ವಾಟ್ಸ್‌ಆಪ್‌ನಲ್ಲಿ ಈಗ 'ಐಪಿಎಲ್' ಸ್ಪೆಷಲ್ ಸ್ಟಿಕ್ಕರ್ಸ್ ಲಭ್ಯವಿವೆ!

|

ಕ್ರಿಕೆಟ್ ಆರಾಧಕ ರಾಷ್ಟ್ರ ಭಾರತದಲ್ಲಿ ಐಪಿಎಲ್( ಇಂಡಿಯನ್ ಪ್ರೀಮಿಯರ್ ಲೀಗ್) ನಡೆಯುತ್ತಿರುವಾಗ ಹಬ್ಬದ ವಾತಾವರಣವಿರುತ್ತದೆ ಎಂದು ಹೇಳಬಹುದು. ಪ್ರತಿವರ್ಷ ನಡೆಯುವ ಈ ಐಪಿಎಲ್ ಹವಾ ಈ ಬಾರಿ ಮತ್ತಷ್ಟು ಜೋರಾಗಿದ್ದು, ಇದನ್ನರಿತ ಜನಪ್ರಿಯ ಕಂಪೆನಿಗಳು 'ಐಪಿಎಲ್'ಗಾಗಿ ಸ್ಪೆಷಲ್ ಕೇರ್ ತೆಗೆದುಕೊಳ್ಳುತ್ತವೆ. ಇದಕ್ಕೆ ಈಗ ವಾಟ್ಸ್‌ಆಪ್ ಕೂಡ ಸೇರಿದೆ.

ಹೌದು, ದೇಶದಲ್ಲಿ ಕ್ರಿಕೆಟ್ ಫ್ಯಾನ್ಸ್ ಪ್ರತಿ ದಿನವೂ ಐಪಿಲ್ ಕ್ರೇಜ್‌ ಕುರಿತೇ ಮಾತನಾಡುತ್ತಿರುವುದನ್ನು ಅರಿತಿರುವ ಜನಪ್ರಿಯ ಮೆಸೇಂಜಿಂಗ್ ಜಾಲತಾಣ ವಾಟ್ಸ್ಆಪ್ ಐಪಿಎಲ್‌ಗಾಗಿ ಸ್ಟಿಕ್ಕರ್‌ಗಳನ್ನು ಬಿಡುಗಡೆ ಮಾಡಿದೆ. ಐಪಿಎಲ್ ಕುರಿತ ಆಕರ್ಷಕ ಸ್ಟಿಕರ್‌ಗಳು ಪ್ರಸ್ತುತ ಆಂಡ್ರಾಯ್ಡ್ ಫೋನ್‌ಗಳಿಗೆ ಮಾತ್ರ ಬಿಡುಗಡೆಯಾಗಿದ್ದು, ನಂತರದಲ್ಲಿ ಐಫೋನ್‌ಗೆ ಲಭ್ಯವಾಗಲಿದೆ.

ವಾಟ್ಸ್‌ಆಪ್‌ನಲ್ಲಿ ಈಗ 'ಐಪಿಎಲ್' ಸ್ಪೆಷಲ್ ಸ್ಟಿಕ್ಕರ್ಸ್ ಲಭ್ಯವಿವೆ!

ವಾಟ್ಸ್ಆಪ್ ಚಾಟ್ ತೆರೆದು ಇಮೋಜಿ ಬಳಿಯಿರುವ ಸ್ಟಿಕರ್ ಐಕಾನ್ ಒತ್ತಿದ ನಂತರ ಸ್ಟಿಕರ್ಸ್‌ನಲ್ಲಿ + ಐಕಾನ್ ಒತ್ತಿ. ಈಗ ನಿಮಗೆ ಸ್ಟಿಕರ್ ಲಿಸ್ಟ್ ತೆರೆದುಕೊಳ್ಳುತ್ತದೆ. ಅಲ್ಲಿ ಮೈ ಸ್ಟಿಕರ್ಸ್ ಲಿಸ್ಟ್‌ಗೆ ಕ್ರಿಕೆಟ್ ಸ್ಟಿಕರ್ ಸೇರಿಸಬೇಕು. ಕೆಳಗೆ ಸ್ಕ್ರಾಲ್ ಮಾಡಿದಾಗ ಕ್ರಿಕೆಟ್ ಸ್ಟಿಕರ್ ಕಾಣಿಸದಿದ್ದರೆ, ನಂತರ ಗೆಟ್‌ ಮೋರ್ ಸ್ಟಿಕರ್ಸ್ ಒತ್ತಿ. ಈಗ ಗೂಗಲ್ ಪ್ಲೇ ಸ್ಟೋರ್ ತೆರೆದುಕೊಳ್ಳುತ್ತದೆ.

