ಲೀಕ್ ಆಗಿದೆ ಜಿಯೋ ಡಿಟಿಹೆಚ್ ಸೆಟಪ್‌ ಬಾಕ್ಸ್: ಬೆಲೆ ಎಷ್ಟು..? ಇಲ್ಲಿದೇ ಸಂಪೂರ್ಣ ವಿವರ.!!!

ಜಿಯೋ ಡಿಟಿಹೆಚ್ ಸೆಟಪ್ ಬಾಕ್ಸ್ ಪೋಟೋ ಲೀಕ್ ಆಗಿದ್ದು, ಈ ಮೂಲಕ ಡಿಟಿಹೆಚ್ ಸೇವೆಯು ಆರಂಭ ಶೀಘ್ರವೇ ಆಗಲಿದೆ ಎಂಬುದು ಖಚಿತವಾಗಿದೆ.

|

ಬಹುದಿನಗಳ ಕುತೂಹಲವೊಂದಕ್ಕೆ ತೆರೆಬಿದ್ದಿದೆ, ರಿಲಯನ್ಸ್ ಮಾಲೀಕತ್ವದ ಜಿಯೋ ಡಿಟಿಹೆಚ್ ಸೇವೆಯನ್ನು ಆರಂಭಿಸುವ ಕುರಿತು ಊಹಾಪೋಹಗಳು ಕೇಳಿಬರುತಿತ್ತು, ಆದರೆ ಸದ್ಯ ಮೊದಲ ಬಾರಿಗೆ ಜಿಯೋ ಡಿಟಿಹೆಚ್ ಸೇವೆಯನ್ನು ನೀಡಲು ತಯಾರಿಸಿರುವ ಸೆಟಪ್ ಬಾಕ್ಸ್ ಪೋಟೋ ಲೀಕ್ ಆಗಿದ್ದು, ಈ ಮೂಲಕ ಡಿಟಿಹೆಚ್ ಸೇವೆಯು ಆರಂಭ ಶೀಘ್ರವೇ ಆಗಲಿದೆ ಎಂಬುದು ಖಚಿತವಾಗಿದೆ.

ಲೀಕ್ ಆಗಿದೆ ಜಿಯೋ ಡಿಟಿಹೆಚ್ ಸೆಟಪ್‌ ಬಾಕ್ಸ್: ಬೆಲೆ ಎಷ್ಟು..?

ಓದಿರಿ: ಜಿಯೋ ಸಿಮ್, ಫೋನ್, ಡಿಟಿಹೆಚ್ ನಂತರ ಬರುತ್ತಿದೆ 'ಜಿಯೋ 4G ಲ್ಯಾಪ್‌ಟಾಪ್'

ದೇಶಿಯ ಟೆಲಿಕಾಂ ವಲಯದಲ್ಲಿ ಹೊಸದೊಂದು ಶಕೆಯನ್ನು ಆರಂಭಿಸಿರುವ ರಿಲಯನ್ಸ್ ಮಾಲೀಕತ್ವದ ಜಿಯೋ, ಟಿವಿ ಲೋಕದಲ್ಲಿಯೋ ಸಹ ತನ್ನದೇ ಶಕೆಯನ್ನು ಆಂಭಿಸುವ ಸೂಚನೆಯನ್ನು ನೀಡಿದ್ದು, ಈ ಮೂಲಕ ಬೇರೆ ಡಿಟಿಹೆಚ್ ಸೇವೆಯನ್ನು ನೀಡುತ್ತಿರುವ ಕಂಪನಿಗಳಿಗೆ ನಡುಕವನ್ನು ಹುಟ್ಟಿಸಿದೆ.

ಓದಿರಿ: ಜಿಯೋ ಸಮ್ಮರ್ ಸರ್‌ಪ್ರೈಸ್: ಮತ್ತೆ ಮೂರು ತಿಂಗಳು ಉಚಿತ ಸೇವೆ ಪಡೆದುಕೊಳ್ಳುವುದು ಹೇಗೆ..?

