Subscribe to Gizbot

ಚಂದ್ರ ಗ್ರಹಣದಂದು ಕಾಣಿಸಿಕೊಂಡ ಏಲಿಯನ್ಸ್..? ನಾನಾ ಪ್ರಸಾರ ಮಾಡಿದ ವಿಡಿಯೋದಲ್ಲೇನಿದೆ..?

Written By:

ಮೊನ್ನೆ ನಡೆದ ಚಂದ್ರಗಹಣ ಬಾಹ್ಯಾಕಾಶ ಸಂಶೋಧಕರು ಹಾಗೂ ವಿಜ್ಞಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ. 'ಬ್ಲ್ಯೂ ಬ್ಲಡ್​ವುೂನ್ ಗ್ರಹಣ' ಎನ್ನುವುದು ಒಂದಾದರೆ, ಗ್ರಹಣದಂದು ಚಂದ್ರನ ಸುತ್ತ UFO (ಅಪರಿಚಿತ ಹಾರುವ ತಟ್ಟೆ)ವೊಂದು ಕಾಣಿಸಿಕೊಂಡಿದ್ದು, ಏಲಿಯನ್ ಗಳು ಚಂದ್ರಗ್ರಹಣವನ್ನು ಅತೀ ಹತ್ತಿರದಿಂದ ವೀಕ್ಷಿಸಲು ಬಂದಿರಬೇಕು ಎನ್ನುವ ವಿವರಣೆಯೊಂದು ಹರಿದಾಡಿದೆ.

ಚಂದ್ರ ಗ್ರಹಣದಂದು ಕಾಣಿಸಿಕೊಂಡ ಏಲಿಯನ್ಸ್..? ನಾನಾ ಪ್ರಸಾರ ಮಾಡಿದ ವಿಡಿಯೋ

ಚಂದ್ರ ಗ್ರಹಣವನ್ನು ವಿಶ್ವದ ಜನರು ಅತಿ ಹತ್ತಿರದಿಂದ ಮತ್ತು ಸಂಫೂರ್ಣವಾಗಿ ವಿಕ್ಷೀಸಲಿ ಎನ್ನುವ ಕಾರಣಕ್ಕೆ ಅಮೆರಿಕದ ಬಾಹ್ಯಾಕಾಶ ವಿಜ್ಞಾನ ಸಂಸ್ಥೆ (ನಾಸಾ) ಚಂದ್ರಗ್ರಹಣದ ಲೈವ್ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿತ್ತು. ವಿಶ್ವದ ಕೋಟ್ಯಾಂತರ ಜನರು ಈ ಲೈಬ್ ವಿಡಿಯೋವನ್ನು ನೋಡಿದ್ದರೂ ಎನ್ನಲಾಗಿದ್ದು, ಈ ವಿಡಿಯೋದಲ್ಲಿ ಚಂದ್ರನ ಸುತ್ತ UFO (ಅಪರಿಚಿತ ಹಾರುವ ತಟ್ಟೆ)ವೊಂದು ಸಂಚರಿಸಿರುವುದು ದಾಖಲಾಗಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ನಾಸಾ ಸ್ಪಷ್ಟನೆ ನೀಡದ ನಾಸಾ:

ನಾಸಾ ಸ್ಪಷ್ಟನೆ ನೀಡದ ನಾಸಾ:

ಚಂದ್ರಗ್ರಹಣದಂದು ಚಂದ್ರನ ಸುತ್ತ ಕಾಣಿಸಿಕೊಂಡ UFO (ಅಪರಿಚಿತ ಹಾರುವ ತಟ್ಟೆ) ವಿಡಿಯೋವನ್ನು ಪ್ರಸಾರ ಮಾಡಿರುವ ಕುರಿತು ನಾಸಾ ಯಾವುದೇ ಮಾಹಿತಿಯನ್ನು ನೀಡಿಲ್ಲ. ಬದಲಾಗಿ ಈ ವಿಡಿಯೋವನ್ನು ಇನಷ್ಟು ಪರೀಕ್ಷೆಗೆ ಒಳಪಡಿಸಿ ನಂತರ ಮಾಹಿತಿಯನ್ನು ನೀಡುವುದಾಗಿ ತಿಳಿಸಿದೆ.

ಕುತೂಹಲಕ್ಕೆ ಕಾರಣ:

ಕುತೂಹಲಕ್ಕೆ ಕಾರಣ:

ಹಿಂದೆ ನಡೆದ ಎಲ್ಲಾ ಚಂದ್ರಗ್ರಹಣಗಳಿಗಿಂತ ಈ ಬಾರಿ 'ಬ್ಲ್ಯೂ ಬ್ಲಡ್​ವುೂನ್ ಗ್ರಹಣ' ಸಾಕಷ್ಟು ಕುತೂಹಲಕ್ಕೆ ಕಾರಣವಾಗಿತ್ತು. ಈ ಹಿನ್ನಲೆಯಲ್ಲಿ ಎಲ್ಲಾರೂ ಗ್ರಹಣವನ್ನು ನೋಡುತ್ತಿದ್ದರು ಎನ್ನಲಾಗಿದೆ. ಇದೇ ಸಂದರ್ಭದಲ್ಲಿ ಹಾರುವತಟ್ಟೆ ಕಾಣಿಸಿಕೊಂಡಿರುವುದು ಇನ್ನುಷ್ಟು ಹೆಚ್ಚಿನ ಕುತೂಹಲಕ್ಕೆ ಕಾರಣವಾಗಿದೆ.

UFO (ಅಪರಿತ ಹಾರುವ ತಟ್ಟೆ) ಇರಬೇಕು:

UFO (ಅಪರಿತ ಹಾರುವ ತಟ್ಟೆ) ಇರಬೇಕು:

ಈ ವಿಡಿಯೋವನ್ನು ನೋಡಿದ ಹಲವರು ನಿಗೂಢ ವಸ್ತು ಅನ್ಯಗ್ರಹ ಜೀವಿಗಳು ಸಂಚರಿಸುವ ಹಾರುವ ತಟ್ಟೆ ಇರಬಹುದು ಎಂಬ ಸಂಶಯವನ್ನು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಇದು ಒಂದು ವಾದ, ಅಲ್ಲದೇ ಇನ್ನು ಹಲವರು ಗ್ರಹಣ ವೇಳೆ ಸಂಚರಿಸುತ್ತಿರುವ ವಿಮಾನ ಅಥವಾ ಸ್ಯಾಟ್​ಲೈಟ್‌ ಪ್ರತಿ ಬಿಂಬ ಇರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ಓದಿರಿ: ಖರ್ಚಿಲ್ಲದೇ ಒಂದೇ ದಿನದಲ್ಲಿ ಡ್ರೈವಿಂಗ್ ಲೈಸೆನ್ಸ್ ಮಾಡಿಸಲು ಸಾಧ್ಯವೇ..? ಯಾಕಿಲ್ಲ ಇಲ್ಲಿದೇ ಸಂಪೂರ್ಣ ಮಾಹಿತಿ

English summary
UFO caught on shocking lunar eclipse video. To know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot