Home
Apps

ವಾಟ್ಸ್‌ಆಪ್ ಪೇಮೆಂಟ್ ಮಾಡುವ ಮೊದಲು ಈ ವಿಷಯಗಳನ್ನು ತಿಳಿದುಕೊಳ್ಳುವುದು ಉತ್ತಮ..!

By Srinidhi

ಭಾರತದಲ್ಲಿ ವಾಟ್ಸ್‌ಆಪ್ ಪೇಮೆಂಟ್ ಸೇವೆಯೂ ಶುರುವಾಗಿದ್ದು, ಪೇಮೆಂಟ್ ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಸೃಷ್ಠಿಸಿದೆ. ಈಗಾಗಲೇ ಹಲವರಾರು ಪೇಮೆಂಟ್ ಆಪ್ ಗಳು ಮಾರುಕಟ್ಟೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ ಸಹ ವಾಟ್ಸ್‌ಆಪ್ ಪೇಮೆಂಟ್ ಕೊಂಚ ಭಿನ್ನವಾಗಿ ಕಾರ್ಯನಿರ್ವಹಿಸಲಿದ್ದು, ಇತರೆ ಪೇಮೆಂಟ್ ಆಪ್ ಗಳಿಗೆ ಪ್ರಬಲ ಪೈಪೋಟಿಯನ್ನು ನೀಡಲಿದೆ. ಅಲ್ಲದೇ ಮಾರುಕಟ್ಟೆಯಲ್ಲಿ ಮೆಲುಗೈ ಸಾಧಿಸಲಿದೆ ಎನ್ನುವ ಮಾತು ಕೇಳಿಬಂದಿದೆ.

ವಾಟ್ಸ್‌ಆಪ್ ಪೇಮೆಂಟ್ ಮಾಡುವ ಮೊದಲು ಈ ವಿಷಯಗಳನ್ನು ತಿಳಿದುಕೊಳ್ಳುವುದು ಉತ್ತಮ..!

ಈ ಹಿನ್ನಲೆಯಲ್ಲಿ ಸದ್ಯ ಕೆಲವೇ ಕೆಲವು ಮಂದಿಗೆ ಮಾತ್ರವೇ ಬಳಕೆಗೆ ಲಭ್ಯವಿರುವ ವಾಟ್ಸ್ಆಪ್ ಪೇಮೆಂಟ್ ಆಪ್ ಕುರಿತ ಆಚ್ಚರಿ ಮಾಹಿತಿಗಳನ್ನು ನಿಮಗೆ ತಿಳಿಸುವ ಪ್ರಯತ್ನವು ಇದಾಗಿದೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಹಲವು ಪೇಮೆಂಟ್ ಆಪ್ ಗಳನ್ನು ನೀವು ಬಳಕೆ ಮಾಡಕೊಂಡಿದ್ದರೂ ಸಹ ವಾಟ್ಸ್‌ಆಪ್ ಪೇಮೆಂಟ್ ನಿಮಗೆ ಹೊಸ ಅನುಭವನ್ನು ನೀಡಲಿದೆ.

ಆಂಡ್ರಾಯ್ಡ್ - ಐಓಎಸ್:

ಆಂಡ್ರಾಯ್ಡ್ - ಐಓಎಸ್:

ವಾಟ್ಸ್‌ಆಪ್ ಪೇಮೆಂಟ್ ಆಂಡ್ರಾಯ್ಡ್ ಬಳಕೆದಾರಿಗೆ ಮತ್ತು ಐಓಎಸ್ ಬಳಕೆದಾರರಿಗೆ ಲಭ್ಯವಿರಲಿದೆ ಎನ್ನಲಾಗಿದೆ. ಎರಡು ಪ್ಲಾಟ್ ಫಾರ್ಮ್ ಗಳಲ್ಲಿಯೂ ವಾಟ್ಸ್‌ಆಪ್ ಪೇಮೆಂಟ್ ಸೇವೆ ದೊರೆಯಲಿದ್ದು, ಬಳಕೆದಾರರು ಹೆಚ್ಚಿನ ಲಾಭವನ್ನು ಒಂದೇ ಆಪ್ ನಲ್ಲಿ ಪಡೆಯಬಹುದಾಗಿದೆ.