ಹೀಗೆ ನೋಡಿ ಜಿಯೋ ಡಿಟಿಹೆಚ್ ಸೆಟಪ್ ಬಾಕ್ಸ್:

ಹೀಗೆ ನೋಡಿ ಜಿಯೋ ಡಿಟಿಹೆಚ್ ಸೆಟಪ್ ಬಾಕ್ಸ್:

ಇದೇ ಮೊದಲ ಬಾರಿಗೆ ಜಿಯೋ ಡಿಟಿಹೆಚ್ ಸೇವೆಯನ್ನು ಆರಂಭಿಸುತ್ತಿದೆ ಎನ್ನುವುದಕ್ಕೆ ಪುರಾವೆ ಸಿಕ್ಕಿದೆ, ಜಿಯೋ ಡಿಟಿಹೆಚ್ ಸೆಟಪ್ ಬಾಕ್ಸ್ ಪೋಟೋ ಲೀಕ್ ಮಾಡಲಾಗಿದ್ದು, ಇದರಲ್ಲಿ ಜಿಯೋ ಲೋಗೋ ಹಾಕಿ, ನೀಲಿ ಬಣ್ಣದ ಪ್ಯಾಕಿಂಗ್‌ನಲ್ಲಿ ಮಾರುಕಟ್ಟೆಗೆ ಬಿಡಲಾಗುತ್ತಿದೆ.

ಜಿಯೋ ಡಿಟಿಹೆಚ್ ಸೆಟಪ್ ಬಾಕ್ಸ್‌ನಲ್ಲಿ ಏನೇನಿದೆ..?:

ಜಿಯೋ ಡಿಟಿಹೆಚ್ ಸೆಟಪ್ ಬಾಕ್ಸ್‌ನಲ್ಲಿ ಏನೇನಿದೆ..?:

ಜಿಯೋ ಡಿಟಿಹೆಚ್ ಸೆಟಪ್ ಬಾಕ್ಸ್ ಈ ಹಿಂದಿನ ಸೆಟಪ್ ಬಾಕ್ಸ್‌ಗಳಿಗಿಂತ ಬಾರಿ ಭಿನ್ನವಾಗಿದ್ದು, ಇದು ಬೇರೆ ಸೆಟಪ್ ಬಾಕ್ಸ್ ಗಳಿಗಿಂತ ಆಧುನೀಕವಾಗಿದೆ ಎಂದು ಹೇಳಬಹುದು. ಇದರಲ್ಲಿ ಸ್ಟಾಂಡರ್ಡ್ ಕೆಬಲ್ ಕನೆಕ್ಟರ್, HDMI, USB ಪೋರ್ಟ್ ನೀಡಲಾಗಿದೆ. ಇದರೊಂದಿಗೆ ಆಡಿಯೋ ಮತ್ತು ವಿಡಿಯೋ ಔಟ್ ಪುಟ್ ಇದೆ, ಅಲ್ಲದೇ ಬಾಂಡ್ರ್‌ಬ್ಯಾಂಡ್ ಕನೆಕಷನ್ ನೀಡಲು ಅವಕಾಶವನ್ನು ಮಾಡಿಕೊಡಲಾಗಿದೆ.

ಜಿಯೋ ಡಿಟಿಹೆಚ್ ಸೆಟಪ್ ಬಾಕ್ಸ್ ವಿನ್ಯಾಸ:

ಜಿಯೋ ಡಿಟಿಹೆಚ್ ಸೆಟಪ್ ಬಾಕ್ಸ್ ವಿನ್ಯಾಸ:

ಸದ್ಯ ಕಪ್ಪು ಬಣ್ಣದ ಸೆಟಪ್ ಬಾಕ್ಸ್ ಮಾತ್ರ ಲಭ್ಯವಿದ್ದು, ಅಲ್ಲದೇ ಜಿಯೋ ಡಿಟಿಹೆಚ್ ಸೆಟಪ್ ಬಾಕ್ಸ್ ಬಿಸಿಯಾಗದಂತೆ ತಡೆಯಲು ಸುತ್ತಲು ಗಾಳಿಯಾಡುವಂತೆ ಅವಕಾಶವನ್ನು ಮಾಡಿಕೊಡಲಾಗಿದೆ. ಮುಂಭಾಗದಲ್ಲಿ USB ಪೋರ್ಟ್ ಹಾಕುವ ಅವಕಾಶ ಇದೆ. ಅಲ್ಲದೇ ಜಿಯೋ ಲೊಗೋ ಸಹ ಮುಂಭಾಗದಲ್ಲಿಯೇ ಇದ್ದು, ಚಿಕ್ಕದಾಗಿ ಚೊಕ್ಕವಾಗಿದೆ.

ಜಿಯೋ ಡಿಟಿಹೆಚ್ ಸೆಟಪ್ ಬಾಕ್ಸ್ ವಿಶೇಷತೆಗಳು:

ಜಿಯೋ ಡಿಟಿಹೆಚ್ ಸೆಟಪ್ ಬಾಕ್ಸ್ ವಿಶೇಷತೆಗಳು:

ಜಿಯೋ ಡಿಟಿಹೆಚ್ ಸೆಟಪ್ ಬಾಕ್ಸ್ ಡಿಟಿಹೆಚ್ ಹಾಗೂ ಬ್ರಾಡ್‌ಬ್ಯಾಂಡ್ ಸೇವೆಯನ್ನು ಒಟ್ಟಾಗಿ ನೀಡಲಿದೆ ಎನ್ನಲಾಗಿದೆ. HD ಚಾನೆಲ್‌ಗಳು ಇದರಲ್ಲಿ ಬರಲಿದ್ದು, 350ಕ್ಕೂ ಹೆಚ್ಚು ಚಾನಲ್‌ಗಳು ಗ್ರಾಹಕರಿಗೆ ನೋಡಲು ಸಿಗಲಿದೆ. ಅಲ್ಲದೇ ಇದರಲ್ಲಿ ರೆಕಾಡಿಂಗ್ ಅವಕಾಶವನ್ನು ನೀಡಲಾಗಿದ್ದು, ಒಂದು ವಾರದ ಟಿವಿ ಶೋಗಳನ್ನು ರೆಕಾರ್ಡ್ ಮಾಡಿಕೊಳ್ಳಬಹುದಾಗಿದೆ.

ವಾಯ್ಸ್ ಕಮಾಂಡಿಗ್:

ವಾಯ್ಸ್ ಕಮಾಂಡಿಗ್:

ಜಿಯೋ ಡಿಟಿಹೆಚ್ ಸೆಟಪ್ ಬಾಕ್ಸ್ ಜೊತೆ ನೀಡಿರುವ ರಿಮೋಟ್ ಕಂಟ್ರೋಲರ್‌ನಲ್ಲಿ ಇದೇ ಮೊದಲ ಬಾರಿಗೆ ಮೈಕ್ ಅಳವಡಿಲಾಗಿದ್ದು, ನೀವು ಟಿವಿ ಚಾನಲ್ ಬದಲಾವಣೆ ಮಾಡಲು ಬಟನ್ ಒತ್ತುವ ಬದಲು ವಾಯ್ಸ್ ಕಮಾಂಡಿಗ್ ನೀಡುವ ಮೂಲಕವೇ ಚಾನಲ್ ಬದಲಾವಣೆ ಮಾಡಬಹುದಾಗಿದೆ.

ಏಪ್ರಿಲ್ 15ಕ್ಕೆ ಮಾರುಕಟ್ಟೆಗೆ:

ಏಪ್ರಿಲ್ 15ಕ್ಕೆ ಮಾರುಕಟ್ಟೆಗೆ:

ಜಿಯೋ ಡಿಟಿಹೆಚ್ ಸೆಟಪ್ ಬಾಕ್ಸ್ ಪೋಟೋ ಲೀಕ್ ಆಗಿದ್ದು, ಇದನ್ನು ನೀವು ಕೊಂಡುಕೊಳ್ಳಬೇಕಾದರೆ ಏಪ್ರಿಲ್ 15ರವರೆಗೂ ಕಾಯಲೇಬೇಕು ಎನ್ನಲಾಗಿದೆ. ಏಪ್ರಿಲ್ 15ಕ್ಕೆ ಮಾರುಕಟ್ಟೆಯಲ್ಲಿ ಜಿಯೋ ಡಿಟಿಹೆಚ್ ಲಭ್ಯವಿರಲಿದೆ. ಮೂಲಗಳ ಪ್ರಕಾರ 1,500 ರೂ. ನಿಗಧಿ ಮಾಡಲಾಗಿದೆ ಎನ್ನಲಾಗಿದೆ.

ಪ್ರಮೋಷನ್‌ಗಾಗಿ ಮೂರು ತಿಂಗಳ ಉಚಿತ ಸೇವೆ:

ಪ್ರಮೋಷನ್‌ಗಾಗಿ ಮೂರು ತಿಂಗಳ ಉಚಿತ ಸೇವೆ:

ಈಗಾಗಲೇ ಜಿಯೋ ಲಾಂಚ್ ಸಂದರ್ಭದಲ್ಲಿ ಪ್ರಮೋಷನ್‌ಗಾಗಿ ಮೂರು ತಿಂಗಳ ಉಚಿತ ಸೇವೆಯನ್ನು ನೀಡಿದ್ದ ಮಾದರಿಯಲ್ಲೇ ಜಿಯೋ ಡಿಟಿಹೆಚ್ ಲಾಂಚ್ ವೇಳೆಯಲ್ಲಿಯೂ ಮೂರು ತಿಂಗಳ ಉಚಿತ ಸೇವೆಯನ್ನು ನೀಡಲು ಜಿಯೋ ಚಿಂತನೆ ನಡೆಸಿದ್ದು, ಸದ್ಯ ದೇಶದಲ್ಲಿ ಲಭ್ಯವಿರುವ ಎಲ್ಲಾ ಚಾಲನ್‌ಗಳನ್ನು ತನ್ನ ಡಿಟಿಹೆಚ್‌ನಲ್ಲಿ ಪ್ರಸಾರ ಮಾಡುವ ಮಹದಾಸೆಯನ್ನು ಹೊಂದಿದೆ ಎನ್ನಲಾಗಿದೆ.

ನಾಲ್ಕು ಪ್ಲಾನ್‌ ರೆಡಿ:

ನಾಲ್ಕು ಪ್ಲಾನ್‌ ರೆಡಿ:

ಜಿಯೋ ತನ್ನ ಬಳಕೆದಾರಿಗಾಗಿ ನಾಲ್ಕು ಪ್ಲಾನ್‌ಗಳನ್ನು ರೆಡಿ ಮಾಡಿದ್ದು, ಇಸ್ಟ್ ಇಂಡಿಯಾ ಪ್ಲಾನ್, ವೆಸ್ಟ್ ಇಂಡಿಯಾ ಪ್ಲಾನ್, ನಾರ್ತ್ ಇಂಡಿಯಾ ಪ್ಲಾನ್ ಮತ್ತು ಸೌಥ್ ಇಂಡಿಯಾ ಪ್ಲಾನ್ ಗಳನ್ನು ಪರಿಚಯಿಸಿದ್ದು, ನಾಲ್ಕು ಮೂಲೆಗಳಿಗೂ ಅಲ್ಲಿನ ಸ್ಥಳೀಯ ಚಾನಲ್‌ಗಳನ್ನು ಪ್ರಸಾರ ಮಾಡಲಿದೆ.

 ವಿವಿಧ ಪ್ಲಾನ್‌ಗಳು:

ವಿವಿಧ ಪ್ಲಾನ್‌ಗಳು:

ಬೆಸಿಕ್ ಪ್ಲಾನ್ ಅನ್ನು ಕೇವಲ ರೂ.89-99ಕ್ಕೆ ನೀಡಲಿದೆ. ಸ್ಪೋಡ್ಸ್ ಪ್ಯಾಕಿಗೆ ರೂ. 120-135 ನಿಗಧಿ ಮಾಡಿದ್ದು, ಮೈ ಪ್ಲಾನ್ ವೊಂದನ್ನು ಪರಿಚಯಿಸಿದ್ದು ರೂ. 189-200 ಅನ್ನು ನಿಗಧಿ ಮಾಡಿದೆ. ಫ್ಯಾಮಿಲಿ ಪ್ಯಾಕ್ ಸಹ ಇದ್ದು, ಇದಕ್ಕೆ ರೂ. 255-295 ಹಾಗೂ ಮಕ್ಕಳಿಗಾಗಿ ಪ್ಯಾಕ್ ಇದ್ದು, ಅದಕ್ಕೆ ರೂ. 185-219 ಇರಲಿದೆ ಎನ್ನಲಾಗಿದೆ.

ಚಾರ್ಜಿಂಗ್ ಸಮಯದಲ್ಲಿ ಫೋನ್ ಬಳಕೆ ಸ್ಪೋಟಕ್ಕೆ ಕಾರಣವಲ್ಲ!! ಹಾಗಾದರೆ ನಿಜವಾದ ಕಾರಣ?ಚಾರ್ಜಿಂಗ್ ಸಮಯದಲ್ಲಿ ಫೋನ್ ಬಳಕೆ ಸ್ಪೋಟಕ್ಕೆ ಕಾರಣವಲ್ಲ!! ಹಾಗಾದರೆ ನಿಜವಾದ ಕಾರಣ?

<strong>ಏಪ್ರಿಲ್ 15ಕ್ಕೆ ಜಿಯೋ ಡಿಟಿಹೆಚ್ ಲಾಂಚ್!!..3 ತಿಂಗಳು ಉಚಿತ..ನಂತರ 99.ರೂ!!!</strong>ಏಪ್ರಿಲ್ 15ಕ್ಕೆ ಜಿಯೋ ಡಿಟಿಹೆಚ್ ಲಾಂಚ್!!..3 ತಿಂಗಳು ಉಚಿತ..ನಂತರ 99.ರೂ!!!

Best Mobiles in India

Read more about:
English summary
Reliance Jio has its eyes set on the Direct to Home (DTH) space as well. While there’s still no word on when the company plans to roll out its services. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X