ಶೀಘ್ರವೇ ವಾಟ್ಸ್‌ಆಪ್ ಹೊಸ ಆಪ್‌ಡೇಟ್: ಪೇಮೆಂಟ್ ಆಪ್‌ಗಳಿಗೆ ನಡುಕ..!
ಈಗಾಗಲೇ ಮಾರುಕಟ್ಟೆಯಲ್ಲಿ ಹಲವಾರು ಪೇಮೆಂಟ್ ಆಪ್‌ಗಳು ಕಾರ್ಯನಿರ್ವಹಿಸುತ್ತಿದೆ. ಇದಕ್ಕೆ ಸ್ಪರ್ಧೆಯನ್ನು ನೀಡಲು ಬರುತ್ತಿದೆ. ವಾಟ್ಸ್‌ಆಪ್ ಇನ್ ಚಾಟ್ ಪೇಮೆಂಟ್ ಆಯ್ಕೆ. ಈ ಹಿಂದೆಯೇ ವಾಟ್ಸ್‌ಆಪ್ ಪೇಮೆಂಟ್ ಬಗ್ಗೆ ಮಾಹಿತಿಗಳು ಕೇಳಿಬಂದಿತ್ತು.
ವಾಟ್ಸ್‌ಆಪ್ ದಿನಕ್ಕೊಂದು ಹೊಸ ಆಯ್ಕೆಗಳನ್ನು ಬಿಡುಗಡೆ ಮಾಡುತ್ತಿದೆ. ಅದರಲ್ಲೂ ಭಾರತೀಯ ಮಾರುಕಟ್ಟೆಯನ್ನು ಗುರಿಯಾಗಿಟ್ಟುಕೊಂಡು ಹೊಸ ಹೊಸ ಆಯ್ಕೆಗಳನ್ನು ಬಿಡುಗಡೆ ಮಾಡುತ್ತಿದೆ. ಕಾರಣ ಕಳೆದ ಕೆಲವು ದಿನಗಳಲ್ಲಿ ಭಾರತದಲ್ಲಿ ವಾಟ್ಸ್‌ಆಪ್ ಬಳಕೆದಾರರ ಸಂಖ್ಯೆ ಹೆಚ್ಚುತ್ತಾ ಸಾಗಿದೆ.
ಓದಿರಿ: ಬಿಡುಗಡೆ ಆಯ್ತು ನೋಕಿಯಾ 2: ಬೆಲೆ ಕೇಳಿದ್ರೆ ಚೀನಾ ಫೋನ್‌ಗಳ ಅಧ್ಯಾಯ ಮುಕ್ತಾಯ ಎಂದರ್ಥ.!
ಈಗಾಗಲೇ ಮಾರುಕಟ್ಟೆಯಲ್ಲಿ ಹಲವಾರು ಪೇಮೆಂಟ್ ಆಪ್‌ಗಳು ಕಾರ್ಯನಿರ್ವಹಿಸುತ್ತಿದೆ. ಇದಕ್ಕೆ ಸ್ಪರ್ಧೆಯನ್ನು ನೀಡಲು ಬರುತ್ತಿದೆ. ವಾಟ್ಸ್‌ಆಪ್ ಇನ್ ಚಾಟ್ ಪೇಮೆಂಟ್ ಆಯ್ಕೆ. ಈ ಹಿಂದೆಯೇ ವಾಟ್ಸ್‌ಆಪ್ ಪೇಮೆಂಟ್ ಬಗ್ಗೆ ಮಾಹಿತಿಗಳು ಕೇಳಿಬಂದಿತ್ತು. ಆದರೆ ಈಗ ಖಚಿತಗೊಂಡಿದೆ.

ಡಿಸೆಂಬರ್‌ನಲ್ಲಿ ಲಾಂಚ್:
ವಾಟ್ಸ್‌ಆಪ್ ಇನ್ ಚಾಟ್ ಪೇಮೆಂಟ್ ಸೇವೆಯೂ ಡಿಸೆಂಬರ್ ನಲ್ಲಿ ಲಾಂಚ್ ಆಗಲಿದೆ ಎನ್ನಲಾಗಿದೆ. ಈಗಾಗಲೇ ಎಲ್ಲಾ ತಯಾರಿಯೂ ನಡೆದಿದ್ದು, ಅಂತಿಮ ಹಂತದ ಪರೀಕ್ಷೆಗಳು ನಡೆಯುತ್ತಿದೆ.

ಭಾರತೀಯ ಬಳಕೆದಾರರೇ ಟಾರ್ಗೆಟ್:
ದೇಶದಲ್ಲಿ ದಿನೇ ದಿನೇ ಡಿಜಿಟಲ್ ಪೇಮೆಂಟ್ ಹೆಚ್ಚು ಖ್ಯಾತಿಯನ್ನು ಪಡೆದುಕೊಳ್ಳುತ್ತಿದ್ದು, ಈ ಹಿನ್ನಲೆಯಲ್ಲಿ ಭಾರತೀಯ ಮಾರುಕಟ್ಟೆಯನ್ನು ಗುರಿಯಾಗಿಟ್ಟುಕೊಂಡು ವಾಟ್ಸ್ಆಪ್ ಪೇಮೆಂಟ್ ಆಯ್ಕೆಯನ್ನು ನೀಡಲು ಮುಂದಾಗಿದೆ.

ಪೇಮೆಂಟ್ ಮಾರುಕಟ್ಟೆ ತಲ್ಲಣ:
ಈಗಾಗಲೇ ವಾಟ್ಸ್‌ಆಪ್ ವಿಡಿಯೋ ಕಾಲಿಂಗ್ ಆಯ್ಕೆಯನ್ನು ನೀಡಿದ ನಂತರದಲ್ಲಿ ಮಾರುಕಟ್ಟೆಯಲ್ಲಿದ್ದ ಎಲ್ಲಾ ವಿಡಿಯೋ ಕಾಲಿಂಗ್ ಆಪ್‌ಗಳು ಅವನತಿಯನ್ನು ಕಂಡವು. ಈ ಹಿನ್ನಲೆಯಲ್ಲಿ ಪೇಮೆಂಟ್ ಆಪ್‌ಗಳಿಗೂ ಭಯ ಶುರುವಾಗಿದೆ.

ತೇಜ್ ಮಾದರಿ ಕೊಡುಗೆ:
ಗೂಗಲ್ ತೇಜ್ ಪೇಮೆಂಟ್ ಆಪ್ ಲಾಂಚ್ ಮಾಡಿದ ಸಂದರ್ಭದಲ್ಲಿ ಕ್ಯಾಷ್ ಬ್ಯಾಕ್ ಆಫರ್ ನೀಡಿತ್ತು, ಇದೇ ಮಾದರಿಯಲ್ಲಿ ವಾಟ್ಸ್‌ಆಪ್ ಆರಂಭಿಕ ಕೊಡುಗೆಯನ್ನು ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.


Click it and Unblock the Notifications