Subscribe to Gizbot

ವಾಟ್ಸ್‌ಆಪ್‌ ಶೀಘ್ರವೇ ಬದಲಾಗಲಿದೆ: ಹೊಸ ಸೇವೆಯೊಂದು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಸೇರಲಿದೆ..!

Written By:

ಫೇಸ್‌ಬುಕ್ ಒಡೆತನದ ವಾಟ್ಸ್ಆಪ್ ಈಗಾಗಲೇ ಪೇಮೆಂಟ್ ಸೇವೆಯನ್ನು ನೀಡುವ ಸಲುವಾಗಿ ಭಾರತದ ಹಲವು ಬ್ಯಾಂಕುಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ ಎನ್ನಲಾಗಿದೆ. ಶೀಘ್ರವೇ ವಾಟ್ಸ್‌ಆಪ್ ಪೇಮೆಂಟ್ ಶುರುವಾಗಲಿದ್ದು, ಬಳಕೆದಾರರಿಗೆ ಹೊಸ ಅನುಭವನ್ನು ನೀಡಲಿದೆ. ಸಾಮಾಜಿಕ ಜಾಲತಾಣಗಳ ಪೈಕಿ ವಾಟ್ ಆಪ್‌ ಅನ್ನು ಹೆಚ್ಚಾಗಿ ಬಳಸಲಾಗುತ್ತಿದ್ದು, ಈ ಹೊಸ ಆಯ್ಕೆಯಿಂದ ಬಳಕೆದಾರರ ಸಂಖ್ಯೆಯಲ್ಲಿ ಇನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ಹೊಸ ಸೇವೆಯೊಂದು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಸೇರಲಿದೆ..!

ಸಾರ್ವಜನಿಕ ಹಾಗೂ ಖಾಸಗಿ ವಲಯದ ಬ್ಯಾಂಕುಗಳೊಂದಿಗೆ ಫೇಸ್‌ಬುಕ್ ಒಡೆತನದ ವಾಟ್ಸ್ಆಪ್ ಒಪ್ಪಂದ ಮಾಡಿಕೊಂಡಿದೆ ಎನ್ನಲಾಗಿದೆ. ಬ್ಯಾಂಕ್‌ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ, ICICI ಬ್ಯಾಂಕ್‌, HDFC ಬ್ಯಾಂಕ್‌ ಮತ್ತು ಆಕ್ಸಿಸ್‌ ಬ್ಯಾಂಕುಗಳೊಂದಿಗೆ ಈಗಾಗಲೇ ಕೈ ಜೋಡಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಅನುಮತಿ ಪಡೆದಿದೆ:

ಅನುಮತಿ ಪಡೆದಿದೆ:

ಫೇಸ್‌ಬುಕ್ ಒಡೆತನದ ವಾಟ್ಸ್ಆಪ್ 2017ರಲ್ಲೇ ಕೇಂದ್ರ ಸರಕಾರದಿಂದ ಪೇಮೆಂಟ್‌ ಸೇವೆಯನ್ನು ಆರಂಭಿಸಲು ಅನುಮತಿ ಪಡೆದುಕೊಂಡಿದೆ ಎನ್ನಲಾಗಿದೆ. ಸದ್ಯ ಅಂತಿಮ ತಯಾರಿಯೂ ನಡೆಯುತ್ತಿದ್ದು, ಶೀಘ್ರವೇ ಅನುಷ್ಠಾನವಾಗಲಿದೆ ಎನ್ನಲಾಗಿದೆ.

UPI ಆಧಾರಿತ:

UPI ಆಧಾರಿತ:

ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಪೇಮೆಂಟ್‌ಗಳು ಯೂನಿಫೈಡ್‌ ಪೇಮೆಂಟ್ಸ್‌ ಇಂಟರ್‌ಫೇಸ್‌(UPI) ಆಧಾರಿತವಾಗಿ ಕಾರ್ಯನಿರ್ವಹಿಸುತ್ತಿದೆ. ಇದೇ ಮಾದರಿಯಲ್ಲಿ ವಾಟ್ಸ್‌ಆಪ್ ಸಹ UPI ನಿಂದಲೇ ಕಾರ್ಯನಿರ್ವಹಿಸಲಿದೆ.

ಹೆಚ್ಚಿನ ಭದ್ರತೆ:

ಹೆಚ್ಚಿನ ಭದ್ರತೆ:

ಆನ್‌ಲೈನ್‌ ವ್ಯವಹಾರಗಳಲ್ಲಿ ಗ್ರಾಹಕರ ಬ್ಯಾಂಕಿಂಗ್‌ ಮಾಹಿತಿಯ ಸೋರಿಕೆಯಾಗದಂತೆ ತಡೆಯಲು ಎಲ್ಲಾ ರೀತಿಯಲ್ಲಿ ವಾಟ್ಸ್‌ಆಪ್ ಮುಂದಾಗಿದೆ. ಇದಕ್ಕಾಗಿ ಹಲವು ಸುತ್ತಿನ ಸೆಕ್ಯೂರಿಟಿಯನ್ನು ನೀಡಲು ಮುಂದಾಗಿದೆ. ಸೇವೆ ಪ್ರಾರಂಭಕ್ಕೂ ಮುನ್ನವೇ ಈ ಕುರಿತು ಪರೀಕ್ಷೆಯನ್ನು ನಡೆಸುತ್ತಿದೆ.

ಮಾರುಕಟ್ಟೆಯಲ್ಲಿ ಸ್ಪರ್ಧೆ:

ಮಾರುಕಟ್ಟೆಯಲ್ಲಿ ಸ್ಪರ್ಧೆ:

ವಾಟ್ಸ್‌ಆಪ್ ಪೇಮೆಂಟ್‌ ಸೇವೇಯನ್ನು ಆರಂಭಿಸಿದ ನಂತರದಲ್ಲಿ ಮಾರುಕಟ್ಟೆಯಲ್ಲಿ ಭಾರಿ ಸ್ಪರ್ಧೆ ಏರ್ಪಡಲಿದೆ. ಪೇಟಿಎಂ, ಗೂಗಲ್‌ನ ತೇಜ್‌, ಪೋನ್ ಪೇ ಆಪ್‌ಗಳು ತಮ್ಮ ಬಳಕೆದಾರರನ್ನು ಕಳೆದುಕೊಳ್ಳಲಿವೆ ಎನ್ನಲಾಗಿದೆ.

ವಾಟ್ಟ್‌ಆಪ್ ಕುರಿತು ಇನ್ನಷ್ಟು..

ವಾಟ್ಟ್‌ಆಪ್ ಕುರಿತು ಇನ್ನಷ್ಟು..

ಫೇಸ್‌ಬುಕ್ ಒಡೆತನಕ್ಕೆ ಸೇರಿರುವ ವಾಟ್ಸ್‌ಆಪ್ ಜಾಗತಿಕವಾಗಿ ಸಾಕಷ್ಟು ಖ್ಯಾತಿಯನ್ನು ಪಡೆದುಕೊಂಡಿದೆ. ಇದೇ ಮಾದರಿಯಲ್ಲಿ ಭಾರತದಲ್ಲಿಯೂ ಹೆಚ್ಚಿನ ಮಂದಿ ವಾಟ್ಸ್‌ಆಪ್ ಬಳಕೆಯನ್ನು ಮಾಡಿಕೊಳ್ಳುತ್ತಿದ್ದಾರೆ. ಈ ಹಿನ್ನಲೆಯಲ್ಲಿ ವಾಟ್ಸ್‌ಆಪ್ ಬಳಕೆದಾರರ ಕುರಿತು ಫೇಸ್‌ಬುಕ್ CEO ಮಾರ್ಕ್ ಜುಕರ್ ಬರ್ಗ್ ಆಚ್ಚರಿಯ ಮಾಹಿತಿಯೊಂದನ್ನು ಬಿಡುಗಡೆ ಮಾಡಿದ್ದಾರೆ. ವಿಶ್ವದಲ್ಲಿಯೇ ಅತೀ ಹೆಚ್ಚಿನ ಮಂದಿ ಈ ಮೇಸೆಂಜಿಂಗ್ ಆಪ್ ಅನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಆಚ್ಚರಿ ಮಾಹಿತಿ

