Subscribe to Gizbot

ಶೀಘ್ರವೇ ನಿಮ್ಮ ವಾಟ್ಸ್ಆಪ್ ಮೂಲಕವೇ ಹಣ ಪಾವತಿ ಮಾಡಿ..!

Written By:

ಈ ಹಿಂದೆಯೇ ತಿಳಿಸಿದಂತೆ ದೇಶದಲ್ಲಿ ಅತೀ ಹೆಚ್ಚಿನ ಬಳಕೆದಾರರನ್ನು ಹೊಂದಿರುವ ಫೇಸ್‌ಬುಕ್ ಮಾಲೀಕತ್ವದ ವಾಟ್ಸ್ಆಪ್ ಶೀಘ್ರವೇ UPI ಬಳಕೆಕೊಂಡು ಡಿಜಿಟಲ್ ಪೇಮೆಂಟ್ ಮಾಡುವ ಸೇವೆಯನ್ನು  ಆರಂಭಿಸಲಿದೆ ಎನ್ನಲಾಗಿದ್ದು, ಈ ವರ್ಷದ ಎರಡನೇ ಭಾಗದಲ್ಲಿ ಈ ಸೇವೆ ಲಾಂಚ್ ಆಗುವ ಸಾಧ್ಯತೆಗಳಿದೆ.

ಶೀಘ್ರವೇ ನಿಮ್ಮ ವಾಟ್ಸ್ಆಪ್ ಮೂಲಕವೇ ಹಣ ಪಾವತಿ ಮಾಡಿ..!

ಓದಿರಿ: ಲೀಕ್ ಆಗಿದೆ ಜಿಯೋ ಡಿಟಿಹೆಚ್ ಸೆಟಪ್‌ ಬಾಕ್ಸ್: ಬೆಲೆ ಎಷ್ಟು..? ಇಲ್ಲಿದೇ ಸಂಪೂರ್ಣ ವಿವರ.!!!

ಈಗಾಗಲೇ ಭಾರತದಲ್ಲಿ ಡಿಜಿಟಲ್ ಪೇಮೆಂಟ್ ಬಳಕೆಯೂ ಹೆಚ್ಚಾಗಿದ್ದು, ಆಧಾರ್, UPI ಮತ್ತು ಭೀಮ್ ಬಳಕೆ ಮಾಡಿಕೊಂಡು ಪಾವತಿ ಮಾಡುವ ಆನೇಕ ಸೇವೆಗಳು ಇಂದು ಮಾರುಕಟ್ಟೆಯಲ್ಲಿ ಲಭ್ಯವಿದೆ. ಸದ್ಯ ಇದೇ ಹಾದಿಯಲ್ಲಿ ವಾಟ್ಸ್‌ಆಪ್ ಸಹ ಕಾಲಿಡಲಿದೆ.

ಫೇಸ್‌ಬುಕ್ ಮಾಲೀಕತ್ವದ ವಾಟ್ಸ್ಆಪ್ ಈಗಾಗಲೇ ಡಿಜಿಟಲ್ ಪೇಮೆಂಟ್ ಸೇವೆಯನ್ನು ಆರಂಭಿಸುವ ಸಲುವಾಗಿ ಕಾರ್ಯ ಚಟುವಟಿಕೆಯನ್ನು ಆರಂಭಿಸಿದ್ದು, ಇನ್ನು ಮೂರರಿಂದ ನಾಲ್ಕು ತಿಂಗಳಲ್ಲಿ ಒಳಗೆ ಕಾರ್ಯಚರಣೆ ಆರಂಭಿಸುವ ಸಾಧ್ಯತೆ ಇದೆ ಎನ್ನುವ ಮಾತು ಹೇಳಿ ಬಂದಿದೆ.

ಶೀಘ್ರವೇ ನಿಮ್ಮ ವಾಟ್ಸ್ಆಪ್ ಮೂಲಕವೇ ಹಣ ಪಾವತಿ ಮಾಡಿ..!

ಓದಿರಿ: ಕೇವಲ 1 ರೂ.ಗೆ ರೆಡ್‌ಮಿ ನೋಟ್ 4 ಸ್ಮಾರ್ಟ್‌ಫೋನ್‌: ಇದು ಸುಳ್ಳಲ್ಲ, 100% ನಿಜ

ಈಗಾಗಲೇ ಅತೀ ಹೆಚ್ಚು ಜನರನ್ನು ತಲುಪಿರುವ ವಾಟ್ಸ್‌ಆಪ್, ಪೇಮೆಂಟ್ ಸೇವೆಯನ್ನು ಆರಂಭಿಸಿದರೆ ಗ್ರಾಹರಿಕಗೆ ಅತೀ ಹೆಚ್ಚಿನ ಲಾಭವಾಗಲಿದ್ದು, ಡಿಜಿಟಲ್ ಪೇಮೆಂಟ್ ವಿಧಾನದಲ್ಲದೇ ಹೊಸ ಕ್ರಾಂತಿಗೆ ಇದು ಸಾಕ್ಷಿಯಾಗಲಿದೆ. ಕಾರಣ ಈ ಆಪ್ ಅತೀ ಹೆಚ್ಚಿನ ಮಂದಿಯನ್ನು ತಲುಪಲಿದೆ.

ಈಗಾಗಲೇ ಅನೇಕ ಆಪ್ ಗಳು ಡಿಜಿಟಲ್ ಪೇಮೆಂಟ್ ಪ್ಲಾಟ್‌ಫಾರ್ಮ್‌ನಲ್ಲ ಕಾರ್ಯ ನಿರ್ವಹಿಸುತ್ತಿದ್ದು, ಈ ಹಿನ್ನಲೆಯಲ್ಲಿ ವಾಟ್ಸ್‌ಆಪ್ ದೊಡ್ಡ ಮಟ್ಟದ ಸ್ಪರ್ಧೆಯನ್ನು ಎದುರಿಸಬೇಕಾಗಿದೆ. ಇದರಲ್ಲಿ ವಾಟ್ಸ್‌ಆಪ್ ಹೇಗೆ ಯಶಸ್ವಿಯಾಗಲಿದೆ ಎಂಬುದನ್ನು ಕಾದು ನೊಡಬೇಕಾಗಿದೆ.

Read more about:
English summary
WhatsApp is reportedly working on a digital payment system using UPI. The service is expected to launch this year. to know more visit kananda.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot