೆಗಳನ್ನು ಮಾಡುವ ಫೀಚರ್ಸ್‌ ಅನ್ನು ಈ ಮೆಸೆಜ್‌ ಹೈಲೈಟ್ ಮಾಡಿದೆ.

ಈ ಹೊಸ ಅಪ್‌ಡೇಟ್‌ನೊಂದಿಗೆ, ಕೆಲವು ಬಳಕೆದಾರರಿಗೆ ಗರಿಷ್ಠ 16 ವ್ಯಕ್ತಿಗಳೊಂದಿಗೆ ವಿಡಿಯೋ ಕರೆಗಳನ್ನು ಮಾಡುವ ಸಾಮರ್ಥ್ಯವನ್ನು ನೀಡುವ ವಿಭಿನ್ನ ಮೆಸೆಜ್‌ ಅನ್ನು ಕಳುಹಿಸಬಹುದು ಎಂದೂ ಸಹ ವರದಿಯಿಂದ ತಿಳಿದುಬಂದಿದೆ. ಇಷ್ಟು ಮಾತ್ರವಲ್ಲದೆ ವಿಡಿಯೋ ಕರೆಯ ಸ್ಕ್ರೀನ್‌ ಅನ್ನು ಶೇರ್‌ ಮಾಡಿಕೊಳ್ಳುವ ಫೀಚರ್ಸ್‌ ಅನ್ನು ಈ ಹಿಂದೆ ವಿಂಡೋಸ್ 2.2322.1.0 ಅಪ್‌ಡೇಟ್‌ ಮೂಲಕ ಘೋಷಣೆ ಮಾಡಿತ್ತು. ಅದರಂತೆ ಈ ಫೀಚರ್ಸ್ ಹೊಸ ವಿಡಿಯೋ ಕಾಲ್‌ ಫೀಚರ್ಸ್‌ಗೂ ಸಂಯೋಜಿಸುತ್ತದೆ ಎಂದು ಹೇಳಲಾಗಿದೆ.

WhatsApp ಗೆ ಬರಲಿದೆ ಹೊಸ ಫೀಚರ್ಸ್‌; ಇತರೆ ಆಪ್‌ಗಳಿಗೆ ನಡುಕ ಶುರು!

ವಾಟ್ಸಾಪ್‌ ಪಿನ್ ಮೆಸೆಜ್‌: ಈ ನಡುವೆ ವಾಟ್ಸಾಪ್‌ ಒಂದು ಪಿನ್ ಮೆಸೆಜ್‌ ಆಯ್ಕೆಬಗ್ಗೆ ಘೋ‍ಷಣೆ ಮಾಡಿದ್ದು, ಈ ಫೀಚರ್ಸ್‌ ಬಳಕೆದಾರರಿಗೆ ವೈಯಕ್ತಿಕ ಅಥವಾ ಗ್ರೂಪ್ ಚಾಟ್‌ನಲ್ಲಿ ಅಗತ್ಯ ಮೆಸೆಜ್‌ಗಳನ್ನು ಪಿನ್ ಮಾಡಲು ಅನುಮತಿಸುತ್ತದೆ. ಈ ಮೂಲಕ ಬಳಕೆದಾರರು ಪಿನ್ ಚಾಟ್ ಫೀಚರ್ಸ್‌ನಂತೆಯೇ ಪ್ರಮುಖ ಮೆಸೆಜ್‌ಗಳನ್ನು ಹೈಲೈಟ್ ಮಾಡುವ ಅವಕಾಶವನ್ನೂ ಸಹ ಪಡೆದಿದ್ದಾರೆ.

ಈ ಫೀಚರ್ಸ್‌ ಪ್ರಸ್ತುತ ಆಂಡ್ರಾಯ್ಡ್‌ 2.23.13.11 ಗಾಗಿ ಬೀಟಾಗೆ ಲಭ್ಯವಿದೆ. ಭವಿಷ್ಯದ ಆಪ್‌ಗಳಲ್ಲಿ ಇದು ಎಲ್ಲರಿಗೂ ಲಭ್ಯವಾಗುವ ನಿರೀಕ್ಷೆಯಿದೆ ಎಂದು ವರದಿಗಳಿಂದ ತಿಳಿದುಬಂದಿದೆ. ಜೊತೆಗೆ ಬಳಕೆದಾರರು ಅವಧಿಯನ್ನು ಹೊಂದಿಸಲು ಈ ಫೀಚರ್ಸ್‌ನಲ್ಲಿ ಸಾಧ್ಯವಾಗುತ್ತದೆ. ಆ ಅವಧಿಯ ನಂತರ ಪಿನ್ ಮಾಡಿದ ಮೆಸೆಜ್‌ಗಳು ಆಟೋಮ್ಯಾಟಿಕ್‌ ಆಗಿ ಅನ್‌ಪಿನ್ ಆಗುತ್ತವೆ.

ಈ ಫೀಚರ್ಸ್‌ನ ಅವಧಿ ವಿಚಾರದಲ್ಲಿ ಮೂರು ಆಯ್ಕೆಗಳಿವೆ. ಅದರಲ್ಲಿ 24 ಗಂಟೆಗಳು, 7 ದಿನಗಳು ಮತ್ತು 30 ದಿನಗಳು.ಆಯ್ಕೆ ಮಾಡಿದ ಅವಧಿ ಮುಗಿಯುವ ಮುನ್ನವೇ ಯಾವುದೇ ಸಮಯದಲ್ಲಿ ಮೆಸೆಜ್ ‌ಅನ್ನು ಹಸ್ತಚಾಲಿತವಾಗಿ ಅನ್‌ಪಿನ್ ಮಾಡುವ ಆಯ್ಕೆಯನ್ನೂ ಸಹ ಬಳಕೆದಾರರು ಹೊಂದಿರುತ್ತಾರೆ. ಈ ಮೂಲಕ ಅಗತ್ಯ ಮಾಹಿತಿಯನ್ನು ಎಲ್ಲರಿಗೂ ಪ್ರಚುರಪಡಿಸುವ ಹಾಗೂ ವಾಟ್ಸಾಪ್‌ ಮೂಲಕ ವಿಭಿನ್ನ ಅನುಭವ ಪಡೆಯುವ ಅವಕಾಶ ಇದೆ.

Best Mobiles in India

English summary
WhatsApp will soon provide Windows users with a new feature that will allow up to 32 participants in a video call.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+