ಅಲ್ಲಿ ಥರ್ಡ್ ಪಾರ್ಟಿ ಆಪ್ ಮೂಲಕ ಕ್ರಿಕೆಟ್ ಸ್ಟಿಕರ್ಸ್ ಫಾರ್‌ ವಾಟ್ಸ್ಆಪ್, ಇಂಡಿಯನ್ ಕ್ರಿಕೆಟರ್ಸ್ ಸ್ಟಿಕರ್ಸ್ ಡೌನ್‌ಲೋಡ್ ಮಾಡಿ. ಡೌನ್‌ಲೋಡ್ ಮಾಡಿದ ಬಳಿಕ, ವಿವಿಧ ಕ್ರಿಕೆಟ್ ಕುರಿತ ಸ್ಟಿಕರ್ಸ್‌ ಕಾಣಿಸಿಕೊಳ್ಳುತ್ತದೆ. ಅದರ ಮೇಲೆ + ಒತ್ತಿ. ಈಗ ಮತ್ತೆ ವಾಟ್ಸ್ಆಪ್ ತೆರೆದಾಗ, ಐಪಿಎಲ್ ಕುರಿತ ಸಂಭಾಷಣೆಗಳಿಗಾಗಿ ಅಲ್ಲಿ ಆಕರ್ಷಕ ಸ್ಟಿಕರ್‌ಗಳು ಸ್ಟಿಕರ್ಸ್ ಕಾಣಿಸುತ್ತವೆ.

ವಾಟ್ಸ್‌ಆಪ್‌ನಲ್ಲಿ ಈಗ 'ಐಪಿಎಲ್' ಸ್ಪೆಷಲ್ ಸ್ಟಿಕ್ಕರ್ಸ್ ಲಭ್ಯವಿವೆ!

ಇನ್ನು ನೀವು ಡೌನ್‌ಲೋಡ್ ಮಾಡುವ ಸ್ಟಿಕ್ಕರ್ಗಳಲ್ಲಿ ವ್ಯಂಗ್ಯಚಿತ್ರಗಳ ಆವೃತ್ತಿಗಳು ಇಲ್ಲ, ಆದರೆ, ಅವು ಆರು, ನಾಲ್ಕು, ಶತಮಾನ, ಯಾವುದೇ ಚೆಂಡು, ಶೂನ್ಯ ರನ್‌ಗಳು ಮತ್ತು ಇದಕ್ಕೂ ಹೆಚ್ಚಿನವುಗಳಂತಹ ಆಟದಿಂದ ವಿಭಿನ್ನ ಅಂಶಗಳನ್ನು ಚಿತ್ರಿಸುತ್ತವೆ. 2.19.115 ಅಥವಾ ಅದಕ್ಕಿಂತ ಹೆಚ್ಚಿನ ಆವೃತ್ತಿಗೆ ನವೀಕರಿಸಿದ Android ಬಳಕೆದಾರರಿಗೆ ಮಾತ್ರ ಇದು ಲಭ್ಯವಾಗುತ್ತದೆ.

ಓದಿರಿ: ಮೇ1 ರಿಂದ 'ಸಿಮ್' ಖರೀದಿ ನಿಯಮ ಬದಲು!..ಇಲ್ಲಿದೆ ಫುಲ್ ಡೀಟೇಲ್ಸ್!!

Best Mobiles in India

English summary
WhatsApp launches new IPL cricket stickers during IPL 2019 season: How to download. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X