ಆಚ್ಚರಿ ಮಾಹಿತಿ

ದಿನದಿಂದ ದಿನಕ್ಕೆ ವಾಟ್ಸ್‌ಆಪ್ ಬಳಕೆದಾರ ಸಂಖ್ಯೆಯೂ ಹೆಚ್ಚಾಗುತ್ತಿದ್ದು, ಸದ್ಯ ಸುಮಾರು 1.5 ಬಿಲಿಯನ್ ಮಂದಿ ಬಳಕೆ ಮಾಡಿಕೊಳ್ಳುತ್ತಿದ್ದು, ಅದರಲ್ಲಿಯೂ ಪ್ರತಿ ದಿನ ಸುಮಾರು 60 ಬಿಲಿಯನ್ ಮೇಸೆಜ್‌ಗಳು ವಿಲೆವಾರಿಯಾಗುತ್ತಿದೆ ಎನ್ನಲಾಗಿದೆ. 2017ರ ಕೊನೆಯ ಭಾಗದಲ್ಲಿ ವಾಟ್ಸ್‌ಆಪ್ ಬಳಕೆದಾರರ ಸಂಖ್ಯೆಯೂ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಏರಿಕೆಯಾಗಿದೆ ಎನ್ನಲಾಗಿದೆ.

ದುಪ್ಪಟ್ಟು ಏರಿಕೆ

ದುಪ್ಪಟ್ಟು ಏರಿಕೆ

ಈ ಹಿಂದೆ ವಾಟ್ಸ್‌ಆಪ್ ಅನ್ನು 2014ರಲ್ಲಿ ಫೇಸ್‌ಬುಕ್ ಖರೀದಿ ಮಾಡಿದ ಸಂದರ್ಭದಲ್ಲಿ 450 ಮಿಲಿಯನ್ ಮಂದಿ ಬಳಕೆದಾರರನ್ನು ಹೊಂದಿತ್ತು. ಆದರೆ ಇಂದು ತಿಂಗಳಿಗೆ ವಾಟ್ಸ್‌ಆಪ್ ಬಳಕೆ ಮಾಡುವವರ ಸಂಖ್ಯೆಯೂ 1.3 ಬಿಲಿಯನ್ ಸಂಖ್ಯೆಯನ್ನು ತಲುಪಿದ್ದು, ಅಲ್ಲದೇ 1 ಮಿಲಿಯನ್ ಮಂದಿ ಆಕ್ಟೀವ್ ಬಳಕೆದಾರರಿದ್ದಾರೆ.

ಹೊಸ ಸೇವೆ

ಹೊಸ ಸೇವೆ

ಸ್ಟೋರಿಸ್ ಆಪ್‌ ಲೋಡ್ ಮಾಡುವುದರಲ್ಲಿ ಫೇಸ್‌ಬುಕ್ ಒಡೆತನದ ಇನ್‌ಸ್ಟಾಗ್ರಮ್ ಮೊದಲ ಸ್ಥಾನವನ್ನು ಪಡೆದುಕೊಂಡಿದೆ ಎನ್ನಲಾಗಿದೆ. ಇದಾದ ನಂತರದ ಸ್ಥಾನದಲ್ಲಿ ವಾಟ್ಸ್‌ಆಪ್ ಕಾಣಿಸಿಕೊಂಡಿದ್ದು, ಇದಾದ ಮೇಲೆ ಸ್ನಾಪ್‌ ಚಾಟ್ ಸ್ಥಾನವನ್ನು ಪಡೆದುಕೊಂಡಿದೆ ಎನ್ನಲಾಗಿದೆ. ಸ್ಟೋರಿಸ್ ಅನ್ನು ಮೊದಲು ಪರಿಚಯಿಸಿದ್ದು ಸ್ನಾಪ್‌ಚಾಟ್.

ಇನ್ನು ಇದೆ

ಇನ್ನು ಇದೆ

ಇದಲ್ಲದೇ ಮೊನ್ನೆ ಮಾರುಕಟ್ಟೆಗೆ ಬಿಡುಗಡೆಯಾದಂತಹ ವಾಟ್ಸ್‌ಆಪ್ ಬಿಸ್ನೆಸ್ ಆಪ್‌ಗೆ ಮಾರುಕಟ್ಟೆಯಲ್ಲಿ ಸಾಕಷ್ಟು ಬೇಡಿಕೆಯೂ ನಿರ್ಮಾಣವಾಗಿದ್ದು, ಈಗಾಗಲೇ ದೆತ್ಯ ಕಂಪನಿಗಳು ಈ ಆಪ್ ಬಳಕೆಗೆ ಮುಂದಾಗಿದೆ ಎನ್ನಲಾಗಿದೆ. ಶೀಘ್ರವೇ ಇದು ಸಹ ಹೆಚ್ಚಿನ ಖ್ಯಾತಿಯನ್ನು ತನ್ನದಾಗಿಸಿಕೊಳ್ಳಲಿದೆ.

ಹಣ ಸಂಪಾದನೆಯ ಮಾರ್ಗ:

ಹಣ ಸಂಪಾದನೆಯ ಮಾರ್ಗ:

ಫೇಸ್‌ಬುಕ್ ಮಾಲೀಕತ್ವದ ವಾಟ್ಸ್ಆಪ್ ಕೇವಲ ಚಾಟಿಂಗ್ ಮಾಡುಲು ಮಾತ್ರವೇ ಸೀಮಿತವಾಗಿಲ್ಲ. ಬದಲಿಗೆ ಹಣ ಸಂಪಾದನೆಯ ಮಾರ್ಗವನ್ನು ತೋರಿಸಿಕೊಟ್ಟಿದೆ. ಇದಕ್ಕಾಗಿಯೇ ತನ್ನ ಬಳಕೆದಾರರಿಗೆ ಹೊಸ ಆಪ್ ವೊಂದನ್ನು ಪರಿಚಯ ಮಾಡಿದ್ದು, ಕಳೆದ ವಾರ ಜಾಗತಿಕವಾಗಿ ಈ ಆಪ್ ಲಾಂಚ್ ಆಗಿದ್ದ ವಾಟ್ಸ್‌ಆಪ್ ಬಿಸ್ನೆಸ್ ಆಪ್‌, ಇಂದಿನಿಂದ ಭಾರತದಲ್ಲಿಯೂ ಬಳಕೆಗೆ ಲಭ್ಯವಿದೆ.

ವಾಟ್ಸ್‌ಆಪ್ ಬಿಸ್ನೆಸ್ ಆಪ್‌

ವಾಟ್ಸ್‌ಆಪ್ ಬಿಸ್ನೆಸ್ ಆಪ್‌

ಈ ಆಪ್ ಉಪಯೋಗವೇನು ಮತ್ತು ವಾಟ್ಸ್‌ಆಪ್ ಬಿಸ್ನೆಸ್ ಆಪ್‌ ಬಳಕೆಯಿಂದ ಯಾವ ರೀತಿಯಲ್ಲಿ ಲಾಭವಾಗಲಿದೆ. ಜೊತೆಗೆ ಈ ಆಪ್ ಬಳಕೆ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ತಿಳಿಸುವ ಪ್ರಯತ್ನವು ಇದಾಗಿದೆ. ಈ ಆಪ್ ನ ಸರಿಯಾದ ಬಳಕೆಯಿಂದ ನೀವು ವ್ಯಾಪಾರದಲ್ಲಿ ಹೆಚ್ಚಿನ ಲಾಭವನ್ನು ಪಡೆಯಬಹುದು.

ಆಂಡ್ರಾಯ್ಡ್ ಬಳಕೆದಾರರಿಗೆ

ಆಂಡ್ರಾಯ್ಡ್ ಬಳಕೆದಾರರಿಗೆ

ಸದ್ಯ ಆಂಡ್ರಾಯ್ಡ್ ಬಳಕೆದಾರರಿಗೆ ಮಾತ್ರವೇ ವಾಟ್ಸ್‌ಆಪ್ ಬಿಸ್ನೆಸ್ ಆಪ್‌ ಭಾರತದಲ್ಲಿ ಡೌನ್‌ಲೋಡ್ ಮಾಡಲು ಲಭ್ಯವಿದೆ. ಪ್ಲೇಸ್ಟೋರಿನಲ್ಲಿ ವಾಟ್ಸ್‌ಆಪ್ ಬಿಸ್ನೆಸ್ ಆಪ್‌ ಡೌನ್‌ಲೋಡ್ ಮಾಡಿಕೊಂಡು ಬಳಕೆ ಮಾಡಿಕೊಳ್ಳಬಹುದಾಗಿದೆ. ಸಾಮಾನ್ಯ ವಾಟ್ಸ್‌ಆಪ್ ಮತ್ತು ವಾಟ್ಸ್‌ಆಪ್ ಬಿಸ್ನೆಸ್ ಆಪ್‌ ನಡುವೆ ಹೆಚ್ಚಿನ ವ್ಯತ್ಯಾಸವಿದೆ.

ಒಳ್ಳೆಯ ವೇದಿಕೆ

ಒಳ್ಳೆಯ ವೇದಿಕೆ

ಸಣ್ಣ ಪ್ರಮಾಣದ ವ್ಯಾಪಾರಗಾರರಿಗೆ ಮತ್ತು ಹೊಸದಾಗಿ ವ್ಯಾಪಾರವನ್ನು ಆರಂಭಿಸುವವರಿಗೆ ವಾಟ್ಸ್‌ಆಪ್ ಬಿಸ್ನೆಸ್ ಆಪ್‌ ಸಹಾಯಕಾರಿಯಾಗಿದೆ. ಅಲ್ಲದೇ ಮನೆಯಲ್ಲಿಯೇ ತಯಾರಿಸಿದ ವಸ್ತುಗಳನ್ನು ಮಾರಾಟ ಮಾಡುವವರಿಗೆ ವಾಟ್ಸ್‌ಆಪ್ ಬಿಸ್ನೆಸ್ ಆಪ್‌ ಒಳ್ಳೆಯ ವೇದಿಕೆಯಾಗಲಿದೆ. ಇಲ್ಲಿ ಹೆಚ್ಚಿನ ಜನರನ್ನು ತಲುಪುವ ಸಾಧ್ಯತೆ ಇದೆ.

ನೇರವಾಗಿ ಸಂವಹನ

ನೇರವಾಗಿ ಸಂವಹನ

ಇದಲ್ಲದೇ ವಾಟ್ಸ್‌ಆಪ್ ಬಿಸ್ನೆಸ್ ಆಪ್‌ ಮೂಲಕ ಮಾರಾಟಗಾರರು ತಮ್ಮ ಗ್ರಾಹಕರೊಂದಿಗೆ ನೇರವಾಗಿ ಸಂವಹನ ನಡೆಸಬಹುದಾಗಿದೆ. ಇದರಿಂದಾಗಿ ಗ್ರಾಹಕರು ಮತ್ತು ಮಾರಾಟಗಾರರ ನಡುವೆ ಉತ್ತಮ ಬಾಂಧವ್ಯವು ಬೆಳೆಯಲಿದೆ ಎನ್ನಲಾಗಿದೆ. ಇದು ಉತ್ತಮ ವೇದಿಕೆಯನ್ನು ಗ್ರಾಹಕರಿಗೆ ಮತ್ತು ಮಾರಾಟಗಾರರಿಗೆ ಕಲ್ಪಿಸಲಿದೆ.

ಫೇಸ್‌ಬುಕ್ ಪೇಜ್‌

ಫೇಸ್‌ಬುಕ್ ಪೇಜ್‌

ವಾಟ್ಸ್‌ಆಪ್ ಬಿಸ್ನೆಸ್ ಆಪ್ ನಲ್ಲಿ ಬಳಕೆದಾರರು ಈ ಹಿಂದೆಯೇ ಕ್ರಿಯೇಟ್ ಮಾಡಿರುವ ತಮ್ಮ ಫೇಸ್‌ಬುಕ್ ಪೇಜ್‌ ಲಿಂಕ್ ಅನ್ನು ಶೇರ್ ಮಾಡಬಹುದಾಗಿದೆ. ಈ ಮೂಲಕ ಹೆಚ್ಚಿನ ಜನರನ್ನು ತಲುಪಬಹುದಾಗಿದೆ. ಅಲ್ಲದೇ ಇಲ್ಲಿನ ಗ್ರಾಹಕರಿಗೂ ಅಲ್ಲಿನ ಚಿತ್ರಣವನ್ನು ತೋರಿಸಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ಓದಿರಿ: ಚಂದ್ರ ಗ್ರಹಣದಂದು ಕಾಣಿಸಿಕೊಂಡ ಏಲಿಯನ್ಸ್..? ನಾನಾ ಪ್ರಸಾರ ಮಾಡಿದ ವಿಡಿಯೋದಲ್ಲೇನಿದೆ..?

English summary
whatsapp payment service will launch soon. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot