Subscribe to Gizbot

ಪಬ್ಲಿಕ್ ಟಿವಿಯಿಂದ ಮತ್ತೊಂದು ಹೊಸ ಚಾನಲ್ ಆರಂಭ..! ಇಲ್ಲಿದೆ ಸಂಪೂರ್ಣ ಮಾಹಿತಿ..!

Written By:

ಈಗಾಗಲೇ ಕನ್ನಡದಲ್ಲಿ ಸಾಕಷ್ಟು ಟಿವಿ ಚಾನಲ್‌ಗಳು ಕಾರ್ಯನಿರ್ವಹಿಸುತ್ತಿದ್ದು, ಭರಪೂರ ಮನರಂಜನೆಯನ್ನು ನೀಡುತ್ತಿವೆ. ಹೆಚ್ಚಿನ ಪ್ರಮಾಣದಲ್ಲಿ ಕನ್ನಡ ನ್ಯೂಸ್ ಚಾನಲ್‌ಗಳನ್ನು ಕಾಣಬಹುದಾಗಿದ್ದು, ಬೆರಳೆಣಿಕೆಯ ಮ್ಯೂಸಿಕ್ ಚಾನಲ್‌ಗಳು, ಒಂದಷ್ಟು ಸಾಮಾನ್ಯ ಚಾನಲ್‌ಗಳು ಇದೆ. ಆದರೆ ಮೂವೀಸ್ ಚಾನಲ್‌ಗಳು ಇದಿದ್ದೇ ಎರಡು. ಸದ್ಯ ಮತ್ತೊಂದು ಕನ್ನಡ ಟಿವಿ ಚಾನಲ್‌ ವೊಂದು ಇದೇ ಸೋಮವಾರ ಫೆಬ್ರವರಿ 12 ರಿಂದ ಕಾರ್ಯರಂಭವನ್ನು ಮಾಡಲಿದೆ ಎನ್ನಲಾಗಿದೆ.

ಪಬ್ಲಿಕ್ ಟಿವಿಯಿಂದ ಮತ್ತೊಂದು ಹೊಸ ಚಾನಲ್ ಆರಂಭ..! ಇಲ್ಲಿದೆ ಸಂಪೂರ್ಣ ಮಾಹಿತಿ..!

ಈಗಾಗಲೇ ಉದಯ ಮೂವೀಸ್ ಮತ್ತು ಸ್ಟಾರ್ ಸುವರ್ಣ ಮಾತ್ರವೇ ಪೂರ್ಣ ಪ್ರಮಾಣದಲ್ಲಿ ದಿನ ನಿತ್ಯ ಸಿನಿಮಾಗಳನ್ನು ಪ್ರಸಾರ ಮಾಡುತ್ತಿದೆ. ಇದೇ ಮಾದರಿಯಲ್ಲಿ ಮತ್ತೊಂದು ಪೂರ್ಣ ಪ್ರಮಾಣದ ಮೂವೀಸ್ ಚಾನಲ್ ಶುರುವಾಗಲಿದೆ. ಈಗಾಗಲೇ ಸದ್ದು ಮಾಡುತ್ತಿರು ನ್ಯೂಸ್ ವಿಭಾಗದಲ್ಲಿ ಸದ್ದು ಮಾಡುತ್ತಿರುವ ಪಬ್ಲಿಕ್ ಟಿವಿಯೂ ಹೊಸ ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ಪಬ್ಲಿಕ್ ಮೂವೀಸ್ ಅನ್ನು ಶುರು ಮಾಡುತ್ತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಪಬ್ಲಿಕ್ ಮೂವೀಸ್:

ಪಬ್ಲಿಕ್ ಮೂವೀಸ್:

ಕನ್ನಡ ಮಾಧ್ಯಮ ಲೋಕದಲ್ಲಿ ಸಾಕಷ್ಟು ಸದ್ದು ಮಾಡುತ್ತಿರುವ ಪಬ್ಲಿಕ್ ಟಿವಿಯಿಂದ ಇನ್ನೊಂದು ಹೊಸ ಚಾನಲ್ ಆರಂಭವಾಗುತ್ತಿದೆ. ಈಗಾಗಲೇ 'ಪಬ್ಲಿಕ್ ಮ್ಯೂಸಿಕ್' ಹೆಚ್ಚಿನ ಸದ್ದು ಮಾಡುತ್ತಿದೆ. ಇದರೊಂದಿಗೆ ಪಬ್ಲಿಕ್ ಮೂವೀಸ್ ಹೆಸರಿನಲ್ಲಿ ಸಿನಿಮಾ ಚಾನಲ್ ವೊಂದನ್ನು ಲಾಂಚ್ ಮಾಡುತ್ತಿದೆ.