ಎಂಡ್-ಟು-ಎಂಡ್ ಸೇವೆ:

ಎಂಡ್-ಟು-ಎಂಡ್ ಸೇವೆ:

ಸದ್ಯ ವಾಟ್ಸ್‌ಆಪ್ ಪೇಮೆಂಟ್ ಎಂಡ್-ಟು-ಎಂಡ್ ಸೇವೆಯನ್ನು ನೀಡುತ್ತಿದ್ದು, ಕೇವಲ ವಾಟ್ಸ್‌ಆಪ್ ಬಳಕೆದಾರರು ಮಾತ್ರವೇ ಹಣವನ್ನು ಸ್ವೀಕರಿಸುವ ಮತ್ತು ಕಳುಹಿಸುವ ಆಯ್ಕೆಯನ್ನು ಪಡೆದುಕೊಳ್ಳಲಿದ್ದಾರೆ. ಆದರೆ ಇದರ ಮೂಲಕ ವ್ಯಾಪಾರಿಗಳಿಗೆ ಇಲ್ಲವೇ ಬೇರೆ ಶಾಪಿಂಗ್ ಸಂದರ್ಭದಲ್ಲಿ ಪಾವತಿಯನ್ನ ಮಾಡುವ ಅವಕಾಶವನ್ನು ನೀಡಲಾಗಿಲ್ಲ.

UPI ಆಧಾರಿತ:

UPI ಆಧಾರಿತ:

ಈಗಾಗಲೇ ಮಾರುಕಟ್ಟೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಆಪ್ ಗಳು UPI ಆಧಾರಿತವಾಗಿಯೇ ಹಣವರ್ಗಾವಣೆ ಮಾಡುತ್ತಿವೆ. ಇದೇ ಮಾದರಿಯಲ್ಲಿ ವಾಟ್ಸ್‌ಆಪ್ ಪೇಮೆಂಟ್ ಸಹ UPI ಆಧಾರಿ ಸೇವೆಯನ್ನೇ ನೀಡಲಿದೆ ಎನ್ನಲಾಗಿದೆ.

ಆಕೌಂಟ್‌ಗೆ ನೇರಾ ವರ್ಗಾವಣೆ:

ಆಕೌಂಟ್‌ಗೆ ನೇರಾ ವರ್ಗಾವಣೆ:

ಇದಲ್ಲದೇ ವಾಟ್ಸ್‌ಆಪ್ ಪೇಮೆಂಟ್ ನಲ್ಲಿ ಹಣವನ್ನು ನೇರಾವಾಗಿ ಬ್ಯಾಂಕ್ ಆಕೌಂಟ್ ಗೆ ವರ್ಗಾವಣೆಯಾಲಿದೆ ಎನ್ನಲಾಗಿದೆ. ವಾಟ್ಸ್‌ಆಪ್ ವ್ಯಾಲೆಟ್ ಮಾದರಿಯಲ್ಲಿ ಕಾರ್ಯನಿರ್ವಹಿಸುವುದಿಲ್ಲ. ನಿಮ್ಮ ಹಣವನ್ನು ಆಕೌಂಟ್ ನಿಂದಲೇ ಕಡಿತ ಮಾಡಲಿದೆ ಮತ್ತು ಅಲ್ಲಿಗೆ ಸೇರಿಸಲಿದೆ ಎನ್ನಲಾಗಿದೆ.

ನಿಮ್ಮ Aadhaar ದುರುಪಯೋಗವಾಗಿದೆಯೇ..? ಪತ್ತೆ ಹಚ್ಚುವುದು ಹೇಗೆ..?
ಹಲವು ಬ್ಯಾಂಕ್ ಸೇವೆ:

ಹಲವು ಬ್ಯಾಂಕ್ ಸೇವೆ:

ವಾಟ್ಸ್‌ಆಪ್ ತನ್ನ ಪೇಮೆಂಟ್ ಸೇವೆಯಲ್ಲಿ ಹಲವು ಬ್ಯಾಂಕ್ ಗಳನ್ನು ಸೇರಿಕೊಂಡಿದೆ. ಆಕ್ಸಿಸ್ ಬ್ಯಾಂಕ್, HDFC ಬ್ಯಾಂಕ್, ICICI ಬ್ಯಾಂಕ್, ಯಸ್ ಬ್ಯಾಂಕ್, ಏರ್‌ಟೆಲ್ ಪೇಮೆಂಟ್ ಬ್ಯಾಂಕ್‌, ಆಂಧ್ರಾ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕಾಣಿಸಿಕೊಂಡಿದೆ. ಮುಂದಿನ ದಿನಗಳಲ್ಲಿ ಇನಷ್ಟು ಬ್ಯಾಂಕ್ ವಾಟ್ಸ್‌ಆಪ್ ನಲ್ಲಿ ಸೇರಿಕೊಳ್ಳಲಿದೆ ಎನ್ನಲಾಗಿದೆ.

ಓದಿರಿ: ಪಬ್ಲಿಕ್ ಟಿವಿಯಿಂದ ಮತ್ತೊಂದು ಹೊಸ ಚಾನಲ್ ಆರಂಭ..! ಇಲ್ಲಿದೆ ಸಂಪೂರ್ಣ ಮಾಹಿತಿ..!

Best Mobiles in India

English summary
WhatsApp Payments based on UPI will be limited to person-to-person. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+