2019ರಲ್ಲಿ ವಾಟ್ಸಪ್‌ ಸೇರಿರುವ ಕೆಲವು ಅಚ್ಚರಿಯ ಫೀಚರ್ಸ್ ಬಗ್ಗೆ ನಿಮಗೆ ಗೊತ್ತಾ?

|

ಫೇಸ್‌ಬುಕ್ ಮಾಲೀಕತ್ವದ ಜನಪ್ರಿಯ ಮೆಸೆಜ್ ಆಪ್ ''ವಾಟ್ಸಪ್'' ಬಳಕೆದಾರರ ಅನುಕೂಲಕ್ಕಾಗಿ ಸಾಕಷ್ಟು ಹೊಸ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಪ್ರಸಕ್ತ ವರ್ಷ ನಾನಾ ಕಾರಣಗಳಿಗಾಗಿ ವಾಟ್ಸಪ್ ಅನೇಕ ಭಾರಿ ಸುದ್ದಿಯಾಗಿತ್ತು. ಹಾಗೆಯೇ 2019ರ ವರ್ಷದಲ್ಲಿ ಕೆಲವು ಅಚ್ಚರಿಯ ಸೌಲಭ್ಯಗಳನ್ನು ಪರಿಚಯಿಸಿ ದೊಡ್ಡ ಸದ್ದು ಮಾಡಿದೆ. ಆ ಮೂಲಕ ತನ್ನ ಬಳಕೆದಾರರ ಮೆಚ್ಚುಗೆಗೂ ಕಾರಣವಾಗಿದೆ.

ಫೀಚರ್ಸ್‌ಗಳು

ಹೌದು, ಅತೀ ಹೆಚ್ಚಿನ ಸಕ್ರಿಯ ಬಳಕೆದಾರರನ್ನು ಹೊಂದಿರುವ ವಾಟ್ಸಪ್ ಇತ್ತೀಚಿನ ಅಪ್‌ಡೇಟ್ ಆವೃತ್ತಿಯಲ್ಲಿ ಕೆಲವು ನೂತನ ಫೀಚರ್ಸ್‌ಗಳನ್ನು ಅಳವಡಿಸಿಕೊಂಡಿದೆ. ಅವುಗಳಲ್ಲಿ ಬಳಕೆದಾರರ ಖಾಸಗಿತನ ಕಾಪಾಡುವ ವಿಶೇಷ ಆಯ್ಕೆಗಳು ಸೇರಿವೆ. ಇದರೊಂದಿಗೆ ಹೊಸ ಫೀಚರ್ಸ್‌ಗಳು ವಾಟ್ಸಪ್ ಬಳಕೆಯನ್ನು ಇನ್ನಷ್ಟು ಸುಲಭ ಮತ್ತು ಸರಳವಾಗಿಸಲು ನೆರವಾಗುತ್ತವೆ. ಈ ನಿಟ್ಟಿನಲ್ಲಿ ಇಂದಿನ ಈ ಲೇಖನದಲ್ಲಿ ಈ ವರ್ಷ ವಾಟ್ಸಪ್‌ ಸೇರಿರುವ ಕೆಲವು ಅಚ್ಚರಿಯ ಫೀಚರ್ಸ್‌ಗಳ ಬಗ್ಗೆ ಒಂದಿಷ್ಟು ಮಾಹಿತಿ ನೀಡಲಾಗಿದೆ. ಮುಂದೆ ಓದಿರಿ.

ವಾಟ್ಸಪ್‌ ಗ್ರೂಪ್ ಕರೆ

ವಾಟ್ಸಪ್‌ ಗ್ರೂಪ್ ಕರೆ

ವಾಟ್ಸಪ್‌ ವಿಡಿಯೊ ಮತ್ತು ವಾಯಿಸ್‌ ಕಾಲಿಂಗ್ ಸೌಲಭ್ಯವನ್ನು ಬಳಕೆದಾರರಿಗೆ ಪರಿಚಯಿಸಿದೆ. ಹಾಗೆಯೇ ವಾಟ್ಸಪ್‌ ಗ್ರೂಪ್ ಚಾಟ್‌ನಲ್ಲಿ ಗ್ರೂಪ್‌ ಕಾಲಿಂಗ್ ಫೀಚರ್‌ ಅನ್ನು ನೀಡಿದ್ದು, ಗ್ರೂಪ್‌ ಸದಸ್ಯರೊಂದಿಗೆ ಕರೆ ಕನೆಕ್ಟ್ ಮಾಡಬಹುದಾಗಿದೆ. ವಾಟ್ಸಪ್‌ ಗ್ರೂಪ್‌ನಲ್ಲಿ ಕರೆಯ ಬಟನ್ ಒತ್ತಿ, ನಂತರ ಸದಸ್ಯರನ್ನು ಆಡ್‌ ಮಾಡುವ ಮೂಲಕ ಗ್ರೂಪ್‌ ಕಾಲಿಂಗ್ ಸೌಲಭ್ಯವನ್ನು ಪಡೆಯಬಹುದಾಗಿದೆ.

ಫಿಂಗರ್‌ಪ್ರಿಂಟ್ ಲಾಕ್ ಫೀಚರ್

ಫಿಂಗರ್‌ಪ್ರಿಂಟ್ ಲಾಕ್ ಫೀಚರ್

ವಾಟ್ಸಪ್‌ ಬಳಕೆದಾರರ ಖಾಸಗಿತನಕ್ಕೆ ಹೆಚ್ಚಿನ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಈ ವರ್ಷ ಹೊಸದಾಗಿ ಫಿಂಗರ್‌ಪ್ರಿಂಟ್ ಲಾಕ್ (ಬೆರಳಚ್ಚು ಗುರುತು) ಫೀಚರ್ ಅನ್ನು ಪರಿಚಯಿಸಿದೆ. ವಾಟ್ಸಪ್‌ ಆಪ್‌ಗೆ ಬಳಕೆದಾರರು ಅವರ ಬೆರಳಚ್ಚು ಗುರುತನ್ನೇ ಆಪ್‌ ಲಾಕ್‌ಗೆ ಬಳಕೆ ಮಾಡಬಹುದು. ಇನ್ನು ಈ ಫೀಚರ್‌ನಲ್ಲಿ ಆಪ್‌ ಸ್ಕ್ರೀನ್ ಲಾಕ್ ಆಗಲು ತಕ್ಷಣಕ್ಕೆ, ಒಂದು ನಿಮಿಷದ ನಂತರ, ಹತ್ತು ನಿಮಿಷದ ನಂತರ ಮತ್ತು ಮೂವತ್ತು ನಿಮಿಷದ ನಂತರ ಎಂಬ ಆಯ್ಕೆಗಳು ಇವೆ.

ವಾಟ್ಸಪ್ ಸ್ಟೇಟಸ್‌ ಶೇರ್

ವಾಟ್ಸಪ್ ಸ್ಟೇಟಸ್‌ ಶೇರ್

ಕೇವಲ 24 ಗಂಟೆಗಳು ಮಾತ್ರ ಕಾಣಿಸಿಕೊಳ್ಳುವ ವಾಟ್ಸಪ್‌ ಸ್ಟೇಟಸ್‌ ಆಯ್ಕೆಯು ಬಳಕೆದಾರರಲ್ಲಿ ಹೊಸ ಅಪ್‌ಡೇಟ್ ನೀಡಿದೆ. ವಾಟ್ಸಪ್ ಆಪ್‌ನಲ್ಲಿ ಸ್ಟೇಟಸ್‌ ಇಡುವ ಜೊತೆಗೆ ವಾಟ್ಸಪ್ ನಿಂದ ನೇರವಾಗಿ ಫೇಸ್‌ಬುಕ್‌ಗೆ ಶೇರ್‌ ಮಾಡುವ ಸೌಲಭ್ಯವನ್ನು ಸಹ ಅಳವಡಿಸಿದೆ. ಇದು ಸ್ಟೇಟಸ್‌ ಪ್ರಿಯರಿಗೆ ಖುಷಿ ಜೊತೆಗೆ ಭಾರಿ ಅನುಕೂಲ ಅನಿಸಿದೆ.

ವಾಟ್ಸಪ್‌ ಗ್ರೂಪ್‌ ನಿಯಂತ್ರಣ

ವಾಟ್ಸಪ್‌ ಗ್ರೂಪ್‌ ನಿಯಂತ್ರಣ

ಬಳಕೆದಾರರು ವಾಟ್ಸಪ್‌ ಗ್ರೂಪ್‌ ಸೇರುವಿಕೆ ನಿಯಂತ್ರಿಸಬಹುದಾದ ಆಯ್ಕೆಗಳಿವೆ. ಈ ಫೀಚರ್‌ನಲ್ಲಿ Everyone, My Contacts, My Contacts Except..ಮತ್ತು Nobody ಆಯ್ಕೆಗಳಿದ್ದು, ಬಳಕೆದಾರರು ಅಗತ್ಯ ಎನಿಸುವುದನ್ನು ಸೆಟ್‌ ಮಾಡಬಹುದಾಗಿದೆ. ಅದಕ್ಕಾಗಿ ಈ ಹಂತಗಳನ್ನು ಅನುಸರಿಸಿರಿ. ವಾಟ್ಸಪ್‌ > ಸೆಟ್ಟಿಂಗ್ > ಅಕೌಂಟ್‌ > ಪ್ರೈವೆಸಿ > ಗ್ರೂಪ್ಸ್‌.

ಡಾರ್ಕ್ ಥೀಮ್‌ ಆಯ್ಕೆ

ಡಾರ್ಕ್ ಥೀಮ್‌ ಆಯ್ಕೆ

ಫೇಸ್‌ಬುಕ್ ಸೇರಿದಂತೆ ಇತರೆ ಸಾಮಾಜಿಕ ತಾಣಗಳು ಈಗಾಗಲೇ ಡಾರ್ಕ್ ಮೋಡ್‌ ಫೀಚರ್‌ ಅನ್ನು ಪರಿಚಯಿಸಿವೆ.ಡಾರ್ಕ್ ಮೋಡ್‌ ಫೀಚರ್ ರಾತ್ರಿ ಸಮಯದಲ್ಲಿ ಡಿಸ್‌ಪ್ಲೇಯ ಬೆಳಕಿನ ಪ್ರಖರತೆಯನ್ನು ತಗ್ಗಿಸುತ್ತದೆ. ಇದೀಗ ವಾಟ್ಸಪ್‌ ಸಹ ಡಾರ್ಕ್ ಥೀಮ್ ಆಯ್ಕೆಯನ್ನು ತನ್ನ ಬೀಟಾ ಆವೃತ್ತಿಯಲ್ಲಿ ಲಭ್ಯಮಾಡಿದೆ. ಸದ್ಯದಲ್ಲೇ ವಾಟ್ಸಪ್‌ ಹೊಸ ಅಪ್‌ಡೇಟ್‌ ಆವೃತ್ತಿಯಲ್ಲಿ ಎಲ್ಲ ಬಳಕೆದಾರರಿಗೆ ಈ ಫೀಚರ್ ಸಿಗಲಿದೆ.

ಬೂಮ್‌ರಾಂಗ್ (Boomerang feature)

ಬೂಮ್‌ರಾಂಗ್ (Boomerang feature)

ವಾಟ್ಸಪ್‌ ತನ್ನ ಮಲ್ಟಿಮೀಡಿಯಾ ಫೈಲ್‌ ಅಟ್ಯಾಚ್‌ಗೆ ಈಗ ಹೊಸದಾಗಿ ಬೂಮ್‌ರಾಂಗ್ ಫೀಚರ್‌ ಅನ್ನು ಸೇರಿಸುವ ತಯಾರಿಯಲ್ಲಿದೆ. ಈ ಆಯ್ಕೆಯು ವಿಡಿಯೊ ಮಾದರಿಯಲ್ಲಿರಲಿದ್ದು, ಈ ಫೀಚರ್‌ ಇನ್‌ಸ್ಟಾಗ್ರಾಂನಲ್ಲಿರುವ ಬೂಮ್‌ರಾಂಗ್ ಆಯ್ಕೆಯನ್ನು ಹೋಲುತ್ತದೆ. ಬಳಕೆದಾರರು ಚಿಕ್ಕ ವಿಡಿಯೊ ಮಾದರಿಯಲ್ಲಿ (ಕ್ರಿಯೆಟ್‌) ಸೆರೆಹಿಡಿದು ಸೆಂಡ್ ಮಾಡಬಹುದಾಗಿದೆ. ಈ ಫೀಚರ್ ಇನ್ನು ನಿರೀಕ್ಷೆಯಲ್ಲಿದೆ.

Most Read Articles
Best Mobiles in India

English summary
The popular messaging platform WhatsApp has Added Few top features like Fingerprint lock, Group calling, status sharing and more in this year. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more