ಸೋಮವಾರದಿಂದ ಕಾರ್ಯರಂಭ:

ಸೋಮವಾರದಿಂದ ಕಾರ್ಯರಂಭ:

ಸೋಮವಾರದಿಂದ ಪಬ್ಲಿಕ್ ಟಿವಿ ಮತ್ತು ಪಬ್ಲಿಕ್ ಮ್ಯೂಸಿಕ್ ಒಡೆತನದ ರೈಟ್ ಮ್ಯಾನ್ ಮೀಡಿಯಾ ಸಂಸ್ಥೆಯೂ ಪಬ್ಲಿಕ್ ಮೂವೀಸ್ ಹೆಸರಿನಲ್ಲಿ ಸಿನಿಮಾ ಚಾನಲ್ ಆರಂಭಿಸಲಿದೆ. ಇದರಲ್ಲಿ ಕೇವಲ ಕನ್ನಡ ಸಿನಿಮಾಗಳು ಮಾತ್ರವೇ ಪ್ರಸಾರವಾಗಲಿದೆ.

ಆರಂಭಕ್ಕೂ ಮುನ್ನವೇ ವಿವಾದ:

ಆರಂಭಕ್ಕೂ ಮುನ್ನವೇ ವಿವಾದ:

ಇನ್ನು ಚಾನಲ್ ಆರಂಭವಾಗುವ ಮುನ್ನವೆ ವಿವಾದ ಹೊಗೆಯಾಡಿದ್ದು, ಪಬ್ಲಿಕ್ ಮೂವೀಸ್ ಚಾನಲ್ ಡಬ್ಬಿಂಗ್ ಕನ್ನಡ ಚಿತ್ರಗಳನ್ನೂ ಪ್ರಸಾರ ಮಾಡಲಿದೆ ಎನ್ನಲಾಗಿದೆ. ಈ ಕುರಿತು ಕನ್ನಡ ಮಾಧ್ಯಮಗಳು ವರದಿಯನ್ನು ಮಾಡಿವೆ.

ಪಬ್ಲಿಕ್‌ನಿಂದ ಮತ್ತೊಂದು ಚಾನಲ್:

ಪಬ್ಲಿಕ್‌ನಿಂದ ಮತ್ತೊಂದು ಚಾನಲ್:

ಈಗಾಗಲೇ ಉದಯ ಟಿವಿ ಟಿಆರ್‌ಪಿಯನ್ನು ಪಡೆಯಲು ಪರದಾಡುತ್ತಿರುವ ಸಂದರ್ಭದಲ್ಲಿ ಪಬ್ಲಿಕ್‌ ಟಿವಿಯೂ ಉದಯ ಟಿವಿಯ ಚಾನಲ್‌ಗಳಿಗೆ ಸೆಡ್ಡು ಹೊಡೆಯುತ್ತಿದೆ. ಪಬ್ಲಿಕ್ ಮೂವೀಸ್ ನಂತರದಲ್ಲಿ ವರ್ಷಾಂತ್ಯಕ್ಕೆ 'ಪಬ್ಲಿಕ್ ಕಾಮಿಡಿ' ಚಾನಲ್ ಸಹ ಆರಂಭವಾಗಲಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ಓದಿರಿ: ನಿಮ್ಮ ಆಧಾರ್ ದುರುಪಯೋಗವಾಗಿದೆಯೇ ಎಂಬುದನ್ನು ಪತ್ತೆ ಹಚ್ಚುವುದು ಹೇಗೆ..?

English summary
Kannada movie channel Public Movies to launch on 12 Feb. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot